ಚೆನ್ನೈ(ಸೆ. 09)  ಈ ಮಹಿಳೆಗೆ ಒಂದು ಸಲಾಂ ಹೇಳಲೇಬೇಕು, ತಮ್ಮ ಕೆಲಸದಲ್ಲಿ ಇವರು ಇಟ್ಟ ಶ್ರದ್ಧೆಗೊಂದು ಮೆಚ್ಚುಗೆ ಹೇಳಿಕೊಂಡೇ ಮುಂದೆ ಹೋಗೋಣ. 

ಇವರ ಹೆಸರು ಉಮಾ, ಕಳೆದ ಹಲವು ವರ್ಷಗಳಿಂದ ಜೋಮ್ಯಾಟೋದ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಅವರಿಗೆ ಡೈಮಂಡ್ ಸ್ಟಾರ್ ಗೌರವ ಸಿಕ್ಕಿದೆ.

ಇಲ್ಲಿಯವರಿಗೆ ಯಾವುದೆ ಆರ್ಡರ್ ಇವರಿಂದ ಕ್ಯಾನ್ಸಲ್ ಆಗಿಲ್ಲ. ವಿಳಂಬ ಡಿಲೆವರಿ ಮಾತೆಂತೂ ಕೇಳಲೇಬೇಡಿ. ಹತ್ತು ವರ್ಷದ ಹಿಂದ ಗಂಡನ ಕಳೆದುಕೊಂಡವರು ಇಂದು ಅತ್ಯುತ್ತಮ ಸಿಬ್ಬಂದಿಯಾಗಿ ಹೊರಹೊಮ್ಮಿದ್ದಾರೆ.

ಭಾರತದ ಟಾಪ್ 10 ಉದ್ಯಮಿ ಮಹಿಳೆಯರು

ಮುಂಜಾನೆ ಐದು ಗಂಟೆಗೆ ಎದ್ದು ಹದಿನೈದು ಕಿಲೋಮಿಟರ್ ದೂರದ ಜಾಗದಲ್ಲಿ ನಡೆಯುವ ಕ್ರಿಕೆಟ್ ಕೋಚಿಂಗ್ ಗೆ ಪುತ್ರನನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಾರೆ. ಅದಾದ ಮೇಲೆ ಜೋಮ್ಯಾಟೋದ ಡಿಲೆವರಿ ಕೆಲಸ ಆರಂಭ.

ಮಧ್ಯಾಹ್ನ 12 ಗಂಟೆಗೆ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳುವ ಉಮಾ ರಾತ್ರಿ 11 ಗಂಟೆ ವರೆಗೆ ಕೆಲಸ ಮಾಡುತ್ತಾರೆ.  250 - 300 ಕಿಮಿ ಪ್ರತಿದಿನ ಕ್ರಮಿಸುವ ಇವರು 18- 25  ಡಿಲೆವರಿ ಮಾಡುತ್ತಾರೆ.  ಜೀವನೋತ್ಸಾಹ ತುಂಬುವ ಈ ಮಹಿಳೆಗೆ ಮತ್ತೊಮ್ಮೆ ಅಭಿನಂದನೆ ಮತ್ತು ನಮಸ್ಕಾರ