ಅವಳಿ ಮಕ್ಕಳಿಗೆ ಜನ್ಮ ನೀಡಲಿರುವ ವೈದ್ಯೆ ಡಾ. ಸೋನಮ್ ದಹಿಯಾ, ಗರ್ಭಿಣಿಯಾಗಿದ್ದರೂ ಚುರುಕಾದ ನೃತ್ಯ ಪ್ರದರ್ಶಿಸಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ಗರ್ಭಧಾರಣೆಯಲ್ಲೂ ವ್ಯಾಯಾಮ, ಕೆಲಸ ಮಾಡುವುದು ಸುರಕ್ಷಿತ ಎಂಬುದನ್ನು ತಮ್ಮ ನೃತ್ಯದ ಮೂಲಕ ಸಾರಿದ್ದಾರೆ. ವೈದ್ಯರ ಸಲಹೆ ಪಡೆದು ವೈಯಕ್ತಿಕ ಆಯ್ಕೆಯಂತೆ ವ್ಯಾಯಾಮ ಮಾಡಬಹುದು ಎಂದು ತಿಳಿಸಿದ್ದಾರೆ.
ಗರ್ಭಧಾರಣೆ (pregnancy)ಯ ಆರಂಭದ ಮೂರು ತಿಂಗಳು ವಿಶ್ರಾಂತಿ, ಎಚ್ಚರಿಗೆ ಅತ್ಯಗತ್ಯ. ನಂತ್ರದ ತಿಂಗಳಲ್ಲಿ ವ್ಯಾಯಾಮ ಮಾಡಿ, ಒಂದಿಷ್ಟು ಕೆಲ್ಸ ಮಾಡಿ ಅಂತ ವೈದ್ಯರು ಹೇಳ್ತಿರುತ್ತಾರೆ. ನಾರ್ಮಲ್ ಡೆಲಿವರಿ (Normal delivery)ಗೆ ವ್ಯಾಯಾಮ, ಕೆಲ್ಸ ಮುಖ್ಯ. ಈಗಿನ ದಿನಗಳಲ್ಲಿ ಬಾಲಿವುಡ್ ಸ್ಟಾರ್ಸ್ ಹಿಡಿದು ನಾರ್ಮಲ್ ಜನರು ಕೂಡ ಗರ್ಭಧಾರಣೆಯನ್ನು ಸಾಮಾನ್ಯವಾಗಿ ಪರಿಗಣಿಸಿದ್ದಾರೆ. ಹೆರಿಗೆಯವರೆಗೂ ವಿಶ್ರಾಂತಿ ಇಲ್ಲದೆ ತಮ್ಮ ಕೆಲ್ಸದಲ್ಲಿ ಬ್ಯೂಸಿಯಿರ್ತಾರೆ. ವರ್ಕ್ ಔಟ್ ಮಾಡ್ತಾ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸ್ತಾರೆ. ಗರ್ಭಧಾರಣೆಯಲ್ಲಿ ಡಾನ್ಸ್ ಒಳ್ಳೆಯದು ಎನ್ನುವ ಮಾತಿದೆ. ಆದ್ರೆ ಈ ಮಹಿಳೆ ಮಾಡಿದ ಡಾನ್ಸ್ ಮಾತ್ರ ಬೆರಗುಗೊಳಿಸುವಂತಿದೆ. ನಾರ್ಮಲ್ ಜನರೂ ಮಾಡಲು ಕಷ್ಟವಾಗುವ ಸ್ಟೆಪ್ಸ್ ಗಳನ್ನು ಮಹಿಳೆ ಹಾಕಿದ್ದಾರೆ. ಅದೂ ಎರಡು ಭ್ರೂಣವನ್ನು ಹೊಟ್ಟೆಯಲ್ಲಿ ಇಟ್ಕೊಂಡು ಅನ್ನೋದು ಮತ್ತೊಂದು ವಿಶೇಷ.
ಸೋಶಿಯಲ್ ಮೀಡಿಯಾದಲ್ಲಿ ಗರ್ಭಿಣಿ ಡಾನ್ಸ್ ವಿಡಿಯೋ ವೈರಲ್ ಆಗಿದೆ. ವೀಡಿಯೊದಲ್ಲಿ, ಮಹಿಳೆ ಡಾನ್ಸ್ ಕೋರಿಯೋಗ್ರಾಫರ್ ಆದಿಲ್ ಖಾನ್ ಅವ್ರ ಜೊತೆ ಬಾಲಿವುಡ್ ಸಾಂಗ್ ಡಿಂಗ್ ಡಾಂಗ್ ಗೆ ಹೆಜ್ಜೆ ಹಾಕಿದ್ದಾರೆ. ಡಾನ್ಸ್ ಮಾಡಿದ ಗರ್ಭಿಣಿ ಹೆಸರು ಸೋನಮ್ ದಹಿಯಾ. ವೃತ್ತಿಯಲ್ಲಿ ಡಾಕ್ಟರ್. ಕೆಲವೇ ದಿನಗಳಲ್ಲಿ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ. ಗರ್ಭಧಾರಣೆಯ ಕೊನೆ ತಿಂಗಳಲ್ಲಿ ಸೋನಮ್ ದಹಿಯಾ ಮಾಡಿದ ಡಾನ್ಸ್ ಅದ್ಭುತವಾಗಿದೆ. ಡಾನ್ಸ್ ವಿಡಿಯೋ ಹಂಚಿಕೊಂಡಿರುವ ಸೋನಮ್, ಗರ್ಭಧಾರಣೆ ಮತ್ತು ಫಿಟ್ನೆಸ್ ಬಗ್ಗೆ ಮಾಹಿತಿ ನೀಡಿದ್ದಾರೆ.
ಡಾ. ದಹಿಯಾ ಇನ್ಸ್ಟಾಗ್ರಾಮ್ನಲ್ಲಿ ಡಾನ್ಸ್ ವಿಡಿಯೋ ಪೋಸ್ಟ್ ಮಾಡಿ, ಆದಿಲ್ ಖಾನ್ ಅವರೊಂದಿಗೆ ನೃತ್ಯ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಧನ್ಯವಾದ ಎಂದಿದ್ದಾರೆ. ಕನಸು ನನಸಾಯಿತು ಎಂದು ಬರೆದುಕೊಂಡಿದ್ದಾರೆ. ವ್ಯಾಯಾಮವು ಒಂದು ವೈಯಕ್ತಿಕ ಪ್ರಯಾಣ, ನಾನು ವ್ಯಾಯಾಮ ಮಾಡುವಾಗ ಏನು ಧರಿಸುತ್ತೇನೆ ಎಂಬುದು ನನ್ನ ಆಯ್ಕೆಯಾಗಿದೆ. ಆರೋಗ್ಯಕರ, ಜಟಿಲವಲ್ಲದ ಗರ್ಭಾವಸ್ಥೆಯಲ್ಲಿ ದೈಹಿಕ ಚಟುವಟಿಕೆ ಸುರಕ್ಷಿತ ಮಾತ್ರವಲ್ಲದೆ ಪ್ರಯೋಜನಕಾರಿ ಎಂದು ಅವರು ಬರೆದಿದ್ದಾರೆ.
ವ್ಯಾಯಾಮವು ಗರ್ಭಪಾತ, ಕಡಿಮೆ ತೂಕದ ಮಗು ಜನನ ಅಥವಾ ಅಕಾಲಿಕ ಹೆರಿಗೆಯ ಅಪಾಯವನ್ನು ಹೆಚ್ಚಿಸುವುದಿಲ್ಲ ಎನ್ನುವ ಮೂಲಕ ಗರ್ಭಧಾರಣೆಯಲ್ಲಿ ವ್ಯಾಯಾಮದ ಬಗ್ಗೆ ಜನರಿಗಿರುವ ತಪ್ಪು ಕಲ್ಪನೆಯನ್ನು ತೊಡೆದು ಹಾಕುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಗರ್ಭಿಣಿಯರು ಮೊದಲು ವೈದ್ಯರನ್ನು ಭೇಟಿಯಾಗಿ ತಮ್ಮ ಚಟುವಟಿಕೆ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಸ್ವತಃ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ದಹಿಯಾ ಹೇಳಿದ್ದಾರೆ.
ಡಾ. ದಹಿಯಾ ಸ್ವಯಂ ಅಭಿವ್ಯಕ್ತಿ ಮತ್ತು ಸ್ವಯಂ ನಿರ್ಧಾರ ತೆಗೆದುಕೊಳ್ಳುವಿಕೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಜನರು ಪರಸ್ಪರರ ಆಯ್ಕೆಗಳನ್ನು ಗೌರವಿಸಬೇಕು ಎಂದಿದ್ದಾರೆ. ನಾವು ಏನು ಧರಿಸುತ್ತೇವೆ ಅಥವಾ ಗರ್ಭಾವಸ್ಥೆಯಲ್ಲಿ ನಮ್ಮ ಆರೋಗ್ಯವನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದು ನಮ್ಮ ಆಯ್ಕೆ. ನಿಮ್ಮ ದೇಹ, ನಿಮ್ಮ ಆಯ್ಕೆ ಎಂದು ದಹಿಯಾ ಬರೆದಿದ್ದಾರೆ. ಸಾಂಸ್ಕೃತಿಕ ಮೌಲ್ಯಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬಹಳ ಭಿನ್ನವಾಗಿರುತ್ತವೆ. ಒಂದು ಸಂಸ್ಕೃತಿಯಲ್ಲಿ ಅನುಚಿತವೆಂದು ತೋರುವ ವಿಷಯಗಳು ಇನ್ನೊಂದರಲ್ಲಿ ಸಂಪೂರ್ಣವಾಗಿ ಸಾಮಾನ್ಯವಾಗಿರಬಹುದು. ಈ ವ್ಯತ್ಯಾಸಗಳನ್ನು ಗೌರವಿಸುವುದು ಮತ್ತು ನಮ್ಮ ಜಗತ್ತಿನಲ್ಲಿ ಇರುವ ವೈವಿಧ್ಯತೆಯನ್ನು ಪ್ರಶಂಸಿಸುವುದು ನಮಗೆ ಮುಖ್ಯವಾಗಿದೆ ಎಂದು ದಹಿಯಾ ಬರೆದಿದ್ದಾರೆ. ಪ್ರತಿಯೊಬ್ಬರೂ ತಮಗೆ ಸರಿ ಎನಿಸಿದ ರೀತಿಯಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಿಕೊಳ್ಳುವ ಸ್ವಾತಂತ್ರ್ಯಕ್ಕೆ ಅರ್ಹರು ಎಂದಿರುವ ದಹಿಯಾ ಪೋಸ್ಟ್ ಗೆ ಸಿಕ್ಕಾಪಟ್ಟೆ ಕಮೆಂಟ್ ಬಂದಿದೆ. ದಹಿಯಾ ಡಾನ್ಸ್ ಗೆ ಫುಲ್ ಮಾರ್ಕ್ಸ್ ಸಿಕ್ಕಿದೆ.


