ಗರ್ಭ ಧರಿಸಬೇಕಾ? ಭಾರತದ ಈ ಸ್ಥಳ ಬೆಸ್ಟ್ ಅಂತಿದ್ದಾರೆ ವಿದೇಶಿ ಮಹಿಳೆಯರು!?

ಆರೋಗ್ಯಕರ, ಸುಂದರ ಮಗು ಜನಿಸಬೇಕು ಎನ್ನುವುದು ಬಹುತೇಕರ ಬಯಕೆ. ಇದಕ್ಕೆ ಗರ್ಭಾವಸ್ಥೆಯಲ್ಲಿ ಹಾಲು, ಕೇಸರಿ ಅಂತಾ ಒಳ್ಳೆ ಆಹಾರ ಸೇವನೆ ಮಾಡ್ತಾರೆ. ಆದ್ರೆ ವಿದೇಶಿ ಮಹಿಳೆಯರು ಒಳ್ಳೆ ಮಗುವಿನ ಬಯಕೆಗಾಗಿ ಭಾರತಕ್ಕೆ ಬರ್ತಾರೆ. ಎಲ್ಲಿಗೆ ಮತ್ತೆ ಯಾಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. 
 

Pregnancy Tourism Ladakh Village Brokpa Community roo

ಮದುವೆಯಾದ ಪ್ರತಿಯೊಂದು ಹೆಣ್ಣಿಗೂ ತಾಯ್ತನದ ಬಯಕೆ ಇದ್ದೇ ಇರುತ್ತದೆ. ಒಂದು ಮಗು ಹುಟ್ಟಿದಾಗಲೇ ಅವರ ಕುಟುಂಬ ಸಂಪೂರ್ಣವಾಗುತ್ತದೆ ಮತ್ತು ಮನೆಯಲ್ಲಿ ಸುಖ, ಸಂತೋಷ ಹೆಚ್ಚುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಮಹಿಳೆ ಗರ್ಭ ಧರಿಸುತ್ತಿದ್ದಂತೆ  ಹುಟ್ಟುವ ಮಗು ಆರೋಗ್ಯವಾಗಿರಲಿ, ಚೆನ್ನಾಗಿರಲಿ ಎಂದು ಅನೇಕ ಬಗೆಯ ಆರೈಕೆಗಳನ್ನು ಮಾಡಲಾಗುತ್ತದೆ.

ಪ್ರತಿಯೊಬ್ಬ ಗಂಡ ಹೆಂಡತಿಯೂ ತಮಗೆ ಹುಟ್ಟುವ ಮಗು (Child) ಸುಂದರವಾಗಿರಲಿ, ಒಳ್ಳೆಯ ಬಣ್ಣ ಹೊಂದಿರಲಿ, ಗಟ್ಟಮುಟ್ಟಾಗಿರಲಿ ಎಂದು ಬಯಸುತ್ತಾರೆ. ಈಗಿನ ಆಧುನಿಕ (Modern) ಯುಗದಲ್ಲಿ ಮಕ್ಕಳನ್ನು ಅದ್ರಲ್ಲೂ ಆರೋಗ್ಯವಂತ ಮಕ್ಕಳನ್ನು ಪಡೆಯೋದು ಒಂದು ಚಾಲೆಂಜ್. ಅದ್ರ ಜೊತೆಗೆ ಗರ್ಭಧಾರಣೆ, ಮಗುವಿನ ಜನನವನ್ನು ಜನರು ಹಬ್ಬದಂತೆ ಸಂಭ್ರಮಿಸುತ್ತಾರೆ. ಗರ್ಭಧಾರಣೆಯಲ್ಲಿ ಫೋಟೋ ಶೂಟ್, ಪಾರ್ಟಿ ಸೇರಿದಂತೆ ನಾನಾ ಕಾರ್ಯಕ್ರಮಗಳು ನಡೆಯುತ್ತವೆ. ಹೊಸ ಹೊಸ ಚಿಕಿತ್ಸೆಗೆ ಗರ್ಭಿಣಿಯರು ಒಳಗಾಗ್ತಾರೆ. ಗರ್ಭಧಾರಣೆ, ತಾಯ್ತನಕ್ಕೆ ಸಂಬಂಧಿಸಿದ ಅನೇಕ ಕ್ಲಾಸ್ ಗಳೂ ನಡೆಯುತ್ತವೆ. ಅಂತಹ ಪ್ಲಾನ್ ಗಳಲ್ಲಿ ಪ್ರೆಗ್ನೆನ್ಸಿ ಟೂರಿಸಂ ಕೂಡ ಒಂದು.

ದೇಶದ ಅತ್ಯಂತ ಅಸುರಕ್ಷಿತ ನಗರಗಳಿವು… ಹೋಗೋ ಮುನ್ನ ಎಚ್ಚರಿಕೆ ಇರಲಿ

ಪ್ರೆಗ್ನೆನ್ಸಿ ಟೂರಿಸಂ (Tourism) ಅಂದ್ರೇನು ಗೊತ್ತಾ? : ಗರ್ಭದಲ್ಲಿರುವ ಮಗು ಚೆನ್ನಾಗಿ ಬೆಳೆಯಲು ತಂದೆ ತಾಯಿ ಕೂಡ ಆರೋಗ್ಯವಾಗಿರಬೇಕು. ಸುಂದರವಾದ, ಆರೋಗ್ಯವಂತ ಮಕ್ಕಳನ್ನು ಬಯಸುವ  ಕಾರಣಕ್ಕಾಗಿಯೇ ಇಂದು ಅನೇಕ ಮಹಿಳೆಯರು ಪ್ರೆಗ್ನೆನ್ಸಿ ಟೂರಿಸಂ ಅನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಭಾರತದಲ್ಲಿರುವ ಒಂದು ಹಳ್ಳಿ ಪ್ರೆಗ್ನೆನ್ಸಿ ಟೂರಿಸಂಗೆಂದೇ ಹೆಸರುವಾಸಿಯಾಗಿದೆ. ಅನೇಕ ಮಂದಿ ವಿದೇಶೀ ಮಹಿಳೆಯರು ಇಲ್ಲಿ ಮಗುವನ್ನು ಹೊಂದಲು ಬರುತ್ತಾರೆ.

ತಿಂಡಿ ಪೋತರು ವಿಸಿಟ್ ಮಾಡಲೇ ಬೇಕಾದ ಕರ್ನಾಟಕದ ಸ್ಥಳಗಳಿವು! ನೀವು ಎಲ್ಲೆಲ್ಲಿಗೆ ಹೋಗಿದ್ದೀರಿ

ಲಡಾಕ್ ನ ರಾಜಧಾನಿ ಲೇಹ್ ನಿಂದ 160 ಕಿಲೋಮೀಟರ್ ದೂರದಲ್ಲಿ ಬಿಯಾಮಾ, ಡಾಹ್, ಹಾನೂ, ಗಾರ್ಕೋನ್, ದಾರಚಿಕ್ ಎಂಬ ಹೆಸರಿನ ಊರುಗಳಿವೆ. ಈ ಊರುಗಳಲ್ಲಿ ಸುಮಾರು 5000 ಜನರು ವಾಸವಾಗಿದ್ದಾರೆ. ಈ ಪ್ರದೇಶದಲ್ಲಿ ವಾಸಿಸುವ ಜನರು ಬ್ರೋಕ್ಪಾ ಎನ್ನುವ ವಿಶೇಷ ಸಮುದಾಯದ ಜನರಾಗಿದ್ದಾರೆ. ಇವರು ತಾವು ಜಗತ್ತಿನಲ್ಲಿರುವ ಶುದ್ಧ ಆರ್ಯರು ಎಂದು ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಅಂದರೆ ಬ್ರೋಕ್ಪಾ ಜನರು ಜಗತ್ತಿನಲ್ಲಿ ಉಳಿದಿರುವ ಶುದ್ಧ ಆರ್ಯರಾಗಿದ್ದಾರೆ. ಮೊದಲು ಇಂಡೋ-ಇರಾನಿಯನ್ ಮೂಲದ ಜನರನ್ನು ಆರ್ಯರು ಎನ್ನಲಾಗುತ್ತಿತ್ತು. ಆದರೆ ನಂತರ ಇಂಡೋ ಯುರೋಪಿಯನ್ನರನ್ನು ಆರ್ಯರು ಎಂದು ಕರೆಯಲಾಯಿತು.
ಬ್ರೋಕ್ಪಾ ಸಮುದಾಯದ ಜನರು ಅಲೆಗ್ಸಾಂಡರ್ ದಿ ಗ್ರೇಟ್ ಸೈನ್ಯದಲ್ಲಿ ಸೈನಿಕರಾಗಿದ್ದರು. ಅಲೆಗ್ಸಾಂಡರ್ ಭಾರತಕ್ಕೆ ಬಂದಾಗ ಕೆಲವು ಸೈನಿಕರು ಸಿಂಧೂ ಕಣಿವೆಯಲ್ಲಿ ಉಳಿದರು. ಇವರನ್ನು ಮಾಸ್ಟರ್ ರೇಸ್ ಎಂದು ಕರೆಯಲಾಗುತ್ತದೆ. ಇವರು ಲಡಾಕ್, ಮಂಗೋಲರು ಮತ್ತು ಟಿಬೇಟಿಯನ್ ಜನರಿಗಿಂತ ತುಂಬ ಭಿನ್ನವಾಗಿದ್ದಾರೆ. ಇವರು ಉದ್ದವಾಗಿರುತ್ತಾರೆ, ಬೆಳ್ಳಗಿರುತ್ತಾರೆ ಮತ್ತು ಇವರ ಕೂದಲು ಕೂಡ ಉದ್ದವಾಗಿರುತ್ತದೆ. ಇವರ ದವಡೆಗಳು ಉಬ್ಬಿರುತ್ತವೆ ಮತ್ತು ಕಣ್ಣಿನ ಬಣ್ಣ ತಿಳಿಯಾಗಿರುತ್ತದೆ.

ಯುರೋಪಿಯನ್ ಮಹಿಳೆಯರು ಇಲ್ಲಿ ಬರುತ್ತಾರೆ : ಬ್ರೋಕ್ಪಾ ಜನರು ಶುದ್ಧ ಆರ್ಯರೆಂದು ವೈಜ್ಞಾನಿಕವಾಗಿ ಸಾಬೀತಾಗದೇ ಇದ್ದರು ಕೂಡ ಜರ್ಮನಿ ಹಾಗೂ ಯುರೋಪಿನ ಅನ್ಯ ದೇಶದ ಮಹಿಳೆಯರು ಈ ಹಳ್ಳಿಗೆ ಬರುತ್ತಾರೆ. ಇಲ್ಲಿ ಬಂದು ಶುದ್ಧ ಆರ್ಯರ ಮಗುವಿನ ಗರ್ಭಧಾರಣೆ ಮಾಡಿಕೊಳ್ಳುವುದು ಅವರ ಉದ್ದೇಶವಾಗಿದೆ. ಈ ಕಾರಣಕ್ಕಾಗಿಯೇ ಈ ಹಳ್ಳಿಗಳನ್ನು ಪ್ರೆಗ್ನೆನ್ಸಿ ಟೂರಿಸಂ ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಚಲನಚಿತ್ರ ನಿರ್ಮಾಪಕ ಸಂಜೀವ್ ಶಿವನ್ ಅವರು 2007ರಲ್ಲಿ “Achtung Baby- In Search of Purity” ಎಂಬ ಹೆಸರಿನ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದ್ದರು. ಈ ಚಿತ್ರದಲ್ಲಿ ಜರ್ಮನ್ ಮಹಿಳೆಯೊಬ್ಬಳು ಶುದ್ಧ ಆರ್ಯನ್ ಮಗುವನ್ನು ಹೊಂದಲು ಲಡಾಕ್ ಗೆ ಬಂದಿದ್ದೇನೆ ಎಂದು ಹೇಳುತ್ತಾಳೆ. ಅನೇಕ ವರದಿಗಳು ಈ ಪ್ರೆಗ್ನಿನ್ಸಿ ಟೂರಿಸಂ ಬಗ್ಗೆ ಹೇಳಿದೆ. 
 

Latest Videos
Follow Us:
Download App:
  • android
  • ios