ದೇಶದ ಅತ್ಯಂತ ಅಸುರಕ್ಷಿತ ನಗರಗಳಿವು… ಹೋಗೋ ಮುನ್ನ ಎಚ್ಚರಿಕೆ ಇರಲಿ
ದೇಶದಲ್ಲಿ ಎಷ್ಟೊಂದು ಸುಂದರ ನಗರಗಳಿವೆ. ಅಲ್ಲಿಗೆ ಹೋಗೋಕೆ ನೀವು ಕೂಡ ಕಾಯ್ತ ಇದ್ದೀರಾ ಅಲ್ವಾ? ಆದ್ರೆ ನಿಮಗೆ ಗೊತ್ತಾ ಕೆಲವೊಂದು ನಗರಗಳು ತುಂಬಾನೆ ಅಸುರಕ್ಷಿತವಾಗಿದೆ. ಅಲ್ಲಿನ ಕ್ರೈಂ ರೇಟ್ ಕೇಳಿದ್ರೆ ಹೋಗೋಕೆ ಭಯ ಆಗುತ್ತೆ.
ನಮ್ಮ ದೇಶದಲ್ಲಿನ ಕೆಲವೊಂದು ನಗರಗಳಲ್ಲಿ ಕ್ರೈಮ್ ರೇಟ್ ಎಷ್ಟಿದೆ ಅಂದ್ರೆ, ಅವುಗಳನ್ನು ದೇಶದ ಅತ್ಯಂತ ಅಸುರಕ್ಷಿತ ನಗರಗಳ (unsafe cities)ಲಿಸ್ಟ್ ನಲ್ಲಿ ಸೇರಿಸಲಾಗಿದೆ. ಈ ತಾಣಗಳಿಗೆ ನೀವು ಹೋಗೋದಕ್ಕೆ ಪ್ಲ್ಯಾನ್ ಮಾಡಿದ್ರೆ, ತುಂಬಾನೆ ಹುಷಾರಾಗಿರಬೇಕು. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಅಡಿಯಲ್ಲಿ ಬರುವ ಅಸುರಕ್ಷಿತ ತಾಣಗಳು ಯಾವುವು ನೋಡೋಣ.
ನಾಗ್ಪುರ
ಆರೆಂಜ್ ಕ್ಯಾಪಿಟಲ್ ಆಫ್ ಇಂಡಿಯಾ ಎಂದೇ ಖ್ಯಾತಿ ಪಡೆದಿರುವ ನಾಗ್ಪುರದಲ್ಲಿ ಕ್ರೈಂ ರೇಟ್ ತುಂಬಾನೆ ಜಾಸ್ತಿ ಇದೆಯಂತೆ. 2022 ರಲ್ಲಿ ಒಂದು ಲಕ್ಷ ಜನರಿಗೆ 516 ಪ್ರಕರಣಗಳು (516 cases per 1 lakh people)ದಾಖಲಾಗಿವೆ.
ಲಖ್ನೌ
ಉತ್ತರ ಪ್ರದೇಶದ ಲಖ್ನೌ ಸಹ ಕ್ರೈಂ ರೇಟ್ ನಲ್ಲಿ ಮುಂದಿದೆ. ಇಲ್ಲೂ ಸಹ 2022 ರಲ್ಲಿ ಒಂದು ಲಕ್ಷ ಜನರಿಗೆ 521 ಕ್ರೈ ಪ್ರಕರಣಗಳು (521 cases per 1 lakh people)ದಾಖಲಾಗಿವೆ. ಹಾಗಾಗಿ ಹೋಗೋ ಮುನ್ನ ಎಚ್ಚರಿಕೆ ಇರಲಿ.
ಪಾಟ್ನಾ
ಬಿಹಾರದ ಒಂದು ಸುಂದರ ನಗರಿ ಪಾಟ್ನಾ. ಆದರೆ ಈ ನಗರ ಸಹ ಜನರಿಗೆ ಹೆಚ್ಚು ಸುರಕ್ಷಿತವಲ್ಲ ಎಂದು ಸಾಬೀತಾಗಿದೆ. ಯಾಕೆಂದರೆ ಇಲ್ಲೂ ಸಹ ಕಳೆದ ವರ್ಷ ಒಂದು ಲಕ್ಷ ಜನರಿಗೆ 611 ಪ್ರಕರಣಗಳು (611 cases per 1 lakh people) ದಾಖಲಾಗಿವೆ.
ಕೊಚ್ಚಿ
ದೇವರನಾಡು ಎಂದೇ ಖ್ಯಾತಿ ಪಡೆದಿರುವ ಕೇರಳದ ಕೊಚ್ಚಿಯಲ್ಲೂ ಸಹ ಅಪರಾಧಗಳು ಹೆಚ್ಚಾಗಿಯೇ ನಡೆಯುತ್ತವೆ. ಕ್ರೈ ರೇಟ್ ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕೊಚ್ಚಿಯಲ್ಲಿ ಪ್ರತಿ 1 ಲಕ್ಷ ಜನರಿಗೆ 626 ಕೇಸುಗಳು (626 cases per 1 lakh people) ದಾಖಲಾಗಿವೆ.
ಇಂಧೋರ್
ಅರಮನೆಗಳಿಂದ ಜನಪ್ರಿಯತೆ ಪಡೆದಿರುವ ಇಂಧೋರ್ ಮಧ್ಯಪ್ರದೇಶದ ಒಂದು ನಗರವಾಗಿದೆ. ಇಲ್ಲಿನ ಅಪರಾಧಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದ್ದು, ಮೂರನೇ ಸ್ಥಾನದಲ್ಲಿ ಇಲ್ಲಿ ಪ್ರತಿ 1 ಲಕ್ಷ ಜನಕ್ಕೆ 767 ಪ್ರಕರಣಗಳು (767 cases per 1 lakh people)ದಾಖಲಾಗುತ್ತವೆ.
ಜೈಪುರ್
ರಾಜಸ್ಥಾನದ ರಾಜಧಾನಿ, ಪಿಂಕ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಜೈಪುರ್ ಪ್ರವಾಸಿ ತಾಣವಾಗಿ ತುಂಬಾನೆ ಜನಪ್ರಿಯತೆ ಪಡೆದಿದೆ. ಆದರೆ ಇಲ್ಲಿನ ಕ್ರೈ ರೇಟ್ ಕೇಳಿದ್ರೆ ಭಯವಾಗುತ್ತೆ. ಇಲ್ಲಿ ಕಳೆದ ವರ್ಷ ಪ್ರತಿ ಒಂದು ಲಕ್ಷ ಜನರಿಗೆ 916 ಪ್ರಕರಣಗಳು (916 cases per 1 lakh people)ದಾಖಲಾಗಿವೆ.
ದೆಹಲಿ
ಇನ್ನು ರಾಷ್ಟ್ರ ರಾಜಧಾನಿ ಸೇಫ್ ಅಂತ ಅಂದುಕೊಂಡ್ರೆ ಅದು ನಿಮ್ಮ ತಪ್ಪು ಯಾಕಂದ್ರೆ ಕ್ರೈ ರೇಟ್ ನಲ್ಲಿ ಮೊದಲ ಸ್ಥಾನದಲ್ಲಿದೆ ರಾಷ್ಟ್ರ ರಾಜಧಾನಿ ದೆಹಲಿ. ಇಲ್ಲಿ ಸಹ 2022 ರಲ್ಲಿ ಪ್ರತಿ ಒಂದು ಲಕ್ಷ ಜನರಿಗೆ ಎಂಬಂತೆ 917 ಪ್ರಕರಣಗಳು (917 cases per 1 lakh people)ದಾಖಲಾಗಿವೆ.