ವಾಶ್‌ರೂಮ್‌ಗೆ ಫಸ್ಟ್ ಹೋಗೋಕೆ ಮಹಿಳೆಯರ ರಸ್ಲಿಂಗ್, ಮುಖ-ಮೂತಿ ನೋಡ್ದೆ ಚಚ್ಚಿ ಹಾಕಿದ್ರು!

Synopsis
ಹೆಂಗಸರಿಬ್ಬರು ಒಂದೆಡೆ ಸೇರಿದ್ರೆ ಅಲ್ಲಿ ಜಗಳ ಆಗೋದು ಸಾಮಾನ್ಯ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷ್ಯ. ಶಾಪಿಂಗ್, ಕುಕ್ಕಿಂಗ್, ಮನೆಕೆಲಸ ಹೀಗೆ ನಾನಾ ವಿಚಾರಕ್ಕೆ ಜಗಳ ಆಗುತ್ತೆ. ಆದ್ರೆ ವಾಶ್‌ರೂಮ್‌ಗೆ ಹೋಗೋ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆಗುತ್ತೆ ಅಂದ್ರೆ ನೀವ್ ನಂಬ್ತೀರಾ?
ಜಡೆ ಜಗಳ ಎಂದರೆ ಅದು ಸಾಮಾನ್ಯವಲ್ಲ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಹೆಣ್ಮಕ್ಕಳು ಒಂದೆಡೆ ಸೇರಿದ್ರೆ ಇಂಥಾ ಜಗಳ ಸುಮ್ ಸುಮ್ನೆ ನಡೀತಾನೆ ಇರುತ್ತೆ. ಶಾಪಿಂಗ್, ಕುಕ್ಕಿಂಗ್, ಮನೆಕೆಲಸ ಹೀಗೆ ನಾನಾ ವಿಚಾರಕ್ಕೆ ಜಗಳ ಆಗುತ್ತೆ. ಆದ್ರೆ ವಾಶ್‌ರೂಮ್‌ಗೆ ಹೋಗೋ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆಗುತ್ತೆ ಅಂದ್ರೆ ನೀವ್ ನಂಬ್ತೀರಾ? ನಂಬೋಕೆ ಕಷ್ಟವೆನಿಸಿದರೂ ಇದು ನಿಜ. ಆದರೆ ವಾಶ್‌ರೂಮ್‌ಗೆ ನಾನು ಮೊದಲು ಹೋಗಬೇಕು, ಇಲ್ಲ ನಾನೇ ಹೋಗಬೇಕು ಎಂಬ ವಿಚಿತ್ರ ಕಾರಣಕ್ಕೆ ಮಹಿಳೆಯರು ಭಾರೀ ಕುಸ್ತಿ ನಡೆಸಿದ್ದಾರೆ. ಇದು ನಡೆದಿದ್ದು ಅಮೆರಿಕದ ಪಾರ್ಟಿಯೊಂದರಲ್ಲಿ.
ಹೆಂಗಸರು ಸಣ್ಣಪುಟ್ಟ ವಿಚಾರಕ್ಕೆ ಹೊಡೆದಾಡಿಕೊಳ್ಳುವುದು ಸಾಮಾನ್ಯವಾಗಿದೆ. ಕೆಲವೊಮ್ಮೆ ಅಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಬಾಯಿಗೆ ಬಂದಂತೆ ಗಲಾಟೆ ಮಾಡಿಬಿಡುತ್ತಾರೆ. ಇತ್ತೀಚೆಗಿನ ಒಂದು ಘಟನೆ ನೋಡಿದರೆ ನಿಮಗೂ ಹಾಗೆ ಅನಿಸುತ್ತದೆ. ಮೂತ್ರ ವಿಸರ್ಜನೆಗೆಂದು ಶೌಚಾಲಯಕ್ಕೆ ಹೋದ ಮಹಿಳೆಯರು ಮನಸೋ ಇಚ್ಛೆ ಥಳಿಸಿಕೊಂಡಿದ್ದಾರೆ. ಅವರ ಜೊತೆ ಇನ್ನು ಕೆಲವರೂ ಕೈಜೋಡಿಸಿದ್ದರಿಂದ ಕಾದಾಟ ಇನ್ನು ತೀವ್ರತೆ ಪಡೆದುಕೊಂಡಿತ್ತು. ಪಾರ್ಟಿಯೊಂದರಲ್ಲಿ ನಡೆದ ಜಗಳವನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ (Social media) ಹಾಕಿದ್ದು, ವೈರಲ್ ಆಗಿದೆ. ಈ ಬಗ್ಗೆ ನೆಟಿಜನ್‌ಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೀಟಿಗಾಗಿ ಬಸ್‌ನಲ್ಲಿ ಮಹಿಳೆಯರ ರಸ್ಲಿಂಗ್: ಜುಟ್ಟು ಜುಟ್ಟು ಹಿಡಿದು ಹೊಡೆದಾಟ
ಫಸ್ಟ್ ವಾಶ್‌ರೂಮ್‌ಗೆ ಹೋಗೋಕೆ ಫೈಟಿಂಗ್, ವೀಡಿಯೋ ವೈರಲ್
ಯುವತಿಯೊಬ್ಬಳು ವಾಶ್‌ರೂಮ್‌ಗೆ ಹೋದಾಗ ಆಕೆಯ ತಾಯಿ ಆಚೆ ನಿಂತಿದ್ದರು. ಮುಂದಿನ ಸರದಿ ಅವರದಿತ್ತು. ಆದರೆ ಈ ವೇಳೆ ಅಲ್ಲಿಗೆ ಬಂದ ಇಬ್ಬರು ಯುವತಿಯರು (Girls) ನಾವೇ ಹೋಗಬೇಕು ವಾಶ್‌ರೂಮ್‌ಗೆ ಮೊದಲು ಅಂತ ಏಕಾಏಕಿ ಜಗಳ (Fight)ಕ್ಕಿಳಿದಿದ್ದಾರೆ. ಬಳಿಕ ಅಲ್ಲೊಂದು ಡಬ್ಲೂಡಬ್ಲೂಇ ನಡೆದು ಹೋಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಯುವತಿಯರು ವಾಶ್‌ರೂಮ್‌ನೊಳಗೆ ಹಿಗ್ಗಾಮುಗ್ಗಾ ಹೊಡೆದಾಡಿಕೊಳ್ಳುವುದನ್ನು ನೋಡಬಹುದು. ಕೆಲ ಯುವತಿಯರು ಜಗಳವನ್ನು ಬಿಡಿಸಲು ಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಯುವತಿಯರು ಡ್ರೆಸ್, ಕೂದಲನ್ನು (Hair) ಎಳೆದಾಡಿಕೊಂಡು ಜಗಳ ಮಾಡಿಕೊಳ್ಳುತ್ತಾರೆ.
ಅಲ್ಲಿ ಜಿಮ್, ಇಲ್ಲಿ ಕಾಲೇಜ್ ಕ್ಯಾಂಟೀನ್: ಎಲ್ಲೆಲ್ಲೂ ಈಗ ಹುಡುಗಿರ್ದೇ ಗಲಾಟೆ
ಕ್ಲಿಪ್ ವೈರಲ್ ಆದ ನಂತರ ವೀಕ್ಷಕರು ಹೊಡೆದಾಟದಿಂದ ದಿಗ್ಭ್ರಮೆಗೊಂಡರು. ಒಬ್ಬರು ತಮ್ಮ ಮನೋರಂಜನೆಯನ್ನು ವೀಡಿಯೊದಲ್ಲಿ ಬಹಿರಂಗಪಡಿಸಿದರು. 'ನಾನು ಇದನ್ನು 30 ಬಾರಿ ವೀಕ್ಷಿಸಿದ್ದೇನೆ' ಎಂದು ಬಳಕೆದಾರರೊಬ್ಬರು ಕಮೆಂಟಿಸಿದ್ದಾರೆ. ಇನ್ನೊಬ್ಬರು, 'ವಾಶ್ ರೂಮ್‌ಗೆ ಹೋಗುವ ವಿಚಾರಕ್ಕೆ ಯಾರಾದರೂ ಈ ರೀತಿ ಜಗಳವಾಡುತ್ತಾರೆಯೇ' ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು, ಫೈಟ್‌ನಲ್ಲಿ ಯಾರು ಗೆಲ್ಲುತ್ತಾರೆ ಎಂದು ಕೇಳುವ ಸಮೀಕ್ಷೆಯನ್ನು ಸಹ ಮಾಡಿದ್ದಾರೆ.