ಬಸ್‌ ರೈಲುಗಳಲ್ಲಿ ಸೀಟಿಗಾಗಿ ಪರಸ್ಪರ ಕಿತ್ತಾಡುವ ವೀಡಿಯೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಸೀಟಿಗಾಗಿ ಬಸ್‌ನಲ್ಲಿ ಮಹಿಳೆ ಹಾಗೂ ಯುವತಿ ಮಧ್ಯೆ ದೊಡ್ಡ ಕಾಳಗ ನಡೆದಿದೆ.  

ಬಸ್‌ ರೈಲುಗಳಲ್ಲಿ ಸೀಟಿಗಾಗಿ ಪರಸ್ಪರ ಕಿತ್ತಾಡುವ ವೀಡಿಯೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಸೀಟಿಗಾಗಿ ಬಸ್‌ನಲ್ಲಿ ಮಹಿಳೆ ಹಾಗೂ ಯುವತಿ ಮಧ್ಯೆ ದೊಡ್ಡ ಕಾಳಗ ನಡೆದಿದೆ. ಇಬ್ಬರು ಜುಟ್ಟು ಜುಟ್ಟು ಹಿಡಿದು ಹೊಡೆದಾಡಿಕೊಂಡಿದ್ದಾಳೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 61 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಮಹಿಳೆ ಹಾಗೂ ಹುಡುಗಿ ಇಬ್ಬರೂ ಕೂದಲನ್ನು ಪರಸ್ಪರ ಎಳೆದಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. 

ವಿಡಿಯೋದಲ್ಲಿ ಕಾಣಿಸುವಂತೆ ಇಬ್ಬರು ಮಹಿಳೆಯರು (Women) ಪರಸ್ಪರ ವಾದ ಪ್ರತಿವಾದ ಮಾಡುತ್ತಾ ಒಬ್ಬರನ್ನೊಬ್ಬರು ಎಳೆದಾಡಿಕೊಂಡು ಹೊಡೆದುಕೊಳ್ಳುತ್ತಾರೆ. ಈ ವೇಳೆ ಕೆಲವರು ಅವರ ಜಗಳ ಬಿಡಿಸಲು ಪ್ರಯತ್ನಿಸುತ್ತಾರಾದರೂ ಆದರೆ ಅವರ ಹೊಡೆದಾಟವನ್ನು ಯಾರಿಗೂ ನಿಲ್ಲಿಸಲಾಗಿಲ್ಲ. ಬಸ್‌ನಲ್ಲಿದ್ದ ಎಲ್ಲರೂ ಈ ಇಬ್ಬರನ್ನು ರಸ್ಲಿಂಗ್ ಫೈಟ್ ನೋಡುವಂತೆ ನೋಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಯಾರೂ ಏನೇ ಮಾಡಿದರೂ ಇವರ ಜಗಳವನ್ನು ಯಾರಿಗೂ ನಿಲ್ಲಿಸಲಾಗಿಲ್ಲ. ಕೊನೆಗೆ ಇಬ್ಬರು ಮಹಿಳಾ ಪೊಲೀಸರು ಬಸ್ ಏರಿ ಈ ಇಬ್ಬರು ಜಗಳಗಂಟಿಯರನ್ನು ಕೆಳಗೆ ಇಳಿಸಿದ್ದಾರೆ. ಅಲ್ಲೂ ಕೂಡ ಇವರು ಹೊಡೆದಾಡಲು ಶುರು ಮಾಡಿದ್ದಾರೆ. ಟ್ರಾಫಿಕ್ ಪೊಲೀಸರು ಹಾಗೂ ಇಬ್ಬರು ಮಹಿಳಾ ಪೊಲೀಸರು ಅವರನ್ನು ತಡೆಯುತ್ತಿರುವುದನ್ನು ಕಾಣಬಹುದು. 

ಮೆಟ್ರೋದಲ್ಲಿ ಸೀಟಿಗಾಗಿ ಮಹಿಳೆಯರ ಕಿತ್ತಾಟ: ವಿಡಿಯೋ ವೈರಲ್‌

ಹೊಡೆದಾಟದ ಜೊತೆ ಬೊಬ್ಬೆ ಕೂಡ ವಿಡಿಯೋದಲ್ಲಿ ಕೇಳಬಹುದಾಗಿದೆ. ಟ್ವಿಟ್ಟರ್‌ನಲ್ಲಿ (Twitter) ಈ ವಿಡಿಯೋವನ್ನು ಘರ್ ಕೇ ಕಲೇಶ್ ಎಂಬ ಖಾತೆಯಿಂದ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ಅನೇಕರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಈ ರೀತಿ ಜಗಳ ಪಬ್ಲಿಕ್‌ ಟ್ರಾನ್ಸ್‌ಪೋರ್ಟ್‌ನಲ್ಲಿ ಮಹಿಳೆಯರು ಜಗಳ ಮಾಡಿದ್ದನ್ನು ನಾವು ನೋಡಿದ್ದೇವೆ ಎಂದು ಅವರು ಕಾಮೆಂಟ್ ಮಾಡಿದ್ದಾರೆ. 

ಲೋಕಲ್‌ ಟ್ರೇನ್‌ನಲ್ಲಿ ಸೀಟಿಗಾಗಿ ಫೈಟು, ಜುಟ್ಟು ಹಿಡ್ಕೊಂಡು ಬಡಿದಾಡಿಕೊಂಡ್ರು ಹೆಣ್ಮಕ್ಳು!

 ಮುಂಬೈನ ನರನಾಡಿಯಾಗಿರುವ ಲೋಕಲ್‌ ಟ್ರೇನ್‌ನಲ್ಲಿ ಜಗಳ, ಗಲಾಟೆಗಳು ಆಗೋದು ಸಾಮಾನ್ಯ. ಯಾಕೆಂದರೆ, ಲೋಕಲ್‌ ಟ್ರೇನ್‌ನಲ್ಲಿ ದಿನನಿತ್ಯ ಪ್ರಯಾಣ ಮಾಡುವವರಿಗೆ ಇದೆಲ್ಲಾ ಒಂದು ವಿಚಾರವೇ ಅಲ್ಲ. ಆದರೆ, ಶುಕ್ರವಾರ ಮುಂಬೈ ಲೋಕಲ್‌ ಟ್ರೇನ್‌ನ ವಿಡಿಯೋವೊಂದು ದೊಡ್ಡ ಮಟ್ಟದಲ್ಲಿ ವೈರಲ್‌ ಅಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ ಸೀಟಿಗಾಗಿ ಇಬ್ಬರು ಮಹಿಳೆಯರ ನಡುವೆಇನ ಜಗಳ ತಾರಕಕ್ಕೇರಿದ್ದು, ಇಬ್ಬರೂ ಜುಟ್ಟು ಹಿಡಿದುಕೊಂಡು ಜಗಳವಾಡಿಕೊಂಡಿದ್ದಾರೆ. ಈ ಮಾರಾಮಾರಿಯನ್ನು ತಡೆಯಲು ಯತ್ನಿಸಿದ ಮಹಿಳಾ ಪೇದೆಯೊಬ್ಬರಿಗೂ ಗಂಭೀರವಾಗಿ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಥಾಣೆ ಹಾಗೂ ಪನ್ವೇಲ್‌ ನಡುವಿನ ಲೋಕಲ್‌ ಟ್ರೇನ್‌ನ ಮಹಿಳಾ ಕಂಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಮಹಿಳೆಯರು ಪರಸ್ಪರ ಕೂದಲು ಎಳೆದುಕೊಂಡು ಗಲಾಟೆ ಮಾಡಿಕೊಂಡಿದ್ದಾರೆ. ಇವರಿಬ್ಬರ ನಡುವಿನ ಗಲಾಟೆಯನ್ನು ಬಿಡಿಸಲು ಹೋದ ಶಾರದಾ ಉಗ್ಲೆ ಎನ್ನುವ ಮಹಿಳಾ ಪೇದೆಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ವಿಂಡೋ ಪಕ್ಕಾ ಹೋಗಲು ಸೀಟ್ ಮೇಲೆ ಹತ್ತೋದಾ ಈ ನಾರಿ? ಥೋ ಇದೆಂಥಾ ವರ್ತನೆ?

'ಮಹಿಳೆ ಹಾಗೂ ಆಕೆಯ ಮೊಮ್ಮಗಳು ಥಾಣೆಯಲ್ಲಿ(Thane) ಲೋಕಲ್‌ ಟ್ರೇನ್‌ (Local Train) ಏರಿದ್ದರು. ಈ ವೇಳೆ ಕೋಪರ್ಖೈರಾನೆಯಲ್ಲಿ ಇನ್ನೊಬ್ಬ ಮಹಿಳೆಯೊಬ್ಬಳು ರೈಲು ಏರಿದ್ದರು. ಇಬ್ಬರೂ ಕೂಡ ಸೀಟು ಖಾಲಿಯಾಗುವುದನ್ನೇ ಕಾಯುತ್ತಿದ್ದರು. ಟರ್ಭೆ ನಿಲ್ದಾಣದಲ್ಲಿ ಒಂದು ಸೀಟು ಖಾಲಿಯಾಯಿತು, ಅದರ ನಂತರ ಮಹಿಳೆ ತನ್ನ ಮೊಮ್ಮಗಳಿಗೆ ಸೀಟು ಪಡೆಯಲು ಪ್ರಯತ್ನಿಸಿದಳು. ಆದರೆ ಅದೇ ಸಮಯದಲ್ಲಿ ಇನ್ನೊಬ್ಬ ಮಹಿಳೆ ಕೂಡ ಸೀಟಿನಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸಿದಳು. ಆದರೆ, ಇದಾದ ಬಳಿಕ ಇಬ್ಬರು ನಡುವೆ ತೀವ್ರ ವಾಗ್ವಾದ ನಡೆದಿದೆ. ಕೆಲ ಹೊತ್ತಿನಲ್ಲಿ ಮಾತಿನ ಮೂಲಕ ನಡೆಯುತ್ತಿದ್ದ ಗಲಾಟೆ, ಮಾರಾಮಾರಿ ಹಂತಕ್ಕೆ ಏರಿತು. ಇವರನ್ನು ನಿಯಂತ್ರಿಸಲು (Mumbai Local Train) ಮಹಿಳಾ ಪೇದೆಯೊಬ್ಬರು ಪ್ರಯತ್ನಿಸಿದರಾದರೂ, ಅವರು ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಇಬ್ಬರು ಮಹಿಳೆಯರು ಮಾತ್ರವೇ ಈ ಗಲಾಟೆಯಲ್ಲಿದ್ದರೆ, ನಂತರ ಕಂಪಾರ್ಟ್‌ಮೆಂಟ್‌ನಲ್ಲಿದ್ದ ಇತರ ಮಹಿಳೆಯರು ಕೂಡ ಇದರಲ್ಲಿ ಸೇರಿಕೊಂಡರು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Scroll to load tweet…