Asianet Suvarna News Asianet Suvarna News

ತೂಕ ಇಳಿಕೆ ಸರ್ಜರಿ ನಂತ್ರ ಇನ್ಸ್ಟಾ ಪ್ರಭಾವಿತೆಗೆ ಹೃದಯಾಘಾತ! ಸಾವಿಗೆ ಕಾರಣವಾಯ್ತಾ ಸೋರಿಯಾಸಿಸ್ ?

ಕೆಲ ಖಾಯಿಲೆಗಳು ಸದ್ದಿಲ್ಲದೆ ನಮ್ಮನ್ನು ಆವರಿಸಿಕೊಳ್ತವೆ. ಚರ್ಮದ ಮೇಲೆ ದುದ್ದು ಕಾಣಿಸಿಕೊಂಡ್ರೆ ಅದನ್ನು ನಿರ್ಲಕ್ಷ್ಯ ಮಾಡೋರೇ ಹೆಚ್ಚು. ಆದ್ರೆ ಇದೇ ಮುಂದೆ ಸಾವಿಗೆ ಕಾರಣವಾಗುತ್ತೆ ಅನ್ನೋದು ಅನೇಕರಿಗೆ ತಿಳಿದಿಲ್ಲ.
 

Popular Brazilian Influencer Died Of A Suspected Heart Attack roo
Author
First Published Jan 17, 2024, 12:58 PM IST | Last Updated Jan 17, 2024, 12:58 PM IST

ಹೃದಯಾಘಾತ ಪ್ರಕರಣಗಳು ದಿನ ದಿನಕ್ಕೂ ಹೆಚ್ಚಾಗ್ತಿದೆ. ಸಣ್ಣ ವಯಸ್ಸಿನಲ್ಲೇ ಅನೇಕರ ಜೀವ ಈ ಹೃದಯಾಘಾತದಿಂದ ಹೋಗಿದೆ. ಈಗ ಬ್ರೆಜಿಲಿಯನ್ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಮಿಲಾ ಡಿ ಜೇಸಸ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ತೂಕ ಇಳಿಕೆಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಿಲಾ ಡಿ ಜೀಸಸ್ಸ್ 35ನೇ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಹೃದಯಾಘಾತಕ್ಕೆ ತೂಕ ನಷ್ಟ ಶಸ್ತ್ರಚಿಕಿತ್ಸೆ ಕಾರಣ ಎಂಬುದು ಎಲ್ಲೂ ಸ್ಪಷ್ಟವಾಗಿಲ್ಲ.

ವಾಸ್ತವವಾಗಿ ಮಿಲಾ ಡಿ ಜೀಸಸ್ ಸೋರಿಯಾಸಿಸ್ (Psoriasis) ನಿಂದ ಬಳಲುತ್ತಿದ್ದರು. ಅವರ ದೇಹದ ಶೇಕಡಾ 80 ರಷ್ಟು ಭಾಗವನ್ನು ಸೋರಿಯಾಸಿಸ್ ಆವರಿಸಿತ್ತು. ಇದು ಅವರ ಹೃದಯಾಘಾತ (heart attack) ಕ್ಕೆ ಕಾರಣವಾಗಿರಬಹುದು ಎಂದು ವೈದ್ಯರು ಹೇಳಿದ್ದಾರೆ.

30ರ ಹರೆಯದಲ್ಲಿ ರಾತ್ರಿ ನಿದ್ರೆಯಿಂದ ಪದೇ ಪದೇ ಎಚ್ಚರವಾಗುತ್ತಾ? ಈವಾಗ್ಲೆ ಅಲರ್ಟ್ ಆಗಿ

ಆರು ತಿಂಗಳ ಹಿಂದೆ ಮಿಲಾ ಡಿ ಜೀಸಸ್ ಗ್ಯಾಸ್ಟ್ರಿಕ್ (Gastric) ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸರ್ಜರಿ ಆದ್ಮೇಲೆ ತನ್ನ ಜೀವನ ಹೇಗೆ ಬದಲಾಗಿದೆ ಎಂಬ ಫೋಸ್ಟ್  ಮಿಲಾ ಡಿ ಜೀಸಸ್ ಹಂಚಿಕೊಂಡಿದ್ದರು. ಒಂದು ಸರ್ಜರಿ ನಂತ್ರ ನನ್ನ ಜೀವನ ಹೇಗೆ ಬದಲಾಗಿದೆ ನೋಡಿ ಎಂದಿದ್ದರು  ಮಿಲಾ ಡಿ. ಹಿಂದಿನ ವರ್ಷ ನವೆಂಬರ್ ನಲ್ಲಿ ಮದುವೆಯಾಗಿದ್ದ ಮಿಲಾ ಡಿ ಜೀಸಸ್, ನಾಲ್ಕು ಮಕ್ಕಳ ತಾಯಿ.  ಮಿಲಾ ಡಿ ಜೀಸಸ್ ಸಾವಿನ ಸುದ್ದಿಯನ್ನು ಅವರ ಪತ್ನಿ ಜನರಿಗೆ ನೀಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯವಾಗಿದ್ದ ಮಿಲಾ ಡಿ ಜೀಸಸ್, ಮೂರು ತಿಂಗಳ ಹಿಂದೆ  ಸೋರಿಯಾಸಿಸ್‌ನ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು. ಇನ್ಸ್ಟಾಗ್ರಾಮ್ ನಲ್ಲಿ ಮಿಲಾ ಡಿ 60 ಸಾವಿರ ಫಾಲೋವರ್ಸ್ ಹೊಂದಿದ್ದಾರೆ. 

ಸೋರಿಯಾಸಿಸ್ ಎಂದರೇನು? : ಸೋರಿಯಾಸಿಸ್ ದೀರ್ಘಕಾಲದ ಕಾಯಿಲೆಯಾಗಿದೆ. ಇದರಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯು ಅತಿಯಾಗಿ ಸಕ್ರಿಯಗೊಳ್ಳುತ್ತದೆ. ಇದರಿಂದಾಗಿ ಚರ್ಮದ ಜೀವಕೋಶಗಳು ಬೇಗನೆ ಬೆಳೆಯುತ್ತವೆ. ಕೈಗಳು, ಮೊಣಕಾಲುಗಳು, ಮೊಣಕೈಗಳು, ಪಾದಗಳು, ಬೆನ್ನು ಮತ್ತು ನೆತ್ತಿಯ ಮೇಲೆ ಕೆಂಪು ತುರಿಕೆ ಚಿಪ್ಪುಗಳುಳ್ಳ ಪ್ಯಾಚ್  ಕಾಣಿಸಿಕೊಳ್ಳುತ್ತದೆ. ಚರ್ಮದ ತೇಪೆಗಳು ಉರಿಯುತ್ತವೆ ಮತ್ತು ದೇಹದಾದ್ಯಂತ ಹರಡುತ್ತವೆ. 

ಸೋರಿಯಾಸಿಸ್  ಕಾರಣಗಳು : ಸೋರಿಯಾಸಿಸ್ ಗೆ  ಇನ್ನೂ ಕಾರಣ ಸ್ಪಷ್ಟವಾಗಿಲ್ಲ. ನಮ್ಮ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಆನುವಂಶಿಕ ಅಂಶಗಳು ಪ್ರಮುಖ ಪಾತ್ರವಹಿಸುತ್ತವೆ. ಪ್ರಚೋದಕ ಅಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಚರ್ಮದ ಗಾಯ, ಕಡಿತ, ವ್ಯಾಕ್ಸಿನೇಷನ್, ಬಿಸಿಲು, ಶೀತ ಹವಾಮಾನ ಮತ್ತು ಶುಷ್ಕತೆ, ಮದ್ಯ ಸೇವನೆ, ಅಧಿಕ ರಕ್ತದೊತ್ತಡದ ಔಷಧಿಗಳು ಮತ್ತು ಮಲೇರಿಯಾ ವಿರೋಧಿ ಔಷಧಗಳು ಮತ್ತು ಲಿಥಿಯಂ ಸೇರಿದಂತೆ ಔಷಧಿಗಳು ಕೂಡ ಇದಕ್ಕೆ ಕಾರಣವಾಗುತ್ತದೆ.

ಸೋರಿಯಾಸಿಸ್ ಹೃದಯಾಘಾತಕ್ಕೆ ಕಾರಣವಾಗಬಹುದು? : ತಜ್ಞರ ಪ್ರಕಾರ, ಯಾವುದೇ ರೀತಿಯ ಸೋರಿಯಾಸಿಸ್‌ನಿಂದ ಬಳಲುತ್ತಿರುವವರು ಹೃದಯಾಘಾತದ ಅಪಾಯವನ್ನು ಹೊಂದಿರುತ್ತಾರೆ. ಇದು ಸಾಮಾನ್ಯ ಜನರಿಗಿಂತ ಸುಮಾರು ಮೂರು ಪಟ್ಟು ಹೆಚ್ಚಿರುತ್ತದೆ. ಸೋರಿಯಾಸಿಸ್ ಅನ್ನು ಗುಣಪಡಿಸಲಾಗದಿದ್ದರೂ, ಅದನ್ನು ನಿಯಂತ್ರಣದಲ್ಲಿಡಬಹುದು ಎಂದು ವೈದ್ಯರು ಹೇಳಿದ್ದಾರೆ.

ಸೋರಿಯಾಸಿಸ್‌ನಿಂದ ಉಂಟಾಗುವ ಉರಿಯೂತವು ಅನೇಕ ರೂಪಗಳನ್ನು ತೆಗೆದುಕೊಳ್ಳಬಹುದು. ಅಂತಿಮವಾಗಿ ಪರಿಧಮನಿಯ ಹೃದಯ ಕಾಯಿಲೆಗೆ ಕಾರಣವಾಗುತ್ತದೆ. ಅಮೇರಿಕನ್ ಜರ್ನಲ್ ಆಫ್ ಕಾರ್ಡಿಯಾಲಜಿ ಪ್ರಕಾರ ಚರ್ಮದ ಕಾಯಿಲೆಯ ತೀವ್ರ ಸ್ವರೂಪಗಳನ್ನು ಹೊಂದಿರುವವರು ಮತ್ತು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹೃದ್ರೋಗ ಕಾಡುವ ಸಾಧ್ಯತೆ ಹೆಚ್ಚು. 

ಈ ಸಪ್ಲಿಮೆಂಟ್‌ ತಗೊಂಡ್ರೆ ಲ್ಯಾಬ್‌ ಟೆಸ್ಟ್‌ ರಿಸಲ್ಟೇ ತಲೆಕೆಳಗಾಗಿ ಹೋಗುತ್ತೆ ಹುಷಾರ್!

ಸೋರಿಯಾಸಿಸ್ ನಿಂದ ಬಳಲುತ್ತಿರುವವರ ಹೃದಯದ ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿವಹಿಸಬೇಕು.ಪ್ರತಿ ದಿನ ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಒತ್ತಡದಿಂದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಒತ್ತಡದಿಂದ ದೂರು ಇರಬೇಕು. ಅಲ್ಲದೆ ಆರೋಗ್ಯಕರ ಆಹಾರ ಸೇವನೆ ಇಲ್ಲಿ ಮುಖ್ಯಪಾತ್ರವಹಿಸುತ್ತದೆ. 
 

Latest Videos
Follow Us:
Download App:
  • android
  • ios