ಹೆಣ್ಣು ಮಾಯೆ ಅಂತ ಸುಮ್ನೆ ಹೇಳಲ್ಲ ನೋಡಿ... ಬುದ್ದಿ ಹೇಳ್ತಿದ್ದ ಪೊಲೀಸೇ ಡಾನ್ಸ್ ಮಾಡಿ ಸಸ್ಪೆಂಡ್ ಆದ
ರೈಲಿನಲ್ಲಿ ರಕ್ಷಣೆಗೆಂದು ಇದ್ದ ಪೊಲೀಸ್ ಪೇದೆಯೋರ್ವರು ಹುಡುಗಿಯೊಂದಿಗೆ ಡಾನ್ಸ್ ಮಾಡಲು ಹೋಗಿ ಈಗ ಸಸ್ಪೆಂಡ್ ಆಗಿದ್ದಾರೆ. ಮುಂಬೈನ ಲೋಕಲ್ ಟ್ರೈನ್‌ನಲ್ಲಿ ಈ ಘಟನೆ ನಡೆದಿದೆ.
ಮುಂಬೈ: ರೈಲಿನಲ್ಲಿ ರಕ್ಷಣೆಗೆಂದು ಇದ್ದ ಪೊಲೀಸ್ ಪೇದೆಯೋರ್ವರು ಹುಡುಗಿಯೊಂದಿಗೆ ಡಾನ್ಸ್ ಮಾಡಲು ಹೋಗಿ ಈಗ ಸಸ್ಪೆಂಡ್ ಆಗಿದ್ದಾರೆ. ಮುಂಬೈನ ಲೋಕಲ್ ಟ್ರೈನ್‌ನಲ್ಲಿ ಈ ಘಟನೆ ನಡೆದಿದೆ. ಕೇಂದ್ರ ರೈಲ್ವೆಯ ಸೆಕೆಂಡ್ ಕ್ಲಾಸ್ ಲೇಡಿಸ್ ಬೋಗಿಯಲ್ಲಿ ಈ ಘಟನೆ ನಡೆದಿದೆ. ಡಿಸೆಂಬರ್ 6 ರಂದು ರಾತ್ರಿ 10 ಗಂಟೆ ವೇಳೆ ಈ ಡಾನ್ಸ್ ನಡೆದಿದ್ದು, ಬಳಿಕ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದು ರೈಲ್ವೆಯಲ್ಲಿ ಭದ್ರತಾ ಸೇವೆ ನೀಡುವ ಸರ್ಕಾರಿ ರೈಲ್ವೆ ಪೊಲೀಸ್ ಅಧಿಕಾರಿಗಳ ಗಮನಕ್ಕೂ ಬಂದಿದ್ದು, ಪರಿಣಾಮ ಯುವತಿಯೊಂದಿಗೆ ಡಾನ್ಸ್ ಮಾಡಿದ ಪೊಲೀಸ್ ವಿರುದ್ಧ ಜಿಆರ್‌ಪಿ ಕ್ರಮಕ್ಕೆ ಮುಂದಾಗಿದೆ.
ಎಸ್‌ಪಿ ಗುಪ್ತಾ ಯುವತಿಯೊಂದಿಗೆ ಡಾನ್ಸ್ ಮಾಡಿದ ಪೊಲೀಸ್, ವೈರಲ್ ವೀಡಿಯೋದಲ್ಲಿ ಕಾಣಿಸುವಂತೆ ಗುಪ್ತಾ ಅವರು, ರೈಲಿನಲ್ಲಿ ತನ್ನ ಮಗುವಿನೊಂದಿಗೆ ಡಾನ್ಸ್ ಮಾಡಿ ರೀಲ್ಸ್ ಮಾಡುತ್ತಿದ್ದ ಮಹಿಳೆಗೆ ಮೊದಲಿಗೆ ಸುರಕ್ಷತೆಯ ಮಹತ್ವದ ಪಾಠ ಮಾಡುವುದು ಕಾಣಿಸುತ್ತಿದೆ. ಆದರೂ ನಂತರ ಪರಿಸ್ಥಿತಿ ಬದಲಾಗಿದ್ದು, ರಕ್ಷಣೆಗಿದ್ದ ಪೊಲೀಸ್ ಪೇದೆಯೇ ಮಹಿಳೆಯೊಂದಿಗೆ ಕೊನೆಯಲ್ಲಿ ಡಾನ್ಸ್ ಮಾಡುವುದು ಕಾಣಿಸುತ್ತಿದೆ.
ಈ ವಿಡಿಯೋ ನಂತರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಪೊಲೀಸ್ ಪೇದೆಯ ಕೆಲಸಕ್ಕೆ ಕುತ್ತು ತಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿದ್ದು, ಕೆಲಸದ ಸಮವಸ್ತ್ರದಲ್ಲಿ ಕೆಲಸದ ವೇಳೆಯಲ್ಲಿ ಈ ರೀತಿ ಡಾನ್ಸ್ ಮಾಡುವುದು, ವೀಡಿಯೋ ಮಾಡುವುದು, ಸೆಲ್ಫಿ ತೆಗೆಯುವುದು ತಪ್ಪು ಕ್ರಮವಾಗಿದ್ದು, ಇಂತಹ ವಿಚಾರಗಳು ಕಂಡು ಬಂದಲ್ಲಿ ಅಂತ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಇಲಾಖೆ ಹೇಳಿದೆ.
ಆದರೆ ಸುಮ್ಮನೇ ತನ್ನಷ್ಟಕ್ಕೆ ತಾನು ನಿಂತಿದ್ದ ಪೊಲೀಸ್ ಪೇದೆಯನ್ನು ಡಾನ್ಸ್ ಮಾಡುವಂತೆ ಸೆಳೆದು ಆತನ ಕೆಲಸಕ್ಕೆ ಕುತ್ತು ತಂದ ಮಹಿಳೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ವೈರಲ್ ಆದ ವೀಡಿಯೋದಲ್ಲಿ ಇದು ಸ್ಪಷ್ಟವಾಗಿ ಕಾಣಿಸುತ್ತಿದೆ. ಮಹಿಳಾ ಭೋಗಿಯಲ್ಲಿ ಮೊದಲಿಗೆ ಈ ಪೇದೆ ತನ್ನ ಪಾಡಿಗೆ ತಾನಿದ್ದ, ಅಲ್ಲದೇ ಸಾರ್ವಜನಿಕ ಸ್ಥಳವೆಂಬ ಯೋಚನೆಯೂ ಇಲ್ಲದೇ ಡಾನ್ಸ್ ಮಾಡುತ್ತಿದ್ದ ಮಹಿಳೆಗೆ ಸುರಕ್ಷತೆಯ ಪಾಠ ಮಾಡಿದ್ದ. ಆದರೆ ಕೊನೆಗೆ ಏನಾಯ್ತೋ ಏನೋ ಆತನೂ ಆಕೆಯೊಂದಿಗೆ ಸೇರಿ ಡಾನ್ಸ್ ಮಾಡಿದ್ದು, ಸಂಕಷ್ಟಕ್ಕೆ ಗುರಿಯಾಗಿದ್ದಾನೆ. ಇದೆಲ್ಲಾ ನೋಡಿದ ಮೇಲೆ ಹೆಣ್ಣು ಮಾಯೆ ಅಂತ ಸುಮ್ನೆ ಹೇಳ್ತಾರಾ?
Mumbai Police 🤡pic.twitter.com/9kBPCGD0jb
— Joh№y (@Johnny__007) December 13, 2023