ಮಹಿಳೆಯರಿಗೆ ಗುಡ್‌ನ್ಯೂಸ್: ನಯಾಪೈಸೆ ಖರ್ಚು ಮಾಡ್ದೇ ಪಡೆಯಿರಿ ಹೊಲಿಗೆ ಮೆಷಿನ್

ಮನೆಯಲ್ಲಿ ಸುಮ್ನೆ ಕೂತು ಬೇಜಾರಾಗ್ತಿದೆ. ಮನೆಯಿಂದಲೇ ಏನಾದ್ರೂ ಕೆಲ್ಸ ಮಾಡಿದ್ರೆ ಸ್ಪಲ್ಪ ದುಡ್ಡಾದ್ರೂ ಸಂಪಾದನೆಯಾಗ್ತಿತ್ತು ಅನ್ನೋ ಮಹಿಳೆ (Women)ಯರಿಗೆ ಗುಡ್‌ನ್ಯೂಸ್. ಮಹಿಳೆಯರು ಸ್ವಾವಲಂಬಿಗಳೋಕೆ ಕೇಂದ್ರ ಸರ್ಕಾರ (Central Government)ವೇ ಸಾಥ್ ಕೊಡ್ತಿದೆ. ಮಹಿಳೆಯರಿಗಾಗಿಯೇ ಉಚಿತ ಹೊಲಿಗೆ ಯಂತ್ರ (Sewing Machine) ಯೋಜನೆ ಶುರು ಮಾಡಿದೆ.

PM Free Silai Machine Yojana, Women Can Now Get Free Sewing Machine

ಸ್ವಂತ ಕಾಲಿನ ಮೇಲೆ ನಿಲ್ಲಬೇಕೆಂಬ ಹಂಬಲ ಪ್ರತಿಯೊಬ್ಬರಿಗೂ ಇರುತ್ತದೆ. ತಾವೂ ಆರ್ಥಿಕವಾಗಿ ಸದೃಢವಾಗಬೇಕೆಂಬ ಬಯಕೆ ಅನೇಕ ಮಹಿಳೆ (Women) ಅನೇಕ ಮಹಿಳೆಯರಲ್ಲಿದೆ. ಕೆಲ ಮಹಿಳೆಯರು ಸ್ವಂತ ದುಡಿಮೆಗೆ ಮುಂದಾಗ್ತಾರೆ. ಮತ್ತೆ ಕೆಲ ಮಹಿಳೆಯರು ಇದ್ರ ಕನಸು ಕಾಣುವುದ್ರಲ್ಲಿಯೇ ಜೀವನ ಮುಗಿಸ್ತಾರೆ. ಬಹುತೇಕ ಮಹಿಳೆಯರು ಒಂದಲ್ಲ ಒಂದು ಸಮಯದಲ್ಲಿ ಹೊಲಿಗೆ (Sewing )ಕಲಿತಿರುತ್ತಾರೆ. ಬ್ಲೌಸ್ (Blouses) ಬರುವುದಿಲ್ಲವೆಂದ್ರೂ ಹರಿದ ಬಟ್ಟೆಗೆ ಹೊಲಿಗೆ ಹಾಕುವಷ್ಟು ಕಲಿತಿದ್ದೇನೆ ಎನ್ನುವವರಿದ್ದಾರೆ.

ಹೊಲಿಗೆ ಎಂದೂ ಬೇಡಿಕೆ ಕಳೆದುಕೊಳ್ಳದ ಉದ್ಯೋಗ. ಎಲ್ಲ ಕಾಲದಲ್ಲೂ ಇದಕ್ಕೆ ಬೇಡಿಕೆಯಿದೆ. ಬ್ಲೌಸ್,ಗೌನ್ ಗಳನ್ನು ಸುಂದರವಾಗಿ ಸ್ಟಿಚ್ ಮಾಡುವ ಕಲೆ ಗೊತ್ತಿದ್ದರೆ ಮಹಿಳೆಯರಿಗೆ ಹೇಳಿ ಮಾಡಿಸಿದ ಕೆಲಸ ಇದು. ಕೆಲ ಮಹಿಳೆಯರಿಗೆ ಸಂಪೂರ್ಣ ಹೊಲಿಗೆ ತಿಳಿದಿದ್ದರೂ ಮನೆಯಲ್ಲಿ ಮಶಿನ್ ಇರುವುದಿಲ್ಲ. ಅದಕ್ಕೆ ಹೂಡಿಕೆ ಮಾಡಿ ಉದ್ಯೋಗ ಶುರು ಮಾಡುವಷ್ಟು ಹಣವಿರುವುದಿಲ್ಲ. ನೀವೂ ಅಂಥವರಾಗಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ನೀವೂ ಕೂಡ ಹೊಲಿಗೆ ಮಶಿನ್ ಖರೀದಿ ಮಾಡಿ, ನಿಮ್ಮ ಸ್ವಂತ ಉದ್ಯೋಗ ಆರಂಭಿಸಬಹುದು. ಕೇಂದ್ರ ಸರ್ಕಾರ ಅದಕ್ಕೆ ನೆರವಾಗ್ತಿದೆ.

ಪಿಎಂ ಉಚಿತ ಹೊಲಿಗೆ ಯಂತ್ರ ಯೋಜನೆ 2022 (Free Sewing Machine Scheme 2022) ಅಡಿಯಲ್ಲಿ ಮಹಿಳೆಯರು ಹೊಲಿಗೆ ಮಶಿನ್ ಪಡೆಯಬಹುದಾಗಿದೆ. ಇಂದು ನಾವು ಉಚಿತ ಹೊಲಿಗೆ ಯಂತ್ರ ಯೋಜನೆ ಬಗ್ಗೆ ಮಾಹಿತಿ ನೀಡ್ತೇವೆ.

ಉಚಿತ ಹೊಲಿಗೆ ಯಂತ್ರ ಯೋಜನೆ : ಕೇಂದ್ರ ಸರ್ಕಾರ ಈ ಯೋಜನೆಯನ್ನು ಶುರು ಮಾಡಿದೆ. ಮಹಿಳೆಯರು ಈ ಯೋಜನೆಯಡಿ ಅರ್ಜಿ ಸಲ್ಲಿಸಿದ್ರೆ ಸಾಕು. ಪ್ರತಿ ರಾಜ್ಯದ 50,000 ಮಹಿಳೆಯರ ಅನುಕೂಲಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

HEART ATTACKಗೆ ಬಲಿಯಾಗುವವರಲ್ಲಿ ಮಹಿಳೆಯರೇ ಹೆಚ್ಚು

ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಲು ಅವಕಾಶ : ಪ್ರಧಾನಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆಯು ದೇಶದ ಮಹಿಳೆಯರಿಗೆ ಆರ್ಥಿಕವಾಗಿ ಸ್ವತಂತ್ರರಾಗಲು ಅವಕಾಶವನ್ನು ನೀಡುತ್ತದೆ. ಇದು ಭಾರತದ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಉತ್ತಮ ಹೆಜ್ಜೆಯಾಗಿದೆ. ಪ್ರಧಾನ ಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆ 2022 ರ ಅಡಿಯಲ್ಲಿ, 20ರಿಂದ 40 ವರ್ಷ ವಯಸ್ಸಿನ ಮಹಿಳೆಯರು ಹೊಲಿಗೆ ಯಂತ್ರವನ್ನು ಪಡೆಯಬಹುದು. ಇದಕ್ಕೆ ಮಹಿಳೆಯರು ಒಂದು ರೂಪಾಯಿ ಖರ್ಚು ಕೂಡ ಮಾಡಬೇಕಾಗಿಲ್ಲ.

ಉಚಿತ ಹೊಲಿಗೆ ಯಂತ್ರ ಪಡೆಯಲು ಅಗತ್ಯವಿರುವ ದಾಖಲೆ : ಗ್ರಾಮೀಣ ಪ್ರದೇಶದ ಹಾಗೂ ನಗರ ಪ್ರದೇಶದ ಮಹಿಳೆಯರೆಲ್ಲರೂ ಈ ಯೋಜನೆಯಡಿ ಉಚಿತ ಹೊಲಿಗೆ ಯಂತ್ರವನ್ನು ಪಡೆಯಬಹುದು. ಈ ಯೋಜನೆಯ ಲಾಭ ಪಡೆಯಲು ಆಧಾರ್ ಕಾರ್ಡ್, ಜನ್ಮ ದಿನಾಂಕ ದಾಖಲೆ, ಆದಾಯ ಪ್ರಮಾಣಪತ್ರ, ಮೊಬೈಲ್ ಸಂಖ್ಯೆ, ಪಾಸ್‌ಪೋರ್ಟ್ ಗಾತ್ರದ ಫೋಟೋ, ಅಂಗವಿಕಲರಿಗೆ ವಿಶಿಷ್ಟ ಅಂಗವಿಕಲ ಐಡಿ ಮತ್ತು ವಿಧವೆಯರಿಗೆ ವಿಧವೆ ಪ್ರಮಾಣಪತ್ರದ ಅಗತ್ಯವಿದೆ.

platelets count ಗರ್ಭಿಣಿಯರಲ್ಲಿ ಕಡಿಮೆಯಾಗಲು ಕಾರಣಗಳಿವು..

ಹೊಲಿಗೆ ಯಂತ್ರಕ್ಕೆ ಹೀಗೆ ಅರ್ಜಿ ಸಲ್ಲಿಸಿ : ಕೇಂದ್ರ ಸರ್ಕಾರದ ಉಚಿತ ಹೊಲಿಗೆ ಯಂತ್ರ ಯೋಜನೆಗೆ ನೀವು ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಅಧಿಕೃತ ವೆಬ್‌ಸೈಟ್ www.india.gov.in  ಗೆ ಹೋಗಿ ಅರ್ಜಿ ಸಲ್ಲಿಸಬೇಕು. ವೆಬ್‌ಸೈಟ್‌ನ ಮುಖಪುಟದಲ್ಲಿ ಉಚಿತ ಹೊಲಿಗೆ ಪೂರೈಕೆಗಾಗಿ ಅರ್ಜಿ ನಮೂನೆಯ ಲಿಂಕ್ ಕ್ಲಿಕ್ ಮಾಡಿ. ಅರ್ಜಿ ನಮೂನೆಯ ಪಿಡಿಎಫ್ ನ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಅದರ ನಂತರ ನಿಮ್ಮ ವಿವರಗಳನ್ನು ಅದರಲ್ಲಿ ನಮೂದಿಸಿ. ಕೊನೆಯದಾಗಿ ನಿಮ್ಮ ದಾಖಲೆಗಳನ್ನು ಲಗತ್ತಿಸಿ. ಅರ್ಜಿ ಭರ್ತಿ ಮಾಡಿದ ನಂತ್ರ ಮತ್ತೊಮ್ಮೆ ಪರಿಶೀಲನೆ ನಡೆಸಿ ಅದನ್ನು ಸಲ್ಲಿಸಬೇಕಾಗುತ್ತದೆ. ನಿಮ್ಮ ಅರ್ಜಿಯನ್ನು ಕಚೇರಿ ಅಧಿಕಾರಿಗಳು ಪರಿಶೀಲಿಸುತ್ತಾರೆ. ಪರಿಶೀಲಿಸಿದ ನಂತರ ಹೊಲಿಗೆ ಯಂತ್ರ ನೀಡುತ್ತಾರೆ. ಅದಕ್ಕೆ ನೀವು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

Latest Videos
Follow Us:
Download App:
  • android
  • ios