- Home
- News
- World News
- ಅಪ್ಪ-ಅಮ್ಮ ದುಡ್ಡು ಖಾಲಿ ಮಾಡ್ತಾರೆ ಅಂತ ಗಿಫ್ಟ್ ಹಣದಲ್ಲಿ ಚಿನ್ನ ಖರೀದಿಸಿದ 10ರ ಬಾಲೆ; ಈಗ ಈಕೆ ಲಕ್ಷಾಧಿಪತಿ!
ಅಪ್ಪ-ಅಮ್ಮ ದುಡ್ಡು ಖಾಲಿ ಮಾಡ್ತಾರೆ ಅಂತ ಗಿಫ್ಟ್ ಹಣದಲ್ಲಿ ಚಿನ್ನ ಖರೀದಿಸಿದ 10ರ ಬಾಲೆ; ಈಗ ಈಕೆ ಲಕ್ಷಾಧಿಪತಿ!
ಚೀನಾದ 10 ವರ್ಷದ ಬಾಲಕಿಯೊಬ್ಬಳು, ತನಗೆ ಉಡುಗೊರೆಯಾಗಿ ಸಿಕ್ಕ ಹಣವನ್ನು ಪೋಷಕರು ಖರ್ಚು ಮಾಡಬಹುದೆಂಬ ಭಯದಿಂದ ಚಿನ್ನದಲ್ಲಿ ಹೂಡಿಕೆ ಮಾಡಿದ್ದಳು. ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾದ ಕಾರಣ, ಆಕೆಯ ಈ ಬುದ್ಧಿವಂತಿಕೆಯ ಹೂಡಿಕೆಯು ಈಗ ಲಕ್ಷಾಂತರ ರೂಪಾಯಿ ಲಾಭವನ್ನು ತಂದುಕೊಟ್ಟಿದೆ.

ಚೀನಾದ 10 ವರ್ಷದ ಬಾಲಕಿಯೊಬ್ಬಳ ಬುದ್ಧಿವಂತಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಚೀನೀ ಹೊಸ ವರ್ಷದ ಹಬ್ಬದ ವೇಳೆ ದೊಡ್ಡವರಿಂದ ಗಿಫ್ಟ್ ಆಗಿ ಸಿಕ್ಕ ಹಣವನ್ನು ಉಳಿಸಿಕೊಳ್ಳಲು ಈಕೆ ಮಾಡಿದ ಐಡಿಯಾ ಎಲ್ಲರನ್ನೂ ಬೆರಗುಗೊಳಿಸಿದೆ.
ಅಪ್ಪ-ಅಮ್ಮ ಆ ದುಡ್ಡನ್ನು ಖರ್ಚು ಮಾಡಿಬಿಡುತ್ತಾರೆ ಎಂಬ ಭಯದಲ್ಲಿ ಆಕೆ ಚಿನ್ನ ಖರೀದಿಸಿಟ್ಟಿದ್ದಳು. ಈಗ ಅದೇ ಚಿನ್ನ ಆಕೆಗೆ ಲಕ್ಷಾಂತರ ರೂಪಾಯಿ ಲಾಭ ತಂದುಕೊಟ್ಟಿದೆ.
ಉತ್ತರ ಚೀನಾದ ಹೆಬೈ ಪ್ರಾಂತ್ಯದ ಲ್ಯಾಂಗ್‌ಫಾಂಗ್ ನಗರದ ನಿವಾಸಿ ಈ ಬಾಲಕಿ. ಈಕೆ 2023ರಿಂದ ಚಿನ್ನ ಖರೀದಿಸಲು ಶುರುಮಾಡಿದ್ದಳು. ಪ್ರತಿ ವರ್ಷ ಹೊಸ ವರ್ಷದ ಹಬ್ಬಕ್ಕೆ ಈಕೆಗೆ ಸುಮಾರು 4,000 ಯುವಾನ್ (ಅಂದಾಜು 48,000 ರೂಪಾಯಿ) ಉಡುಗೊರೆಯಾಗಿ ಸಿಗುತ್ತಿತ್ತು.
ತನ್ನ ಬಳಿಯಿರುವ ಹಣವನ್ನು ಪೋಷಕರು ಮನೆ ಖರ್ಚಿಗೆ ಅಥವಾ ಬೇರೆ ಯಾವುದಕ್ಕಾದರೂ ಬಳಸಿಬಿಡಬಹುದು ಎಂಬ ಆತಂಕ ಆಕೆಗೆ ಇತ್ತು. ಇದೇ ಕಾರಣಕ್ಕೆ ಆಕೆ ಚಿನ್ನ ಖರೀದಿಸಲು ಮುಂದಾದಳು. ಹಣಕ್ಕಿಂತ ಚಿನ್ನವೇ ಹೆಚ್ಚು ಸೇಫ್ ಎಂದು ನಂಬಿದ ಆಕೆ, ಪ್ರತಿ ವರ್ಷ ಸಿಕ್ಕ ಹಣದಲ್ಲಿ ಚಿನ್ನ ಖರೀದಿಸಿ ಕೂಡಿಡಲು ಆರಂಭಿಸಿದಳು.
ಬಾಲಕಿಯ ತಾಯಿ ಬಾಯಿ ಅವರ ಪ್ರಕಾರ, ಮಗಳು ಮೊದಲ ಬಾರಿಗೆ ಚಿನ್ನ ಖರೀದಿಸುವಾಗ ಒಂದು ಗ್ರಾಂಗೆ ಸುಮಾರು 460 ಯುವಾನ್ (ಸುಮಾರು 5,500 ರೂಪಾಯಿ) ಬೆಲೆ ಇತ್ತು. ಆದರೆ, ಈ ವರ್ಷದ ಫೆಬ್ರವರಿ ಹೊತ್ತಿಗೆ ಚಿನ್ನದ ಬೆಲೆ ಒಂದು ಗ್ರಾಂಗೆ 1,100 ಯುವಾನ್‌ಗೆ (ಸುಮಾರು 13,000 ರೂಪಾಯಿ) ಏರಿಕೆಯಾಗಿದೆ.
ಈವರೆಗೆ ಬಾಲಕಿ ಸುಮಾರು 30 ಗ್ರಾಂ ಚಿನ್ನವನ್ನು ತನ್ನದಾಗಿಸಿಕೊಂಡಿದ್ದಾಳೆ. ವಿಶೇಷ ಅಂದರೆ, ಸಂಗ್ರಹಿಸಿದ ಚಿನ್ನದಲ್ಲಿ ಒಂದಿಷ್ಟನ್ನೂ ಆಕೆ ಅಥವಾ ಆಕೆಯ ಪೋಷಕರು ಮಾರಾಟ ಮಾಡಿಲ್ಲ. ಮುಂದೆಯೂ ಗಿಫ್ಟ್ ಆಗಿ ಸಿಗುವ ಹಣದಲ್ಲಿ ಇನ್ನಷ್ಟು ಚಿನ್ನ ಖರೀದಿಸುವುದು ಬಾಲಕಿಯ ಪ್ಲಾನ್ ಆಗಿದೆ.
ಚೀನಾದಲ್ಲಿ ಕಳೆದ ಒಂದು ವರ್ಷದಿಂದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಕಳೆದ ವರ್ಷ ಶೇ. 60ರಷ್ಟು ಹೆಚ್ಚಾಗಿದ್ದ ಚಿನ್ನದ ಬೆಲೆ, ಈ ವರ್ಷದ ಮೊದಲ ತಿಂಗಳಲ್ಲೇ ಮತ್ತೆ ಶೇ. 30ರಷ್ಟು ಏರಿಕೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

