ಮೊಹಮ್ಮದ್ ಶಮಿಗೆ ಬಂತು ಮದ್ವೆ ಪ್ರೊಪೋಸಲ್: ಹಳೆ ಪತ್ನಿ ಹಸೀನ್ ಜಹಾನ್ ಏನಂದ್ರು ಕೇಳಿ
ಬಾಲಿವುಡ್ ನಟಿ ಹಾಗೂ ಈಗ ರಾಜಕಾರಣಿಯಾಗಿರುವ ಪಾಯಲ್ ಘೋಷ್ ಮೊಹಮ್ಮದ್ ಶಮಿಗೆ ಮದುವೆಯ ಪ್ರೊಪೋಸ್ ಮಾಡಿರುವುದಕ್ಕೆ ಶಮಿ ಮಾಜಿ ಪತ್ನಿಯ ರಿಯಾಕ್ಷನ್ ಹೇಗಿದೆ ನೋಡಿ. ಅವರೊಬ್ಬ ಒಳ್ಳೆಯ ವ್ಯಕ್ತಿಯಾಗಿದ್ದರೆ ನಾವೂ ಚೆನ್ನಾಗಿ ಜೀವನ ಮಾಡಬಹುದಿತ್ತು ಎಂದು ಹೇಳಿದ್ದಾರೆ.
ಭಾರತ-ನ್ಯೂಜಿಲ್ಯಾಂಡ್ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ಬಳಿಕ ಕೇಳಿಬರುತ್ತಿರುವ ಪ್ರಮುಖ ಹೆಸರು ಮೊಹಮ್ಮದ್ ಶಮಿ. ಒಂದೇ ಮ್ಯಾಚ್ ನಲ್ಲಿ 7 ವಿಕೆಟ್ ಗಳನ್ನು ಕಬಳಿಸಿ ಭಾರತದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ ಅತ್ಯುತ್ತಮ ಬೌಲರ್. ಮೊನ್ನೆ ಮೊಹಮ್ಮದ್ ಶಮಿ ಆಟ ನೋಡಿದವರಿಗೆ ಅವರ ಬಗ್ಗೆ ಮೆಚ್ಚುಗೆ ಮೂಡಿರುವುದು ಗ್ಯಾರೆಂಟಿ. ಬಹಳಷ್ಟು ಮಹಿಳೆಯರಿಗೆ ಕ್ರಶ್ ಕೂಡ ಆಗಿದೆ. ಮೊಹಮ್ಮದ್ ಶಮಿಗೆ ಅದೆಷ್ಟೋ ಮಹಿಳೆಯರು ಪ್ರೊಪೋಸ್ ಮಾಡಿರಬಹುದು. ಆದರೆ, ನೇರವಾಗಿ ಸೋಷಿಯಲ್ ಮೀಡಿಯಾದಲ್ಲೂ ಅವರಿಗೆ ಪ್ರೊಪೋಸ್ ಮಾಡಿದ್ದಾರೆ, ಬಾಲಿವುಡ್ ನಟಿ ಹಾಗೂ ರಾಜಕಾರಣಿಯಾಗಿರುವ ಪಾಯಲ್ ಘೋಷ್. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅವರು “ಶಮಿ, ನೀವು ನಿಮ್ಮ ಇಂಗ್ಲಿಷ್ ಭಾಷೆಯನ್ನು ಸುಧಾರಿಸಿಕೊಂಡರೆ ನಾನು ನಿಮ್ಮನ್ನು ಮದುವೆಯಾಗಲು ಸಿದ್ಧ’ ಎಂದು ನೇರವಾಗಿ ಪ್ರೊಪೋಸ್ ಮಾಡಿದ್ದಾರೆ. ಅವರಷ್ಟೇ ಅಲ್ಲ, ಮೊನ್ನೆಯ ಪಂದ್ಯದ ಬಳಿಕ ಶಮಿಗೆ ಮಹಿಳೆಯರ ಕಡೆಯಿಂದ ಇನ್ನೂ ಹಲವು ಪ್ರೊಪೋಸಲ್ ಗಳು ಬಂದಿರುವುದರಲ್ಲಿ ಅನುಮಾನವಿಲ್ಲ.
ಮೊಹಮ್ಮದ್ ಶಮಿ (Mohammad Shami) ವೈವಾಹಿಕ ಬದುಕಿನಲ್ಲಿ (Married Life) ಬಿರುಕು ಕಂಡವರು. ಶಮಿಯಿಂದ ಅವರ ಪತ್ನಿ ಹಸೀನ್ ಜಹಾನ್ (Hasin Jahan) ದೂರವಾಗಿದ್ದಾರೆ. 2014ರಲ್ಲಿ ಮೊಹಮ್ಮದ್ ಶಮಿ ಹಾಗೂ ಹಸೀನ್ ಜಹಾನ್ ವಿವಾಹವಾಗಿತ್ತು. 2015ರಲ್ಲಿ ಶಮಿಗೆ ಮಗಳು (Daughter) ಜನಿಸಿದ್ದಳು. ಆದರೆ, ಅಷ್ಟರ ಬಳಿಕ ದಂಪತಿ ನಡುವೆ ಭಿನ್ನಾಭಿಪ್ರಾಯ ಆರಂಭವಾಗಿತ್ತು. ಹಸೀನ್ ಜಹಾನ್ ಮೊಹಮ್ಮದ್ ಶಮಿ ಮೇಲೆ ದಾಂಪತ್ಯ ದ್ರೋಹದ ಆರೋಪ (Allegation) ಹೊರಿಸಿದ್ದರು. ಮ್ಯಾಚ್ ಫಿಕ್ಸಿಂಗ್ ಆರೋಪವನ್ನೂ ಮಾಡಿದ್ದರು. ಅಷ್ಟೇ ಅಲ್ಲ, 2018ರಲ್ಲಿ ಕೌಟುಂಬಿಕ ಹಿಂಸೆಯಾಗುತ್ತಿದೆ (Domestic Violence) ಎಂದು ಹೇಳಿದ್ದ ಹಸೀನ್ ಜಹಾನ್ ಶಮಿಯಿಂದ ದೂರವಾಗಿದ್ದರು.
No Bra! ಬ್ರಾ ಧರಿಸೋಕೆ ಇಷ್ಟವಿಲ್ಲದವರು ಈ ವಿಷಯಗಳ ಬಗ್ಗೆ ತಿಳಿದಿರಲೇಬೇಕು!
ಇದೀಗ ಪಾಯಲ್ ಘೋಷ್ (Payal Ghosh) ಶಮಿಗೆ ಪ್ರೊಪೋಸ್ ಮಾಡಿದ್ದಾರೆ. ಈ ಕುರಿತು ಸಹಜವಾಗಿ ಮಾಜಿ ಪತ್ನಿ ಏನು ಹೇಳುತ್ತಾರೆ ಎನ್ನುವುದು ಕುತೂಹಲ ಮೂಡಿಸುವ ಸಂಗತಿ. ಪಾಯಲ್ ಘೋಷ್ ಹೇಳಿಕೆ ಬಗ್ಗೆ ಅವರನ್ನು ಪ್ರಶ್ನಿಸಿದರೆ, “ಇಂಥದ್ದೆಲ್ಲ ಸೆಲೆಬ್ರಿಟಿಗಳ (Celebrity) ಜೀವನದಲ್ಲಿ ಆಗುತ್ತವೆ. ಇದು ಸಹಜ. ಇದರ ಬಗ್ಗೆ ನಾನು ಏನೂ ಕಮೆಂಟ್ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.
ಉತ್ತಮ ವ್ಯಕ್ತಿಯಾಗಿದ್ರೆ...
ಅಷ್ಟೇ ಅಲ್ಲ, ಬೌಲಿಂಗ್ ನಲ್ಲಿ (Bowling) ಮಾದರಿಯಂತೆ ಪರಾಕ್ರಮ ಪ್ರದರ್ಶನ ಮಾಡಿರುವ ಮೊಹಮ್ಮದ್ ಶಮಿ ಖಾಸಗಿ ಜೀವನದಲ್ಲೂ ಅಷ್ಟೇ ಒಳ್ಳೆಯತನ ಹೊಂದಿದ್ದರೆ ಚೆನ್ನಾಗಿತ್ತು ಎಂದೂ ಹೇಳಿದ್ದಾರೆ.
“ಬೌಲರ್ ಆಗಿ ಎಷ್ಟು ಉತ್ತಮ ಪ್ರದರ್ಶನ ನೀಡಿದ್ದಾರೋ ಅಷ್ಟೇ ಒಳ್ಳೆಯ (Good) ವ್ಯಕ್ತಿಯಾಗಿದ್ದರೆ, ಆಟಗಾರನಾಗಿ ಎಷ್ಟು ಚೆನ್ನಾಗಿರುವರೋ ಅಷ್ಟೇ ಖಾಸಗಿ (Personal) ಜೀವನದಲ್ಲೂ ಚೆನ್ನಾಗಿದ್ದರೆ ನಾವು ಸಹ ಉತ್ತಮ ಜೀವನ ನಡೆಸಬಹುದಿತ್ತು. ನನ್ನ ಮಗಳು, ಪತಿ ಮತ್ತು ನಾನು ಸಂತೋಷದಿಂದ ಬದುಕು ಮಾಡಬಹುದಿತ್ತು. ಅವರು ಉತ್ತಮ ಆಟಗಾರರಷ್ಟೇ ಅಲ್ಲದೆ, ಉತ್ತಮ ಪತಿ (Husband) ಹಾಗೂ ಒಳ್ಳೆಯ ತಂದೆಯೂ (Father) ಆಗಿದ್ದರೆ ಅದು ಎಲ್ಲಕ್ಕಿಂತ ಗೌರವ (Respect) ಮತ್ತು ಹೆಮ್ಮೆಯ ಸಂಗತಿಯಾಗಿರುತ್ತಿತ್ತು’ ಎಂದು ತಮ್ಮ ಮನದ ಆಶಯವನ್ನು ಬಹಿರಂಗಪಡಿಸಿದ್ದಾರೆ.
ಎರಡನೇ ಬಾರಿ ಗರ್ಭ ಧರಿಸುವಾಗ ಎಷ್ಟು ತಿಂಗಳ ಅಂತರ ಬೇಕು?
ಪಾಯಲ್ ಘೋಷ್ ಕೋಲ್ಕತದಲ್ಲಿ 1992ರಲ್ಲಿ ಜನಿಸಿದವರು. ಅಲ್ಲೇ ಪದವಿ ಓದಿದ ಬಳಿಕ ಬಾಲಿವುಡ್ ತಾರೆಯಾಗುವ ಕನಸನ್ನು ಹೊತ್ತು ಮುಂಬೈಗೆ ಬಂದರು. ಚಂದ್ರಶೇಖರ್ ಯೆಲೆಟಿ ತಮ್ಮ ಪ್ರಯಾಣಮ್ ಎನ್ನುವ ಚಿತ್ರದಲ್ಲಿ ಪಾಯಲ್ ಗೆ ಅವಕಾಶ ನೀಡಿದರು. ಆ ಬಳಿಕ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. 2020ರಲ್ಲಿ ಅವರು ರಾಮ್ ದಾಸ್ ಅಠಾವಳೆ ನೇತೃತ್ವದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾಕ್ಕೆ ಸೇರ್ಪಡೆಯಾಗಿ ಪ್ರಸ್ತುತ ಮಹಿಳಾ ವಿಭಾಗದ ಉಪಾಧ್ಯಕ್ಷೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸೆಮಿಫೈನಲ್ ಪಂದ್ಯದ ಬಳಿಕ ಮೊಹಮ್ಮದ್ ಶಮಿಗೆ ಮಾಡಿರುವ ಪ್ರೊಪೋಸ್ (Propose) ನಿಂದಾಗಿ ಈಗ ಭಾರೀ ಸುದ್ದಿಯಲ್ಲಿದ್ದಾರೆ.