'ಎಕ್ಸ್‌ಕ್ಯೂಸ್ ಮೀ' ನಟ ಸುನಿಲ್ ರಾವ್ ಫಾದರ್ ಡೈರಿ; ಫೋಟೋ ನೋಡಿ!
'ಎಕ್ಸ್‌ಕ್ಯೂಸ್ ಮೀ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ ನಟ ಸುನಿಲ್ ರಾವ್ ಮಗನೊಂದಿಗೆ 'ಫಾದರ್ ಡೈರಿ' ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಬಾಲ್ಯ ನಟನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಸುನಿಲ್ ರಾವ್‌ಗೆ ಚಿತ್ರರಂಗದಲ್ಲಿ ಬಿಗ್ ಬ್ರೇಕ್ ಕೊಟ್ಟ ಸಿನಿಮಾ 'ಎಕ್ಸ್‌ಕ್ಯೂಸ್ ಮೀ'. ಇದಾದ ನಂತರ ಏರುಪೇರುಗಳನ್ನು ಕಂಡರು. 'ಲೂಸ್ ಕನೆಕ್ಷನ್' ವೆಬ್‌ಸೀರಿಸ್ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಎದುರಾದರು.
ಬಿಗ್ ಬಾಸ್ ಬಾರ್ಬಿ ಡಾಲ್ ಚೈತ್ರಾ ವಾಸುದೇವನ್ ಪತಿ ಇವ್ರು!
ಇನ್ನ 2018 ರಂದು ಜೆ.ಪಿ.ನಗರದಲ್ಲಿ ಗೆಳತಿ ಶ್ರೇಯ ಐಯ್ಯರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುನೀಲ್ ಮೇ 2019 ರಂದು ಕುಟುಂಬಕ್ಕೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದರು. ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಸುನೀಲ್ ರಾವ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಗನೊಂದಿಗಿರುವ ಪೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.
ಸೆಪ್ಟೆಂಬರ್ 5ರಂದು 'ಇಂಟ್ರಡ್ಯೂಸಿಂಗ್ ಅಥರ್ವಾ ರಾವ್, ನಮ್ಮ ಪುಟ್ಟ ಗಣೇಶ' ಎಂದು ಮಗನನ್ನು ಪರಿಚಯಿಸಿದ್ದಾರೆ. ಸದ್ಯಕ್ಕೆ 'ತುರ್ತು ನಿಗಮ' ಶೂಟಿಂಗ್‌ನಲ್ಲಿ ಸುನೀಲ್ ಬ್ಯುಸಿಯಾಗಿದ್ದಾರೆ.