ಬೆಂಗ್ಳೂರು ತಲುಪಿದ 7ನೇ ಆಕ್ಸಿಜನ್ ಎಕ್ಸ್‌ಪ್ರೆಸ್: ಮಹಿಳೆಯರದೇ ಸಾರಥ್ಯ
- ಸಿಲಿಕಾನ್ ಸಿಟಿಗೆ ಜೀವವಾಯು ತಲುಪಿಸಿದ ಮಹಿಳೆಯರು
- ಬೆಂಗಳೂರಿಗೆ ತಲುಪಿತು 120 ಟನ್ ಆಕ್ಸಿಜನ್
- ಬೆಂಗಳೂರು ತಲುಪಿದ 7ನೇ ಆಕ್ಸಿಜನ್ ಎಕ್ಸ್‌ಪ್ರೆಸ್‌ಗೆ ಮಹಿಳೆಯರದ್ದೇ ಸಾರಥ್ಯ
ಬೆಂಗಳೂರು(ಮೇ.22): ದೇಶಾದ್ಯಂತ ಕೊರೋನಾ ಮಿತಿ ಮೀರಿದ ನಗರಗಳಿಗೆ ಆಕ್ಸಿಜನ್ ತಲುಪಿಸುವಲ್ಲಿ ಭಾರತೀಯ ರೈಲ್ವೇ ಮಹತ್ವದ ಕೆಲಸ ಮಾಡುತ್ತಿದೆ. ಈ ಬಾರಿ ಬೆಂಗಳೂರಿಗೆ ಬಂದ ಆಕ್ಸಿಜನ್ ಎಕ್ಸ್‌ಪ್ರೆಸ್‌ನಲ್ಲಿ ಸುಂದರವಾದ, ಬಹಳಷ್ಟು ಜನಕ್ಕೆ ಪ್ರೇರಣೆಯಾಗಬಲ್ಲ ವಿಚಾರವಿದೆ.
ಮಹಿಳಾ ಸಿಬ್ಬಂದಿಯೇ ಪೈಲಟ್ ಮಾಡಿದ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಜಮ್‌ಶೆಡ್ಪುರದಿಂದ 120 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕದೊಂದಿಗೆ ಬೆಂಗಳೂರಿಗೆ ಆಗಮಿಸಿದೆ ಎಂದು ರೈಲ್ವೆ ತಿಳಿಸಿದೆ. ಕರ್ನಾಟಕಕ್ಕೆ 7 ನೇ ಆಕ್ಸಿಜನ್ ಎಕ್ಸ್‌ಪ್ರೆಸ್ ಶುಕ್ರವಾರ ಜಮ್‌ಶೆಡ್ಪುರದ ತತಾನಗರದಿಂದ ಬೆಂಗಳೂರಿಗೆ ಆಗಮಿಸಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಬದಲು ಸಿಎಂ ಫೋಟೋ: ಭುಗಿಲೆದ್ದ ವಿವಾದ!
ಎಲ್ಲಾ ಮಹಿಳಾ ಸಿಬ್ಬಂದಿ ಪೈಲಟ್ ಮಾಡಿದ ಈ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ರಾಜ್ಯದ COVID-19 ರೋಗಿಗಳಿಗೆ ನಿರಂತರವಾಗಿ ಆಮ್ಲಜನಕದ ಪೂರೈಕೆಯನ್ನು ಮಾಡಲಿದೆ ಎಂದು ಗೋಯಲ್ ಟ್ವೀಟ್ ಮಾಡಿದ್ದಾರೆ.
ರೈಲ್ವೆ ಅಧಿಕಾರಿಗಳ ಪ್ರಕಾರ, 8 ನೇ ಆಕ್ಸಿಜನ್ ಎಕ್ಸ್‌ಪ್ರೆಸ್ ಕೂಡ ಗುಜರಾತ್‌ನ ಜಾಮ್‌ನಗರದಿಂದ ಬೆಂಗಳೂರಿಗೆ ತಲುಪಿದ್ದು, ಇಂದು ಮುಂಜಾನೆ 109.2 ಮೆಟ್ರಿಕ್ ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ಹೊತ್ತೊಯ್ದಿದೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರ ಪ್ರತಿದಿನ 1,200 ಮೆಟ್ರಿಕ್ ಟನ್ ಆಮ್ಲಜನಕ ಪೋರೈಸಬೇಕೆಂದು ಕೋರಿದೆ.
ಕರ್ಫ್ಯೂ ಉಲ್ಲಂಘಿಸಿದ್ದಕ್ಕೆ ಪೊಲೀಸರ ಥಳಿತ: ಯುವಕ ಸಾವು
ಕರ್ನಾಟಕದಲ್ಲಿ ಶುಕ್ರವಾರ 32,218 ಕೊರೋನಾ ಪ್ರಕರಣ ಪತ್ತೆಯಾಗಿದ್ದು 353 ಸಾವು ವರದಿಯಾಗಿದೆ. ಒಟ್ಟು 23.67 ಲಕ್ಷ ಸೋಂಕುಗಳು ಮತ್ತು 24,207 ಸಾವುನೋವುಗಳು ಸಂಭವಿಸಿದೆ.