ವಯಸ್ಸಿನ್ನೂ 28 ವರ್ಷ, ಆಗಲೇ ಸಾವಿನ ಮನೆ ಕದ ತಟ್ಟಿ ಬಂದಿದ್ಲು ಈ ಸ್ವಿಮ್ಮರ್. ಆದ್ರೆ ಆಯಸ್ಸು ಗಟ್ಟಿ ಇದ್ರೆ ಏನ್ ಬೇಕಿದ್ರೂ ಆಗಬಹುದು ನೋಡಿ, ಹಾಗೇ ಈ ಹುಡುಗಿಯೂ ಮರುಜೀವ ಪಡೆದಳು. ಅವಳ ಕಥೆ ಸಖತ್‌ ಇಂಟರೆಸ್ಟಿಂಗ್‌.

ನಮ್ ಲೈಫು ಸಾವು ನಮ್‌ ಕೈಯಲ್ಲಿ ಇಲ್ವೇ ಇಲ್ಲ. ಇಲ್ಲಾಂದ್ರೆ ಮೊನ್ನೆ ಮೊನ್ನೆ ಆರ್‌ಸಿಬಿ ದುರಂತ ಸಂಭವಿಸ್ತಾ ಇತ್ತಾ? ಭರ್ತಿ ಹದಿನೆಂಟು ವರ್ಷ ಕಪ್‌ ನಮ್ದು ಅಂತ ಹೇಳ್ತಿದ್ದವರು ಇದ್ದಕ್ಕಿದ್ದ ಹಾಗೆ ಕಪ್‌ ಅನ್ನೇ ಕೈಯಲ್ಲಿ ಹಿಡ್ಕೊಂಬಿಟ್ರಲ್ಲಾ.. ಆ ಖುಷಿಯಲ್ಲಿ ಟೀಮ್‌ ನವ್ರನ್ನ ಲೈವ್‌ ಆಗಿ ನೋಡಾಣ ಅಂತ ಹೋದ ಅಮಾಯಕರವರು. ಹಿಂದಿನ ರಾತ್ರಿ ಮ್ಯಾಚ್‌ ನೋಡಿ ಖುಷಿಯಿಂದ ಪಟಾಕಿ ಹೊಡೆದವರು ಮರುದಿನ ಹೆಣವಾಗಿ ಮಲಗಿದ್ರು. ಆ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ ಬಿಡಿ. ಇಲ್ಲಿ ಹೇಳಲು ಹೊರಟಿರೋ ಕಥೆ ಒಬ್ಬ ಸ್ವಿಮ್ಮರ್‌ದು. ಅವಳ ಹೆಸರು ಅನಿತಾ ಅಲ್ವಾರೆಜ್ ಅಂತ. ಮೊನ್ನೆ ಮೊನ್ನೆ ತಾನೇ ಅವಳು ಅಮೆರಿಕಾದ ಏರ್‌ಫೋರ್ಸ್‌ಗೆ ಆಯ್ಕೆ ಆದಳು. ಏರ್‌ಫೋರ್ಸಿಗೆ ಹಲವಾರು ಮಂದಿ ಆಯ್ಕೆ ಆಗ್ತಾರೆ. ಆದರೆ ಅನಿತಾ ಆಯ್ಕೆ ವಿಶ್ವಮಟ್ಟದಲ್ಲಿ ಸುದ್ದಿ ಆಯ್ತು, ಅದಕ್ಕೊಂದು ದೊಡ್ಡ ಕಾರಣ ಇದೆ.

ಅದು 2022 ರ ಜೂನ್‌ ತಿಂಗಳ ಒಂದು ದಿನ. ಬುಡಾಪೆಸ್ಟ್‌ನಲ್ಲಿ ಈಜು ಅಂದರೆ ಸ್ವಿಮ್ಮಿಂಗ್‌ನಲ್ಲಿ ವಿಶ್ವಚಾಂಪಿಯನ್‌ಶಿಪ್‌ ನಡೆಯುತ್ತಿತ್ತು. ನಾನಾ ಬಗೆಯ ಈಜಿನ ಭಂಗಿಗಳ ನಡುವೆ ಆರ್ಟಿಸ್ಟಿಕ್‌ ಸ್ವಿಮ್ಮಿಂಗ್ ರೋಚಕವಾಗಿದ್ದು ಎಲ್ಲರ ಗಮನ ಸೆಳೆಯುತ್ತಿತ್ತು. ಅಮೆರಿಕನ್‌ ಸ್ಪರ್ಧಿಯಾಗಿದ್ದ ಅನಿತಾ ನೀರಿನಲ್ಲಿ ಈಜಿನ ನಾನಾ ಬಗೆಯ ಕಸರತ್ತಗಳನ್ನು ಲೀಲಾಜಾಲವಾಗಿ ಮಾಡಿ ಇದ್ದಕ್ಕಿದ್ದ ಹಾಗೆ ಮಾಯವಾದಳು!

ಇದೂ ಕಸರತ್ತಿರಬಹುದು ಅಂತ ಎಲ್ಲರೂ ಕ್ಲಾಪ್ ಮಾಡಿದ್ದೇ ಮಾಡಿದ್ದು, ಆದರೆ ಅನಿತಾಳ ಕ್ಷಣ ಕ್ಷಣದ ಚಲನೆಯಲ್ಲಿ ಗಮನಿಸುತ್ತಿದ್ದ ಕೋಚ್‌ಗೆ ಎಲ್ಲವೂ ಸರಿಯಿಲ್ಲ ಅನ್ನೋದು ಗಮನಕ್ಕೆ ಬಂತು. ಈಜಿನ ಕಸರತ್ತು ಮಾಡುತ್ತ ಮಾಡುತ್ತ ಕೆಲವು ಸೆಕೆಂಡ್‌ ಅನಿತಾ ದೇಹ ಹೊರಗೆ ಕಾಣಿಸಿಕೊಂಡಿತು. ಆಮೇಲೆ ಮುಳುಗಲಾರಂಭಿಸಿತು. ಮುಳುಗಿ ಸ್ವಿಮ್ಮಿಂಗ್ ಪೂಲ್‌ನ ತಳ ಸೇರಿತು. ಇದು ಯಾರ ಗಮನಕ್ಕೂ ಬರಲಿಲ್ಲ. ಆದರೆ ಅನಿತಾ ಕೋಚ್‌ ಆಂಡ್ರಿಯಾ ಫ್ಯೂಯೆಂಟೆಸ್ ಕೂಡಲೇ ನೀರಿಗೆ ಜಿಗಿದಳು. ಸಾವಿನ ಕದ ತಟ್ಟಿದ್ದ ಅನಿತಾಳನ್ನು ವಾಪಾಸ್ ಜಗತ್ತಿಗೆ ಕರೆತಂದಳು. ಒಂದು ವೇಳೆ ಕೋಚ್ ಗಮನಿಸೋದು ಸ್ವಲ್ಪ ವಿಳಂಬವಾದರೂ ಆ ತರುಣಿಯ ಮೃತದೇಹ ಮೇಲೆದ್ದು ಬಂದಾಗಲೇ ಎಲ್ಲರಿಗೂ ತಿಳಿಯುತ್ತಿತ್ತು.

ಈ ಘಟನೆ ನಡೆದು ಈಗ ಮೂರು ವರ್ಷಗಳೇ ಕಳೆದಿದೆ. ಬುಡಾಪೆಸ್ಟ್ ಸ್ವಿಮ್ಮಿಂಗ್‌ಪೂಲ್‌ ಅನಿತಾರಂಥಾ ಅನೇಕ ಸ್ವಿಮ್ಮರ್‌ಗಳ ಆರ್ಟಿಸ್ಟಿಕ್‌ ಸ್ವಿಮ್ಮಿಂಗ್‌ಗೆ ಸಾಕ್ಷಿಯಾಗಿದೆ. ಆದರೂ ಈ ಘಟನೆಯನ್ನು ಯಾರೂ ಮರೆತಿಲ್ಲ. ಸ್ವಿಮ್ಮಿಂಗ್‌ಪೂಲ್‌ ನಲ್ಲಿ ತನ್ನ ಬದುಕಿನ ಬಹುಭಾಗ ಕಳೆಯುತ್ತಿದ್ದ ಆ ಹುಡುಗಿ ಅದೇ ಈಜುಕೊಳದಲ್ಲಿ ಮಾರಣಾಂತಿಕವಾದ ಸ್ಥಿತಿಗೆ ಹೋಗುವುದೆಂದರೆ.. ಇದನ್ನೇ ಅಲ್ವೇ ಲೈಫಿನ ವ್ಯಂಗ್ಯ ಅನ್ನೋದು. ಸದ್ಯಕ್ಕೀಗ ಅನಿತಾ ಅಮೆರಿಕಾದ ಏರ್‌ಫೋರ್ಸ್‌ಗೆ ಆಯ್ಕೆ ಆಗಿದ್ದಾರೆ. ಈ ಬಾರಿ ಒಲಿಂಪಿಕ್ಸ್‌ನಲ್ಲಿ ನಾನು ಅಮೆರಿಕನ್‌ ಏರ್‌ಫೋರ್ಸ್‌ ಅನ್ನು ಪ್ರತಿನಿಧಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳುತ್ತಾಳೆ. ಈಕೆ ಕಳೆದ ವರ್ಷ ತನ್ನ ಟೀಮ್‌ನೊಂದಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕ ಗೆದ್ದು ತಂದಿದ್ದಳು.

ತಾಯಿಗಾದ ಲೈಂಗಿಕ ಕಿರುಕುಳವೇ IPS ಆಗಲು ದಾರಿ ತೋರಿಸಿತು, ಕೋಚಿಂಗ್ ಇಲ್ಲದೆ UPSC ಪಾಸಾದ ಅಧಿಕಾರಿ ಇವರು

ಈಗ ಹೆಚ್ಚಿನವರಿಗೆ ಅನಿತಾ ಲಕ್ಕಿ ಅಂತ ಅನಿಸಬಹುದು. ಆದರೆ ಕೋಚ್‌ ಸಮಯಪ್ರಜ್ಞೆ ಮೆರೆಯದಿದ್ದರೆ ಅವಳು ಉಳಿಯುತ್ತಿರಲಿಲ್ಲ. ಇವತ್ತು ಅಮೆರಿಕನ್‌ ಏರ್‌ಫೋರ್ಸಿಗೆ ಒಬ್ಬ ಸಮರ್ಥ ಯೋಧಳು ಮಿಸ್‌ ಆಗ್ತಿದ್ಲು. ಅನಿತಾ ಅಂತೂ ತನ್ನ ಕೋಚ್‌ಗೆ ಜೀವನಪರ್ಯಂತ ಮರೆಯಲಿಕ್ಕಿಲ್ಲ. ಜೀವ ಕಾಯುವವರ ಮಹತ್ವ ಏನು ಅನ್ನೋದಕ್ಕೂ ಇದೊಂದು ಉದಾಹರಣೆ. ಜೊತೆಗೆ ಆಯುಸ್ಸು ಗಟ್ಟಿ ಇದ್ದರೆ ಸ್ವಿಮ್ಮಿಂಗ್‌ಪೂಲ್‌ನಲ್ಲಿ ಪ್ರಜ್ಞೆ ತಪ್ಪಿದರೂ ಬದುಕುಳಿಯಬಹುದು ಅನ್ನೋದು ಗೊತ್ತಾಗುತ್ತೆ.

View post on Instagram