ಭಾವಿ ಅತ್ತೆ-ಮಾವನ ಭೇಟಿ: ಮಾತನಾಡುವಾಗ ಇರಲಿ ನಾಲಿಗೆ ಮೇಲೆ ಹಿಡಿತ!
ನಿಮ್ಮ ಹುಡುಗನ ಪಾಲಕರನ್ನು ಭೇಟಿಯಾಗುವ ಉತ್ಸಾಹದಲ್ಲಿದ್ದೀರಾ? ಸ್ವಲ್ಪ ನಿಲ್ಲಿ. ಕೆಲವು ಸಂಗತಿಗಳ ಬಗ್ಗೆ ಅವರೊಂದಿಗೆ ಎಂದಿಗೂ ಚರ್ಚೆ ನಡೆಸಬೇಡಿ. ಧಾರ್ಮಿಕ, ರಾಜಕೀಯ ವಿಚಾರಗಳ ಬಗ್ಗೆ ಅವರೊಂದಿಗೆ ಮಾತುಕತೆ ಬೇಕಾಗಿಲ್ಲ. ಹಾಗೆಯೇ, ಅವರೆದುರು ನಿಮ್ಮ ಹುಡುಗನ ಬಗ್ಗೆ ಎಲ್ಲ ಗೊತ್ತು ಎಂದು ತೋರ್ಪಡಿಸಿಕೊಳ್ಳುವುದೂ ಬೇಡ. ಸುಳ್ಳನ್ನಂತೂ ಅವಾಯ್ಡ್ ಮಾಡಲೇಬೇಕು.
ಪ್ರೀತಿ-ಪ್ರೇಮದ ಲೋಕವೇ ಬೇರೆ. ಅಲ್ಲಿ ಯಾವುದೇ ನಿರ್ಬಂಧ, ಅಡೆತಡೆಗಳಿರುವುದಿಲ್ಲ. ಯಾರ ಹಂಗು, ಭಯವೂ ಇರುವುದಿಲ್ಲ. ಆದರೆ, ನಿಮ್ಮ ಪ್ರೀತಿ ಸಂಬಂಧವನ್ನು ಇನ್ನೊಂದು ಹಂತಕ್ಕೆ ಒಯ್ಯುವ ಬಯಕೆ ನಿಮ್ಮದಾದರೆ ಪರಸ್ಪರ ಪ್ರೀತಿಪಾತ್ರರನ್ನು ನಿಮ್ಮ ಪಾಲಕರಿಗೆ ಭೇಟಿ ಮಾಡಿಸುತ್ತೀರಿ. ಅದೊಂದು ನಿರ್ಣಾಯಕ ಹಂತ. ನೀವು ಪ್ರೀತಿಸುತ್ತಿರುವುದು ನಿಜವಾದರೂ ನಿಮ್ಮ ಮೇಲೆ ಪಾಲಕರಿಗೆ ನಂಬಿಕೆ ಮೂಡಬೇಕೆಂದಿಲ್ಲ. ಸಾಮಾನ್ಯವಾಗಿ, ನಮ್ಮ ಭಾರತೀಯ ಸಮಾಜದಲ್ಲಿ ಹುಡುಗನ ಪಾಲಕರ ಪಾತ್ರವೇ ಇಲ್ಲಿ ಹೆಚ್ಚು. ಹುಡುಗಿಯ ಪಾಲಕರಿಗೆ ಎರಡನೇ ದರ್ಜೆ ಸ್ಥಾನ ಎನ್ನುವುದು ಬೇಸರದ ಸಂಗತಿಯಾದರೂ ಸತ್ಯ. ಅಂಥದ್ದೊಂದು ಸಮಯ ನಿಮ್ಮ ಬಾಳಲ್ಲೂ ಬಂದಿದೆಯಾ? ನೀವು ಸಹ ನಿಮ್ಮ ಭಾವಿ ಅತ್ತೆ-ಮಾವನನ್ನು ಭೇಟಿಯಾಗುವ ಸಿದ್ಧತೆಯಲ್ಲಿದ್ದೀರಾ? ಸಾಮಾನ್ಯವಾಗಿ ಅವರೇ ಬರುವುದು ವಾಡಿಕೆ. ಅಥವಾ ಈಗಿನ ಕೆಲವು ಕುಟುಂಬಗಳು ಮೊದಲು ಔಪಚಾರಿಕ ಭೇಟಿಗೆ ಆದ್ಯತೆ ನೀಡುತ್ತವೆ. ಆ ಸಮಯದಲ್ಲಿ ನಿಮ್ಮ ಡ್ರೆಸ್ ಸಿದ್ಧತೆ ಬಗ್ಗೆ ಮಾತ್ರ ಗಮನ ನೀಡಬಾರದು. ಯಾವ ವಿಚಾರವನ್ನು ಅವರ ಬಳಿ ಮಾತನಾಡಬಾರದು ಎನ್ನುವುದರ ಬಗ್ಗೆಯೂ ಗಮನವಿರಬೇಕು. ಧರ್ಮಗಳ ಮೇಲಿನ ನಂಬಿಕೆ, ಸಂಪ್ರದಾಯಗಳು, ರಾಜಕೀಯ ಪಕ್ಷಗಳ ಒಲವಿನ ಬಗ್ಗೆ ಈ ಸಮಯದಲ್ಲಿ ಮಾತನಾಡಬಾರದು. ಹಾಗೆಯೇ, ಕೆಲವು ವಿಚಾರಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು.
• ನಿಮ್ಮ ಲವರ್ (Lover) ಬಗ್ಗೆ ಮುನಿಸಿದ್ದರೆ ಅಥವಾ ಜಗಳವಾಡಿಕೊಂಡಿದ್ದರೆ (Quarrel) ಅದನ್ನು ಮುಂದುವರಿಸಬೇಡಿ
ಜೋಡಿಗಳ ನಡುವೆ ಜಗಳ (Fight) ಅಥವಾ ಭಿನ್ನಾಭಿಪ್ರಾಯ (Disagreement) ಸಹಜ. ಅದನ್ನು ಎಲ್ಲರೆದುರು ಮುಂದುವರಿಸಬಾರದು ಹಾಗೂ ತೋರ್ಪಡಿಸಿಕೊಳ್ಳಲೂಬಾರದು. ಹುಡುಗನ (Boy) ಪಾಲಕರು ಈ ವಿಚಾರದಲ್ಲಿ ಭಾರೀ ಸೂಕ್ಷ್ಮತೆ ಹೊಂದಿರುತ್ತಾರೆ. ತಮ್ಮ ಮಗನೊಂದಿಗೆ ಹುಡುಗಿ (Girl) ಹೇಗೆ ವರ್ತಿಸುತ್ತಾಳೆ ಎನ್ನುವುದನ್ನು ಗಮನಿಸುತ್ತಿರುತ್ತಾರೆ. ಹೀಗಾಗಿ, ಈ ಬಗ್ಗೆ ನೀವೂ ಸೂಕ್ಷ್ಮತೆಯಿಂದ ವರ್ತಿಸಿ.
ಕಟ್ಟಿಕೊಂಡವರ ಜೊತೆ ಬೇಡ ಸ್ಪರ್ಧೆ
• ಲವರ್ ಬಗ್ಗೆ ಕುಟುಂಬಕ್ಕಿಂತ ತನಗೆ ಹೆಚ್ಚು ಗೊತ್ತು (Know Him) ಎನ್ನುವಂತೆ ವರ್ತಿಸಬೇಡಿ
ಹುಡುಗನ ಪಾಲಕರನ್ನು (Parents) ಭೇಟಿ (Meet) ಮಾಡಿದಾಗ ಹುಡುಗನ ಬಗ್ಗೆ ಇರುವ ಪ್ರೀತಿ-ಕಾಳಜಿಯನ್ನು (Love and Care) ತೋರ್ಪಡಿಸಲು ಸಾಧ್ಯವಾಗುವುದಿಲ್ಲ. ಆದರೆ, ಅವರ ಬಗ್ಗೆ ತಮಗೆ ಎಲ್ಲವೂ ಗೊತ್ತು ಎನ್ನುವಂತೆ ವರ್ತಿಸಬೇಡಿ. ನಿಮ್ಮ ಲವರ್ ಅವರ ಕುಟುಂಬದ ಎಲ್ಲ ವಿಚಾರಗಳನ್ನೂ ನಿಮಗೆ ಹೇಳಿರಬಹುದು. ಆದರೂ ನೀವು ಈ ಸಮಯದಲ್ಲಿ ಮೌನವಾಗಿರುವುದು ಅನುಕೂಲ. ಪಾಲಕರಿಗಿಂತ ಹುಡುಗನ ಬಗ್ಗೆ ಹೆಚ್ಚು ಗೊತ್ತು ಎನ್ನುವಂತೆ ವರ್ತಿಸಿದರೆ ಅವರಿಗೆ ಇದರಿಂದ ಕಿರಿಕಿರಿ (Irritate) ಆಗಬಹುದು. ಅಥವಾ ಮುಜುಗರವಾಗಬಹುದು. ತಮ್ಮ ಮಗನ ಬಗ್ಗೆ ಇನ್ನೇನೋ ಅಂದುಕೊಳ್ಳಬಹುದು. ವಿನಾಕಾರಣ ಅವರ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ಪಾಲಕರಿಗೆ ಗೊತ್ತಿರದ ಯಾವುದಾದರೂ ವಿಚಾರವನ್ನು ಅವರು ನಿಮ್ಮೊಂದಿಗೆ ಹಂಚಿಕೊಂಡಿರಬಹುದು, ಹೀಗಾಗಿ, ಯಾವುದನ್ನೂ ನೀವಾಗಿಯೇ ವಿಷಯ ಪ್ರಸ್ತಾಪಿಸಲು ಹೋಗಬೇಡಿ. ಅವರನ್ನು ಭೇಟಿ ಮಾಡುತ್ತಿರುವುದು ಕಿರಿಕಿರಿ ಹೆಚ್ಚಾಗಲಿ ಎಂದಲ್ಲ ಎನ್ನುವುದು ನಿಮ್ಮ ಗಮನದಲ್ಲಿ ಇರಲಿ.
ನಿನ್ ಜೊತೆ ಸುಳ್ಳು ಹೇಳೋದಿಲ್ಲಪ್ಪಾ… ಗಂಡಸ್ರು ಹೀಗನ್ನೋದೇ ಸುಳ್ಳಂತೆ !
• ಯಾವುದೇ ಕಾರಣಕ್ಕೂ ಸುಳ್ಳು (Don’t Lie) ಹೇಳಬೇಡಿ
ಹುಡುಗನ ಪಾಲಕರು ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯ ತಾಳಲೆಂದು ನೀವು ಪ್ರಯತ್ನಿಸುವುದು ಸಹಜ. ಆದರೆ, ಯಾವುದೇ ಕಾರಣಕ್ಕೂ ಸುಳ್ಳು ಹೇಳಬೇಡಿ. ಅದು ಮುಂದೊಂದು ದಿನ ಸಂಬಂಧ (Relationship) ಹದಗೆಡಲು ಕಾರಣವಾದೀತು. ಅವರೆದುರು ನಿಮ್ಮ ಮಾತಿನ ಜಾಣ್ಮೆಯನ್ನು ತೋರಿಸಿಕೊಳ್ಳುವ ಅಗತ್ಯವೂ ಇಲ್ಲ. ನಿಮ್ಮ ಸಾಧನೆಯನ್ನು ಅವರೆದುರು ವರ್ಣಿಸಬೇಕೆಂದಿರುವುದಿಲ್ಲ. ನಿಮ್ಮ ಶೈಕ್ಷಣಿಕ (Education) ಸಾಧನೆ, ವೃತ್ತಿ (Profession) ಬದುಕಿನ ಬಗ್ಗೆ ಸಾಧ್ಯವಾದಷ್ಟೂ ವರ್ಣಿಸದೆ ಎಷ್ಟು ಬೇಕೋ ಅದನ್ನೇ ಹೇಳಿ. ಹುಡುಗನಿಗಿಂತ ಹೆಚ್ಚು ಆಕರ್ಷಕ ವೃತ್ತಿ ಅಥವಾ ಶೈಕ್ಷಣಿಕ ಸಾಧನೆ ನಿಮ್ಮದಾಗಿದ್ದರೂ ಅದನ್ನು ಮಾತಿನಲ್ಲಿ ಹೇಳುವುದು ಬೇಕಾಗಿಲ್ಲ.