ವಾಷಿಂಗ್ ಮಷಿನ್ ಇಲ್ಲದೆ ಹೋದ್ರೆ ಒಂದು ಕೈ ಕಳೆದುಕೊಂಡಂತೆ. ಬಟ್ಟೆಯನ್ನು ಫಟಾ ಫಟ್ ಕ್ಲೀನ್ ಮಾಡಲು ವಾಷಿಂಗ್ ಮಷಿನ್ ಬೆಸ್ಟ್. ಆದ್ರೆ ಇದ್ರಲ್ಲಿ ಬರೀ ಬಟ್ಟೆ ಮಾತ್ರ ಅಲ್ಲ ಇನ್ನೂ ಅನೇಕ ವಸ್ತುಗಳನ್ನು ಸ್ವಚ್ಛಗೊಳಿಸಬಹುದು. 

ವಾಷಿಂಗ್ ಮಶಿನ್ (Washing Machine) ನಮ್ಮ ಕೆಲಸ (Work) ವನ್ನು ಸುಲಭಗೊಳಿಸಿದೆ. ಬಟ್ಟೆ (Clothes) ಒಗೆಯುವ ಸಮಯವನ್ನು ಉಳಿಸಿದೆ. ಬಹುತೇಕರ ಮನೆಯಲ್ಲಿ ಈಗ ವಾಷಿಂಗ್ ಮಶಿನ್ ಇದೆ. ಮಾನ್ಯವಾಗಿ ಮನೆಗಳಲ್ಲಿ ಜನರು ವಾಷಿಂಗ್ ಮೆಷಿನ್ ಸಹಾಯದಿಂದ ಬಟ್ಟೆ, ಬೆಡ್ ಶೀಟ್, ಕರ್ಟನ್ ಇತ್ಯಾದಿಗಳನ್ನು ಸ್ವಚ್ಛಗೊಳಿಸುತ್ತಾರೆ. ಬಟ್ಟೆ ಒಗೆಯಲು ಹಾಕಿ ಮನೆಯ ಬೇರೆ ಕೆಲಸಗಳನ್ನು ನಾವು ಮಾಡ್ಬಹುದು. ಇದರಿಂದ ಸಮಯ ಉಳಿಯುತ್ತದೆ. ಶ್ರಮ ಕೂಡ ಕಡಿಮೆ. ಸಾಮಾನ್ಯವಾಗಿ ನಾವು ವಾಷಿಂಗ್ ಮಷಿನ್ ನಲ್ಲಿ ಬಟ್ಟೆ ಮಾತ್ರ ಒಗೆಯಬಹುದು ಎಂದುಕೊಳ್ತೇವೆ. ಆದರೆ ವಾಷಿಂಗ್ ಮಷಿನ್ ನಲ್ಲಿ ಬಟ್ಟೆ ಮಾತ್ರವಲ್ಲ ಇನ್ನೂ ಅನೇಕ ವಸ್ತುಗಳನ್ನು ಸ್ವಚ್ಛಗೊಳಿಸಬಹುದು. ವಾಷಿಂಗ್ ಮಷಿನ್ ನಲ್ಲಿ ಯಾವೆಲ್ಲ ಬಟ್ಟೆ ಸ್ವಚ್ಛಗೊಳಿಸಬಹುದು ಎಂಬುದನ್ನು ನಾವಿಂದು ಹೇಳ್ತೇವೆ.

ವಾಷಿಂಗ್ ಮಷಿನ್ ನಲ್ಲಿ ಈ ವಸ್ತುಗಳನ್ನು ಕ್ಲೀನ್ ಮಾಡಿ : 

ಕುರ್ಚಿ ಕುಶನ್ : ಕುರ್ಚಿ ಕುಶನ್ ಗಳು ಕೊಳಕಾಗುತ್ತವೆ. ಅದನ್ನು ಸ್ವಚ್ಛಗೊಳಿಸುವುದು ಹೇಗೆ ಎಂಬ ಸಮಸ್ಯೆ ಅನೇಕರನ್ನು ಕಾಡುತ್ತದೆ. ಆದ್ರೆ ಕೊಳಕಾದ ಕುಶನನ್ನು ನೀವು ವಾಷಿಂಗ್ ಮಷಿನ್ ನಲ್ಲಿ ಸ್ವಚ್ಛಗೊಳಿಸಬಹುದು. ತಣ್ಣೀರಿನ ಸಹಾಯದಿಂದ ಅವುಗಳನ್ನು ಸ್ವಚ್ಛಗೊಳಿಸಬೇಕು. ನಂತ್ರ ಗಾಳಿಯಲ್ಲಿ ಅದನ್ನು ಒಣಗಿಸಬೇಕು.

ಪಿರಿಯಡ್ಸ್ ಸಮಯದಲ್ಲಿ ಸ್ವಚ್ಛತೆಗೆ ಗಮನ ಕೊಡಿ, ಇಲ್ಲಾಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ !

ಕಾರ್ ಮ್ಯಾಟ್ : ಕಾರ್ ಮ್ಯಾಟ್‌ಗಳು ತುಂಬಾ ಭಾರ ಮತ್ತು ದಪ್ಪವಾಗಿರುವುದಿಲ್ಲ. ಹಾಗಾಗಿ ನೀವು ಅವುಗಳನ್ನು ವಾಷಿಂಗ್ ಮಷಿನ್ ನಲ್ಲಿ ಸುಲಭವಾಗಿ ಸ್ವಚ್ಛಗೊಳಿಸಬಹುದು. ಕೈನಿಂದ ಸ್ವಚ್ಛಗೊಳಿಸುವುದಕ್ಕಿಂತ ಹೆಚ್ಚು ಸುಲಭವಾಗಿ ಯಂತ್ರದಲ್ಲಿ ಸ್ವಚ್ಛವಾಗುತ್ತದೆ.

ರಬ್ಬರ್ ಕಂಬಳಿ ಮತ್ತು ಚಾಪೆ : ಮೊದಲು ನೀವು ಅವುಗಳನ್ನು ವ್ಯಾಕ್ಯೂಮ್ ಕ್ಲೀನರ್ ಸಹಾಯದಿಂದ ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮತ್ತು ಅದರ ನಂತರ ಅವುಗಳನ್ನು ವಾಷಿಂಗ್ ಮಷಿನ್ ನಲ್ಲಿ ಸ್ವಚ್ಛಗೊಳಿಸಿ. ಕೈನಲ್ಲಿ ಅವುಗಳನ್ನು ಸ್ವಚ್ಛಗೊಳಿಸುವುದು ಕಷ್ಟ. ನೀರು ಹಾಕ್ತಿದ್ದಂತೆ ಅದು ಭಾರವಾಗುತ್ತದೆ. ಹಾಗಾಗಿ ನೀವು ಅದನ್ನು ವಾಷಿಂಗ್ ಮಷಿನ್ ನಲ್ಲಿ ಹಾಕಿ ಸುಲಭವಾಗಿ ಕ್ಲೀನ್ ಮಾಡಿ.

ಮಾಪ್ :  ಸಂಪೂರ್ಣ ಮನೆಯನ್ನು ಸ್ವಚ್ಛಗೊಳಿಸುವ ಮಾಪ್ ಅನ್ನು ಕೂಡ ಸ್ವಚ್ಛಗೊಳಿಸುವುದು ಸಹ ಮುಖ್ಯ. ಈ ಮಾಪ್ ಗಳನ್ನು ನೀವು ವಾಷಿಂಗ್ ಮಷಿನ್ ನಲ್ಲಿ ಸ್ವಚ್ಛಗೊಳಿಸಬಹುದು. ಬಿಸಿ ನೀರಿನಲ್ಲಿ ಕ್ಲೀನ್ ಮಾಡಿ ಹಾಗೂ ಒಣಗಿಸಿ. ಮಾಪ್ ಕ್ಲೀನ್ ಇದ್ದರೆ ಆಗ ಮನೆ ಬ್ಯಾಕ್ಟೀರಿಯಾ ಸುಲಭವಾಗಿ ಹೋಗುತ್ತದೆ. ಮಾಪ್ ಕೊಳಕಾಗಿದ್ದರೆ ಮನೆ ಕ್ಲೀನ್ ಆಗುವ ಬದಲು ಬ್ಯಾಕ್ಟೀರಿಯಾ ಮನೆ ತುಂಬ ಹರಡುತ್ತದೆ. 

Kitchen Hacks : ಶುಂಠಿ – ಬೆಳ್ಳುಳ್ಳಿ ಹಾಳಾಗದಂತೆ ಇಡಲು ಇಲ್ಲಿದೆ ಐಡಿಯಾ

ಬಾತ್ ಮ್ಯಾಟ್ : ಬಾತ್ರೂಮ್ ನಲ್ಲಿ ಬಾತ್ ಮ್ಯಾಟ್ ಬಳಸುತ್ತಿದ್ದರೆ ಅದನ್ನು ವಾಷಿಂಗ್ ಮಷಿನ್ ಸಹಾಯದಿಂದ ಕ್ಲೀನ್ ಮಾಡಬಹುದು. ವಾಷಿಂಗ್ ಮಷಿನ್ ನಲ್ಲಿ ಕ್ಲೀನ್ ಮಾಡಿದ್ರೆ ಕೈನಲ್ಲಿ ಕ್ಲೀನ್ ಮಾಡಿದ್ದಕ್ಕಿಂತ ಹೆಚ್ಚು ಸ್ವಚ್ಛವಾಗುತ್ತದೆ.

ಆಟಿಕೆಗಳು : ಮಕ್ಕಳ ಆಟಿಕೆಗಳು (Toys) ಅದರಲ್ಲೂ ಮೃದುವಾದ ಆಟಿಕೆಗಳು (Soft Toys) ಬಹುಬೇಗ ಕೊಳೆಯಾಗುತ್ತವೆ. ಮಕ್ಕಳು ಆಟವಾಡುವಾಗ ಅನೇಕ ಬಾರಿ ಆಟಿಕೆಯನ್ನು ಬಾಯಿಗೆ ಹಾಕುತ್ತಾರೆ. ಹಾಗಾಗಿ ಅವುಗಳನ್ನು ಆಗಾಗ್ಗೆ ಸ್ವಚ್ಛಗೊಳಿಸಬೇಕು. ಕೈನಲ್ಲಿ ಅದನ್ನು ಕ್ಲೀನ್ ಮಾಡುವುದು ಕಷ್ಟ. ಹಾಗಾಗಿ ಸಾಪ್ಟ್ ಆಟಿಕೆಗಳನ್ನು ವಾಷಿಂಗ್ ಮಷಿನ್ ನಲ್ಲಿ ಹಾಕಿ ಕ್ಲೀನ್ ಮಾಡಿ.

ಯೋಗ ಮ್ಯಾಟ್ (Yoga Mat) : ಯೋಗ ಮ್ಯಾಟ್ ಸ್ವಚ್ಛತೆ ಬಗ್ಗೆಯೂ ಗಮನ ನೀಡುವುದು ಬಹಳ ಮುಖ್ಯ. ಅನೇಕರು ಯೋಗ ಮ್ಯಾಟ್ ಕ್ಲೀನ್ ಮಾಡೋದಿಲ್ಲ. ಕೆಲವರಿಗೆ ಯೋಗ ಮ್ಯಾಟ್ ಕ್ಲೀನ್ ಮಾಡೋದು ಹೇಗೆ ಎನ್ನುವುದೇ ಗೊತ್ತಾಗುವುದಿಲ್ಲ. ಯೋಗ ಮ್ಯಾಟನ್ನು ವಾಷಿಂಗ್ ಮಷಿನ್ ನಲ್ಲಿ ಕ್ಲೀನ್ ಮಾಡಿ, ಹಾಗೆ ಅದನ್ನು ಬಿಸಿಲಿನಲ್ಲಿ ಒಣ ಹಾಕಿ.