ಎಲ್ಲವೂ ಸರಿಯಿದ್ದರೆ ಗಂಡು-ಹೆಣ್ಣು ಮಗುವಿನ ಚಿಂತೆ: ಆದ್ರೆ ಈ ಅಮ್ಮನ ಆಸೆ ಕೇಳಿ ಪ್ರೇಕ್ಷಕರು ಭಾವುಕ!
ಸಾಮಾನ್ಯವಾಗಿ ತಮಗೆ ಹುಟ್ಟುವ ಮಗು ಗಂಡೋ ಹೆಣ್ಣೋ ಎಂದು ಅಮ್ಮಂದಿರು ಕಾತರರಾಗಿದ್ದರೆ ಈ ಅಮ್ಮನ ಆಸೆ ಏನಿತ್ತು ಕೇಳಿ...
ಮಹಿಳೆ ಗರ್ಭಿಣಿಯಾಗುತ್ತಿದ್ದಂತೆಯೇ ಹುಟ್ಟುವ ಮಗು ಹೆಣ್ಣೋ ಗಂಡೋ ಎಂಬ ಚಿಂತೆ ಕಾಡುವುದು ಸಹಜ. ಹಲವು ಮನೆಗಳಲ್ಲಿ ಗಂಡು ಸಂತಾನಕ್ಕೆ ಕಂಡ ಕಂಡ ದೇವರ ಮೊರೆ ಹೋಗುವುದು ಸಾಮಾನ್ಯವಾಗಿದ್ದರೆ, ಕೆಲವೇ ಕೆಲವು ಮನೆಗಳಲ್ಲಿ ಹೆಣ್ಣುಮಗು ಹುಟ್ಟಲಿ ಎಂದು ಹಾರೈಸುತ್ತಾರೆ. ಇನ್ನು ಕೆಲವು ಕಡೆಗಳಲ್ಲಿ ಹೆಣ್ಣುಮಗು ಎಂದು ಗೊತ್ತಾದ ಕೂಡಲೇ ಗರ್ಭದಲ್ಲಿಯೇ ಹೊಸಕಿ ಹಾಕುವುದು ಇಂದಿಗೂ ನಡೆದಿದೆ. ಭ್ರೂಣ ಪತ್ತೆ ಅಪರಾಧವಾಗಿದ್ದರೂ, ಕೆಲವು ವೈದ್ಯರು ಹಣದ ಆಸೆಗೆ ಬಿದ್ದು ಗರ್ಭದಲ್ಲಿರುವ ಮಗು ಹೆಣ್ಣೋ, ಗಂಡೋ ಎಂದು ನೋಡುವುದು ನಡೆದಿದೆ. ಹುಟ್ಟುವ ಮಗು ಹೆಣ್ಣು ಎಂದು ಗೊತ್ತಾಗುತ್ತಿದ್ದಂತೆಯೇ ಗರ್ಭದಲ್ಲಿಯೇ ಅದನ್ನು ಹೊಸಕಿ ಹಾಕಲಾಗುತ್ತದೆ. ಒಂದು ವೇಳೆ ಮಗಳು ಹುಟ್ಟಿದರೆ, ಹೆತ್ತ ಅಮ್ಮನೇ ಅದನ್ನು ಬಿಟ್ಟು ಬರುವುದು ಇದೆ, ಎಷ್ಟೋ ಕಡೆಗಳಲ್ಲಿ ಕಸದ ಬುಟ್ಟಿಗಳಲ್ಲಿ ಭ್ರೂಣ ಸಿಗುವುದೂ ನಡೆದಿದೆ.
ಇವೆಲ್ಲವುಗಳ ನಡುವೆ ಹುಟ್ಟುವ ಮಗು ಗಂಡೋ ಹೆಣ್ಣೋ ಒಟ್ಟಿನಲ್ಲಿ ಅಮ್ಮ-ಮಗು ಆರೋಗ್ಯವಾಗಿದ್ದರೆ ಸಾಕು. ಮಗು ಯಾವುದೇ ಸಮಸ್ಯೆ ಇಲ್ಲದೇ ಹುಟ್ಟಿದರೆ ಸಾಕು ಎಂದುಕಕೊಳ್ಳುವವರು ಬಲು ಅಪರೂಪ ಎಂದೇ ಹೇಳಬಹುದು. ಎಲ್ಲವೂ ಚೆನ್ನಾಗಿದ್ದಾಗ ಮಗು ಇಂಥದ್ದೇ ಹುಟ್ಟಲಿ ಎನ್ನುವ ಆಸೆ ಕಾಡುವುದು ಸಹಜ. ತಮಗೆ ಹುಟ್ಟುವ ಮಗು ಗಂಡೇ ಆಗರಲಿ, ಹೆಣ್ಣೇ ಆಗಿರಲಿ ಎಂದು ಬೇಡಿಕೊಳ್ಳುವ ಆಸೆ ಬರುವುದು ಕೂಡ ಎಲ್ಲಾ ಭಾಗ್ಯವನ್ನು ದೇವರು ಕರುಣಿಸಿದಾಗ ಮಾತ್ರ.
ಕೋಳಿ ಕೂಗಿದ್ರೆ ಬೆಳಗಾಗ್ತದೆಂಬ ಭ್ರಮೆ ಗಂಡಸ್ರಿಗೆ ಬೇಡ: ಹೆಣ್ಣಿನ ಶಕ್ತಿಯೇನು? ಭಾಗ್ಯಲಕ್ಷ್ಮಿ ಕುಸುಮಾ ಮಾತು ಕೇಳಿ...
ಆದರೆ ಎಲ್ಲರ ಬದುಕು ಇಷ್ಟು ಸುಲಭವಲ್ಲ! ಎಲ್ಲವೂ ಇದ್ದರೂ ಕೊರಗುವವರೇ ಹೆಚ್ಚು. ಆದರೆ ದೇಹದ ಅಂಗಗಳೇ ಇಲ್ಲದ ಜನರನ್ನೊಮ್ಮೆ ನೆನಪಿಸಿಕೊಂಡರೆ ನಾವೆಷ್ಟು ಧನ್ಯರು ಎಂದುಕೊಳ್ಳುವವರು ಬಹಳ ಕಮ್ಮಿಯೇ. ಇಂಥದ್ದೇ ಒಬ್ಬ ಅಮ್ಮ ತಾನು ಗರ್ಭಿಣಿಯಾಗಿದ್ದಾಗ ಹುಟ್ಟುವ ಮಗುವಿನ ಬಗ್ಗೆ ಏನಂದುಕೊಂಡಿದ್ದರು ಎಂಬ ಬಗ್ಗೆ ಸಿರಿ ಕನ್ನಡ ಚಾನೆಲ್‌ನಲ್ಲಿ ನಡೆಯುತ್ತಿರುವ ಸಿರಿ ಸೂಪರ್ ಮಾಮ್ ರಿಯಾಲಿಟಿ ಷೋಗೆ ಮಗಳ ಜೊತೆ ಬಂದ ಅಮ್ಮನ ಮಾತನ್ನೊಮ್ಮೆ ಕೇಳಲೇಬೇಕು.
ಮಗಳ ಜೊತೆ ಬಂದ ಉಮಾ ಎಂಬ ಮಹಿಳೆಗೆ ತೀರ್ಪುಗಾರರಾಗಿರುವ ಸಿಹಿಕಹಿ ಚಂದ್ರು ಅವರು ನೀವು ಗರ್ಭಿಣಿಯಾಗಿದ್ದಾಗ ಮಗುವಿನ ಬಗ್ಗೆ ನಿಮ್ಮ ನಿರೀಕ್ಷೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಆಗ ಉಮಾ ಹೇಳಿದ ಮಾತಿಗೆ ತೀರ್ಪುಗಾರರು ಸೇರಿ ನೋಡುವ ಪ್ರೇಕ್ಷಕರೂ ಭಾವುಕರಾಗಿದ್ದಾರೆ. ಉಮಾ ಹೇಳಿದ್ದೇನೆಂದರೆ, ಗರ್ಭಿಣಿಯಾಗಿದ್ದಾಗ ಬಹುತೇಕ ಮಂದಿ ತಮಗೆ ಗಂಡು ಮಗು, ಹೆಣ್ಣು ಮಗು ಹುಟ್ಟಲಿ ಎಂದುಕೊಳ್ಳುತ್ತಿರುತ್ತಾರೆ. ಮಗು ಹುಟ್ಟಿದ ತಕ್ಷಣ ಮೊದಲಿಗೆ ಕೇಳುವುದೂ ಇದನ್ನೇ. ಆದರೆ ಅಂಧೆಯಾಗಿರುವ ನಾನು ನನ್ನ ಮಗುವಿಗೆ ಕಣ್ಣು ಕಾಣುತ್ತದೆಯೇ ಎಂದು ಕೇಳಿದ್ದೆ. ಅದಷ್ಟೇ ನನಗೆ ಬೇಕಿದ್ದಿದು ಎಂದಿದ್ದಾರೆ. ಎಲ್ಲವೂ ಸರಿಯಿದ್ದರೂ, ಇರುವುದೆಲ್ಲವ ಬಿಟ್ಟು ಇರದುದ ಬಗ್ಗೆ ಸದಾ ಯೋಚನೆ ಮಾಡುವ ಪ್ರತಿಯೊಬ್ಬರೂ ಈ ಮಹಿಳೆಯಿಂದ ಕಲಿಯಬೇಕಿದೆ ಎಂದು ಹಲವರು ಕಮೆಂಟ್ ಹಾಕುತ್ತಿದ್ದಾರೆ.
ಅದ್ಕೇ ಹೇಳೋದು ಅಲ್ವಾ ಇಟ್ಕೊಂಡವಳು ಇರೋ ತನಕ, ಕಟ್ಕೊಂಡೋಳು ಕಡೇ ತನಕ ಅಂತ!