ಇಟ್ಟುಕೊಂಡವಳು ಮತ್ತು ಕಟ್ಟಿಕೊಂಡವಳ ನಡುವಿನ ಸತ್ಯದ ಅರಿವನ್ನು ಮಾಡಿಸಿದೆ ಭಾಗ್ಯಲಕ್ಷ್ಮಿ ಸೀರಿಯಲ್​. ತಾಂಡವ್​ ಕೊನೆಗಾದ್ರೂ ಬದಲಾಗ್ತಾನಾ? 

ಇಟ್ಕೊಂಡವಳು ಇರೋ ತನಕ, ಕಟ್ಕೊಂಡೋಳು ಕಡೇ ತನಕ ಎನ್ನುವ ಮಾತು ತಲೆತಲಾಂತರಗಳಿಂದ ಬಂದಿದೆ. ಪುರುಷ ಎಷ್ಟೇ ಹೆಣ್ಣಿನ ಸಹವಾಸ ಮಾಡಿದರೂ ಪತ್ನಿಯೇ ಬೇರೆ, ಪ್ರೇಯಸಿಯೇ ಬೇರೆ ಎನ್ನುವುದು ಹಲವರ ಅನುಭವಕ್ಕೆ ಬಂದಿರಲಿಕ್ಕೆ ಸಾಕು. ವಿವಾಹಿತ ಪುರುಷನನ್ನು ತನ್ನ ಕಡೆಗೆ ಸೆಳೆದುಕೊಂಡು ಮೋಹದ ಪಾಷದಲ್ಲಿ ಸಿಲುಕಿಸುವ ಹೆಣ್ಣು ಇನ್ನು ಎಷ್ಟರಮಟ್ಟಿಗೆ ಒಳ್ಳೆಯವಳಾಗಿರಲು ಸಾಧ್ಯ ಎನ್ನುವ ಮಾತೂ ಇದೆ. ಆದರೆ ಹಲವು ಪುರುಷರಿಗೆ ಪತ್ನಿ ಏನೇ ಮಾಡಿದರೂ, ತನ್ನ ಸಂಸಾರಕ್ಕಾಗಿ ಆಕೆ ಎಷ್ಟೇ ಶ್ರಮ ವಹಿಸಿ ದುಡಿಯುತ್ತಿದ್ದರೂ, ತನ್ನ ಎಲ್ಲಾ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದರೂ ಪರಸ್ತ್ರೀಯ ಮುಂದೆ ಪತ್ನಿ ನಗಣ್ಯಳಾಗಿ ಬಿಡುತ್ತಾಳೆ. ಅದರಲ್ಲಿಯೂ ಇನ್ನೊಬ್ಬರ ಮೋಹದ ಬಲೆಗೆ ಸಿಲುಕಿದರಂತೂ ಮುಗಿದೇ ಹೋಯ್ತು, ಆಕೆ ಏನು ಮಾಡಿದರೂ ಚೆಂದ, ಏನು ಹೇಳಿದರೂ ಚೆಂದ, ಕೈಯಲ್ಲಿದ್ದ ಹಣವನ್ನೆಲ್ಲಾ ಚಿಂದಿ ಉಡಾಯಿಸಿದರೂ ಚೆಂದವೇ. ಆದರೆ ಇದು ಬಹಳ ದಿನ ನಿಲ್ಲುವುದಿಲ್ಲ. ಕೆಲವು ಪುರುಷರಿಗೆ ಇಟ್ಟುಕೊಂಡವಳು ಮತ್ತು ಕಟ್ಟಿಕೊಂಡವಳ ನಡುವಿನ ವ್ಯತ್ಯಾಸ ಗೊತ್ತಾಗುವುದರೊಳಗೆ ಕಾಲ ಮಿಂಚಿ ಹೋಗಿರುತ್ತದೆ.

ಈ ಸತ್ಯವನ್ನು ಕಲರ್ಸ್​ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮಿ ಸೀರಿಯಲ್​ ಈಗ ತೋರಿಸಿಕೊಟ್ಟಿದೆ. ಪತ್ನಿ, ಮಕ್ಕಳನ್ನು ಕಡೆಗಣಿಸಿ ಕಟ್ಟಿಕೊಂಡ ಶ್ರೇಷ್ಠಾಳ ಹಿಂದೆ ಹೋಗಿರುವ ತಾಂಡವ್​ ಗೆ ಈಗ ನಿಜ ಜೀವನದ ಅರಿವಾಗುತ್ತಿದೆ. ಕೊನೆಗೂ ತನ್ನ ಪತ್ನಿ ಭಾಗ್ಯಳೇ ಎಷ್ಟೋ ಪಾಲು ಮೇಲು ಎನ್ನುವ ಮನವರಿಕೆ ಆಗಿದೆ. ಎಷ್ಟೆಂದರೂ ಕೋಪ ಬಂದಾಗ ತಾನೆ ನಿಜವಾಗಿರುವ ಮಾತು ಹೊರಬರುವುದು! 

ದೀಪಿಕಾ-ರಣಬೀರ್​ ಜೋಡಿ ವಿಷ್ಯದಲ್ಲಿ ಮಧ್ಯ ಬೆರಳು ತೋರಿ ಅಸಭ್ಯವಾಗಿ ವರ್ತಿಸಿದ ಕರಣ್​ ಜೋಹರ್​!

ಪತ್ನಿ ಭಾಗ್ಯಳ ಭರತನಾಟ್ಯ ಪ್ರದರ್ಶನಕ್ಕೆ ಎಲ್ಲರೂ ಹಾಡಿ ಹೊಗಳಿದ ಇನ್​ಸಲ್ಟ್​ ಒಂದು ಕಡೆ, ತನ್ನ ಕೈಯಿಂದಲೇ ಪತ್ನಿಗೆ ಬಹುಮಾನ ಕೊಟ್ಟ ಮುಖಭಂಗ ಇನ್ನೊಂದೆಡೆ, ಅಮ್ಮನ ಕೈಯಿಂದಲೇ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡ ಸಿಟ್ಟು ಮತ್ತೊಂದೆಡೆ... ಇವುಗಳಿಂದ ತಾಂಡವ್​ ಉರಿದುಹೋಗಿದ್ದಾರೆ. ಇದೇ ಕಾರಣಕ್ಕೆ ಸಿಕ್ಕಾಪಟ್ಟೆ ತಲೆಬಿಸಿಯಾಗಿ ಸ್ಟ್ರಾಂಗ್​ ಕಾಫಿ ಕುಡಿಯಬೇಕು ಎಂದುಕೊಳ್ಳುತ್ತಿದ್ದಾನೆ. ಶ್ರೇಷ್ಠಾಳಿಗೆ ಸ್ಟ್ರಾಂಗ್​ ಕಾಫಿ ಮಾಡಿಕೊಡಲು ಕೇಳಿದ್ದಾನೆ. ಇನ್ನು ಶ್ರೇಷ್ಠಾ ಏನು ಭಾಗ್ಯಳಾ? ಎಷ್ಟೆಂದರೂ ಇಟ್ಟುಕೊಂಡಿರುವಾಕೆ ಅವಳು. ಪತ್ನಿಯಂತೆ ಗಂಡನ ಸೇವೆ ಮಾಡುವುದು ಹೇಗೆ ಸಾಧ್ಯ? ಪತ್ನಿಯಂತೆ ತನ್ನನ್ನೂ ಪರಿಗಣಿಸಿ ಕಾಫಿ ಮಾಡಿಕೊಡುವಂತೆ ಕೇಳಿದ ಕೇಳಿದ ತಾಂಡವ್​ನಿಂದ ಶ್ರೇಷ್ಠಾಳಿಗೆ ಉರಿದು ಹೋಗಿದೆ. ಆದರೂ ನಗುಮುಖ ತರಿಸಿಕೊಂಡು, ಈಗೇಕೆ ಕಾಫಿ. ಹೇಗೋ ಡಿನ್ನರ್​ಗೆ ಹೋಗುತ್ತಿದ್ದೇವಲ್ಲ, ಅಲ್ಲಿಯೇ ಕುಡಿದರಾಯಿತು ಎಂದಿದ್ದಾಳೆ.

ಮೊದಲೇ ಕರೆದಾಗ ಶ್ರೇಷ್ಠಾ ಬರದಿದ್ದ ಕಾರಣ ಕೋಪಗೊಂಡಿದ್ದ ತಾಂಡವ್​, ಕರೆದ ತಕ್ಷಣ ಬರಬೇಕು ತಾನೆ ಎಂದು ಗದರಿದ್ದ. ಈಗ ತಲೆ ಬಿಸಿ ಇರುವಾಗ ಚೆನ್ನಾಗಿ ಡ್ರೆಸ್​ ಮಾಡಿಕೊಂಡು ಬಂದ ಶ್ರೇಷ್ಠಾಳನ್ನು ನೋಡಿ ಕೋಪ ನೆತ್ತಿಗೇರಿದೆ. ಅಲ್ಲಿ ಎಷ್ಟು ಇನ್​ಸಲ್ಟ್​ ಆಯ್ತು ಎಂದು ನಿನಗೆ ಗೊತ್ತು ತಾನೆ? ನನ್ನ ತಲೆಬಿಸಿಯಲ್ಲಿ ನಾನಿದ್ದು, ಕಾಫಿ ಕೇಳಿದ್ರೆ ಡಿನ್ನರ್​ ಅಂತಿಯಾ? ಸೆನ್ಸ್ ಇಲ್ವಾ ನಿನಗೆ? ಈ ಮೂಡ್​ನಲ್ಲಿ ಸೂಟುಬೂಟ್​ ಹಾಕಿಕೊಂಡು ಡಿನ್ನರ್​ಗೆ ಹೇಗೆ ಬರಲಿ? ಕಾಫಿ ಕೊಡಬೇಕು ತಾನೆ ಎಂದು ಬೈದಿದ್ದಾನೆ. ಕೊನೆಗೂ ಸತ್ಯ ತಾಂಡವ್​ ಬಾಯಿಯಿಂದ ಹೊರಬಂದಿದೆ. ನಿನಗಿಂತ ಭಾಗ್ಯಳೇ ಎಷ್ಟೋ ಉತ್ತಮ. ನನ್ನ ಮರ್ಯಾದೆ ಕಾಪಾಡುತ್ತಾಳೆ ಎಂದಾಗ ಈಗ ಉರಿಹೊತ್ತಿಕೊಳ್ಳುವ ಸರದಿ ಶ್ರೇಷ್ಠಾಳದ್ದು. ಇನಫ್​ ಎಂದು ಕಿರುಚಾಡಿದ್ದಾಳೆ. ಕೆಲಸ ಮಾಡುವುದು ಎಂದರೆ ಆಗದ ಶ್ರೇಷ್ಠಾ ಹೇಗೋ ಸಾವರಿಸಿಕೊಂಡು ನಿನ್ನ ಮೂಡ್​ ಸರಿಯಾಗ್ಬೋದು ಅಂದುಕೊಂಡೆ. ಅದಕ್ಕೆ ಡಿನ್ನರ್​ಗೆ ಕರೆದೆ ಎಂದಿದ್ದಾರೆ. ಅವಳನ್ನು ನೋಡಿ ತಾಂಡವ್​ ಮತ್ತಷ್ಟು ಕೋಪಗೊಂಡಿದ್ದಾನೆ.

ಹೆಣ್ಣೆಂದರೆ 'ಅನಿಮಲ್'​ ನಿರ್ದೇಶಕನ ದೃಷ್ಟಿಯಲ್ಲಿ ಹೀಗಂತೆ! ಯಾವುದ್ರಿಂದ ಹೊಡಿಬೇಕು ನಿಂಗೆ ಕೇಳ್ತಿದ್ದಾರೆ ನೆಟ್ಟಿಗರು

ಇತ್ತ ಭಾಗ್ಯಲಕ್ಷ್ಮಿಯ ಮಗಳು ಅಮ್ಮನಿಗೆ ಕ್ಷಮೆ ಕೋರಿದ್ದಾಳೆ. ಕುಸುಮಾ ಹೇಳಿದಂತೆ ಅಮ್ಮನ ಕಾಲು ಹಿಡಿದು ಕ್ಷಮೆ ಕೋರಿದ್ದಾಳೆ. ಇದರ ಪ್ರೊಮೋ ಬಿಡುಗಡೆಯಾಗಿದ್ದು, ಶ್ರೇಷ್ಠಾ ಮತ್ತು ತಾಂಡವ್​ ಮಾತುಕತೆ ಕೇಳಿ ನೆಟ್ಟಿಗರು ಅದಕ್ಕೇ ತಾನೆ ಹೇಳೋದು, ಇಟ್ಕೊಂಡವಳು ಇರೋ ತನಕ, ಕಟ್ಕೊಂಡೋಳು ಕಡೇ ತನಕ ಅಂತ ಎಂದು ಹೇಳುತ್ತಿದ್ದಾರೆ.