Asianet Suvarna News Asianet Suvarna News

ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಗಿಫ್ಟ್‌ ನೀಡಿದ್ದ ಸೀರೆಯುಟ್ಟು ಬಜೆಟ್ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್‌

ಕೇಂದ್ರ ಬಜೆಟ್ 2023ರ ದಿನದಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗಾಢ ಕೆಂಪು ಬಣ್ಣದ ಇಳಕಲ್‌ ಸೀರೆಯನ್ನು ಉಟ್ಟಿದ್ದರು. ಇದು ನಿರ್ಮಲಾ ಸೀತಾರಾಮನ್‌ ಸಹೋದ್ಯೋಗಿಯಾಗಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಉಡುಗೊರೆಯಾಗಿ ನೀಡಿದ ಸೀರೆಯಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Nirmala Sitaraman presented budget wearing a saree gifted by Minister Pralhad Joshi Vin
Author
First Published Feb 1, 2023, 2:53 PM IST

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಐದನೇ ಬಜೆಟ್ ಮಂಡಿಸಿದರು. ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಆಗಿದೆ. ಇಡೀ ದೇಶವು ಬಜೆಟ್ 2023ರ ಮೇಲೆ ಕಣ್ಣಿಟ್ಟಿದೆ. ಆದರೆ ಇದರೊಂದಿಗೆ ನಿರ್ಮಲಾ ಸೀತಾರಾಮನ್ ಅವರ ಸೀರೆ (Saree) ಕೂಡ ಜನರ ಗಮನ ಸೆಳೆದಿದೆ. 2019ರ ಬಜೆಟ್ ದಿನದಿಂದ 2022ರ ವರೆಗೆ ನಿರ್ಮಲಾ ಸೀತಾರಾಮನ್ ಅವರ ಸೀರೆಗಳು ಯಾವಾಗಲೂ ಚರ್ಚೆಯಲ್ಲಿರುತ್ತವೆ. ಹೆಚ್ಚಾಗಿ ಅವರು ಸೀರೆಗಳ ವಿಷಯದಲ್ಲಿ ಕೈಮಗ್ಗದ ಸೀರೆಗಳನ್ನೇ ಹೆಚ್ಚಾಗಿ ಬಳಕೆ ಮಾಡುತ್ತಾರೆ, ಅವರು ಯಾವಾಗಲೂ ಸ್ಥಳೀಯ ಕುಶಲಕರ್ಮಿಗಳ ಸುಂದರವಾದ, ಸೀರೆಯನ್ನು ಸಂಸತ್ತಿನಲ್ಲಿ ಧರಿಸುವ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ. ಹೀಗಿರುವಾಗ ಈ ವರ್ಷ ಕೇಂದ್ರ ಬಜೆಟ್ 2023 ಮಂಡಿಸಲು ವಿತ್ತ ಸಚಿವರು ಯಾವ ಸೀರೆ ಉಡುತ್ತಾರೆ ಎಂಬ ಕುತೂಹಲವೂ ಮೂಡಿತ್ತು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಉಡುಗೊರೆಯಾಗಿ ನೀಡಿದ್ದ ಸೀರೆ
ನಿರ್ಮಲಾ ಸೀತಾರಾಮನ್ ಅವರು ಉಟ್ಟಿದ್ದ ಸೀರೆಯು ಕಾಟನ್ ಆಗಿದ್ದು ಅದರಲ್ಲಿ ರೇಷ್ಮೆ ಮಿಶ್ರಿತವಾಗಿದೆ. ಕಪ್ಪು ಬಾರ್ಡರ್ ಹೊಂದಿದ್ದು, ಬಂಗಾರದ ಬಣ್ಣ ಮಿಶ್ರಿತವಾಗಿದೆ. ನಿರ್ಮಲಾ ಸೀತಾರಾಮನ್ ಉಟ್ಟಿದ್ದು ಕರ್ನಾಟಕದ ನವಲಗುಂದದ ಕಸೂತಿ ಕಲೆಯ ಸೀರೆ,. ಧಾರವಾಡ ಜಿಲ್ಲೆಯ ನವಲಗುಂದದ ಪ್ರಸಿದ್ಧ ಕಸೂತಿ ಕಲೆ ಧಾರವಾಡದ ಆರತಿ ಕ್ರಾಫ್ಟ್ಸ್‌ನಲ್ಲಿ ತಯಾರಾಗಿರುವ ಸೀರೆ ಇದಾಗಿದ್ದು, ಕೈಮಗ್ಗದಲ್ಲಿ ನೇಯ್ದ ಇಳಕಲ್ ನ ಸೀರೆಗೆ ನವಲಗುಂದದ ಕಸೂತಿ ಇದೆ. ಚಿಕ್ಕಪರಾಸ್‌ ದಡಿ, ತೇರು ಗೋಪುರ, ನವಿಲು, ಕಮಲದ ಕಸೂತಿ ಹೊಂದಿರುವ ಸೀರೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಉಡುಗೊರೆ (Gift)ಯಾಗಿ ನೀಡಿದ್ದರು.

ಸಚಿವೆ ನಿರ್ಮಲಾ ಉಟ್ಟ ಇಳಕಲ್ ಸೀರೆಗೆ ಕಸೂತಿ ಮಾಡಿದ್ದು ಧಾರವಾಡದ ಮಹಿಳಾಮಣಿಗಳು

2019 ರಲ್ಲಿ, ನಿರ್ಮಲಾ ಸೀತಾರಾಮನ್ ತಮ್ಮ ಮೊದಲ ಬಜೆಟ್ ಅನ್ನು ಮಂಡಿಸಿದರು. ಆ ಸಮಯದಲ್ಲಿ ಅವರು ಕಡು ಗುಲಾಬಿ ಬಣ್ಣದ ಮಂಗಳಗಿರಿ ಸೀರೆಯನ್ನು ಧರಿಸಿದ್ದರು ಮತ್ತು ಈ ಸೀರೆಯ ಮೇಲೆ ಗೋಲ್ಡನ್ ಬಾರ್ಡರ್ ಕೂಡ ಮಾಡಲಾಗಿತ್ತು. ಅದೇ ವರ್ಷದಲ್ಲಿ, ಸೀತಾರಾಮನ್ ಚರ್ಮದ ಚೀಲದ ಬದಲಿಗೆ ಲೆಡ್ಜರ್ ಅನ್ನು ಬಳಸಿದ್ದರು.

2020 ರಲ್ಲಿ, ಹಣಕಾಸು ಸಚಿವರ ಸೀರೆಯು ಉತ್ತಮ ಚರ್ಚೆಯಲ್ಲಿತ್ತು. ಅವಳು ಹಳದಿ ಕಾಂಜೀವರಂ ರೇಷ್ಮೆ ಸೀರೆಯನ್ನು ಧರಿಸಿದ್ದರು. ಅದರ ಅಂಚಿನಲ್ಲಿ ಚಿನ್ನದ ಬಣ್ಣದ ಬಾರ್ಡರ್ ಇತ್ತು. ಆ ವರ್ಷ ಜನವರಿ 29 ರಂದು ಬಸಂತ್ ಪಂಚಮಿಯನ್ನು ಆಚರಿಸಲಾಗಿತ್ತು. ಬಸಂತ್ ಪಂಚಮಿಯ ಎರಡು ದಿನಗಳ ನಂತರ, ಹಣಕಾಸು ಸಚಿವರು ಹಳದಿ ಸೀರೆಯಲ್ಲಿ ಬಜೆಟ್ ಮಂಡಿಸಿದಾಗ, ಅವರ ನೋಟವು ಹೆಚ್ಚು ಗಮನ ಸೆಳೆದಿತ್ತು. ಒಬ್ಬೊಬ್ಬರಿಗೆ ಒಂದೊಂದು ಬಣ್ಣ ಅದೃಷ್ಟದ ಬಣ್ಣವಾಗಿರುತ್ತದೆ. ನಿರ್ಮಲಾ ಸೀತಾರಾಮನ್‌ ಅವರಿಗೆ ಕೆಂಪು ಅದೃಷ್ಟದ ಬಣ್ಣವೆಂದು ಕಾಣುತ್ತದೆ. ಅವರು ಬಜೆಟ್‌ ಮಂಡಿಸಿದಾಗೆಲ್ಲಾ ಕೆಂಪು ಹೈಲೈಟ್‌ ಆಗಿರುವುದನ್ನು ಗಮನಿಸಬಹುದು. ಅಷ್ಟು ಮಾತ್ರವಲ್ಲ ಕೆಲವೊಂದು ಮಹತ್ವದ ದಿನಗಳಲ್ಲಿ ಅವರು ಕೆಂಪು ಬಣ್ಣ ಇರುವ ಸೀರೆ ಧರಿಸಿರುತ್ತಾರೆ.

2021ರಲ್ಲಿ, ನಿರ್ಮಲಾ ಸೀತಾರಾಮನ್ ಅವರು ಪ್ರಸಿದ್ಧ ಪೋಚಂಪಲ್ಲಿ ಸೀರೆಯನ್ನು ಧರಿಸಿದ್ದರು. ಈ ಸೀರೆಯು ಬಿಳಿ ಬಣ್ಣದ್ದಾಗಿತ್ತು ಮತ್ತು ಕೆಂಪು ಮುದ್ರಿತ ಅಂಚುಗಳನ್ನು ಹೊಂದಿತ್ತು. ಬಂಗಾಳದ ಲಾಲ್ ಪಾಡ್ ಸೀರೆಯು ವಿಶೇಷವಾದ ಸೀರೆಯಾಗಿದೆ.

ಇಳಕಲ್ ಸೀರೆ ಅಂದ್ರೆ ಸುಮ್ನೆ ಏನಲ್ಲ..ಸಾಂಪ್ರದಾಯಿಕ ಸೀರೆಗಿದೆ 1000 ವರ್ಷದ ಇತಿಹಾಸ

ಸಾಮಾನ್ಯವಾಗಿ ಈ ಸೀರೆಯು ಬಿಳಿ ಬಣ್ಣದಲ್ಲಿರುತ್ತದೆ, ಅದರ ಮೇಲೆ ಅಗಲವಾದ ಕೆಂಪು ಅಂಚುಗಳು ವಿಭಿನ್ನ ಲುಕ್ ನೀಡುತ್ತದೆ. 2022ರ ಬಜೆಟ್ ಅನ್ನು ಮಂಡಿಸುವಾಗ, ಅವರು ಕಾಫಿ ಬಣ್ಣದ ಸೀರೆಯನ್ನು ಧರಿಸಿದ್ದರು. ಈ ಸೀರೆಯನ್ನು ಬೊಮ್ಕೈ ಅಥವಾ ಸೋನ್ಪುರಿ ಸೀರೆ ಎಂದೂ ಕರೆಯುತ್ತಾರೆ. ಅದು ಕೈಮಗ್ಗದ ರೇಷ್ಮೆ ಸೀರೆಯಾಗಿದ್ದು, ಕಡು ಮೆರೂನ್ ಬಣ್ಣದ ಪಲ್ಲ ಮತ್ತು ಕುಪ್ಪಸ ಈ ಸೀರೆಗೆ ಡಿಸೆಂಟ್ ಲುಕ್ ನೀಡುತ್ತಿತ್ತು.

ಕೇಂದ್ರ ಬಜೆಟ್ 2023 ರ ದಿನದಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸಹೋದ್ಯೋಗಿಯಾಗಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಉಡುಗೊರೆಯಾಗಿ ನೀಡಿದ ಧಾರವಾಡದ ಕೆಂಪು ಸೀರೆಯನ್ನು ಧರಿಸಿ ಬಜೆಟ್ ಮಂಡನೆ ಮಾಡಿದ್ದು ವಿಶೇಷವಾಗಿದೆ.

Follow Us:
Download App:
  • android
  • ios