ಬಾಯ್ ಫ್ರೆಂಡ್ ಜೊತೆ ಓಡಿ ಹೋದ ಅಮ್ಮ, ಮನೆಯಲ್ಲಿ ಒಬ್ಬಂಟಿ ಎಂಟು ವರ್ಷದ ಈ ಹುಡುಗ!

ಒಂಟಿಯಾಗಿ ವಾಸವಾಗೋದು ಅದೂ ಮಕ್ಕಳು ಒಂಟಿಯಾಗಿರೋದು ಸುಲಭವಲ್ಲ. ಪ್ರತಿಯೊಂದು ಹಂತದಲ್ಲೂ ಪಾಲಕರ ಸಲಹೆ ಅವರಿಗೆ ಬೇಕು. ಆದರೆ ಈ ಚಿಕ್ಕ ಬಾಲಕ ಎರಡು ವರ್ಷಗಳಿಂದ ಕಸ ತುಂಬಿದ ಮನೆಯಲ್ಲಿದ್ದಾನೆ.
 

Nine Year Boy Lives Alone Apartment Two Years After Mother Moves With Boyfriend France roo

ಮನೆಯಲ್ಲಿ ಮಗು ಒಂದನ್ನೇ ಬಿಟ್ಟು ಹೋಗಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು ತಮ್ಮ ವೃತ್ತಿ ಜೀವನವನ್ನೇ ಕೈಬಿಡ್ತಾರೆ. ಮಕ್ಕಳನ್ನು ದಿನದಲ್ಲಿ ಹದಿನೈದು – ಇಪ್ಪತ್ತು ನಿಮಿಷ ಒಂಟಿಯಾಗಿ ಮನೆಯಲ್ಲಿ ಬಿಟ್ಟರೂ ಟೆನ್ಷನ್ ಇರುತ್ತದೆ. ಅವರ ಆಹಾರ, ಅವರ ನಿದ್ರೆ ಸೇರಿದಂತೆ ಅನೇಕ ಪ್ರಶ್ನೆಗಳು, ಆತಂಕ ಪಾಲಕರನ್ನು ಕಾಡುತ್ತಿರುತ್ತದೆ. ಪಾಲಕರಿಬ್ಬರೂ ಕಚೇರಿಗೆ ಹೋಗುವ ಅನಿವಾರ್ಯ  ಸ್ಥಿತಿಯಲ್ಲಿ ಮಕ್ಕಳು ಗಂಟೆ – ಎರಡು ಗಂಟೆ ಒಂಟಿಯಾಗಿ ಮನೆಯಲ್ಲಿರೋದನ್ನು ಕಲಿಯುತ್ತಿದ್ದಾರೆ. ಆದ್ರೆ ಒಂದು ಇಡೀ ದಿನ, ಒಂದು ರಾತ್ರಿಪೂರ್ತಿ ಮಕ್ಕಳನ್ನು ಪಾಲಕರು ಒಂಟಿಯಾಗಿ ಮನೆಯಲ್ಲಿ ಬಿಡೋದಿಲ್ಲ. ಮಕ್ಕಳ ಜೊತೆ ಯಾರಾದ್ರೂ ಒಬ್ಬರು ಇದ್ದೇ ಇರ್ತಾರೆ. ಮಕ್ಕಳಿಗೆ ಹದಿನೈದು ವರ್ಷಗಳಾಗುವವರೆಗೂ ಒಬ್ಬರ ಅವಶ್ಯಕತೆ ಇದ್ದೇ ಇರುತ್ತದೆ. ಆದ್ರೆ ಇಲ್ಲೊಬ್ಬ ಮಹಾತಾಯಿ ಮಾಡಿದ ಕೆಲಸ ಅಚ್ಚರಿ ಹುಟ್ಟಿಸಿದೆ. ಈಕೆ ನಿಜವಾಗ್ಲೂ ಮಗುವಿನ ತಾಯಿಯಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಚಿಕ್ಕ ಮಕ್ಕಳು ಸರಿಯಾಗಿ ಊಟ ಮಾಡಿಲ್ಲ, ತಿಂಡಿ ತಿಂದಿಲ್ಲ ಎಂದಾದ್ರೆ ತಾಯಿ (Mother) ಯ ಕರುಳು ಚುರುಕ್ ಎನ್ನುತ್ತದೆ. ಆಕೆ ತನ್ನ ಊಟ ಬಿಟ್ಟು ಮಕ್ಕಳಿಗೆ ನೀಡ್ತಾಳೆ. ಆದ್ರೆ ಈ ತಾಯಿ, ಮಗನ ಪರಿವೆ ಇಲ್ಲದೆ ಆತನನ್ನು ಬಿಟ್ಟು ಬಾಯ್ ಫ್ರೆಂಡ್ (Boyfriend) ಜೊತೆ ವಾಸ ಶುರು ಮಾಡಿದ್ದಾಳೆ. ಬಾಲಕನ ಜೊತೆ ಅಜ್ಜಿ – ಅಜ್ಜ, ಅಪ್ಪ ಸೇರಿದಂತೆ ಯಾರೂ ವಾಸವಾಗಿಲ್ಲ. ಒಂದು ಸಣ್ಣ ಮನೆಯಲ್ಲಿ ಬಾಲಕನೊಬ್ಬನೇ ಕಾಲ ಕಳೆಯುತ್ತಿದ್ದಾನೆ. 

ಗೋವಾ ಹನಿಮೂನ್ ಖುಷಿಯಲ್ಲಿದ್ದ ಪತ್ನಿಗೆ ಆಯೋಧ್ಯೆ ರಾಮ ಮಂದಿರ ದರ್ಶನ, ಡಿವೋರ್ಸ್ ಕೋರಿದ ಪತ್ನಿ!

ಬಾಲಕನ ವಯಸ್ಸು ಬರಿ ಒಂಭತ್ತು ವರ್ಷ. ಎರಡು ವರ್ಷಗಳ ಹಿಂದೆ ಅಂದ್ರೆ ಬಾಲಕ ಏಳು ವರ್ಷದಲ್ಲಿರುವಾಗ ಆತನ ತಾಯಿ ಆತನನ್ನು ಇಲ್ಲಿ ಬಿಟ್ಟು ಹೋಗಿದ್ದಾಳೆ. ಫ್ರಾನ್ಸ್‌ (France) ನ ನೆರ್ಸಾಕ್‌ನಲ್ಲಿ ಘಟನೆ ನಡೆದಿದೆ. ಇಲ್ಲಿ ಅತ್ಯಂತ ಕಡಿಮೆ ಬಜೆಟ್ ನ ಮನೆಯಲ್ಲಿ ಬಾಲಕ ವಾಸವಾಗಿದ್ದಾನೆ. ಬಾಲಕ ಸಿಹಿತಿಂಡಿಗಳು, ಸಂಸ್ಕರಿಸಿದ ಆಹಾರ ಮತ್ತು ನೆರೆಹೊರೆಯವರು ನೀಡಿದ ಆಹಾರವನ್ನು ತಿಂದು ಜೀವನ ನಡೆಸುತ್ತಿದ್ದಾನೆ. 

ಬಾಲಕನ ತಾಯಿ, ಈತ ವಾಸ ಮಾಡಿರುವ ಮನೆಯಿಂದ  ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಮನೆಯಲ್ಲಿ ಬಾಯ್ ಫ್ರೆಂಡ್ ಜೊತೆ ವಾಸವಾಗಿದ್ದಾಳೆ. ತಿಂಗಳಿಗೊಮ್ಮೆ, ಎರಡು – ಮೂರು ತಿಂಗಳಿಗೊಮ್ಮೆ ಮಗನನ್ನು ನೋಡಲು ಇಲ್ಲಿಗೆ ಬರ್ತಾಳೆ. ಆಗ ಸಣ್ಣಪುಟ್ಟ ತಿಂಡಿ ನೀಡಿ ಹೋಗ್ತಾಳೆ. ಆತನನ್ನು ಬಹಳ ಅಪರೂಪಕ್ಕೆ ಭೇಟಿ ಆಗ್ತಿದ್ದ ಕಾರಣ ನೆರೆಹೊರೆಯವರಿಗೆ ಆತ ಒಂಟಿಯಾಗಿದ್ದಾನೆ ಎಂಬುದೇ ಸರಿಯಾಗಿ ತಿಳಿದಿರಲಿಲ್ಲ.  ವಿಷ್ಯ ತಿಳಿದ ಮೇಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹುಡುಗನ ಮನೆಗೆ ಬಂದ ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿದ್ದಾರೆ. ಆಹಾರ, ಬಟ್ಟೆ ಸೇರಿದಂತೆ ಬ್ರೆಷ್ ಕೂಡ ಹುಡುಗನಿಗೆ ಇರಲಿಲ್ಲ. ಎರಡು ವರ್ಷಗಳ ಹಿಂದೆಯೇ ತಾಯಿ ಮನೆ ಬಿಟ್ಟು ಹೋಗಿದ್ದಾಳೆ ಎಂದು ಹುಡುಗ ಪೊಲೀಸರಿಗೆ ಹೇಳಿದ್ದಾನೆ.

ಅಬ್ಬಬ್ಬಾ..ಶೋಯೆಬ್‌ ಮಲಿಕ್‌ರಿಂದ ಸಾನಿಯಾ ಮಿರ್ಜಾಗೆ ಸಿಗೋ ಜೀವನಾಂಶ ಇಷ್ಟೊಂದ್ ಕೋಟಿನಾ?

ಪ್ರಕರಣ ದಾಖಲಿಸಿಕೊಂಡು, ತಾಯಿಯನ್ನು ವಶಕ್ಕೆ ಪಡೆದಿದ್ದರು. ಕೋರ್ಟ್ ಪ್ರಕರಣದ ವೇಳೆ ತಾಯಿ ತನ್ನ ತಪ್ಪನ್ನು ಒಪ್ಪಿಕೊಂಡಿಲ್ಲ. ಪ್ರತಿ ದಿನ ನಾನು ಮಗನನ್ನು ಭೇಟಿಯಾಗ್ತೇನೆ, ಆತನನ್ನು ಶಾಲೆಗೆ ಕಳಿಸ್ತೇನೆ ಎಂದು ವಾದಿಸಿದ್ದಾಳೆ. ಅಲ್ಲದೆ ನೆರೆಹೊರೆಯವರು ಸುಳ್ಳು ಹೇಳ್ತಿದ್ದಾರೆ ಎಂದು ಆರೋಪ ಮಾಡಿದ್ದಾಳೆ. ಆದ್ರೆ ಆಕೆ ಮಗ ಹಾಗೂ ನೆರೆಹೊರೆಯವರ ಮಾತು, ಮನೆಯಲ್ಲಿ ಸಿಕ್ಕ ಸಾಕ್ಷ್ಯಗಳ ಆಧಾರದ ಮೇಲೆ ಕೋರ್ಟ್ ಹುಡುಗನ ಪರ ತೀರ್ಪು ನೀಡಿದೆ. ಮಗುವನ್ನು ಒಂಟಿಯಾಗಿ ಬಿಟ್ಟು, ಬಾಯ್  ಫ್ರೆಂಡ್ ಜೊತೆ ವಾಸವಾಗಿದ್ದ ತಾಯಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ಕೋರ್ಟ್ ಹದಿನೆಂಟು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. 

Latest Videos
Follow Us:
Download App:
  • android
  • ios