ಗೋವಾ ಹನಿಮೂನ್ ಖುಷಿಯಲ್ಲಿದ್ದ ಪತ್ನಿಗೆ ಆಯೋಧ್ಯೆ ರಾಮ ಮಂದಿರ ದರ್ಶನ, ಡಿವೋರ್ಸ್ ಕೋರಿದ ಪತ್ನಿ!
ಗೋವಾ ಹನಿಮೂನ್‌ಗೆ ನವ ದಂಪತಿ ಪ್ಲಾನ್ ಮಾಡಿದ್ದಾರೆ. ಟಿಕೆಟ್ ಬುಕ್ ಆಗಿದೆ, ಹೊಟೆಲ್ ರೂಂ ಬುಕಿಂಗ್ ಆಗಿದೆ. ಆದರೆ ತಾಣ ಗೋವಾ ಅಲ್ಲ, ಆಯೋಧ್ಯೆ ರಾಮ ಮಂದಿರ. ಗೋವಾ ಬದಲು ರಾಮ ಮಂದಿರಕ್ಕೆ ಕರೆದುಕೊಂಡು ಹೋದ ಪತಿ ವಿರುದ್ಧ ಪತ್ನಿ ಗರಂ ಆಗಿದ್ದಾಳೆ. ಇಷ್ಟೇ ಅಲ್ಲ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾಳೆ.
ಭೋಪಾಲ್(ಜ.25) ಮದುವೆಗೂ ಮೊದಲು ಹನಿಮೂನ್ ಪ್ಲಾನ್ ರೆಡಿಯಾಗಿತ್ತು. ಗೋವಾ ಹಾಗೂ ದಕ್ಷಿಣ ಭಾರತದಲ್ಲಿ ಹಾಯಾಗಿ ಕಾಲ ಕಳೆಯಲು ಪತ್ನಿ ಕನಸು ಕಂಡಿದ್ದಳು. ಪತ್ನಿಯ ಮಹದಾಸೆಯಂತೆ ಟಿಕೆಟ್, ಹೊಟೆಲ್ ರೂಂ ಸೇರಿದಂತೆ ಎಲ್ಲವನ್ನೂ ಪತಿ ಬುಕ್ ಮಾಡಿದ್ದಾನೆ. ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ತಾವು ಹೋಗುತ್ತಿರುವುದು ಗೋವಾ ಹನಿಮೂನ್‌ಗೆ ಅಲ್ಲ, ಆಯೋಧ್ಯೆ ರಾಮ ಮಂದಿರ ದರ್ಶನಕ್ಕೆ ಅನ್ನೋದು ಪತಿಗೆ ಗೊತ್ತಾಗಿದೆ. ಆಯೋಧ್ಯೆ ರಾಮ ಮಂದಿರ ದರ್ಶನ ಪಡೆದು ಮರಳಿದ ಬೆನ್ನಲ್ಲೇ ಸ್ಥಳೀಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ ಘಟನೆ ಮಧ್ಯ ಪ್ರದೇಶ ಭೋಪಾಲ್ ಸಮೀದಲ್ಲಿ ನಡೆದಿದೆ.
ಮದುವೆ ಫಿಕ್ಸ್ ಆಗುತ್ತದ್ದಂತೆ ಫೋನ್ ಮೂಲಕು ನವ ಜೋಡಿಗಳ ಮಾತುಕತೆ ಆರಂಭಗೊಂಡಿದೆ. ಮಾರಿಷಸ್, ಮಾಲ್ಡೀವ್ಸ್ ಸೇರಿದಂತೆ ಹಲವು ತಾಣಗಳ ಕುರಿತು ಚರ್ಚೆ ನಡೆಸಿದ್ದರು. ಮದುವೆಯಾದ ಬಳಿಕ ಪತಿ ಹನಿಮೂನ್ ಪ್ಲಾನ್ ಚಕಾರ ಎತ್ತಿಲ್ಲ. ಪತಿ ಐಟಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನೀಯರ್ ಆಗಿದ್ದರೆ, ಪತ್ನಿ ಕೂಡ ಉತ್ತಮ ವೇತನದ ಉದ್ಯೋಗದಲ್ಲಿದ್ದಳು. ಹೀಗಾಗಿ ವಿದೇಶ ಪ್ರವಾಸ ಅಥವಾ ಇನ್ಯಾವುದೇ ಹನಿಮೂನ್ ಪ್ರವಾಸ ಸವಾಲಾಗಿರಲಿಲ್ಲ.
ಅಡ್ಜೆಸ್ಟ್ ಮಾಡಿಕೊಳ್ಳದ ಹೆಂಡತಿಯಿಂದ ಗಂಡನಿಗೆ ಡಿವೋರ್ಸ್ ಪಡೆಯಲು ಅನುಮತಿಸಿದ ಹೈಕೋರ್ಟ್
ಕಳೆದ ಆಗಸ್ಟ್ ತಿಂಗಳಲ್ಲಿ ಇವರಿಬ್ಬರ ಮದುವೆಯಾಗಿದೆ. ಮದುವೆಯಾದ ಹೊಸದರಲ್ಲಿ ಪೋಷಕರು, ಹಿರಿಯರ ಮಾತಿನಂತೆ ಸ್ಥಳೀಯ, ಕುಟುಂಬ ದೇವಸ್ಥಾನ ದರ್ಶನ ಮಾಡಿದ್ದಾರೆ. ಮೊದಲೆ ನಿರ್ಧರಿಸಿದಂತೆ ಹನಿಮೂನ್ ಮಾತೇ ಇಲ್ಲ. ರೊಚ್ಚಿಗೆದ್ದ ಪತಿ ಹನಿಮೂನ್‌ಗೆ ಪಟ್ಟುಹಿಡಿದಿದ್ದಾಳೆ. ಕೊನೆಗೆ ಗೋವಾ ಹನಿಮೂನ್‌ಗೆ ಪ್ಲಾನ್ ರೆಡಿಯಾಗಿದೆ. ಇಬ್ಬರೂ ವಿದೇಶ ಪ್ರವಾಸದ ಬದಲು ಗೋವಾಗೆ ಹನಿಮೂನ್ ತೆರಳಲು ಒಪ್ಪಿಕೊಂಡಿದ್ದಾರೆ.
ಗೋವಾ ಹನಿಮೂನ್ ಪ್ರವಾಸ ದಿನಾಂಕ ಹತ್ತಿರ ಬರುತ್ತಿದ್ದಂತೆ ಪತ್ನಿಯ ಸಂತಸಕ್ಕೆ ಪಾರವೇ ಇರಲಿಲ್ಲ. ಇನ್ನೇನು ನಾಳ ಹೊರಡಬೇಕು ಅನ್ನುವಷ್ಟರಲ್ಲಿ ರಾತ್ರಿ ಪತಿ ಬಾಂಬ್ ಸಿಡಿಸಿದ್ದಾನೆ. ತಾಯಿ ಹಾಗೂ ಹಿರಿಯ ಆಶಯದಂತೆ ನಾಳೆ ನಾವು ಆಯೋಧ್ಯೆ ಹಾಗೂ ವಾರಣಾಸಿ ದರ್ಶನ ಮಾಡಲು ಹೋಗುತ್ತಿದ್ದೇವೆ ಎಂದಿದ್ದಾನೆ. ಈ ಮಾತು ಪತ್ನಿಯ ಕನಸಿನ ಗೋಪುರವನ್ನೇ ನುಚ್ಚು ನೂರು ಮಾಡಿದೆ. ಮರು ಮಾತನಾಡದೇ ಮರು ದಿನ ಆಯೋಧ್ಯೆ ಹಾಗೂ ವಾರಣಾಸಿ ದರ್ಶನಕ್ಕೆ ನವ ದಂಪತಿ ತೆರಳಿದ್ದಾರೆ.
ಇತ್ತ ಕುಟುಂಬದ ಪೋಷಕರಲ್ಲಿ ಸಂತಸವೂ ಸಂತಸ. ತಮ್ಮ ಮಗ ಹಾಗೂ ಸೊಸೆ ತಮ್ಮ ಮಾತಿನಂತೆ ಗೋವಾ ಬಿಟ್ಟು ದೇವಸ್ಥಾನ ದರ್ಶನಕ್ಕೆ ತೆರಳಿದ್ದಾರೆ ಅನ್ನೋ ಸಂಭ್ರಮ ಮನೆ ಮಾಡಿತ್ತು. ಆದರೆ ಆಯೋಧ್ಯೆ ರಾಮ ಮಂದಿರ ಹಾಗೂ ವಾರಣಾಸಿಯ ಕೆಲ ದೇವಸ್ಥಾನ ದರ್ಶನ ಮಾಡಿ ಮರಳುತ್ತಿದ್ದಂತೆ ಪತ್ನಿ ತನ್ನ ಆಕ್ರೋಶ ಹೊರಹಾಕಿದ್ದಾಳೆ. ಪತ್ನಿಯನ್ನು ಸಮಾಧಾನಿಸುವ ಪ್ರಯತ್ನ ಮಾಡಲಾಗಿದೆ. ಇನ್ನೊಂದು ದಿನ ಗೋವಾಗೆ ಹೋಗೋಣ ಎಂದಿದ್ದಾನೆ. ಆದರೆ ಈಗಾಗಲೇ ಹಲವು ಪ್ರವಾಸಗಳು, ಹನಿಮೂನ್ ಇದೇ ದೇವಸ್ಥಾನ ಕಾರಣದಿಂದ ಮುಂದೂಡಲಾಗಿತ್ತು. ಗೋವಾ ಪ್ರವಾಸಕ್ಕೆ ನೀವೂ ಒಪ್ಪಿಕೊಂಡಿದ್ದೀರಿ. ಇನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾಳೆ. ಪತಿಯ ಸಮಾಧಾನದ ಮಾತುಗಳು ಪತ್ನಿ ಕಿವಿಗೆ ಬಿದ್ದಿಲ್ಲ.
ಪ್ರೀತಿಯಲ್ಲಿ ಮೋಸ ಹೋದ ನಟಿ ವಿಚ್ಚೇದನ ಪಡೆದ್ರು, ಭಾರತಕ್ಕೆ ಮರಳಿ ದಕ್ಷಿಣದ ಖ್ಯಾತ ವಿಲನ್ ಜತೆ ಮದುವೆಯಾದ್ರು!
ಆಯೋಧ್ಯೆಯಿಂದ ಮರಳಿದ ಪತ್ನಿ, ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್‌ಗೆ ಅರ್ಜಿ ಹಾಕಿದ್ದಾಳೆ. ಇದೀಗ ಇವರಿಬ್ಬ ಕೌನ್ಸಲಿಂಗ್ ನಡೆಯುತ್ತಿದೆ. ನವ ಜೋಡಿಗಳಿಗೆ ಕಾಲವಕಾಶ ನೀಡಲಾಗಿದೆ. ಆಕ್ರೋಶದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಸಮಾಧಾನವಾಗಿ ಯೋಚಿಸಿ ಬಳಿಕ ನಿರ್ಧಾರ ತಳಿಸುವಂತೆ ಕೌನ್ಸಿಲರ್ ಸೂಚಿಸಿದ್ದಾರೆ.