Asianet Suvarna News Asianet Suvarna News

New Mom Debina Bonnerjee Tips: ಗರ್ಭಧಾರಣೆಗಾಗಿ ಫ್ಲವರ್‌ ಥೆರಪಿ ಟ್ರೈ ಮಾಡ್ಬೋದು

ತಾಯಿ (Mom)ಯಾಗುವುದು ಪ್ರತಿಯೊಬ್ಬ ಮಹಿಳೆಗೂ ಸಾರ್ಥಕತೆಯ ಭಾವ. ಗರ್ಭಿಣಿ (Pregnant)ಯಾಗಲು ಸಾಧ್ಯವಾಗದಿದ್ದವರು ಮಗು (Child)ವನ್ನು ಪಡೆಯಲು ಹಲವಾರು ಚಿಕಿತ್ಸೆಗಳನ್ನು ಅನುಸರಿಸುತ್ತಾರೆ. ಜ್ಯೋತಿಷಿಯನ್ನು ಭೇಟಿ ಮಾಡುತ್ತಾರೆ, ಪೂಜೆಯನ್ನು ನಡೆಸುತ್ತಾರೆ ಹೀಗೆ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಹೀಗೆ ಹಿಂದಿ ಕಿರುತೆರೆ ನಟಿ ಡೆಬಿನಾ ಬೊನಾರ್ಜಿ ತಮ್ಮ ಗರ್ಭಧಾರಣೆಗೆ ಅನುಸರಿಸಿದ ರೀತಿಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

New Mom Debina Bonnerjee Recalls Taking Flower Therapy While Trying To Conceive Vin
Author
Bengaluru, First Published Apr 8, 2022, 7:17 PM IST

ಹಿಂದಿ ಕಿರುತೆರೆ ನಟಿ ಡೆಬಿನಾ ಬೊನ್ನರ್ಜಿ (Debina Bonnerjee) ಇತ್ತೀಚಿಗಷ್ಟೇ ನಟಿ ಗಂಡ ಗುರ್ಮೀತ್ ಚೌಧರಿ ಅವರೊಂದಿಗೆ ಹೆಣ್ಣು ಮಗುವನ್ನು ಮನೆಗೆ ಸ್ವಾಗತಿಸಿದ್ದಾರೆ. ಆ ಬಳಿಕ ತನ್ನ ವ್ಲಾಗ್‌ಗಳ ಮೂಲಕ ತನ್ನ ಗರ್ಭಾವಸ್ಥೆಯ ಪ್ರಯಾಣವನ್ನು ಹಂಚಿಕೊಂಡಿರುವ ಡೆಬಿನಾ, ತಾನು ಗರ್ಭಿಣಿ (Preganant)ಯಾಗಲು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಡೆಬಿನಾ ಬೊನ್ನರ್ಜಿ ಅವರು ಗರ್ಭಧರಿಸುವಾಗ ಎದುರಿಸಿದ ಸಮಸ್ಯೆಗಳನ್ನು ಈ ಹಿಂದೆ ಬಹಿರಂಗಪಡಿಸಿದ್ದರು. ಅನೇಕ ವೈದ್ಯಕೀಯ ಚಿಕಿತ್ಸೆಗಳು, ಅಕ್ಯುಪಂಕ್ಚರ್ (Acupuncture), ಹೂವಿನ ಚಿಕಿತ್ಸೆ (Flower Therapy) ಮತ್ತು ಸಹಾಯ ಪಡೆಯಲು ಜ್ಯೋತಿಷಿಗಳನ್ನು ಭೇಟಿ ಪಡೆದ ಬಗ್ಗೆ ಅವರು ಮಾತನಾಡಿದರು.

ಜ್ಯೋತಿಷ್ಯ ಮಾರ್ಗ
ಗರ್ಭಧರಿಸಲು ತಾನು ಜ್ಯೋತಿಷ್ಯದ (Astrologer) ಮಾರ್ಗವನ್ನು ಹೇಗೆ ತೆಗೆದುಕೊಂಡೆ ಎಂದು ಡೆಬಿನಾ ಮಾಹಿತಿ ಹಂಚಿಕೊಂಡಿದ್ದಾರೆ. ನಾನು ಜ್ಯೋತಿಷಿಯ ಬಳಿಗೆ ಹೋಗಿದ್ದೆ. ಆದರೆ ಅವರು ನಾನು ಗರ್ಭಿಣಿಯಾಗಲು ಸಾಧ್ಯವಿಲ್ಲ. ಅದು ನನ್ನ ಹಣೆಯಲ್ಲಿ ಬರೆದಿಲ್ಲ ಎಂದು ಹೇಳಿದರು. ಆಗ ನಾನು ಧರಿಸಿದ್ದ ಕಲ್ಲುಗಳು ನಾನು ಕೆಲಸದದತ್ತ ಹೆಚ್ಚು ಗಮನಹರಿಸುವಂತೆ ಮಾಡಿ ಗರ್ಭಿಣಿಯಾಗುವುದನ್ನು ತಡೆಯುತ್ತಿದೆ ಎಂದರು. ಮಗು ಜನಿಸಲು ನನ್ನ ದೇಹಕ್ಕೆ. ಮನಸ್ಸಿಗೆ ಸ್ವಲ್ಪ ವಿಶ್ರಾಂತಿ ಬೇಕು ಎಂದು ಅವರು ಸೂಚಿಸಿದರು. ಜ್ಯೋತಿಷಿಯು ನನಗೆ ಮಿನಿ ರುದ್ರಾಕ್ಷಗಳನ್ನು ನೀಡಿದರು ಮತ್ತು ಪ್ರತಿದಿನ ಜಪಿಸಲು ಕೆಲವು ಮಂತ್ರಗಳನ್ನು ಸೂಚಿಸಿದರು ಎಂದು ಡೆಬಿನಾ ಹೇಳಿದ್ದಾರೆ.

ಪೂಜೆಗಳ ಹಿಂದಿನ ಸತ್ಯ
ಜ್ಯೋತಿಷಿಗಳು ಪೂಜೆಯ ಮಹತ್ವದ ಬಗ್ಗೆಯೂ ಮಾಹಿತಿ ನೀಡಿದರು. ಮನೆಯಲ್ಲಿ ಪೂಜೆಯನ್ನು ನಡೆಸುವ ಮತ್ತು ಮಂತ್ರಗಳನ್ನು ಪಠಿಸುವ ಪಂಡಿತ, ಪುರೋಹಿತರು ಮಂತ್ರಗಳನ್ನು ಪಠಿಸದೆ ಮಾಡುವವರ ಬದಲಿಗೆ ಸ್ವತಃ ಅವರೇ ಅದರ ಪ್ರಯೋಜನವನ್ನು ಪಡೆಯುತ್ತಾರೆ. ಒಬ್ಬನು ತಮ್ಮ ಸ್ವಂತವಾಗಿ ಮಂತ್ರಗಳನ್ನು ಪಠಿಸಿದರೆ, ಯಾವುದೇ ದೊಡ್ಡ ಪೂಜೆ ಅಥವಾ ಪುರೋಹಿತರ ಸಹಾಯವಿಲ್ಲದೆ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಡೆಬಿನಾ ವಿವರಿಸಿದರು.

ಗರ್ಭಿಣಿಯರಿಗೆ ಏನೇನೆಲ್ಲಾ ತಿನ್ಬೇಕು ಅನಿಸೋದು ಯಾಕೆ ?

ಹಲವಾರು ವೈದ್ಯಕೀಯ ಚಿಕಿತ್ಸೆಯ ನೆರವು
ವಿಶೇಷವಾಗಿ ಎಂಡೊಮೆಟ್ರಿಯೊಸಿಸ್ ಮತ್ತು ಅಡೆನೊಮೈಯೋಸಿಸ್ ಚಿಕಿತ್ಸೆಗಳಿಗೆ ಹೋಗುವ ಮೂಲಕ ಗರ್ಭಧರಿಸುವ ಸಮಸ್ಯೆಯನ್ನು ಪರಿಹರಿಸಲು ವೈದ್ಯಕೀಯ ವೃತ್ತಿಪರರ ಸಹಾಯವನ್ನು ತೆಗೆದುಕೊಂಡಿದ್ದೇನೆ ಎಂದು ಡೆಬಿನಾ ಹಂಚಿಕೊಂಡಿದ್ದಾರೆ. ಅವರು IVF ಮತ್ತು IUI ಚಿಕಿತ್ಸೆಗಳನ್ನು ಸೂಚಿಸಿದರು ಮತ್ತು ಅದಕ್ಕಾಗಿ ಹಿಸ್ಟರೊಸ್ಕೋಪಿಯನ್ನು ತೆಗೆದುಕೊಂಡಿದ್ದಾಗಿ ಡೆಬಿನಾ ಮಾಹಿತಿ ಹಂಚಿಕೊಂಡಿದ್ದಾರೆ. 

ಧನಾತ್ಮಕವಾಗಿರಿ ಮತ್ತು ವೈದ್ಯರನ್ನು ನಂಬಿರಿ
ಇದಲ್ಲದೆ, ಡೆಬಿನಾ ಯಾವಾಗಲೂ ಧನಾತ್ಮಕವಾಗಿರುವಂತೆ (Positive) ಸಲಹೆ ನೀಡಿದ್ದಾರೆ. ಮಾತ್ರವಲ್ಲ ಚಿಕಿತ್ಸೆ ನೀಡುವ ವೈದ್ಯರ ಬಗ್ಗೆ ಯಾವಾಗಲೂ ನಂಬಿಕೆ ಇರಿಸಿಕೊಳ್ಳುವಂತೆ ಹೇಳಿದ್ದಾರೆ. ನಾನು ಸಾಧ್ಯವಾದಷ್ಟು ಧನಾತ್ಮಕವಾಗಿರಲು ಪ್ರಯತ್ನಿಸಿದೆ. ನಾನು ಪ್ರಯತ್ನಿಸುತ್ತಿರುವ ಯಾವುದಾದರೂ ಕೆಲಸ ಮಾಡುತ್ತದೆಯೇ ಅಥವಾ ಇಲ್ಲವೇ ಎಂದು ನನಗೆ ಎಂದಿಗೂ ಅನುಮಾನವಿರಲಿಲ್ಲ. ವೈದ್ಯರು ಹೇಳುವುದು ಒಳ್ಳೆಯದು ಮತ್ತು ನಾನು ಅವಳನ್ನು ನಂಬಬೇಕು. ನಾನು ಅವಳನ್ನು ಸಂಪೂರ್ಣವಾಗಿ ನಂಬಿದ್ದೇನೆ, ಎಂದು ಅವರು ಹೇಳಿದರು. 

ಅಕ್ಯುಪಂಕ್ಚರ್ ಚಿಕಿತ್ಸೆ
ಗರ್ಭಿಣಿಯಾಗಲು ನಾನು ಅಕ್ಯುಪಂಕ್ಚರ್ ಚಿಕಿತ್ಸೆಯನ್ನು ಸಹ ತೆಗೆದುಕೊಂಡಿದ್ದೇನೆ ಎಂದು ನಟಿ ಬಹಿರಂಗಪಡಿಸಿದರು. ಕಪ್ಪಿಂಗ್ ಥೆರಪಿ ಮತ್ತು ಸೂಜಿ ಥೆರಪಿಯ ಬಗ್ಗೆ ವಿವರಿಸಿದರು. ಈ ಅವಧಿಗಳಲ್ಲಿ  ವಿಪರೀತ ಒತ್ತಡ (Pressure) ಅನುಭವಿಸಿದ್ದು, ನನ್ನ ಮನಸ್ಸನ್ನು ಶಾಂತಗೊಳಿಸಲು ಅಕ್ಯುಪಂಕ್ಚರ್ ಚಿಕಿತ್ಸೆಗೆ ಒಳಪಟ್ಟೆ ಎಂದು ಡೆಬಿನಾ ಹೇಳಿದ್ದಾರೆ. ಅಕ್ಯುಪಂಕ್ಚರ್ ಎಂಬುದು ಅಂಗೈಯನ್ನು ಆಧರಿಸಿ ನೀಡುವ ಒಂದು ಚಿಕಿತ್ಸೆಯಾಗಿದೆ.

ಯೂಟ್ಯೂಬ್ ನೋಡ್ಕೊಂಡು ಅಬಾರ್ಷನ್ ಮಾಡ್ಕೊಳ್ಳೋಕೆ ಹೊರಟ ಹುಡುಗಿ..ಮುಂದೆ ಆಗಿದ್ದೇನು?

ಮನಸ್ಸಿನ ಒತ್ತಡ ಮತ್ತು ಹೂವಿನ ಚಿಕಿತ್ಸೆ
ಮನಸ್ಸಿನ ಒತ್ತಡವನ್ನು ನಿವಾರಿಸಲು ಫ್ಲವರ್ ಥೆರಪಿ ಕೂಡಾ ಪಡೆದುಕೊಂಡಿದ್ದಾಗಿ ಡೆಬಿನಾ ಹೇಳಿದ್ದಾರೆ. ಅವರ ಇತ್ತೀಚಿನ ವ್ಲಾಗ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮನಸ್ಸಿನಲ್ಲಿರುವ ಗೊಂದಲಗಳನ್ನು ಬಗೆಹರಿಸಿ ಧನಾತ್ಮಕ ಫಲಿತಾಂಶವನ್ನು ಪಡೆಯಲು ಮತ್ತು ಬಹು ಚಿಕಿತ್ಸೆಗಳೊಂದಿಗೆ ಪ್ರಭಾವವನ್ನು ಪಡೆಯಲು ಅವುಗಳನ್ನು ಜಯಿಸಬೇಕು ಎಂದು ಡೆಬಿನಾ ಹೇಳಿದರು.

ಜೀವನಶೈಲಿಯ ಮಹತ್ವ
ದಿನನಿತ್ಯದ ಜೀವನದಲ್ಲಿ ವರ್ಕ್ ಔಟ್ ಮಾಡುವ ಪ್ರಾಮುಖ್ಯತೆಯನ್ನು ಡೆಬಿನಾ ಒತ್ತಿ ಹೇಳಿದರು. ಫಿಟ್ ಆಗಿರುವುದು ಎಂಡೊಮೆಟ್ರಿಯೊಸಿಸ್‌ಗೆ ನೈಸರ್ಗಿಕ ಚಿಕಿತ್ಸೆಯಾಗಿದೆ ಎಂದು ಅವರು ಹೇಳಿದರು. ಸ್ವಚ್ಛ ಮತ್ತು ಪ್ಲಾಸ್ಟಿಕ್ ಮುಕ್ತ ಜೀವನಶೈಲಿಯನ್ನು ಹೊಂದುವುದು ಎಷ್ಟು ಮುಖ್ಯ ಎಂಬುದರ ಕುರಿತು ಡೆಬಿನಾ ಮತ್ತಷ್ಟು ಮಾತನಾಡಿದರು. ಎಲ್ಲಾ ಟೆಫ್ಲಾನ್ ಕುಕ್‌ವೇರ್‌ಗಳನ್ನು ಕಬ್ಬಿಣದ ಕುಕ್‌ವೇರ್‌ನೊಂದಿಗೆ ಬದಲಾಯಿಸಲು ಪ್ರಯತ್ನಿಸಿದೆ. ಮನೆಯನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಕ್ರಮಗಳನ್ನು ತೆಗೆದುಕೊಂಡಿದ್ದೇನೆ ಎಂದರು.

ಮೇಕಪ್ ಉತ್ಪನ್ನದಿಂದ ಹಾರ್ಮೋನ್ ವ್ಯವಸ್ಥೆಯ ಮೇಲೆ ಪರಿಣಾಮ 
ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿರುವ ಮೇಕಪ್ ಉತ್ಪನ್ನಗಳು ಸೀಸ ಮತ್ತು ಇತರ ವಿಷಗಳಿಂದ ತುಂಬಿವೆ, ಇದು ಹಾರ್ಮೋನ್ ವ್ಯವಸ್ಥೆಯ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂದು ಡೆಬಿನಾ ಬೊನ್ನರ್ಜಿ ಹೇಳಿದ್ದಾರೆ. "ಮೇಕಪ್ ಪ್ರಾಡಕ್ಟ್‌ಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಲು ಪ್ರತಿಯೊಬ್ಬರೂ ಉತ್ಪನ್ನಗಳ ಲೇಬಲ್‌ಗಳನ್ನು ಓದಬೇಕು. ಸ್ವಚ್ಛ ತ್ವಚೆ ಮತ್ತು ಮೇಕಪ್ ಉತ್ಪನ್ನಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದಿದ್ದಾರೆ.

ಒತ್ತಡ ಮುಕ್ತ ಜೀವನವನ್ನು ನಡೆಸುವ ಪ್ರಾಮುಖ್ಯತೆ
ಗರ್ಬಧಾರಣೆಯ ಸಂದರ್ಭ ದಯವಿಟ್ಟು ಮನಸ್ಸಿಗೆ ಒತ್ತಡ ಹೇರಬೇಡಿ. ಒತ್ತಡವು ಎಲ್ಲಾ ರೀತಿಯ ಸಮಸ್ಯೆಗೆ ಕಾರಣವಾಗುತ್ತದೆ.. ಯಾವಾಗಲೂ ಸಕಾರಾತ್ಮಕ ಮನೋಭಾವ ಹೊಂದಿರಿ, ನಕಾರಾತ್ಮಕತೆಯನ್ನು ಬಿಟ್ಟುಬಿಡಿ ಎಂದು ತಿಳಿಸಿದ್ದಾರೆ. ವ್ಲಾಗ್ ನಲ್ಲಿ  ನಟಿ ಡೆಬಿನಾ ಅವರು ಮಾಡಿದ ಎಲ್ಲವನ್ನೂ ಎಲ್ಲರೂ ಅನುಸರಿಸುವ ಅಗತ್ಯವಿಲ್ಲ. ಆದರೆ ಸರಿಯಾದ ವಿಷಯವೆಂದು ಭಾವಿಸುವುದನ್ನು ಅನುಸರಿಸಲು ತಪ್ಪಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

Follow Us:
Download App:
  • android
  • ios