Inspiring Story: ಇವರು ಮಗಳಿಗಾಗಿ ಚಿನ್ನ ಮಾಡಿಡಲಿಲ್ಲ, ಮಗಳನ್ನೇ ಚಿನ್ನದ ಹುಡುಗಿಯಾಗಿಸಿದರು

ಮಗಳಿಗಾಗಿ ಚಿನ್ನ ಹೂಡಿಕೆ ಮಾಡು ಎಂದು ಹಿರಿಯರು ಸಲಹೆ ನೀಡಿದರೆ, ಮಗಳನ್ನೇ ಚಿನ್ನದ ಹುಡುಗಿಯನ್ನಾಗಿ ಮಾಡುತ್ತೇನೆ ಎಂದು ಪಣತೊಟ್ಟವರು ತೆಲಂಗಾಣದ ಅಶ್ವಿನಿ ಕುಮಾರ್ ಜೈಸ್ವಾಲ್. ಪರಿಣಾಮವಾಗಿ, ಮಗಳು ನೈನಾ ಜೈಸ್ವಾಲ್ ಅತಿ ಚಿಕ್ಕ ವಯಸ್ಸಿಗೇ ಅಪಾರ ಸಾಧನೆಗಳನ್ನು ಮಾಡುತ್ತಿದ್ದಾರೆ. 
 

Naina Jiswal form Telangana is a whiz kid

ಭಾರತೀಯ ಸಮಾಜದಲ್ಲಿ ಇಂದಿಗೂ ಹೆಣ್ಣು ಹುಟ್ಟಿದರೆ ಅಂದಿನಿಂದಲೇ ಒಂದಿಲ್ಲೊಂದು ರೀತಿಯಲ್ಲಿ ಆಕೆಯ ವಿವಾಹದ (Marriage) ತಯಾರಿ ಆರಂಭವಾಗುತ್ತದೆ. ಇತ್ತೀಚೆಗೆ ಚಿತ್ರಣ (Situation) ಸ್ವಲ್ಪ ಬದಲಾಗಿದೆಯಾದರೂ ಮಧ್ಯಮ (Middle) ವರ್ಗದ ಸಮಾಜದ ಮನಸ್ಥಿತಿಯಲ್ಲಿ ಹೆಚ್ಚೇನೂ ಬದಲಾಗಿಲ್ಲ. ಹೀಗಾಗಿ, ಈ ಹೆಣ್ಣುಮಗು (Girl Child) 2000ನೇ ಇಸವಿಯಲ್ಲಿ ಜನಿಸಿದಾಗ ಈಕೆಯ ತಂದೆ ಅಶ್ವಿನಿ ಕುಮಾರ್ ಜೈಸ್ವಾಲ್ ಗೆ (Ashwini Kumar Jaiswal) “ಇಂದಿನಿಂದಲೇ ಚಿನ್ನ(Gold) ಕ್ಕಾಗಿ ಸ್ವಲ್ಪ ಹಣ ತೆಗೆದಿಡು. ಮದುವೆಗೆ ಬೇಕಾಗುತ್ತದೆ’ ಎನ್ನುವ ಸೂಚನೆ ಲಭಿಸಲು ಆರಂಭವಾಗಿತ್ತು. ಆದರೆ, ಅವರು ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಆಕೆಗಾಗಿ ಚಿನ್ನ ಹೂಡಿಕೆ ಮಾಡುವ  ಬದಲು ಆಕೆಯನ್ನೇ ಚಿನ್ನದ ಹುಡುಗಿಯನ್ನಾಗಿ ರೂಪಿಸುತ್ತೇನೆ ಎಂದರು. ತಮ್ಮ ಬದ್ಧತೆ ((Commitment), ಕಠಿಣ ಪರಿಶ್ರಮ (Hard Work)ದಿಂದ ಅವರು ಹಾಗೆಯೇ ಮಾಡಿದರು ಕೂಡ.
ಅವರು ಮಗಳು ನೈನಾ ಜೈಸ್ವಾಲ್ (Jaina Jiswal) ಇಂದು ಚಿನ್ನದ ಹುಡುಗಿಯೆನಿಸಿದ್ದಾಳೆ. ಕೇವಲ 8 ವರ್ಷ 2 ತಿಂಗಳಾಗಿದ್ದಾಗ 10ನೇ ತರಗತಿ ಪರೀಕ್ಷೆಯನ್ನು ಈಕೆ ಪಾಸು ಮಾಡಿದ್ದಾಳೆ. ಅಷ್ಟು ಚಿಕ್ಕ ವಯಸ್ಸಿಗೆ  ಪರೀಕ್ಷೆ (Exam) ಬರೆಯಲು ರಾಜ್ಯ ಎಸ್ ಎಸ್ ಸಿ ಮಂಡಳಿ ನಿರಾಕರಿಸಿದಾಗ ಕೇಂಬ್ರಿಡ್ಜ್ ವಿವಿ (Cambridge University) ನಡೆಸುವ ಸೆಕೆಂಡರಿ ಎಜುಕೇಷನ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದಳು.

2010ರಲ್ಲಿ ನೈನಾಗೆ ಕೇವಲ 10 ವರ್ಷ. ಆಗಲೇ ಆಂಧ್ರಪ್ರದೇಶ ರಾಜ್ಯ ಮಂಡಳಿಯಿಂದ ಮಾಸ್ ಕಮ್ಯೂನಿಕೇಷನ್ ನಲ್ಲಿ ಬಿಎ (BA) ಪದವಿ ಪಡೆದಳು.13ನೇ ವಯಸ್ಸಿಗೆ ಒಸ್ಮಾನಿಯಾ (Osmania) ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ(Journalism)ದಲ್ಲಿ ಪದವಿ (Graduation) ಪಡೆದಳು. ಬಳಿಕ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಳು. ಬಳಿಕ, ತನ್ನ 16ನೇ ವಯಸ್ಸಿಗೆ ಪಿಎಚ್ ಡಿಗೆ ಸೇರಿಕೊಂಡಳು. ಪ್ರಸ್ತುತ, ರಾಜಮಂಡ್ರಿ(Rajamandry)ಯಲ್ಲಿರುವ ಆದಿಕವಿ ನನ್ನಯ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಳೆ. 

ನೈನಾ ತಂದೆ ಕುಮಾರ್ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ (Table Tennis) ಆಟವಾರರಾಗಿದ್ದವರು. ಮಗಳಿಗೆ ಮೂರನೇ ವರ್ಷವಿರುವಾಗ ಟೇಬಲ್ ಟೆನ್ನಿಸ್ ಕಲಿಸಲು ಆರಂಭಿಸಿದರು. “ಸಚಿನ್ ತೆಂಡೂಲ್ಕರ್ ತಮ್ಮ ಮೂರನೇ ವಯಸ್ಸಿಗೆ ಬ್ಯಾಟ್ ಹಿಡಿದುಕೊಂಡಿದ್ದ ಚಿತ್ರ ತೋರಿಸಿ ನೈನಾಳನ್ನು ಹುರಿದುಂಬಿಸಿದ್ದೆ’ ಎಂದು ಹೇಳುತ್ತಾರೆ ಕುಮಾರ್. 

Zodiac Compatibility: ವಿವಾಹಕ್ಕೆ ನಿಮ್ಮ ರಾಶಿಗೆ ಯಾವ ರಾಶಿಗಳು ಚೆನ್ನಾಗಿ ಹೊಂದುತ್ತವೆ?

ಅಷ್ಟೇ ಅಲ್ಲ, ಮಗಳನ್ನು ಆಲ್ ರೌಂಡರ್ ಮಾಡಬೇಕೆನ್ನುವುದು ಅವರ ಆಸೆಯಾಗಿತ್ತು. ಹೀಗಾಗಿ, ಕಂಪ್ಯೂಟರ್, ಶ್ಲೋಕಗಳು, ಅಡುಗೆ ಎಲ್ಲವನ್ನೂ ಕಲಿಸಿದರು. ಅತ್ಯುತ್ತಮವಾಗಿ ಚಿತ್ರವನ್ನೂ ಬಿಡಿಸುತ್ತಾಳೆ ನೈನಾ. 
ಎಲ್ಲಕ್ಕಿಂತ ಮಿಗಿಲಾಗಿ, ಇಷ್ಟು ಚಿಕ್ಕ ವಯಸ್ಸಿಗೇ ಆಕೆ ಮೋಟಿವೇಷನಲ್ ಸ್ಪೀಕರ್ (Motivational Speaker) ಎನಿಸಿಕೊಂಡಿದ್ದಾಳೆ. ಇಂಗ್ಲಿಷ್, ಹಿಂದಿ, ತೆಲುಗು, ಉರ್ದು ಮೇಲೆ ಪ್ರಭುತ್ವ ಸಾಧಿಸಿರುವ ನೈನಾ, ಆಂಧ್ರ, ತೆಲಂಗಾಣಭ, ಮಹಾರಾಷ್ಟ್ರ, ರಾಜಸ್ಥಾನ, ಹರ್ಯಾಣ, ಉತ್ತರ ಪ್ರದೇಶದ ಹಲವೆಡೆ ಭಾಷಣ ಮಾಡಿದ್ದಾಳೆ. ಅಮೆರಿಕ, ಸಿಂಗಾಪೂರ್, ಮಸ್ಕತ್ ಹಾಗೂ ಓಮನ್ ಗಳಲ್ಲೂ “ಹೆಣ್ಣು ಮಗುವಿನ ಸಬಲೀಕರಣ’ದ ಕುರಿತು ಮಾತನ್ನಾಡಿದ್ದಾಳೆ. 

ಅವಳ ಕೇಳುಗರು ಕೇವಲ ವಿದ್ಯಾರ್ಥಿಗಳಲ್ಲ. ವಿವಿಧ ಸ್ತರದ ಜನರು ಅವಳ ಅಭಿಮಾನಿಗಳಾಗಿದ್ದಾರೆ. ಪೊಲೀಸ್ ಅಧಿಕಾರಿಗಳಿಂದ ಹಿಡಿದು, ಬ್ರಹ್ಮಕುಮಾರಿ ಸಾಧ್ವಿನಿಯರವರೆಗೆ ಆಕೆಯ ಮಾತುಗಳಿಗೆ ಬೆಲೆಯಿದೆ. ಅವಳ ಜನಪ್ರಿಯತೆಯನ್ನು ಗಮನಿಸಿ ತೆಲಂಗಾಣ ರಾಜ್ಯ ಸರ್ಕಾರ ಮೆಹಬೂಬ್ ನಗರ ಜಿಲ್ಲೆಯ ಬ್ರ್ಯಾಂಡ್ ಅಂಬಾಸಡರ್ (Brand Ambassador) ಅನ್ನಾಗಿ ಮಾಡಿಕೊಂಡಿದೆ. 

Tulsi plant Vastu: ತುಳಸಿಯಿಂದ ಸಂತೋಷ ಮನೆಗೆ ತರಲು ಹೀಗ್ಮಾಡಿ

ನೈನಾಳಿಂದ ಇಷ್ಟೆಲ್ಲ ಸಾಧನೆ ಸಾಧ್ಯವಾಗಿರುವುದು ಅವಳ ತಂದೆಯಿಂದ. ಕಳೆದ 35 ವರ್ಷಗಳಿಂದ ಶಿಕ್ಷಣ (Education) ಕ್ಷೇತ್ರದಲ್ಲಿರುವ ಕುಮಾರ್ ಪ್ರಸ್ತುತ ಶಿಕ್ಷಣ ವ್ಯವಸ್ಥೆಗೆ ಬೇಸತ್ತಿದ್ದಾರೆ. ಹೀಗಾಗಿ, ಮಗಳಿಗೆ ಮನೆಯಲ್ಲೇ ಶಿಕ್ಷಣ ನೀಡಿದ್ದಾರೆ. ಆಕೆಯ ತಮ್ಮ ಅಗಸ್ತ್ಯ ಕೂಡ ಶಾಲೆಯ ಮೆಟ್ಟಿಲು ಹತ್ತಿಲ್ಲ. 

Latest Videos
Follow Us:
Download App:
  • android
  • ios