Asianet Suvarna News Asianet Suvarna News

Tulsi plant Vastu: ತುಳಸಿಯಿಂದ ಸಂತೋಷ ಮನೆಗೆ ತರಲು ಹೀಗ್ಮಾಡಿ

ತುಳಸಿ ಹಿಂದೂಗಳಿಗೆ ಬಹಳ ಪವಿತ್ರವಾದ ಸಸ್ಯವಾಗಿದೆ. ಇದನ್ನು ಮನೆಯ ಯಾವ ದಿಕ್ಕಿನಲ್ಲಿಟ್ಟರೆ ಲಾಭ ಹೆಚ್ಚುತ್ತದೆ ಗೊತ್ತೇ?

Tulsi plant Vastu Shastra tips for your home skr
Author
Bangalore, First Published Feb 6, 2022, 4:40 PM IST | Last Updated Feb 6, 2022, 4:40 PM IST

ತುಳಸಿ(Basil) ಗಿಡವು ತನ್ನ ಔಷಧೀಯ ಗುಣಗಳಿಗಾಗಿ ಹೆಸರಾಗಿದೆ. ಕೆಮ್ಮು, ಶೀತಕ್ಕೆ ಉತ್ತಮ ಮನೆಮದ್ದು ತುಳಸಿ. ಸಾಮಾನ್ಯವಾಗಿ ಬಹುತೇಕ ಹಿಂದೂ ಮನೆಗಳಲ್ಲಿ ಎದುರಿನ ಅಂಗಳದಲ್ಲಿ ತುಳಸಿ ಗಿಡವಿರುತ್ತದೆ. ಅದಕ್ಕೆ ವಿಶೇಷವಾಗಿ ಕಟ್ಟೆ ಕಟ್ಟಲಾಗಿರುತ್ತದೆ. ಇದಕ್ಕೆ ಕಾರಣ, ತುಳಸಿಯನ್ನು ಹಿಂದೂಗಳು ದೇವರೆಂದು ಪೂಜಿಸುವುದು. ಇದಿಷ್ಟೇ ಅಲ್ಲದೆ, ವಾಸ್ತುಶಾಸ್ತ್ರ ಕೂಡಾ ತುಳಸಿಯನ್ನು ಮನೆಗಳಲ್ಲಿ ಬೆಳೆಸಲು ಸಲಹೆ ನೀಡುತ್ತದೆ. ಏಕೆಂದರೆ, ವಾಸ್ತು ಪ್ರಕಾರ, ತುಳಸಿಯು ಮನೆಗೆ ಸಂತೋಷ(happiness)ವನ್ನು ತರುತ್ತದೆ. 
ಧನಾತ್ಮಕತೆ ಆಕರ್ಷಿಸಲು ತುಳಸಿಯನ್ನು ಎಲ್ಲಿಡಬೇಕು? ಹೇಗಿಡಬೇಕು? ಯಾವ ದಿಕ್ಕು ಉತ್ತಮ ನೋಡೋಣ. 

ತುಳಸಿಯ ಲಾಭಗಳು

  • ತುಳಸಿಯಲ್ಲಿ ಔಷಧೀಯ ಗುಣಗಳಿರುವುದು ಗೊತ್ತೇ ಇದೆ. ಅದರ ಹೊರತಾಗಿ ತುಳಸಿಯು ಮನೆಯಲ್ಲಿದ್ದರೆ ಒತ್ತಡ(stress) ನಿವಾರಿಸುತ್ತದೆ. 
  • ಸಸ್ಯವು ಸೊಳ್ಳೆಗಳನ್ನು ದೂರವಿರಿಸುತ್ತದೆ.
  • ಈ ಗಿಡ ಮನೆಯಲ್ಲಿದ್ದಾಗ ಒಳಗೆ ಆಡುವ ಗಾಳಿಯನ್ನು ಶುದ್ಧ ಮಾಡುತ್ತದೆ. ಇದು ಸಲ್ಫರ್ ಡೈ ಆಕ್ಸೈಡ್, ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮೋನಾಕ್ಸೈಡ್‌ನಂಥ ವಿಷಕಾರಿ ಅನಿಲ(toxic gases)ಗಳನ್ನು ಬೇರ್ಪಡಿಸಿ ಸ್ವಚ್ಛ ಗಾಳಿಯನ್ನು ಉಸಿರಾಡಲು ನೀಡುತ್ತದೆ. 
  • ತುಳಸಿ ಗಿಡದ ಪರಿಮಳವು ತಾಜಾತನವನ್ನುಂಟು ಮಾಡುತ್ತದೆ. 

ತುಳಸಿಯಲ್ಲೆರಡು ವಿಧ!
ತುಳಸಿ ಗಿಡದಲ್ಲಿ ಎರಡು ಬಗೆಯಿವೆ- ರಾಮ ತುಳಸಿ ಹಾಗೂ ಕೃಷ್ಣ ತುಳಸಿ. ರಾಮ ತುಳಸಿ ಹೆಚ್ಚು ಹಸಿರು ಬಣ್ಣದ ಎಲೆಗಳನ್ನು ಹೊಂದಿದ್ದರೆ ಕೃಷ್ಣ ತುಳಸಿಯು ಕೊಂಚ ಕಪ್ಪಾದ ಎಲೆಗಳನ್ನು ಹೊಂದಿರುತ್ತದೆ. ಹಸಿರು ಎಲೆಯ ತುಳಸಿಗೆ ಶ್ರೀ ತುಳಸಿ, ಅದೃಷ್ಟದ ತುಳಸಿ ಎಂಬ ಹೆಸರುಗಳೂ ಇವೆ. ಇದರ ಎಲೆ ಉಳಿದ ತುಳಸಿ ಜಾತಿಗಳಿಗೆ ಹೋಲಿಸಿದರೆ ಕೊಂಚ ಸಿಹಿಯಾಗಿರುತ್ತದೆ. ಇನ್ನು ಕೃಷ್ಣ ತುಳಸಿಗೆ ತನ್ನ ಬಣ್ಣದಿಂದಾಗಿ ಶ್ಯಾಮ ತುಳಸಿ, ಕಪ್ಪು ತುಳಸಿ ಎಂಬ ಹೆಸರುಗಳಿವೆ. ಇದು ಗಂಟಲ ಇನ್ಫೆಕ್ಷನ್, ಚರ್ಮ ಕಾಯಿಲೆಗಳು, ಕಿವಿನೋವು, ಉಸಿರಾಟ ಸಮಸ್ಯೆಗಳಿಗೆ ಔಷಧಿಯಾಗಿ ಹೆಚ್ಚು ಬಳಕೆಯಾಗುತ್ತದೆ. 
ಇವೆರಡೂ ಗಿಡಗಳೂ ಒಳ್ಳೆಯವೇ. ಆದರೆ, ಕೃಷ್ಣನಿಗೆ ತುಳಸಿ ಬಲು ಇಷ್ಟವಾದ ಕಾರಣ ಕೃಷ್ಣ ತುಳಸಿ ಹೆಚ್ಚು ಜನಪ್ರಿಯತೆ ಪಡೆದಿದೆ. ಇನ್ನೂ ಒಂದು ತುಳಸಿಯ ವಿಧವಿದೆ. ಅದನ್ನು ಕಾಡು ತುಳಸಿ ಅಥವಾ ವನ ತುಳಸಿ ಇಲ್ಲವೇ ಕಪೂರ್ ತುಳಸಿ ಎನ್ನಲಾಗುತ್ತದೆ. 

Zodiac Compatibility: ವಿವಾಹಕ್ಕೆ ನಿಮ್ಮ ರಾಶಿಗೆ ಯಾವ ರಾಶಿಗಳು ಚೆನ್ನಾಗಿ ಹೊಂದುತ್ತವೆ?

ತುಳಸಿ ಗಿಡ ಎಲ್ಲಿರಬೇಕು?

  • ವಾಸ್ತು ಪ್ರಕಾರ, ತುಳಸಿ ಗಿಡವನ್ನು ಇಡಲು ಅತ್ಯುತ್ತಮ ದಿಕ್ಕೆಂದರೆ ಪೂರ್ವ(east). ಉತ್ತರ ಅಥವಾ ಪೂರ್ವ ದಿಕ್ಕಿನ ಬಾಲ್ಕನಿ ಇಲ್ಲವೇ ಕಿಟಕಿಯ ಬಳಿ ತುಳಸಿಯನ್ನಿಡಬಹುದು. ಮನೆ ಎದುರಿನ ಅಂಗಳವೂ ಪ್ರಶಸ್ತ ಸ್ಥಳ. ಗಿಡಕ್ಕೆ ಸೂರ್ಯನ ಬೆಳಕು(sunlight) ಚೆನ್ನಾಗಿ ಬೀಳುತ್ತಿದೆ ಎಂದು ಖಚಿತಪಡಿಸಿಕೊಳ್ಳಿ. 
  • ಯಾವಾಗಲೂ ಬೆಸ ಸಂಖ್ಯೆಯ ತುಳಸಿ ಗಿಡಗಳನ್ನೇ ಬೆಳೆಸಬೇಕು. ಅಂದರೆ, ಒಂದು, ಮೂರು, ಐದು ಹೀಗೆ- ಇಷ್ಟು ಸಂಖ್ಯೆಯ ತುಳಸಿಯನ್ನು ಮನೆಯಲ್ಲಿ ಬೆಳೆಸಬಹುದು. 
  • ತುಳಸಿ ಗಿಡದ ಸುತ್ತಮುತ್ತ ಹತ್ತಿರದಲ್ಲಿ ಪೊರಕೆ, ಚಪ್ಪಲಿ, ಕಸದ ಬುಟ್ಟಿಗಳನ್ನು ಇಡಬಾರದು. 
  • ತುಳಸಿ ಗಿಡದ ಸುತ್ತ ಸದಾ ಸ್ವಚ್ಛವಾಗಿರಬೇಕು. 
  • ಗಿಡದ ಪಕ್ಕದಲ್ಲಿ ಹೂವು ಬಿಡುವ ಬೇರೆ ಗಿಡಗಳನ್ನಿಡಬಹುದು. 
  • ಒಣಗಿದ ಗಿಡಗಳು ಕೇವಲ ತುಳಸಿಯ ಪಕ್ಕವಲ್ಲ, ಮನೆಯ ಎಲ್ಲಿಯೂ ಇರಬಾರದು. ಅವು ನೆಗೆಟಿವ್ ಎನರ್ಜಿಯನ್ನು ಆಕರ್ಷಿಸುತ್ತವೆ. 

ತುಳಸಿಯನ್ನು ಮನೆಯಲ್ಲಿ ನೆಡಲು ಪ್ರಶಸ್ತ ದಿನ
ಹಿಂದೂಗಳ ನಂಬಿಕೆಯ ಪ್ರಕಾರ, ತುಳಸಿಯನ್ನು ಕಾರ್ತೀಕ ಮಾಸದಲ್ಲಿ ಗುರುವಾರದ ದಿನ ಮನೆಯಲ್ಲಿ ತಂದು ನೆಡಬೇಕು. 

Bedroom Vastu : ಹಾಸಿಗೆಯಲ್ಲಿ ಕುಳಿತು ತಿನ್ನುತ್ತೀರಾ? ಇದರಿಂದಲೇ ಹಣ ಕೈಲಿ ನಿಲ್ಲುತ್ತಿಲ್ಲ!
 
ತುಳಸಿ ಪೂಜಿಸುವುದು ಹೇಗೆ?

  • ವಾಸ್ತು ಪ್ರಕಾರ, ತುಳಸಿಯನ್ನು ಪೂಜಿಸುವಾಗ ಈ ವಿಷಯಗಳಿಗೆ ಗಮನ ಹರಿಸಿ. 
  • ಸಸ್ಯದ ಪಕ್ಕ ದೀಪ ಹಚ್ಚಿ.
  • ಕಲಶದಿಂದ ಸಸ್ಯಕ್ಕೆ ನೀರು ಹಾಕಿ. ಎರಡೂ ಕೈಲಿ ಕಲಶ ಹಿಡಿಯಬೇಕು. 
  • ಕುಂಕುಮ, ಹಳದಿ, ಹೂವುಗಳು ಹಾಗೂ ಅಗರಬತ್ತಿ ಬಳಸಿ ಪೂಜಿಸಬೇಕು. 
  • ಶ್ಲೋಕ ಹೇಳಿಕೊಳ್ಳುತ್ತ ಸಸ್ಯಕ್ಕೆ ಸತ್ತು ಬರಬೇಕು. 
     
Latest Videos
Follow Us:
Download App:
  • android
  • ios