ಅಮ್ಮನ ಬೋಲ್ಡ್‌ನೆಸ್ ಶಾಪವಾಯ್ತು, ಮಕ್ಕಳಿಗೆ ಶಾಲೆಯಿಂದಲೇ ಗೇಟ್‌ಪಾಸ್
ಮಕ್ಕಳನ್ನು ಶಾಲೆಗೆ ಕಳುಹಿಸಿದ ಮೇಲೆ ಅಲ್ಲಿನ ನಿಯಮ ಮೀರುವಂತಿಲ್ಲ. ಶಾಲೆಯ ಎಲ್ಲ ರೂಲ್ಸ್ ಪಾಲಕರು ಫಾಲೋ ಮಾಡ್ಬೇಕು. ಅದನ್ನು ಮೀರಿದ್ರೆ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುತ್ತೆ. ಅಮೆಇರಕಾದಲ್ಲಿ ತಾಯಿಯೊಬ್ಬಳ ಕೆಲಸ ಮಕ್ಕಳಿಗೆ ಹೊರೆಯಾಗಿದೆ.
ಶಾಲೆಗಳಲ್ಲಿ ಒಂದಿಷ್ಟು ನಿಯಮಗಳಿರುತ್ತವೆ. ಮಕ್ಕಳು ಮಾತ್ರವಲ್ಲದೆ ಪಾಲಕರು ಆ ನಿಯಮಗಳನ್ನು ಪಾಲಿಸಬೇಕು. ಶಾಲೆಗೆ ಮಕ್ಕಳನ್ನು ಬಿಡುವಾಗ ಮತ್ತು ಕರೆದುಕೊಂಡು ಹೋಗುವಾಗ ಮಾತ್ರವಲ್ಲದೆ ಪೇರೆಂಟ್ಸ್ – ಟೀಚರ್ ಮೀಟಿಂಗ್ ನಲ್ಲಿ ಕೂಡ ಪಾಲಕರು ಹೇಗೆ ಬರಬೇಕೆಂದು ಕೆಲ ಶಾಲೆಗಳು ನಿಯಮವನ್ನು ಮಾಡುತ್ತವೆ. ಆ ನಿಯಮಗಳನ್ನು ಮೀರಿದಾಗ ಪಾಲಕರಿಗೆ ಶಾಲೆಯ ಸಿಬ್ಬಂದಿ ವಾರ್ನಿಂಗ್ ಮಾಡುತ್ತಾರೆ. ನಿಯಮ ಪಾಲನೆ ಮಾಡುವಂತೆ ಸೂಚಿಸುತ್ತಾರೆ. ಆದ್ರೆ ಇಲ್ಲೊಂದು ಶಾಲೆ, ಮಕ್ಕಳನ್ನು ಸ್ಕೂಲಿನಿಂದ ತೆಗೆದು ಹಾಕಿದೆ. ಅಮ್ಮ ಮಾಡಿದ ತಪ್ಪಿಗೆ ಮಗು ಶಿಕ್ಷೆ ಅನುಭವಿಸುವಂತಾಗಿದೆ. ಅಮ್ಮನ ಡ್ರೆಸ್, ಫ್ಯಾಷನ್ ಅಥವಾ ಅವಳ ಮಾತು ಇದಕ್ಕೆ ಕಾರಣವಾಗಿಲ್ಲ. ಬದಲಾಗಿ ಅಮ್ಮನ ಕಾರಿನ ಮೇಲಿರುವ ಸ್ಟಿಕ್ಕರ್, ಮಕ್ಕಳನ್ನು ಶಾಲೆಯಿಂದ ಹೊರಗೆ ಹಾಕಲು ಕಾರಣವಾಗಿದೆ.
ಅಮ್ಮನ ಕಾರಿನ ಮೇಲಿರೋ ಸ್ಟಿಕ್ಕರ್ (Sticker) ಏನು? : ಘಟನೆ ಅಮೆರಿಕದ ಫ್ಲೋರಿಡಾ (Florida)ದಲ್ಲಿ ನಡೆದಿದೆ. 35 ವರ್ಷದ ಮಿಚೆಲ್ ಕ್ಲೈನ್ ಮಗುವಿನ ಅಮ್ಮ. ಮಿಚೆಲ್ ಕ್ಲೈನ್, ಓನ್ಲಿ ಫ್ಯಾನ್ಸ್ (Only fans) ವೆಬ್ಸೈಟ್ ಗೆ ಕೆಲಸ ಮಾಡ್ತಾಳೆ. ಓನಿ ಫ್ಯಾನ್ಸ್ ವಯಸ್ಕರ ವೆಬ್ ಸೈಟ್ ಆಗಿದೆ. ಮಿಚೆಲ್, ಓನಿ ಫ್ಯಾನ್ಸ್ ವೆಬ್ ಸೈಟ್ ಪ್ರಚಾರವನ್ನು ಕಾರಿನ ಮೂಲಕ ಮಾಡ್ತಿದ್ದಾಳೆ. ಆಕೆ ಕಾರಿನ ಮೇಲೆ ಸ್ಟಿಕ್ಕರ್ ಹಾಕಿದ್ದಾಳೆ.
ಸರ್ಜನ್‍ನಿಂದ ಐಎಎಸ್ ಅಧಿಕಾರಿವರೆಗೆ; ರೂಪದಲ್ಲೂ, ವಿದ್ಯೆಯಲ್ಲೂ ಸರಸ್ವತಿ ಈ ರೇಣು
ಮಿಚೆಲ್ ಅವರ ಮಕ್ಕಳು ಕ್ರಿಶ್ಚಿಯನ್ ಶಾಲೆಯಲ್ಲಿ ಓದುತ್ತಿದ್ದಾರೆ. ಮಿಚೆಲ್ ಗೆ ಮೊದಲೇ ಶಾಲೆ ವಾರ್ನಿಂಗ್ ಮಾಡಿತ್ತು. ಈ ಕಾರಿನಲ್ಲಿ ಮಕ್ಕಳನ್ನು ತರಬಾರದು ಎಂದಿತ್ತು. ಆದ್ರೆ ಮಿಚೆಲ್, ಇದೇ ಕಾರಿನಲ್ಲಿ ಮಕ್ಕಳನ್ನು ಕಳುಹಿಸುತ್ತಿದ್ದಳು. ಶಾಲೆ ಮಾತ್ರವಲ್ಲದೆ ಶಾಲೆಯ ಇತರ ಮಕ್ಕಳ ಪಾಲಕರು, ಮಿಚೆಲ್ ಕ್ರಮವನ್ನು ವಿರೋಧಿಸಿದ್ದಾರೆ. ಅಶ್ಲೀಲ ವೆಬ್ ಸೈಟ್ ಪ್ರಚಾರ ಮಾಡ್ತಿದ್ದಾರೆ ಮಿಚೆಲ್ ಎಂದು ಶಾಲೆಯವರು ಆರೋಪಿಸಿದ್ದಾರೆ. ಅಲ್ಲದೆ ಮಿಚೆಲ್ ಮಕ್ಕಳನ್ನು ಶಾಲೆಯಿಂದ ಹೊರಗೆ ಹಾಕಿದೆ. ಮಿಚೆಲ್ ಹಾಗೂ ಆಕೆ ಪತಿಗೆ ಶಾಲೆ ಒಂದು ನೊಟೀಸ್ ನೀಡಿದೆ. ಮಕ್ಕಳನ್ನು ಶಾಲೆಯಿಂದ ಹೊರಗೆ ಹಾಕಲು ಕಾರಿನಲ್ಲಿರುವ ಸ್ಟಿಕ್ಕರ್ ಕಾರಣ. ಸ್ಟಿಕ್ಕರ್ ಶಾಲೆಯ ನಿಯಮಕ್ಕೆ ವಿರುದ್ಧವಾಗಿದೆ ಎಂದು ಬರೆಯಲಾಗಿದೆ. ಕಾರಿನ ಮೇಲಿರುವ ಈ ಸ್ಟಿಕ್ಕರ್ ತೆಗೆದು ಹಾಕಿ ಇಲ್ಲವೆ ಕಾರನ್ನು ಶಾಲೆಯಿಂದ ಬಹುದೂರ ಪಾರ್ಕ್ ಮಾಡಿ ಎಂದು ಶಾಲೆ ಆಡಳಿತ ಮಂಡಳಿ ಹೇಳಿದೆ. ಆದ್ರೆ ಮಿಚೆಲ್ ಶಾಲೆ ಆಡಳಿತ ಮಂಡಳಿ ಮಾತು ಕೇಳುವ ಬದಲು, ಕಾರಿಗೆ ದೊಡ್ಡ ಸ್ಟಿಕ್ಕರ್ ಹಾಕಿದ್ದಾಳೆ.
ಖಂಡಿತವಾಗಿಯೂ ಇದು ವಯಸ್ಕರ ವಿಷಯವಾಗಿದೆ. ನನ್ನ ಪತಿ ಮತ್ತು ನಾನು ಮುಚ್ಚಿದ ಬಾಗಿಲುಗಳ ಹಿಂದೆ ವೈಲ್ಡ್ ಲೈಫ್ ಜೀವನ (Wild Life) ನಡೆಸುತ್ತೇವೆ. ನಾವು ಅದನ್ನು ಜನರೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿದ್ದೇವೆ. ಅದೇ ಕಾರಣಕ್ಕೆ ಈ ವೆಬ್ ಸೈಟ್ (Website) ಪ್ರಚಾರ ಮಾಡುತ್ತಿದ್ದೇವೆ ಎಂದು ಮಿಚೆಲ್ ಹೇಳಿದ್ದಾಳೆ. ಓನ್ಲಿ ಫ್ಯಾನ್ಸ್ ವೆಬ್ಸೈಟ್ ನಲ್ಲಿ ಮಿಚೆಲ್, ಪೈಪರ್ ಫೋನ್ ಎಂದು ತನ್ನ ಹೆಸರಿಟ್ಟುಕೊಂಡಿದ್ದಾಳೆ.
ಕಾರಿನ ಸ್ಟಿಕ್ಕರ್ ತೆಗೆದು, ಮಕ್ಕಳನ್ನು ಶಾಲೆಗೆ ಸೇರಿಸಬಹುದಲ್ಲ ಎಂಬ ಪ್ರಶ್ನೆಗೆ ಮಿಚೆಲ್ ನಿರಾಕರಿಸಿದ್ದಾಳೆ. ಈ ಸ್ಟಿಕ್ಕರ್ ನಮಗೆ ಆದಾಯ ತಂದುಕೊಡ್ತಿದೆ. ಇದರಿಂದಲೇ ನಮ್ಮ ಕುಟುಂಬ ನಡೆಯುತ್ತಿದೆ ಎಂದು ಮಿಚೆಲ್ ಹೇಳಿದ್ದಾಳೆ. ಅಲ್ಲದೆ ತಾನು ಕಾನೂನುಬದ್ಧವಾಗಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾಳೆ.
ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೊಟ್ಟ ಸಮಂತಾ.. ನಾನೇನು ಖಾಲಿ ಇಲ್ಲ.. ಎನ್ನುತ್ತಲೇ ಗುಟ್ಟು ಬಿಚ್ಚಿಟ್ಟರು
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸ್ಕೂಲ್ ಆಡಳಿತ ಮಂಡಳಿ, ಮಿಚೆಲ್, ಶಾಲೆಯ ನಿಯಮಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಅವರು ಸ್ಟಿಕ್ಕರ್ ತೆಗೆದ್ರೆ ನಾವು ಮಕ್ಕಳನ್ನು ವಾಪಸ್ ಶಾಲೆಗೆ ಸೇರಿಸಿಕೊಳ್ಳುವ ಬಗ್ಗೆ ಆಲೋಚನೆ ಮಾಡುತ್ತೇವೆ ಎಂದಿದೆ.