ಕುಂಭಮೇಳದ ವೈರಲ್ ಗರ್ಲ್ ಮೊನಾಲಿಸಾ, ಟಿಸಿಎಸ್ ಉದ್ಯೋಗಿ ನಿದಾ ಖಾನ್ ಮತ್ತು ಸಿಎಎ ಪ್ರತಿಭಟನಾಕಾರ ಸಫೂರಾ ಜರ್ಗರ್ ಪ್ರಕರಣಗಳಲ್ಲಿ ಒಂದು ಸಾಮಾನ್ಯ ಅಂಶವೆಂದರೆ ವಿವಾದದ ಸಮಯದಲ್ಲಿ ಗರ್ಭಿಣಿ ಎಂದು ಹೇಳಿಕೊಳ್ಳುವುದು. ಬಂಧನದಿಂದ ತಪ್ಪಿಸಿಕೊಳ್ಳಲು ಅಥವಾ ಕಾನೂನಿನಡಿ ವಿನಾಯಿತಿ ಪಡೆಯಲು ಗರ್ಭಧಾರಣೆಯನ್ನು ಒಂದು ತಂತ್ರವಾಗಿ ಬಳಸಲಾಗುತ್ತಿದೆಯೇ ಎಂಬ ಚರ್ಚೆಯನ್ನು ಈ ಲೇಖನವು ಹುಟ್ಟುಹಾಕಿದೆ.

ಈಚೆಗಷ್ಟೇ ಮದುವೆಯಾಗಿದ್ದ ಕುಂಭಮೇಳದ ವೈರಲ್​ ಗರ್ಲ್​ ಮೊನಾಲಿಸಾಳ ಲವ್​ ಜಿಹಾದ್​ ಗಲಾಟೆ ಇನ್ನೂ ಬಿಸಿಬಿಸಿ ಇರುವಾಗಲೇ ಆಕೆ ಗರ್ಭ ಧರಿಸಿರುವುದಾಗಿ ಹೇಳಿಕೊಂಡಿದ್ದಾರೆ. ಮೊನಾಲಿಸಾಗೆ ಇನ್ನೂ 18 ತುಂಬಿಲ್ಲದ ಹಿನ್ನೆಲೆಯಲ್ಲಿ, ಪತಿ ಫರ್ಮಾನ್​ ಖಾನ್​ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಕೇಸ್​ ದಾಖಲಾಗಿದೆ. ಇದರ ನಡುವೆಯೆ ಮಾರ್ಚ್​ 11ಕ್ಕೆ ಮದುವೆಯಾಗಿದ್ದ ಮೊನಾಲಿಸಾ ಗರ್ಭಿಣಿ ಎನ್ನುವ ಸುದ್ದಿ ಇದೀಗ ಬಂದಿದೆ. ಅಷ್ಟಕ್ಕೂ ಇದಾಗಲೇ ಈ ಜೋಡಿ ತಮ್ಮದು ಲವ್​ ಜಿಹಾದ್​ ಅಲ್ಲ, ಪ್ರೀತಿಸಿ ಮದುವೆಯಾಗಿರುವುದಾಗಿ ಹೇಳಿದೆ. ನಾನೇ ಪ್ರಪೋಸ್​ ಮಾಡಿದ್ದು ಎಂದು ಮೊನಾಲಿಸಾ ಕೂಡ ಸ್ಪಷ್ಟಪಡಿಸಿದ್ದಾಳೆ. ಆದರೆ ಸದ್ದು ಆಗ್ತಿರೋ ಸುದ್ದಿಗಳೇ ಬೇರೆ. ಸೆಲೆಬ್ರಿಟಿ ಆದವರನ್ನು ಮದುವೆಯಾಗಿ, ಅವರನ್ನು ರಾಣಿಯ ರೀತಿ ನೋಡಿಕೊಂಡು ಅವರನ್ನು ಉದಾಹರಣೆಯಾಗಿಸಿಕೊಂಡು ಸಾಮಾನ್ಯ ಮನೆಯ ಹೆಣ್ಣುಮಕ್ಕಳನ್ನು ಮತಾಂತರಕ್ಕೆ ಪ್ರೇರೇಪಿಸುವ ದೊಡ್ಡ ಜಾಲವಿದು ಎನ್ನುವ ಗಂಭೀರ ಆರೋಪಗಳೂ ಕೇಳಿ ಬರುತ್ತಿವೆ. ಆರೋಪಗಳು ಇದ್ದದ್ದೇ ಇರಲಿ ಬಿಡಿ.

Add Asianetnews Kannada as a Preferred SourcegooglePreferred

ದೇಶವನ್ನೇ ಬೆಚ್ಚಿಬೀಳಿಸಿರೋ ಟಿಸಿಎಸ್ ಕಂಪೆನಿ ಜಿಹಾದ್​

ಮೊನಾಲಿಸಾ ಗರ್ಭಿಣಿ ಎನ್ನುವ ಮುಂದೆ ಟಿಸಿಎಸ್​ ಕಂಪೆನಿಯಲ್ಲಿ ಕಾರ್ಪೊರೇಟ್ ಜಿಹಾದ್​ನಲ್ಲಿ ಇಡೀ ಭಾರತವನ್ನೇ ಬೆಚ್ಚಿಬೀಳಿಸಿದಾಕೆ ನಿದಾ ಖಾನ್​. ತನ್ನ ಕಚೇರಿಯಲ್ಲಿ ಇರುವ ಹಿಂದೂ ಹೆಣ್ಣುಮಕ್ಕಳನ್ನು ನಡೆಸಿಕೊಳ್ಳುತ್ತಿದ್ದ ರೀತಿ, ಮತಾಂತರಕ್ಕೆ ಯತ್ನ... ಹೀಗೆ ಒಂದೊಂದಾಗಿ ಇವಳ ಬಗ್ಗೆ ಬರುತ್ತಿರುವ ಸುದ್ದಿಗಳನ್ನು ನೋಡಿದರೆ, ನಿಜಕ್ಕೂ ಹೀಗೆಲ್ಲಾ ಆಗ್ತಿರೋ ಹೌದಾ ಎನ್ನುವ ಸಂದೇಹ ಬರುತ್ತಿದೆ. ಇಂಥ ಅದೆಷ್ಟು ಕಂಪೆನಿಗಳಲ್ಲಿ ಸದ್ದಿಲ್ಲದೇ ಇಂಥ ವ್ಯವಹಾರ ನಡೆಯುತ್ತಿರಬಹುದು ಎಂದು ಊಹಿಸಿಕೊಂಡು ಬೆಚ್ಚುಬೀಳುತ್ತಿದ್ದಾರೆ ಹಿಂದೂಗಳು. ತಮ್ಮ ಮಕ್ಕಳನ್ನು ಅದರಲ್ಲಿಯೂ ಹೆಚ್ಚಾಗಿ ಹೆಣ್ಣುಮಕ್ಕಳನ್ನು ಕಾರ್ಪೋರೆಟ್​ ಸಂಸ್ಥೆಗಳಿಗೆ ಕಳುಹಿಸಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಹಿಂದೂ ಹೆಣ್ಣುಮಕ್ಕಳು ನಿಜಕ್ಕೂ ಅಷ್ಟೂ ಅಮಾಯಕರೇ, ಅವರಿಗೆ ಏನೂ ಅರ್ಥವೇ ಆಗಲ್ವೆ ಅಥವಾ ಅವರ ಮೇಲೆ ಏನಾದ್ರೂ ಪ್ರಯೋಗ ಮಾಡಲಾಗುತ್ತಿದೆಯೇ ಎಂಬೆಲ್ಲಾ ಚರ್ಚೆಗಳು ನಡೆಯುತ್ತಿವೆ. ಆದರೆ ಎಸ್ಕೇಪ್ ಆಗಿರೋ ಕಿಂಗ್​ಪಿನ್​ ನಿದಾ ಖಾನ್​ ತಾನು ಗರ್ಭಿಣಿ ಎಂದು ಹೇಳಿಕೊಂಡಿದ್ದಾಳೆ.

ಸಿಎಎ ಪ್ರತಿಭಟನೆ ವೇಳೆ ಆಗಿದ್ದೂ ಇದೆ...

ಇದಕ್ಕೂ ಸ್ವಲ್ಪ ಹಿಂದಕ್ಕೆ ಹೋದರೆ, ಭಾರತದ ಒಳಗೆ ಹೊರಕ್ಕಿರುವ ನುಸುಳುಕೋರರನ್ನು ವಾಪಸ್​ ಕಳುಹಿಸಿಲು, ಭಾರತೀಯರಿಗೆ ಮಾತ್ರ ಮನ್ನಣೆ ನೀಡಲು ಕೇಂದ್ರ ಸರ್ಕಾರ ಏಪ್ರಿಲ್ 2020 ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ತರಲು ಮುಂದಾದಾಗ ಇದರ ವಿರುದ್ಧ ವಿಚಿತ್ರ ಎನ್ನುವಷ್ಟರಮಟ್ಟಿಗೆ ಪ್ರತಿಭಟನೆ ನಡೆಯಿತು. ಇದರ ಹಿಂದಿರುವ ಶಕ್ತಿಯಾವುದು, ಈ ಪ್ರತಿಭಟನೆಗೆ ಫಂಡಿಂಗ್​ ಎಲ್ಲಿಂದ ಆಗುತ್ತಿದೆ, ಇದರ ಹಿಂದಿನ ಉದ್ದೇಶ ಏನು ಎನ್ನುವ ಬಗ್ಗೆ ಆಗ ಸಾಕಷ್ಟು ಚರ್ಚೆಯಾಗಿತ್ತು. ಈ ಪ್ರತಿಭಟನೆಯ ಮುಂದಾಳತ್ವದಲ್ಲಿ ಹೆಚ್ಚುಕೇಳಿಬಂದ ಹೆಸರು ಸಫೂರಾ ಜರ್ಗರ್. ಈಕೆಯ ಬಂಧನ ಮಾಡುವ ಸಮಯದಲ್ಲಿ ತಾನು ಗರ್ಭಿಣಿ ಎಂದು ಹೇಳಿಕೊಂಡಿದ್ದಳು. ಆದರೂ ಆಕೆಯ ಬಂಧನವಾಗಿತ್ತು. ಗರ್ಭಿಣಿಯೆಂದು ಹೇಳಿಕೊಳ್ಳುವ ಮೊದಲು ಈಕೆ ಇಡೀ ಪ್ರತಿಭಟನೆಯ ಮುಂದಾಳತ್ವ ವಹಿಸಿ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದಳು.

ಏನಿದು ಪ್ರೆಗ್ನೆನ್ಸಿ ಗುಟ್ಟು?

ಇದೀಗ ಮೊನಾಲಿಸಾ ಗರ್ಭಿಣಿ ಹಾಗೂ ಪತಿಯ ಅರೆಸ್ಟ್​ ಸಾಧ್ಯತೆ ಬೆನ್ನಲ್ಲೇ ಇವೆಲ್ಲಾ ಪ್ರಕರಣಗಳು ತೆರೆದುಕೊಳ್ಳುತ್ತಿವೆ. ಏನಿದು ಪ್ರೆಗ್ನೆನ್ಸಿ ಗುಟ್ಟು ಎನ್ನುವ ಬಗ್ಗೆ ವಿಭಿನ್ನ ರೀತಿಯಲ್ಲಿ ಚರ್ಚೆಗಳು ಶುರುವಾಗಿದೆ. ಮೊನಾಲಿಸಾ ಗರ್ಭಿಣಿದ್ದೇ ಹೌದಾದರೆ ಗಂಡನ ಮೇಲೆ ಪೋಕ್ಸೋ ಕೇಸ್​ ಹೊರಟುಹೋಗಬಹುದು, ನಿದಾ ಖಾನ್​ ಗರ್ಭಿಣಿಯಾಗಿದ್ದೇ ನಿಜವಾದರೆ ಅರೆಸ್ಟ್​ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಹುಟ್ಟುವ ಮಗುವಿಗಾಗಿ ಕಾನೂನಿನ ಅಡಿ ಒಂದಿಷ್ಟು ರಿಲ್ಯಾಕ್ಸೇಷನ್​ ಇರುತ್ತದೆ. ಸುಲಭದಲ್ಲಿ ಜಾಮೀನು ಸಿಗುತ್ತದೆ. ಸಿಎಎ ಕೇಸ್​ನಲ್ಲಿ ಆಗಿದ್ದೂ ಅದೇ. ಆದರೆ ಈ ಗರ್ಭಧಾರಣೆಯ ಗುಟ್ಟು ಮಾತ್ರ ಇನ್ನೂ ಬಯಲಾಗುತ್ತಿಲ್ಲ. ರಾಜಕಾರಣಿಗಳು ಹಾಗೂ ಕೆಲವು ವಿಐಪಿಗಳು ಅರೆಸ್ಟ್​ ಆಗುತ್ತಿದ್ದಂತೆಯೇ ಹಾರ್ಟ್​ ಸಮಸ್ಯೆ ಉಂಟಾಗಿ ಜೈಲಿನಿಂದ ತಪ್ಪಿಸಿಕೊಳ್ಳಲು ಆಸ್ಪತ್ರೆಗೆ ಅಡ್ಮಿಟ್​ ಆಗೋದು ಮಾಮೂಲು ಎನ್ನುವಂತೆ ಇಲ್ಲಿಯೂ ಆಗುತ್ತಿರಬಹುದೆ, ನಿಜಕ್ಕೂ ಈ ಗರ್ಭದ ಹಿಂದಿರೋ ರಹಸ್ಯವೇನು ಎನ್ನುವ ಚರ್ಚೆ ಇದೀಗ ಶುರುವಾಗಿದೆ.