- Home
- Life
- Relationship
- ನಿನ್ನೆ ಮೊನಾಲಿಸಾ ಮಿಸ್ಸಿಂಗ್ ಅಂದ, ಇಂದು ನಾನವಳ ಗಂಡನೇ ಅಲ್ಲ ಅಂತಿದ್ದಾನೆ! ಅಷ್ಟಕ್ಕೂ ಏನಾಯ್ತು ನೋಡಿ
ನಿನ್ನೆ ಮೊನಾಲಿಸಾ ಮಿಸ್ಸಿಂಗ್ ಅಂದ, ಇಂದು ನಾನವಳ ಗಂಡನೇ ಅಲ್ಲ ಅಂತಿದ್ದಾನೆ! ಅಷ್ಟಕ್ಕೂ ಏನಾಯ್ತು ನೋಡಿ
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ನಾಪತ್ತೆಯಾಗಿದ್ದಾಳೆಂದು ಆಕೆಯ ಪತಿ ಎಂದು ಹೇಳಲಾದ ವ್ಯಕ್ತಿಯ ವಿಡಿಯೋ ವೈರಲ್ ಆಗಿತ್ತು. ಆದರೆ, ಆ ವಿಡಿಯೋ ಮಾಡಿದ ವ್ಯಕ್ತಿ ಪತಿ ಫರ್ಮಾನ್ ಖಾನ್ ಅಲ್ಲ, ಬದಲಿಗೆ ಆಗಿದ್ದೇನು? ಇಲ್ಲಿದೆ ಕುತೂಹಲದ ಸ್ಟೋರಿ

ಮೊನಾಲಿಸಾ ಮದುವೆ
ಕುಂಭಮೇಳದ ವೈರಲ್ ಗರ್ಲ್ (Kumbhamela Viral lady) ಮೊನಾಲಿಸಾ ಮದುವೆಯಾದಾಗಿನಿಂದಲೂ ಸಾಕಷ್ಟು ಸದ್ದು ಮಾಡುತ್ತಲೇ ಇದ್ದಾಳೆ. ಫರ್ಮಾನ್ ಖಾನ್ ಎನ್ನುವ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ.
ಸಿನಿಮಾ ಟ್ರ್ಯಾಜಡಿ
ಕುಂಭಮೇಳದಲ್ಲಿ ವೈರಲ್ ಆದ ಬಳಿಕ ಸಿನಿಮಾದಲ್ಲಿ ಆಫರ್ ಸಿಕ್ಕಿತ್ತು. ಆದರೆ ಅದರ ನಿರ್ದೇಶಕ ಸನೋಜ್ ಮಿಶ್ರಾ ತನ್ನ ಮೇಲೆ ಲೈಂ*ಗಿಕ ದೌರ್ಜನ್ಯ ಎಸಗಲು ಬಂದಿದ್ದು, ಕೆಟ್ಟದ್ದಾಗಿ ನಡೆದುಕೊಂಡ, ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲ ಹೆಣ್ಣುಮಕ್ಕಳನ್ನು ಆತ ಬಳಸಿಕೊಳ್ಳುತ್ತಿದ್ದಾನೆ ಎಂದೆಲ್ಲಾ ಆರೋಪಿಸಿದ್ದಳು ಮೊನಾಲಿಸಾ.
18 ವರ್ಷ ತುಂಬಿಲ್ಲ
ಇಷ್ಟಾಗುತ್ತಲೇ ಆಕೆಗೆ ಇನ್ನೂ 18 ವರ್ಷ ತುಂಬಿಲ್ಲ, ಅವಳು ಅಪ್ರಾಪ್ತಳು ಎನ್ನುವ ಕಾರಣಕ್ಕೆ ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಾಗಿದೆ. ಲವ್ ಜಿಹಾದ್ಗೆ ಫೇಮಸ್ ಆಗಿರೋ ಕೇರಳದ ಪೊಲೀಸರು ಈಕೆ ತಮಗೆ ತೋರಿಸಿರೋ ದಾಖಲೆಯಲ್ಲಿ, 18 ವರ್ಷ ತುಂಬಿತ್ತು, ನಮ್ಮ ತಪ್ಪೇನೂ ಇಲ್ಲ ಎನ್ನುತ್ತಿದ್ದಾರೆ.
ಪತ್ನಿಯ ಹುಡುಕಿ ಕೊಡಿ
ಇವೆಲ್ಲಾ ಗಲಾಟೆ ನಡುವೆಯೇ ನಿನ್ನೆ ಒಂದು ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ಫರ್ಮಾನ್ ಖಾನ್ ತನ್ನ ಪತ್ನಿ ಮೊನಾಲಿಸಾ ಕಾಣಿಸುತ್ತಿಲ್ಲ. ಎಲ್ಲೆಡೆ ಹುಡುಕಿ ಸಾಕಾಗಿದೆ. ದಯವಿಟ್ಟು ಆಕೆಯನ್ನು ಹುಡುಕಿ ಕೊಡಿ ಎಂದು ಹೇಳುತ್ತಿರುವ ವಿಡಿಯೋ ಇದಾಗಿತ್ತು.
ನಾನವಳ ಗಂಡ ಅಲ್ಲ
ಆದರೆ ಇದೀಗ ಆ ವಿಡಿಯೋಗೆ ಭಾರಿ ಟ್ವಿಸ್ಟ್ ಸಿಕ್ಕಿದೆ. ಅಸಲಿಗೆ ಈ ವಿಡಿಯೋ ಮಾಡಿದ ವ್ಯಕ್ತಿ ಫರ್ಮಾನ್ ಖಾನ್ ಅಲ್ಲವೇ ಅಲ್ಲ. ಥೇಟ್ ಆತನನ್ನೇ ಹೋಲುವ ಅರವಿಂದ ಕುಮಾರ್ ಜೋಶಿ ಅಂತೆ. ಆತನೇ ಈಗ ಬಂದು, ನಾನು ಈ ವಿಡಿಯೋ ಅನ್ನು ಎಂಟರ್ಟೈನ್ಮೆಂಟ್ಗಾಗಿ ಮಾಡಿದ್ದೆ. ನಾನು ನೋಡಲು ಸೇಮ್ ಫರ್ಮಾನ್ ಖಾನ್ ರೀತಿ ಇರುವ ಹಿನ್ನೆಲೆಯಲ್ಲಿ ಹೀಗೆಲ್ಲಾ ಆಯಿತು. ದಯವಿಟ್ಟು ಕ್ಷಮಿಸಿ. ಯಾರನ್ನೂ ನೋಯಿಸುವ ಉದ್ದೇಶ ನನಗೆ ಇರಲಿಲ್ಲ ಎಂದಿದ್ದಾನೆ!
ಫ್ರಿಜ್ನಲ್ಲಿ ಹುಡುಕು
ಅಷ್ಟಕ್ಕೂ ನಿನ್ನೆ ಈ ವಿಡಿಯೋ ವೈರಲ್ ಆಗುತ್ತಲೇ, ಲಕ್ಷಾಂತರ ಕಮೆಂಟ್ಸ್ ಬಂದಿದ್ದವು. ಅವಳನ್ನು ಫ್ರಿಜ್ನಲ್ಲಿ ಹುಡುಕಿ ಎಂದವರೇ ಹೆಚ್ಚು. ಅವಳಿಗೆ ಹೀಗೆ ಆಗುತ್ತದೆ ಎಂದು ತಿಳಿದಿತ್ತು. ಆದರೆ ಇಷ್ಟು ಬೇಗ ನಾಪತ್ತೆ ಆಗ್ತಾಳೆ ಎಂದು ತಿಳಿದಿರಲಿಲ್ಲ ಎಂದೆಲ್ಲಾ ಬಾಯಿಗೆ ಬಂದಂತೆ ಕಮೆಂಟ್ಸ್ ಬಂದಿದ್ವು!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

