Asianet Suvarna News Asianet Suvarna News

27 ವರ್ಷಗಳ ಬಳಿಕ ಭಾರತದಲ್ಲಿ 'ವಿಶ್ವ ಸುಂದರಿ ಸ್ಪರ್ಧೆ' ಆಯೋಜನೆ

ಭಾರತವು 27 ವರ್ಷಗಳ ನಂತರ 71ನೇ ವಿಶ್ವ ಸುಂದರಿ 2023 ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಬಹು ನಿರೀಕ್ಷಿತ ವಿಶ್ವ ಸುಂದರಿ 71 ನೇ ಆವೃತ್ತಿಯು ಈ ವರ್ಷದ ನವೆಂಬರ್‌ನಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Miss World 2023 pageant returns to India after 27 years Vin
Author
First Published Jun 9, 2023, 12:54 PM IST

ನವದೆಹಲಿ: ಈ ಬಾರಿಯ ವಿಶ್ವ ಸುಂದರಿ 2023 ಸ್ಪರ್ಧೆಯನ್ನು ಆಯೋಜಿಸಲು ಭಾರತ ಸಜ್ಜಾಗಿದೆ. 1996ರಲ್ಲಿ ವಿಶ್ವ ಸುಂದರಿ ಈವೆಂಟ್‌ನ್ನು ಕೊನೆಯ ಬಾರಿಗೆ ಆಯೋಜಿಸಿದ್ದ ಭಾರತವು 27 ವರ್ಷಗಳ ನಂತರ 71ನೇ ವಿಶ್ವ ಸುಂದರಿ 2023 ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಬಹು ನಿರೀಕ್ಷಿತ ವಿಶ್ವ ಸುಂದರಿ 71 ನೇ ಆವೃತ್ತಿಯು ಈ ವರ್ಷದ ನವೆಂಬರ್‌ನಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಅದರ ಅಂತಿಮ ದಿನಾಂಕಗಳು ಇನ್ನೂ ಖಚಿತವಾಗಿಲ್ಲ. ಬಹು ನಿರೀಕ್ಷಿತ ಈವೆಂಟ್‌ಗೆ ಈ ವರ್ಷದ ಸ್ಥಳ  ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಎಂದು ದೃಢೀಕರಿಸಿದ ತಿಂಗಳುಗಳ ನಂತರ ಈ ಪ್ರಕಟಣೆಯು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ. 

ನಿಖರವಾದ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲವಾದರೂ, ಸೌಂದರ್ಯ ಸ್ಪರ್ಧೆಯು ಈ ವರ್ಷದ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. '71ನೇ ವಿಶ್ವ ಸುಂದರಿ ಸ್ಪರ್ಧೆ ( (Miss World) ಭಾರತದಲ್ಲಿ ನಡೆಯಲಿದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. 30 ವರ್ಷಗಳ ಹಿಂದೆ ನಾನು ಈ ಅದ್ಭುತ ದೇಶಕ್ಕೆ ಭೇಟಿ ನೀಡಿದ ಮೊದಲ ಕ್ಷಣದಿಂದ ನಾನು ಭಾರತದ ಬಗ್ಗೆ ಅಪಾರ ಪ್ರೀತಿ (Love)ಯನ್ನು ಹೊಂದಿದ್ದೇನೆ. ವಿಶಿಷ್ಟ ಮತ್ತು ವೈವಿಧ್ಯಮಯ ಸಂಸ್ಕೃತಿ (Culture), ವಿಶ್ವ ದರ್ಜೆಯ ಆಕರ್ಷಣೆಗಳು ಮತ್ತು ಉಸಿರುಕಟ್ಟುವ ಸ್ಥಳಗಳ ಸೊಬಗನ್ನು ಪ್ರಪಂಚದ ಇತರ ಭಾಗದ ಜನರು ಸವಿಯಲು ನಾವು ಕಾಯುತ್ತೇವೆ; ಎಂದು ಮಿಸ್ ವರ್ಲ್ಡ್ ಆರ್ಗನೈಸೇಶನ್ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮೊರ್ಲೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Miss England Beauty Pageant: ಮೇಕಪ್ ಇಲ್ಲದೇ ಸ್ಪರ್ಧಿಸಿ ತೀರ್ಪುಗಾರರ ಮನಗೆದ್ದ ಮೆಲಿಸಾ

130ಕ್ಕೂ ಹೆಚ್ಚು ದೇಶಗಳ ಸ್ಪರ್ಧಿಗಳು ತಮ್ಮ ಅನನ್ಯ ಪ್ರತಿಭೆ, ಬುದ್ಧಿವಂತಿಕೆ (Inteligence) ಮತ್ತು ಸೌಂದರ್ಯವನ್ನು (Beauty) ಪ್ರದರ್ಶಿಸಲು ಭಾರತದಲ್ಲಿ ಒಟ್ಟುಗೂಡುತ್ತಾರೆ. ಪ್ರತಿಭಾ ಪ್ರದರ್ಶನಗಳು, ಕ್ರೀಡಾ ಸವಾಲುಗಳು ಮತ್ತು ದತ್ತಿ ಉಪಕ್ರಮಗಳು ಸೇರಿದಂತೆ ಕಠಿಣ ಸ್ಪರ್ಧೆಗಳ ಸರಣಿಯಲ್ಲಿ ಭಾಗವಹಿಸುತ್ತಾರೆ. ನವೆಂಬರ್/ಡಿಸೆಂಬರ್ 2023 ರಲ್ಲಿ ನಿಗದಿಯಾಗಿರುವ ಗ್ರ್ಯಾಂಡ್ ಫಿನಾಲೆಗೆ (Grand finale) ಒಂದು ತಿಂಗಳ ಮೊದಲು ಭಾಗವಹಿಸುವವರನ್ನು ಶಾರ್ಟ್‌ಲಿಸ್ಟ್ ಮಾಡಲು ಹಲವಾರು ರೌಂಡ್ಸ್‌ ಇರುತ್ತವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

'ಭಾರತವು, 71ನೇ ವಿಶ್ವ ಸುಂದರಿ ಈವೆಂಟ್‌ನ್ನು ಪ್ರದರ್ಶಿಸಲು ಅತ್ಯಂತ ಅರ್ಹವಾದ ದೇಶದಲ್ಲಿದೆ. ಇದು 140 ದೇಶಗಳ ಪ್ರತಿನಿಧಿಗಳು ಬಂದು ಇನ್ಕ್ರೆಬಲ್ ಇಂಡಿಯಾವನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ' ಎಂದು ಪಿಎಂಇ ಅಧ್ಯಕ್ಷ ಜಮೀಲ್ ಸೈದಿ ಹೇಳಿದ್ದಾರೆ. '71 ನೇ ವಿಶ್ವ ಸುಂದರಿ 2023ರೊಂದಿಗೆ ಜಗತ್ತನ್ನು ಸ್ವಾಗತಿಸಲು ಮತ್ತು ದೇಶದ ಅನುಗ್ರಹ, ಸೌಂದರ್ಯ ಮತ್ತು ಪ್ರಗತಿಪರ ಮನೋಭಾವವನ್ನು ಪ್ರದರ್ಶಿಸಲು ಭಾರತವು ಸಿದ್ಧವಾಗಿದೆ. ಈ ಅಸಾಧಾರಣ ಪ್ರಯಾಣವನ್ನು ಆರಂಭಿಸುತ್ತಿದ್ದೇವೆ' ಎಂದು ಪ್ರಸ್ತುತ ವಿಶ್ವ ಸುಂದರಿ ಕರೋಲಿನಾ ಬಿಲಾವ್ಸ್ಕಾ ಹೇಳಿದರು.

Miss World 2021: ಪೋಲೆಂಡ್‌ನ Karolina Bielawska ಹೊಸ ವಿಶ್ವ ಸುಂದರಿ

ಈ ವರ್ಷದ ಫೆಬ್ರವರಿಯಲ್ಲಿ, 2023 ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಜೂಲಿಯಾ ಮೋರ್ಲಿ ಘೋಷಿಸಿದ್ದರು. ಆದರೆ ಈಗ ಮಿಸ್ ವರ್ಲ್ಡ್‌ ಸ್ಪರ್ಧೆ ನಡೆಯಲಿರುವ ದೇಶ ಭಾರತವೆಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಜೂಲಿಯಾ ಮೊರ್ಲಿ ಮಾಜಿ ಮಾಡೆಲ್ ಆಗಿದ್ದು, ವಿಶ್ವ ಸುಂದರಿ ಮತ್ತು ಮಿಸ್ಟರ್ ವರ್ಲ್ಡ್ (ಫೇಸ್‌ಬುಕ್/ಮಿಸ್ ವರ್ಲ್ಡ್) ಆಯೋಜಿಸುವ ವಿಶ್ವ ಸುಂದರಿ ಸಂಸ್ಥೆಯ ಅಧ್ಯಕ್ಷರು ಮತ್ತು CEO ಸಹ ಆಗಿದ್ದಾರೆ.

ಭಾರತದಿಂದ ಮೊದಲ ಬಾರಿಗೆ ವಿಶ್ವ ಸುಂದರಿ ರೀಟಾ ಫರಿಯಾ 1966 ರಲ್ಲಿ ಸ್ಪರ್ಧೆಯನ್ನು ಗೆದ್ದರು. ನಂತರ ಐಶ್ವರ್ಯ ರೈ (1994), ಡಯಾನಾ ಹೇಡನ್ (1997), ಯುಕ್ತಾ ಮುಖಿ (1999), ಪ್ರಿಯಾಂಕಾ ಚೋಪ್ರಾ (2000) ಮತ್ತು ಇತ್ತೀಚೆಗೆ ಮಾನುಷಿ ಚಿಲ್ಲರ್ (2017) ವಿಶ್ವ ಸುಂದರಿ ಪಟ್ಟವನ್ನು ಅಲಂಕರಿಸಿದ್ದಾರೆ. 

Follow Us:
Download App:
  • android
  • ios