Asianet Suvarna News Asianet Suvarna News

ಪದೇ ಪದೇ ಗರ್ಭಪಾತವಾದ್ರೆ ಮುಂದೆ ಕಾಡಲಿದೆ ಈ ಸಮಸ್ಯೆ

ಗರ್ಭಪಾತದಿಂದ ಅನೇಕ ಸಮಸ್ಯೆಗಳನ್ನು ಮಹಿಳೆ ಎದುರಿಸಬೇಕಾಗುತ್ತದೆ. ಮಾನಸಿಕ ಹಿಂಸೆ ಜೊತೆ ಮುಂದಿನ ದಿನಗಳಲ್ಲಿ ಅನೇಕ ಅನಾರೋಗ್ಯ ಅವರನ್ನು ಕಾಡುತ್ತದೆ. ಗರ್ಭಪಾತದ ನಂತ್ರ ಮಹಿಳೆಯರಲ್ಲಿ ಪಾರ್ಶ್ವವಾಯು ಅಪಾಯವು ಅನೇಕ ಪಟ್ಟು ಹೆಚ್ಚಾಗುತ್ತದೆ ಎಂದು ಹೊಸ ಅಧ್ಯಯನ ಹೇಳಿದೆ. 
 

Miscarriage Or Stillbirth Can Effect The Risk Of Stroke In Women
Author
Bangalore, First Published Jul 21, 2022, 5:30 PM IST

ಪ್ರತಿಯೊಬ್ಬ ಮಹಿಳೆಯೂ ಒಂದು ಆರೋಗ್ಯವಂತ ಮಗುವಿಗೆ ಜನ್ಮ ನೀಡುವ ಕನಸು ಕಾಣ್ತಾಳೆ. ಆದ್ರೆ ಎಲ್ಲರಿಗೂ ಇದು ಸಾಧ್ಯವಿಲ್ಲ. ಕೆಲವು ಕಾರಣಕ್ಕೆ ಗರ್ಭಪಾತಕ್ಕೊಳಗಾಗುವ ಸಂದರ್ಭ ಎದುರಾಗುತ್ತದೆ. ಮತ್ತೆ ಕೆಲವೊಮ್ಮೆ ಸತ್ತ ಮಗುವಿಗೆ ಜನ್ಮ ನೀಡುವ ಪರಿಸ್ಥಿತಿ ಬರುತ್ತದೆ. ಆ ಸಮಯದಲ್ಲಿ ತಾಯಿಯಾದವಳ ನೋವು ಹೇಳತೀರದು. ಗರ್ಭಪಾತ ಬರೀ ನೋವು ಮಾತ್ರ ನೀಡುವುದಿಲ್ಲ. ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇತ್ತೀಚಿಗೆ ನಡೆದ ಸಂಶೋಧನೆಯೊಂದು ಗರ್ಭಪಾತದ ನಂತ್ರ ಮಹಿಳೆ ಏನೆಲ್ಲ ಸಮಸ್ಯೆ ಎದುರಿಸುತ್ತಾಳೆ ಎಂಬುದನ್ನು ಹೇಳಲಾಗಿದೆ.  ಹೊಸ ಸಂಶೋಧನೆ ಪ್ರಕಾರ ಗರ್ಭಪಾತಕ್ಕೊಳಗಾದ ಅಥವಾ ಸತ್ತ ಮಗುವನ್ನು ಹೊಂದಿರುವ ಮಹಿಳೆಯರು ಪಾರ್ಶ್ವವಾಯು ಅಪಾಯವನ್ನು ಹೊಂದಿರುತ್ತಾರಂತೆ. ಪ್ರತಿ ಗರ್ಭಪಾತ ಮತ್ತು ಹೆರಿಗೆಯೊಂದಿಗೆ ಈ ಅಪಾಯವು ಹೆಚ್ಚಾಗುತ್ತದೆ. ಆದ್ರೆ ಇದು ಏಕೆ ಸಂಭವಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಹಿಳೆಯರ ಮೇಲೆ ಹೆಚ್ಚಿನ ಸಂಶೋಧನೆ ಮಾಡಬೇಕಾಗಿದೆ. ಬ್ರಿಟಿಷ್ ಮೆಡಿಕಲ್ ಜರ್ನಲ್ ಟುಡೇ ಪ್ರಕಟಿಸಿದ ಸಂಶೋಧನೆಯು ಮೊದಲ ಬಾರಿಗೆ ಗರ್ಭಪಾತ ಮತ್ತು ಪಾರ್ಶ್ವವಾಯು ನಡುವಿನ ಸಂಬಂಧದ ಮೇಲೆ ಬೆಳಕು ಚೆಲ್ಲುತ್ತದೆ. 

ಬಂಜೆತನ (Infertility), ಗರ್ಭಪಾತ (Miscarriage) ಮತ್ತು ಇನ್ನೊಂದು ಆರೋಗ್ಯ ಸಮಸ್ಯೆಯಿಂದ ಸತ್ತ ಜನನವು ಪಾರ್ಶ್ವವಾಯು (Paralysis) ಅಪಾಯವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಇವುಗಳಲ್ಲಿ ಅಂತಃಸ್ರಾವಕ ಅಸ್ವಸ್ಥತೆಗಳು, ಉರಿಯೂತ, ಎಂಡೋಥೀಲಿಯಲ್ ಕೋಶಗಳೊಂದಿಗಿನ ಸಮಸ್ಯೆಗಳು, ಮಾನಸಿಕ ಅಸ್ವಸ್ಥತೆಗಳು ಮತ್ತು ಕೆಟ್ಟ ಅಭ್ಯಾಸಗಳು ಮತ್ತು ಬೊಜ್ಜು ಸೇರಿವೆ. ಸಂಶೋಧನೆಯು ಆಸ್ಟ್ರೇಲಿಯಾ, ಚೀನಾ, ಜಪಾನ್, ನೆದರ್ಲ್ಯಾಂಡ್ಸ್, ಸ್ವೀಡನ್ ಮತ್ತು ಯುಕೆ, ಯುಎಸ್ ನಲ್ಲಿ ನಡೆದಿದೆ. ಈ ಸಂಶೋಧನೆಯಲ್ಲಿ 618,851 ಮಹಿಳೆಯರ ಅಧ್ಯಯನ ನಡೆಸಲಾಗಿದೆ. ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಮಹಿಳೆಯರ ವಯಸ್ಸು  32 ರಿಂದ 73 ವರ್ಷಗಳಾಗಿತ್ತು. ಅಧ್ಯಯನವು 11 ವರ್ಷಗಳ ಕಾಲ ನಡೆಯಿತು. 91,568 ಮಹಿಳೆಯರಿಗೆ  ಗರ್ಭಪಾತವಾಗಿತ್ತು. 24,873 ಮಹಿಳೆಯರು ಸತ್ತ ಮಗುವಿಗೆ ಜನ್ಮ ನೀಡಿದ್ದರು. 

ಗರ್ಭಪಾತ ಅಥವಾ ಸತ್ತ ಮಗುವಿಗೆ ಜನ್ಮ ನೀಡಿದಲ್ಲಿ ಮಹಿಳೆಯರಿಗೆ ಕಾಡುವ ಸಮಸ್ಯೆ ಏನು ? : 

ಸ್ಟ್ರೋಕ್ ಅಪಾಯ: ಗರ್ಭಪಾತಕ್ಕೊಳಗಾಗಿದ್ದ ಶೇಕಡಾ 11 ರಷ್ಟು ಮಹಿಳೆಯರು ಭ್ರೂಣವಲ್ಲದ ಪಾರ್ಶ್ವವಾಯು ಮತ್ತು ಶೇಕಡಾ 17ರಷ್ಟು ಭ್ರೂಣದ ಪಾರ್ಶ್ವವಾಯು ಅಪಾಯ ಹೊಂದಿದ್ದರು. ಒಮ್ಮೆಯೂ ಗರ್ಭಪಾತವಾಗದ ಮಹಿಳೆಯರೊಂದಿಗೆ ಈ ಹೋಲಿಕೆ ಮಾಡಲಾಗಿದೆ.

ಮೂತ್ರ ವಿಸರ್ಜಿಸುವಾಗ ಹೆಣ್ಣು ಮಾಡೋ ತಪ್ಪು, ಆರೋಗ್ಯಕ್ಕೇ ಕುತ್ತು!

ಭ್ರೂಣವಲ್ಲದ ಪಾರ್ಶ್ವವಾಯು:  ಪ್ರತಿ ಗರ್ಭಪಾತದೊಂದಿಗೆ ಪಾರ್ಶ್ವವಾಯು ಅಪಾಯವೂ ಹೆಚ್ಚಾಗುತ್ತದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ. ಮೂರು ಅಥವಾ ಅದಕ್ಕಿಂತ ಹೆಚ್ಚು ಗರ್ಭಪಾತಗಳನ್ನು ಹೊಂದಿರುವ ಮಹಿಳೆಯರು ಭ್ರೂಣವಲ್ಲದ ಪಾರ್ಶ್ವವಾಯು ಅಪಾಯವನ್ನು ಶೇಕಡಾ 35ರಷ್ಟು  ಮತ್ತು ಶೇಕಡಾ 82ರಷ್ಟು ಭ್ರೂಣದ ಪಾರ್ಶ್ವವಾಯು ಅಪಾಯವನ್ನು ಹೊಂದಿರುತ್ತಾರೆ. 

SriLankan Crisis: ತುತ್ತು ಅನ್ನಕ್ಕಾಗಿ ಮೈ ಮಾರಿಕೊಳ್ಳುತ್ತಿದ್ದಾರೆ ಮಹಿಳೆಯರು!

ಮುಂಜಾಗ್ರತೆ ಹೇಗೆ?: ನಿಯಮಿತ ತಪಾಸಣೆ ಇಲ್ಲಿ ಮುಖ್ಯವಾಗುತ್ತದೆ. ಗರ್ಭಪಾತವಾಗಿರಲಿ ಇಲ್ಲ ಆಗದೆ ಇರಲಿ, ಆರೋಗ್ಯ ಸರಿಯಾಗಿರಲಿ ಇಲ್ಲ ಅನಾರೋಗ್ಯಕ್ಕೊಳಗಾಗಿರಲಿ 40 ವರ್ಷದ ನಂತ್ರ ನಿಯಮಿತ ಆರೋಗ್ಯ ತಪಾಸಣೆ ಮುಖ್ಯವಾಗುತ್ತದೆ. ವೈದ್ಯರು ಹೃದಯದ ಆರೋಗ್ಯ ತಪಾಸಣೆ ಮಾಡಿದಾಗ ಹೃದ್ರೋಗ, ಹೃದಯ ವೈಫಲ್ಯ ಮತ್ತು ಪಾರ್ಶ್ವವಾಯು ಅಪಾಯದ ಬಗ್ಗೆಯೂ ಪರಿಶೀಲಿಸುತ್ತಾರೆ. ಒಂದು ವೇಳೆ ಮುಂದೆ ಸಮಸ್ಯೆಯಾಗಬಹುದು ಎನ್ನುವ ಅನುಮಾನವಿದ್ರೆ ಅಥವಾ ಸೂಚನೆ ಸಿಕ್ಕಿದ್ರೆ ಅದಕ್ಕೆ ಮೊದಲೇ ಚಿಕಿತ್ಸೆ ಪಡೆಯಬಹುದು. ನಿಯಮಿತ ತಪಾಸಣೆ ಮಾಡಿದರೆ ಇದರಿಂದ ನಿಮ್ಮ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಸಮಯಕ್ಕೆ ಕಂಡುಹಿಡಿಯಬಹುದು. ಪಾರ್ಶ್ವವಾಯು ಸಮಸ್ಯೆಯಿಂದ ರಕ್ಷಣೆ ಪಡೆಯಬಹುದು. ಇದ್ರ ಜತೆಗೆ ಮಹಿಳೆಯರು ಆರಂಭದಿಂದಲೂ ಎಚ್ಚರಿಕೆ ವಹಿಸಬೇಕು. ಅನಗತ್ಯ ಗರ್ಭಧಾರಣೆಗೆ ಅವಕಾಶ ನೀಡಬಾರದು. ಜನನ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಂಡಲ್ಲಿ ಗರ್ಭಪಾತವನ್ನು ತಪ್ಪಿಸಬಹುದು. 

Follow Us:
Download App:
  • android
  • ios