Asianet Suvarna News Asianet Suvarna News

ಮೂತ್ರ ವಿಸರ್ಜಿಸುವಾಗ ಹೆಣ್ಣು ಮಾಡೋ ತಪ್ಪು, ಆರೋಗ್ಯಕ್ಕೇ ಕುತ್ತು!

ಮಹಿಳೆಯರು ಖಾಸಗಿ ಅಂಗಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಮೂತ್ರ ವಿಸರ್ಜನೆ ವೇಳೆ ಉರಿ, ಕಿರಿಕಿರಿ ಕೂಡ ಇದ್ರಲ್ಲಿ ಸೇರಿದೆ. ಮೂತ್ರ ತಡೆಹಿಡಿಯುವು ಅಭ್ಯಾಸವೂ ಅನೇಕ ಮಹಿಳೆಯರಿಗೆ ಇರುತ್ತದೆ. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 
 

Women Urinary Health issues and mistakes she makes while urinating
Author
Bangalore, First Published Jul 20, 2022, 5:00 PM IST

ಮೂತ್ರ ವ್ಯಕ್ತಿಯ ಆರೋಗ್ಯವನ್ನು ಹೇಳುತ್ತದೆ. ಇದೇ ಕಾರಣಕ್ಕೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಮೂತ್ರ ಪರೀಕ್ಷೆ ಮಾಡಿಸುವಂತೆ ವೈದ್ಯರು ಸಲಹೆ ನೀಡ್ತಾರೆ. ಮೂತ್ರದ ಬಣ್ಣ, ಮೂತ್ರದ ನೊರೆ ಮುಂತಾದವುಗಳ ಮೂಲಕ ಆರೋಗ್ಯ ಹೇಗಿದೆ ಎಂಬುದನ್ನು ಪತ್ತೆ ಮಾಡಬಹುದು. ಅನೇಕ ಜನರು ಮೂತ್ರ ವಿಸರ್ಜನೆಗೆ ಹೆಚ್ಚು ಮಹತ್ವ ನೀಡುವುದಿಲ್ಲ. ಕೆಲ ಮಹಿಳೆಯರ ತಪ್ಪು ಮೂತ್ರ ವಿಸರ್ಜನೆಯಿಂದ ಭವಿಷ್ಯದಲ್ಲಿ ಸಮಸ್ಯೆ ಎದುರಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಎಲ್ಲ ಮಹಿಳೆಯರು ಸರಿಯಾದ ರೀತಿಯಲ್ಲಿ ಮೂತ್ರ ವಿಸರ್ಜನೆ ಮಾಡ್ಬೇಕು. ಇಲ್ಲವೆಂದ್ರೆ ಮುಂದೆ ತೊಂದರೆ ಎದುರಿಸಬೇಕಾಗುತ್ತದೆ. 

ಅಮೆರಿಕಾದ ಸ್ತ್ರೀ ಪೆಲ್ವಿಕ್ ಡಿಸ್ಫಂಕ್ಷನ್ ತಜ್ಞ ಮತ್ತು ಯೋನಿ ತಜ್ಞರು ತೆರೇಸಾ ಇರ್ವಿನ್ (Dr.Teresa Irwin) ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮೂತ್ರಕೋಶ (Bladder) ದ ಆರೋಗ್ಯ (Health) ಹಾಗೂ ಒಟ್ಟಾರೆ ಆರೋಗ್ಯ ಕಾಪಾಡಿಕೊಳ್ಳಬೇಕೆಂದ್ರೆ ಮಹಿಳೆಯರು ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಕೆಲ ಸಂಗತಿಯನ್ನು ತಿಳಿದಿರಬೇಕೆಂದು ಅವರು ಹೇಳ್ತಾರೆ. ಇಂದು ಮಹಿಳೆಯರು ಮೂತ್ರ ವಿಸರ್ಜನೆ ಬಗ್ಗೆ ತಿಳಿಯಲೇಬೇಕಾದ ವಿಷ್ಯವೇನು ಎಂಬುದನ್ನು ನಾವು ಹೇಳ್ತೇವೆ.

ಒಳ್ಳೆಯ ಆಹಾರ (Food) ಸೇವನೆ : ಮೂತ್ರ ವಿಸರ್ಜನೆ ವೇಳೆ ಅನೇಕರಿಗೆ ಉರಿ ಕಾಣಿಸಿಕೊಳ್ಳುತ್ತದೆ. ಈ ಉರಿ ಕೆಲವೊಮ್ಮೆ ವಿಪರೀತಿ ಕಿರಿಕಿರಿಯುಂಟು ಮಾಡುತ್ತದೆ. ಮೂತ್ರ ವಿಸರ್ಜನೆ ವೇಳೆ ಉರಿಯಾಗ್ಬಾರದು ಎನ್ನುವವರು ಒಳ್ಳೆಯ ಆಹಾರ ಸೇವನೆಗೆ ಮಹತ್ವ ನೀಡ್ಬೇಕು. ಕಾಫಿ, ಕಾರ್ಬೊನೇಟೆಡ್ ಪಾನೀಯಗಳು, ಕೃತಕ ಸಿಹಿ ಆಹಾರ ಮತ್ತು ಆಲ್ಕೋಹಾಲ್ ಸೇವನೆಯಿಂದ ಮೂತ್ರಕೋಶದ ಆರೋಗ್ಯ ಹದಗೆಡುತ್ತದೆ. ಇದೇ ಮೂತ್ರ ವಿಸರ್ಜನೆ ವೇಳೆ ಉರಿಯಾಗಲು ಕಾರಣವಾಗುತ್ತದೆ. ಈ ಎಲ್ಲವನ್ನೂ ತ್ಯಜಿಸಬೇಕೆಂದು ವೈದ್ಯರು ಹೇಳ್ತಿಲ್ಲ. ಈ ಆಹಾರಗಳ ಮೇಲೆ ನಿಯಂತ್ರಣವಿರಬೇಕು. ಹಾಗೆ ಹೆಚ್ಚೆಚ್ಚು ನೀರು ಸೇವನೆ ಮಾಡ್ಬೇಕು ಎನ್ನುತ್ತಾರೆ ತಜ್ಞರು.

ಟೊಮೆಟೋ ಜ್ಯೂಸ್ ಕುಡಿದ್ರೆ ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚು !

ಮೂತ್ರ ಗಟ್ಟಿಕೊಳ್ಳುವುದು ಸೂಕ್ತವಲ್ಲ : ಕೆಲ ಮಹಿಳೆಯರು ದಿನದಲ್ಲಿ ನಾಲ್ಕೈದು ಬಾರಿ ಮೂತ್ರ ವಿಸರ್ಜನೆ ಮಾಡ್ತಾರೆ. ಮೂತ್ರ ವಿಸರ್ಜನೆ ಅಗತ್ಯವಿದೆ ಎಂದು ನಮ್ಮ ಮೆದುಳು ನಮಗೆ ಸೂಚನೆ ನೀಡುತ್ತದೆ. ಆದ್ರೆ ಬೇರೆ ಬೇರೆ ಕೆಲಸದ ಕಾರಣಕ್ಕೆ ಮಹಿಳೆಯರು ಸರಿಯಾದ ಸಮಯದಲ್ಲಿ ಮೂತ್ರ ವಿಸರ್ಜನೆ ಮಾಡದೆ ಅದನ್ನು ಹಿಡಿದಿಟ್ಟುಕೊಳ್ತಾರೆ. ಹೀಗೆ ಪ್ರತಿ ದಿನ ಮಾಡಿದ್ರೆ ಮೂತ್ರ ವಿಸರ್ಜನೆ ಬಗ್ಗೆ ಸಿಗ್ನಲ್ ನೀಡುವ ಕೆಲಸವನ್ನು ಮೆದುಳು ಬಂದ್ ಮಾಡುತ್ತದೆ. ಮೂತ್ರ ಬರ್ತಿದೆ ಎಂಬ ವಿಷ್ಯವನ್ನು ಮೆದುಳು ನೀಡುವುದಿಲ್ಲ. ಆಗ ತೊಂದರೆ ಅನುಭವಿಸಬೇಕಾಗುತ್ತದೆ.

ಸರಿಯಾದ ಸ್ಥಿತಿ ಹಾಗೂ ಸಮಯ : ತಜ್ಞರ ಪ್ರಕಾರ, ಮೂತ್ರ ವಿಸರ್ಜನೆಗೆ ಆತುರಪಡಬಾರದು. ಸರಿಯಾದ ಸ್ಥಿತಿಯಲ್ಲಿ ಕುಳಿತು, ಆರಾಮವಾಗಿ ಮೂತ್ರ ವಿಸರ್ಜನೆ ಮಾಡ್ಬೇಕು. ಮೂತ್ರಕೋಶದಲ್ಲಿರುವ ಮೂತ್ರ ಖಾಯಿಯಾಗುವವರೆಗೆ ಕಾಯುವ ತಾಳ್ಮೆ ಅನೇಕರಿಗೆ ಇರುವುದಿಲ್ಲ.  ಕೆಲ ಮಹಿಳೆಯರು ಟಾಯ್ಲೆಟ್ ಸೀಟ್ ಮೇಲೆ ಸರಿಯಾಗಿ ಕುಳಿತುಕೊಳ್ಳುವುದಿಲ್ಲ. ಸಾರ್ವಜನಿಕ ಶೌಚಾಲಯಗಳಲ್ಲಿ ಬಾಗಿ ಮೂತ್ರ ವಿಸರ್ಜನೆ ಮಾಡ್ತಾರೆ. ಇದು ಒಳ್ಳೆಯದಲ್ಲ. ಟಾಯ್ಲೆಟ್ ಸೀಟ್ ಮೇಲೆ ಸರಿಯಾಗಿ ಕುಳಿತು, ಮೊಣಕಾಲಿನ ಮೇಲೆ ಕೈಗಳನ್ನು ಊರಿ, ಮುಂದಕ್ಕೆ ಬಾಗಿ ಮೂತ್ರ ವಿಸರ್ಜನೆ ಮಾಡ್ಬೇಕಾಗುತ್ತದೆ. ಆಗ ಮೂತ್ರಕೋಶದಲ್ಲಿರುವ ಮೂತ್ರ ಸಂಪೂರ್ಣವಾಗಿ ಖಾಲಿಯಾಗುತ್ತದೆ.

ಮುಖದಲ್ಲಿ ಕಲೆಯಿದೆ ಅನ್ನೋ ಚಿಂತೆನಾ ? ಶ್ರೀಗಂಧದ ಪೇಸ್ಟ್‌ ಹಚ್ಚಿ ನೋಡಿ

ಸೀನುವಾಗ ಗಮನವಿರಲಿ : ಕೆಲವರಿಗೆ ಸೀನು ಬರ್ತಿದ್ದಂತೆ ಮೂತ್ರ ವಿಸರ್ಜನೆಯಾಗುತ್ತದೆ. ಹೀಗೆ ಆಗಬಾರದು ಅಂದ್ರೆ ಸೀನುವಾಗ ಪೆಲ್ವಿಕ್  ಸ್ನಾಯುಗಳನ್ನು ಬಿಗಿಗೊಳಿಸಬೇಕು. ಇದಲ್ಲದೆ ಪೆಲ್ವಿಕ್ ಸ್ನಾಯುಗಳು ಬಲ ಪಡೆಯಲು ವ್ಯಾಯಾಮ ಅಗತ್ಯ. ಸೀನುವಾಗ ಮೂತ್ರ ವಿಸರ್ಜನೆಯಾಗ್ತಿದೆ ಎಂದಾದ್ರೆ ನೀವು ಪೆಲ್ವಿಕ್ ಸ್ನಾಯುಗಳು ಬಲಗೊಳ್ಳುವ ವ್ಯಾಯಾಮವನ್ನು ಮಾಡಿ. ಪೆಲ್ವಿಕ್ ಸ್ನಾಯುಗಳು  ಮೂತ್ರಕೋಶದ ಸುತ್ತಮುತ್ತಲಿನ ಪ್ರದೇಶಕ್ಕೆ ಬೆಂಬಲವನ್ನು ನೀಡುತ್ತವೆ. ಇದು ಆಂತರಿಕ ಸಂತಾನೋತ್ಪತ್ತಿ ಅಂಗಗಳು, ಮೂತ್ರಕೋಶ ಮತ್ತು ಜೀರ್ಣಾಂಗ ವ್ಯವಸ್ಥೆಯ ಕೆಳಗಿನ ಭಾಗವನ್ನು ರಕ್ಷಿಸುತ್ತದೆ.

Follow Us:
Download App:
  • android
  • ios