SriLankan Crisis: ತುತ್ತು ಅನ್ನಕ್ಕಾಗಿ ಮೈ ಮಾರಿಕೊಳ್ಳುತ್ತಿದ್ದಾರೆ ಮಹಿಳೆಯರು!
ಕಳೆದ ಕೆಲವು ತಿಂಗಳುಗಳಲ್ಲಿ ಶ್ರೀಲಂಕಾದಲ್ಲಿ ವೇಶ್ಯಾವಾಟಿಕೆ ವೇಗವಾಗಿ ಹೆಚ್ಚುತ್ತಿದೆ. ವರದಿಗಳ ಪ್ರಕಾರ, ಲೈಂಗಿಕ ಉದ್ಯಮಕ್ಕೆ ಹೆಚ್ಚಿನ ಮಹಿಳೆಯರು ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದವರಾಗಿದ್ದಾರೆ. ಜನವರಿವರೆಗೆ ಇವರೆಲ್ಲರಿಗೂ ಕೆಲಸವಿತ್ತು. ಆದರೆ ನಂತರ ದೇಶದ ಆರ್ಥಿಕತೆ ಹದಗೆಟ್ಟಿದ್ದರಿಂದ ವೇಶ್ಯಾವಾಟಿಕೆ ಕೆಲಸಕ್ಕೆ ಇಳಿದಿದ್ದಾರೆ. ಗ್ರಾಹಕರ ಒತ್ತಾಯದ ಮೇರೆಗೆ ಈ ಮಹಿಳೆಯರು ಅಸುರಕ್ಷಿತ ಲೈಂಗಿಕತೆಯನ್ನು ಹೊಂದಲು ಒತ್ತಾಯಿಸಲಾಗುತ್ತಿದೆ.
ಕೊಲಂಬೊ (ಜುಲೈ 19): ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಒಂದೆಡೆ ದೇಶದಲ್ಲಿ ನೂತನ ರಾಷ್ಟ್ರಪತಿಗಾಗಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದರೆ, ಇನ್ನೊಂದೆಡೆ ಜನಸಾಮಾನ್ಯರ ಕಷ್ಟ ಹೇಳತೀರದಾಗಿದೆ. ಪೆಟ್ರೋಲ್-ಡೀಸೆಲ್ ಬರದಿಂದಾಗಿ ಜನರು ತಮ್ಮ ಮನೆಗಳಿಗೆ ಹೋಗಲು ಕಷ್ಟಪಡುತ್ತಿದ್ದಾರೆ. ಕೆಲಸಕ್ಕೆ ಹೋದರೆ, ಮನೆಗೆ ಬರಲು ವಾಹನಗಳು ಸಿಗುತ್ತವೆ ಎನ್ನುವ ಗ್ಯಾರಂಟಿ ಇಲ್ಲ. ಈ ನಡುವೆ ಲಂಕಾದಲ್ಲಿ ಆಹಾರ ಮತ್ತು ಔಷಧಗಳ ಕೊರತೆಯೂ ಹೆಚ್ಚಾಗಿದೆ. ಇದರಿಂದಾಗಿ ಕಳೆದ ಕೆಲವು ದಿನಗಳಿಂದ ಇಲ್ಲಿ ವೇಶ್ಯಾವಾಟಿಕೆ ತೀವ್ರವಾಗಿ ಹೆಚ್ಚಿದೆ. ಇಲ್ಲಿ ಆಯುರ್ವೇದಿಕ್ ಸ್ಪಾ ಸೆಂಟರ್ ನೆಪದಲ್ಲಿ ಅನೇಕ ಮಹಿಳೆಯರು ವೇಶ್ಯಾವಾಟಿಕೆಗೆ ಇಳಿಯುತ್ತಿದ್ದಾರೆ. ಕೊಲಂಬೊ ಹಾಗೂ ಅದರ ಸಮೀಪದ ಹೆಚ್ಚಿನ ಸ್ಪಾ ಕೇಂದ್ರಗಳಲ್ಲಿ ಕರ್ಟನ್ ಹಾಗೂ ಹಾಸಿಗೆಯ ವ್ಯವಸ್ಥೆಗಳನ್ನು ಮಾಡುವ ಮೂಲಕ ತಾತ್ಕಾಲಿಕ ವೇಶ್ಯಾಗೃಹಗಳಾಗಿ ಪರಿವರ್ತಿಸಲಾಗುತ್ತಿದೆ. ಪ್ರಸ್ತುತ ಪರಿಸ್ಥಿತಿಯಿಂದಾಗಿ ಜವಳಿ ಉದ್ಯಮದಲ್ಲಿ ಉದ್ಯೋಗ ಕಳೆದುಕೊಳ್ಳುವ ಭಯದಲ್ಲಿರುವ ಅನೇಕ ಮಹಿಳಾ ಕಾರ್ಮಿಕರು ಆದಾಯ ಕಡಿಮೆ ಆಗದೇ ಇರುವ ನಿಟ್ಟಿನಲ್ಲಿ ಪರ್ಯಾಯ ಉದ್ಯೋಗವನ್ನು ಹುಡುಕುತ್ತಿದ್ದಾರೆ ಶ್ರೀಲಂಕಾದ ದಿ ಮಾರ್ನಿಂಗ್ ಪತ್ರಿಕೆ ನಡೆಸಿದ ತನಿಖಾ ವರದಿಯಲ್ಲಿ ಬಹಿರಂಗವಾಗಿದೆ.
ವೇಶ್ಯಾವಾಟಿಕೆ ಶೇ. 30ರಷ್ಟು ಹೆಚ್ಚಳ: “ದೇಶದಲ್ಲಿನ ಆರ್ಥಿಕ ಬಿಕ್ಕಟ್ಟಿನಿಂದಾಗಿ ನಾವು ನಮ್ಮ ಉದ್ಯೋಗಗಳನ್ನು ಕಳೆದುಕೊಳ್ಳಬಹುದು ಎಂದು ನಾವು ಕೇಳಿದ್ದೇವೆ ಮತ್ತು ಈ ಸಮಯದಲ್ಲಿ ನಾವು ನೋಡಬಹುದಾದ ಉತ್ತಮ ಪರಿಹಾರವೆಂದರೆ ಲೈಂಗಿಕ ಕೆಲಸ. ನಮ್ಮ ತಿಂಗಳ ಸಂಬಳ ಸುಮಾರು ರೂ. 28,000. ಓವರ್‌ಟೈಮ್ ಕೆಲಸ ಮಾಡಿದರೆ, ತಿಂಗಳಿಗೆ 35 ಸಾವಿರ ಸಿಗಬಹುದು. ಆದರೆ, ಸೆಕ್ಸ್ ವರ್ಕ್‌ನಲ್ಲಿ ದಿನಕ್ಕೆ 15 ಸಾವಿರಕ್ಕಿತ ಹೆಚ್ಚು ದುಡಿಯಬಹುದು. ಹಾಗಂತ ನನ್ನ ಮಾತನ್ನು ಎಲ್ಲರೂ ಒಪ್ಪುವುದಿಲ್ಲ. ಆದರೆ, ಇದು ನಿಜ' ಎಂದು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬಳು ಪತ್ರಿಕೆಯೊಂದಿಗೆ ಮಾತನಾಡಿದ್ದಾರೆ. ಇಂಗ್ಲೆಂಡ್‌ನ ದಿ ಟೆಲಿಗ್ರಾಫ್ ತನ್ನ ವರದಿಯೊಂದರಲ್ಲಿ ಈ ವರ್ಷದ ಜನವರಿಯಿಂದ ಕೊಲಂಬೊವು ಲೈಂಗಿಕ ಕೆಲಸದಲ್ಲಿ ತೊಡಗಿರುವ ಮಹಿಳೆಯರ ಸಂಖ್ಯೆಯಲ್ಲಿ 30 ಪ್ರತಿಶತದಷ್ಟು ಹೆಚ್ಚಳವನ್ನು ಕಂಡಿದೆ ಎಂದು ವರದಿ ಮಾಡಿದೆ.
ಇದನ್ನೂ ಓದಿ: Sri Lanka Crisis: ಗೋಟಬಯ ರಾಜಪಕ್ಸ ರಾಜೀನಾಮೆ ನೀಡದಿದ್ದರೆ ಸಂಸತ್ತು ವಶಕ್ಕೆ; ಪ್ರತಿಟಭನಾಕಾರರ ಬೆದರಿಕೆ
ಲಂಕಾದಲ್ಲಿ ಉಳಿದಿರುವ ಕೆಲವೇ ಕೆಲಸ: ವರದಿಯ ಪ್ರಕಾರ, ಗಾರ್ಮೆಂಟ್ಸ್‌ನಲ್ಲಿ(Apparel worker) ಕೆಲಸ ಮಾಡುವ ಈ ಮಹಿಳೆಯರು ಕೊಲಂಬೊದ ಗ್ರಾಮಾಂತರ ಭಾಗದಿಂದ ಬಂದವರು. ಈ ವರದಿಗಳು ಸ್ಟ್ಯಾಂಡ್ ಅಪ್ ಮೂವ್‌ಮೆಂಟ್ ಲಂಕಾ (SUML) ಅನ್ನು ಉಲ್ಲೇಖಿಸಿವೆ, ಇದು ಶ್ರೀಲಂಕಾದಲ್ಲಿ (Sri Lanka) ಲೈಂಗಿಕ ಕೆಲಸಗಾರರ ಪರವಾಗಿ ವಕಾಲತ್ತು ವಹಿಸುವ ಸಂಸ್ಥೆಯಾಗಿದೆ. ಈ ಮಹಿಳೆಯರು ತಮ್ಮ ಮಕ್ಕಳು, ಪೋಷಕರು ಮತ್ತು ಒಡಹುಟ್ಟಿದವರ ಭಾರವನ್ನು ಹೊರುತ್ತಾರೆ. ಎಂದು ಎಸ್‌ಯುಎಂಎಲ್ ಕಾರ್ಯನಿರ್ವಾಹಕ ನಿರ್ದೇಶಕಿ ಆಶಿಲಾ ದಾಂಡೇನಿಯಾ (Ashila Dandeniya,) ಹೇಳಿದ್ದಾರೆಂದು ವರದಿ ಉಲ್ಲೇಖಿಸಿದೆ. ಶ್ರೀಲಂಕಾದಲ್ಲಿ ಉಳಿದಿರುವ ಕೆಲವೇ ಕೆಲವು ಉದ್ಯಮಗಳಲ್ಲಿ ಸೆಕ್ಸ್ ವರ್ಕ್ ಕೂಡ ಒಂದಾಗಿದೆ. ಇದು ಬಹಳ ಬೇಗನೆ ಹಣವನ್ನು ಗಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Sri Lanka Crisis ಪರಾರಿಯಾಗಲ್ಲ ಎಂದಿದ್ರು ಗೊಟಬಯ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಜಯಸೂರ್ಯ!
ಬಡ ಮಹಿಳೆಯರ ಬವಣೆ ಹೇಳತೀರದು: ಶ್ರೀಲಂಕಾದಲ್ಲಿ ವೇಶ್ಯಾವಾಟಿಕೆ ಹೆಚ್ಚಳಕ್ಕೆ ಸಾಕಷ್ಟು ಕಾರಣಗಳಿವೆ, ಅದರಲ್ಲಿ ಪ್ರಮುಖವಾದುದು ಹಣದುಬ್ಬರ. ದ್ವೀಪದೇಶದಲ್ಲಿ ಇಂಧನ, ಆಹಾರ ಮತ್ತು ಔಷಧಿಗಳ ಕೊರತೆಯು ಮಹಿಳೆಯರ ಪರಿಸ್ಥಿತಿಯನ್ನು ಇನ್ನಷ್ಟು ಹದೆಗೆಡುವಂತೆ ಮಾಡಿದೆ. ಆಹಾರ ಮತ್ತು ಔಷಧಿಗಳಂತಹ ಅಗತ್ಯಗಳಿಗೆ ಪ್ರತಿಯಾಗಿ ಸ್ಥಳೀಯ ಅಂಗಡಿಯವರೊಂದಿಗೆ ಲೈಂಗಿಕತೆಯನ್ನು ಹೊಂದಲು ಮಹಿಳೆಯರಿಗೆ ಬಲವಂತಪಡಿಸಲಾಗುತ್ತಿದೆ ಎಂದು ಹಲವಾರು ವರದಿಗಳು ಪ್ರಕಟವಾಗಿದೆ. ಕೊಲಂಬೊದ ಬಂಡಾರನಾಯಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಕೈಗಾರಿಕಾ ಪ್ರದೇಶದಲ್ಲಿ ವೇಶ್ಯಾವಾಟಿಕೆ ವ್ಯಾಪಾರವನ್ನು ಉತ್ತೇಜಿಸಲಾಗುತ್ತಿದೆ ಎಂದು ವರದಿಯಾಗಿದೆ. ರಕ್ಷಣೆಯ ಬದಲಾಗಿ ವೇಶ್ಯಾಗೃಹದ ಮಾಲೀಕರು ಮಹಿಳೆಯರನ್ನು ಪೊಲೀಸ್ ಸಿಬ್ಬಂದಿಯೊಂದಿಗೆ ಮಲಗುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.