Budget 2023: ಕೆಂಪು ಸೀರೆ, ಕೆಂಪು ಬಿಂದಿ ಧರಿಸಿ ಕೆಂಪು ಟ್ಯಾಬ್ ಹಿಡಿದು ಬಂದ ವಿತ್ತ ಸಚಿವೆ
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯ ವೇಳೆ ಉಡುವ ಸೀರೆ ಪ್ರತಿ ವರ್ಷ ಎಲ್ಲರ ಗಮನ ಸೆಳೆಯುತ್ತದೆ. ಸಾಂಪ್ರದಾಯಿಕ ಕೈಮಗ್ಗದ ಸೀರೆಯನ್ನು ಇಷ್ಟಪಡುವ ಸಚಿವೆ ಈ ಬಾರಿಯೂ ಬಜೆಟ್ ಮಂಡನೆಯ ಸಂದರ್ಭ ಬಾಗಲಕೋಟೆಯ ಇಳಕಲ್ ಸೀರೆಯನ್ನು ಉಟ್ಟಿದ್ದದರು. ಗಾಢ ಕೆಂಪು ಬಣ್ಣದ ಸೀರೆ, ಕೆಂಪು ಬಿಂದಿ, ಕೆಂಪು ಟ್ಯಾಬ್‌ನಲ್ಲಿ ಕಾಣಿಸಿಕೊಂಡಿದ್ದು ವಿಶೇಷ.
ಕೇಂದ್ರ ಬಜೆಟ್ ಮಂಡನೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಧರಿಸಿದ ಸೀರೆಗಳು ಪ್ರತಿ ಬಾರಿಯೂ ಮಹತ್ವವನ್ನು ಪಡೆದುಕೊಂಡಿವೆ. ಕೈಮಗ್ಗದ ಸೀರೆಯನ್ನು ಇಷ್ಟಪಡುವ ಸಚಿವೆ ಈ ಬಾರಿಯೂ ಅಂಥಾ ಸೀರೆಗಳ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 5ನೇ ಬಜೆಟ್ ಮಂಡನೆಗಾಗಿ ಗಾಢ ಕೆಂಪು ಬಣ್ಣದ ಇಳಕಲ್ ಸೀರೆಯನ್ನು ಉಟ್ಟಿದ್ದರು. ಮಾತ್ರವಲ್ಲ ಕೆಂಪು ಬಿಂದಿ ಹಾಕಿಕೊಂಡು ಕೆಂಪು ಡಿಜಿಟಲ್ ಟ್ಯಾಬ್ ಹಿಡಿದುಕೊಂಡಿದ್ದರು.
ಗಾಢ ಕೆಂಪು ಬಣ್ಣದ ಇಳಕಲ್ ಸೀರೆ ಉಟ್ಟಿದ್ದ ನಿರ್ಮಲಾ ಸೀತಾರಾಮನ್
2019ರಲ್ಲಿ ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಬಂದ ನಂತರ ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ದಿನ ಕೈಮಗ್ಗ ಸೀರೆಗಳನ್ನು (Handloom saree) ಧರಿಸುತ್ತಾ ಬಂದಿದ್ದಾರೆ. ಭಾರತೀಯ ಸೀರೆ ಎಂದರೆ ಹಣಕಾಸು ಸಚಿವೆಗೆ ಸಹಜವಾಗಿ ಅಚ್ಚುಮೆಚ್ಚು. ಕೈಮಗ್ಗ ಸೀರೆಯನ್ನು ಉತ್ತೇಜಿಸುವ ಬಗ್ಗೆ ಈ ಸೀರೆಯ ವಿಶೇಷತೆ (Importance) ಬಗ್ಗೆ ಮಾತನಾಡುವುದುಂಟು. 2019ರಲ್ಲಿ, ಅವರು ಭಾರತೀಯ ಜವಳಿಗಳ ಮೇಲಿನ ತಮ್ಮ ಪ್ರೀತಿ (Love)ಯನ್ನು ವ್ಯಕ್ತಪಡಿಸಿದ್ದರು. 'ರೇಷ್ಮೆ ಅಥವಾ ಹತ್ತಿ, ಒರಿಸ್ಸಾ-ಕೈಮಗ್ಗ ಸೀರೆಗಳು ನನ್ನ ಅಚ್ಚುಮೆಚ್ಚು. ಅವುಗಳ ಬಣ್ಣ, ನೇಯ್ಗೆ, ವಿನ್ಯಾಸ, ತುಂಬಾ ಚೆನ್ನಾಗಿರುತ್ತದೆ' ಎಂದು ಹೇಳಿಕೊಂಡಿದ್ದರು.
ಸಚಿವೆ ನಿರ್ಮಲಾ ಉಟ್ಟ ಇಳಕಲ್ ಸೀರೆಗೆ ಕಸೂತಿ ಮಾಡಿದ್ದು ಧಾರವಾಡದ ಮಹಿಳಾಮಣಿಗಳು
ಈ ವರ್ಷ ಸಚಿವೆ ಗಾಢ ಕೆಂಪು ಬಣ್ಣದ ಇಳಕಲ್ ಸೀರೆ (Ilkal saree)ಯನ್ನು ಧರಿಸಿದ್ದಾರೆ . ಈ ಸೀರೆಗೆ ವಿಶೇಷವಾಗಿ ಧಾರವಾಡ ನಗರದ ಮಹಿಳೆಯರು ಕಸೂತಿ ಹಾಕಿದ್ದಾರೆ. ಇಲ್ಲಿನ ನಾರಾಯಣಪುರದಲ್ಲಿ ಇರುವ ಆರತಿ ಹಿರೇಮಠ ಮಾಲೀಕತ್ವದ ಆರತಿ ಕ್ರಾಪ್ಟ್ಸ್‌ನ ಮಹಿಳಾಮಣಿಗಳು ಅನ್ನುವುದು ಇನ್ನೂ ವಿಶೇಷ. ಜಿಲ್ಲೆಯ ಸಂಸದರು, ಕೇಂದ್ರ ಸಚಿವರು ಆಗಿರುವ ಪ್ರಲ್ಹಾದ ಜೋಶಿ ಅವರು ನವಲಗುಂದ ಕಸೂತಿ ಕಲೆ ಬಗ್ಗೆ, ಸಾಂಸ್ಕೃತಿಕ ಶ್ರೀಮಂತಿಕೆ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾರ್ಯಕ್ರಮ (Programme) ಒಂದರಲ್ಲಿ ವಿವರಿಸಿ, ಈ ಸೀರೆಗಳನ್ನು ಜಿಲ್ಲೆಯ ಪರವಾಗಿ ಉಡುಗೊರೆ (Gift)ಯಾಗಿ ನೀಡಿದ್ದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿ ಸೈಯದ್ ನಯೀಮ್ ಅಹ್ಮದ ಮೂಲಕ ಕಸೂತಿ ಪರಿಣಿತರನ್ನು ಗುರುತಿಸಿ, ಕಸೂತಿ ಸೀರೆ (Saree) ತಯಾರಿಗೆ ಸೂಚಿಸಿದ್ದರು. ಆರತಿ ಕ್ರಾಪ್ಟ್ಸ್ ಮಾಲೀಕರಾದ ಆರತಿ ಹಿರೇಮಠ ಅವರು ಸಂತಸದಿಂದ ಕಸೂತಿ ಕಾರ್ಯ ಆರಂಭಿಸಿದ್ದರು. ಧರಿಸಿರುವ ಸೀರೆ ಸಾಂಪ್ರದಾಯಿಕ ಟೆಂಪಲ್ ಬಾರ್ಡರ್ ಸೀರೆ ಎಂದು ಕರೆಯಲಾಗುತ್ತದೆ. ಟೆಂಪಲ್ ಸೀರೆಗಳು ಸಾಮಾನ್ಯವಾಗಿ ಹತ್ತಿ, ರೇಷ್ಮೆ ಅಥವಾ ಎರಡೂ ಮಿಶ್ರಣವಿರುವ ಸೀರೆಗಳಾಗಿರುತ್ತವೆ.
ಇಳಕಲ್ ಸೀರೆ ಅಂದ್ರೆ ಸುಮ್ನೆ ಏನಲ್ಲ..ಸಾಂಪ್ರದಾಯಿಕ ಸೀರೆಗಿದೆ 1000 ವರ್ಷದ ಇತಿಹಾಸ
ಕೆಂಪು ಬಣ್ಣದ ಬಿಂದಿ: ಕೆಂಪು ಬಣ್ಣದ ಸೀರೆಯ ಜೊತೆಗೆ ಸಚಿವೆ ಕೆಂಪು ಬಿಂದಿ ಹಾಗೂ ಕೆಂಪು ಟ್ಯಾಬ್‌ನ್ನು ಸಹ ಹಿಡಿದುಕೊಂಡಿದಿದ್ದು ವಿಶೇಷ. ಕೆಂಪು ಬಣ್ಣ ಪ್ರೀತಿ, ಬದ್ಧತೆ, ಶಕ್ತಿ ಮತ್ತು ಧೈರ್ಯಗಳನ್ನು ಸೂಚಿಸುತ್ತದೆ. ಹಿಂದೂ ಸಂಪ್ರದಾಯದಲ್ಲಿ ಕೆಂಪು ಬಣ್ಣ ದುರ್ಗೆ ದೇವಿಗೆ ಹೋಲಿಕೆ ಮಾಡಲಾಗುತ್ತದೆ. ದುರ್ಗೆ ದೇವಿ ಸ್ತ್ರೀಯರ ಶಕ್ತಿ, ಸಾಮರ್ಥ್ಯದ ಸಂಕೇತವಾಗಿದೆ.
ಕೆಂಪು ಡಿಜಿಟಲ್ ಟ್ಯಾಬ್: ಕೇವಲ ಕೆಂಪು ಸೀರೆ ಮಾತ್ರವಲ್ಲದೆ, ಕೈಯಲ್ಲಿ ಬಜೆಟ್ ಪ್ರತಿಗಳನ್ನು ಕೆಂಪು ಡಿಜಿಟಲ್ ಟ್ಯಾಬ್ ನಲ್ಲಿ ಇರಿಸಲಾಗಿದೆ. ಕೆಂಪು ಬಣ್ಣದಲ್ಲಿ ಸಾಂಪ್ರದಾಯಿಕವಾಗಿ ನಿರ್ಮಲಾ ಸೀತಾರಾಮನ್ ಮಿಂಚುತ್ತಿದ್ದಾರೆ. ಹಣೆಗೊಂದು ಸಣ್ಣ ತಿಲಕ ಮತ್ತು ಚಿನ್ನದ ಬಳೆಗಳನ್ನು ಧರಿಸಿದ್ದಾರೆ.