ಮಹಿಳೆಯರು ಸ್ಟ್ರಾಂಗು ಅಂತ ಕಂಡು ಹಿಡಿಯೋದು ಹೇಗೆ?

ಮನಸ್ಸು ನಮ್ಮ ಜೀವನದಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತದೆ. ಇಡೀ ದೇಹವನ್ನು ನಿಯಂತ್ರಿಸುವ ಶಕ್ತಿ ಮನಸ್ಸಿಗಿದೆ. ದೈಹಿಕ ಬಲಕ್ಕಿಂತ ಮಾನಸಿಕ ಬಲ ಬಹಳ ಮುಖ್ಯ. ಒಬ್ಬ ಮಹಿಳೆ ಮಾನಸಿಕವಾಗಿ ಬಲ ಹೊಂದಿದ್ದಾಳೆ ಎಂಬುದನ್ನು ಆಕೆಯ ವರ್ತನೆಯಿಂದ ಕಂಡು ಹಿಡಿಯಬಹುದು. 
 

Characteristics of women who are mentally strong tips to find out

ತಿಂದು ಉಂಡು ದಪ್ಪಗಿರುವ ಮಹಿಳೆ ಆರೋಗ್ಯವಾಗಿದ್ದಾಳೆ ಎನ್ನಲು ಸಾಧ್ಯವಿಲ್ಲ. ಆರೋಗ್ಯ ಎನ್ನುವುದನ್ನು ಎರಡು ರೀತಿ ವಿಂಗಡಿಸಬೇಕಾಗುತ್ತದೆ. ಒಂದು ದೈಹಿಕ ಆರೋಗ್ಯವಾದ್ರೆ ಇನ್ನೊಂದು ಮಾನಸಿಕ ಆರೋಗ್ಯ. ಯಾವ ವ್ಯಕ್ತಿ ಮಾನಸಿಕವಾಗಿ ಆರೋಗ್ಯವಾಗಿದ್ದಾನೋ ಆ ವ್ಯಕ್ತಿಯನ್ನು ಬಲಶಾಲಿ ಎನ್ನಬಹುದು. ಮನಸ್ಸು ಬೆಂಬಲ ನೀಡಿದ್ರೆ ವ್ಯಕ್ತಿ ಯಾವ ಕೆಲಸವನ್ನಾದ್ರೂ ಸುಲಭವಾಗಿ ಮಾಡಬಲ್ಲ. ಮಹಿಳೆಯು ಮಾನಸಿಕವಾಗಿ ಬಲಶಾಲಿಯಾದಾಗ ಮಾತ್ರ ಅವಳು ಸದೃಢವಾಗಿರಲು ಸಾಧ್ಯ.  

ಮಹಿಳೆ (Women) ಯನ್ನು ನೋಡಿದ ತಕ್ಷಣ ಆಕೆ ಮಾನಸಿಕ (Mental) ವಾಗಿ ಸದೃಢ ಮಹಿಳೆ ಎಂದು ಹೇಳಲು ಕಷ್ಟ. ಮಹಿಳೆ ಮಾನಸಿಕವಾಗಿ ಬಲ ಹೊಂದಿದ್ದಾಳೆ ಎಂಬುದನ್ನು ನೀವು ಆಕೆಯ ಕೆಲ ಹವ್ಯಾಸ (hobby) ದಿಂದ ಪತ್ತೆ ಮಾಡಬಹುದು. ನಾವಿಂದು ಮಹಿಳೆ ಮಾನಸಿಕವಾಗಿ ಬಲಶಾಲಿಯೇ ಇಲ್ಲ ದುರ್ಬಲವಾಗಿದ್ದಾಳೆಯೇ ಎಂಬುದನ್ನು ಪತ್ತೆ ಹಚ್ಚುವುದು ಹೇಗೆ ಎಂಬುದನ್ನು ನಿಮಗೆ ಹೇಳ್ತೇವೆ. 

ಮಾನಸಿಕವಾಗಿ ಸದೃಢರಾದ ಮಹಿಳೆಯಲ್ಲಿರುತ್ತೆ ಈ ಸ್ವಭಾವ :
ಕಷ್ಟ ಎದುರಿಸುವ ಶಕ್ತಿ :
ಯಾವುದೇ ಮಹಿಳೆ ಕಷ್ಟವನ್ನು ಧೈರ್ಯವಾಗಿ ಎದುರಿಸುತ್ತಾಳೆಂದ್ರೆ ಆಕೆ ಮಾನಸಿಕವಾಗಿ ಬಲ ಹೊಂದಿದ್ದಾಳೆ ಎನ್ನಬಹುದು. ಯಾವುದೇ ಸನ್ನಿವೇಶ (Situation) ಬಂದ್ರೂ ಅದನ್ನು ಬಲಶಾಲಿ ಮಹಿಳೆ ಸ್ವೀಕರಿಸುತ್ತಾಳೆ. ಕಷ್ಟವನ್ನು ಮೆಟ್ಟಿ ನಿಲ್ಲಲು ತನ್ನನ್ನು ಸದೃಢಗೊಳಿಸುತ್ತಾಳೆ. ಸಣ್ಣ ವಿಚಾರಕ್ಕೆ ಕೈ ಚೆಲ್ಲಿ ಕುಳಿತು ಅಳುವ ಬದಲು ಅದಕ್ಕೆ ಪರಿಹಾರವೇನು ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಸ್ತಾಳೆ.

ವಯಸ್ಸು ಒಪ್ಪಿಕೊಳ್ಳುವ ಮಹಿಳೆ: ಬರೀ ವಯಸ್ಸು ಮಾತ್ರವಲ್ಲ ಬದಲಾವಣೆಯನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುವ ಮಹಿಳೆಯನ್ನು ಬಲಶಾಲಿ ಮಹಿಳೆ ಎನ್ನಬಹುದು. ವಯಸ್ಸು ಹೆಚ್ಚಾಗ್ತಿದ್ದರೆ ಅದಕ್ಕೆ ಬೇಸರಗೊಳ್ಳದೆ, ಪರಿಸ್ಥಿತಿ ಬದಲಾಗ್ತಿರುತ್ತದೆ ಎಂಬುದನ್ನು ಅರಿತು ಮುನ್ನಡೆಯುವ ಮಹಿಳೆ ಮಾನಸಿಕವಾಗಿ ಸದೃಢಳಾಗಿರುತ್ತಾಳೆ.

ಗರ್ಭಾವಸ್ಥೆಯಲ್ಲಿ ಕ್ರಾಸ್ ಲೆಗ್ ಮಾಡಿ ಕುಳಿತುಕೊಳ್ಳೋದು ಸುರಕ್ಷಿತವೇ?

ತಾಳ್ಮೆಯಿಂದ (Patience) ಕೆಲಸ ಮಾಡುವ ಮಹಿಳೆ:  ಸಣ್ಣಪುಟ್ಟ ವಿಷಯಗಳಿಗೂ ಗಲಾಟೆ ಮಾಡದಿರುವ ಮಹಿಳೆಯರು. ಸಣ್ಣ ವಿಚಾರಕ್ಕೆ ಗಲಾಟೆ ಮಾಡುವ ಬದಲು ಆ ವಿಚಾರವನ್ನು ತಾಳ್ಮೆಯಿಂದ ಬಗೆಹರಿಸುವ ಮಹಿಳೆಯನ್ನು ಮಾನಸಿಕವಾಗಿ ಬಲವುಳ್ಳ ಮಹಿಳೆ ಎನ್ನಬಹುದು. ಈ ಮಹಿಳೆಯರು ಸಣ್ಣ ವಿಷ್ಯಕ್ಕೆ ಕೂಗಾಡಿ, ದೊಡ್ಡ ರಾದ್ದಾಂತ ಮಾಡುವ ಬದಲು ಅದನ್ನು ತಾಳ್ಮೆಯಿಂದ ಬಗೆಹರಿಸಲು ಪ್ರಯತ್ನಿಸುತ್ತಾರೆ.

ತೋರುಗಾಣಿಕೆ ಇಲ್ಲದ ಮಹಿಳೆ : ಬೇರೆಯವರನ್ನು ಮೆಚ್ಚಿಸಲು ಪ್ರಯತ್ನಿಸುವ ಮಹಿಳೆಯನ್ನು ದುರ್ಬಲ ಮಹಿಳೆ ಎನ್ನಬಹುದು.  ಬೇರೆಯವರನ್ನು ಮೆಚ್ಚಿಸಲು ಬಾಹ್ಯ ಸೌಂದರ್ಯವನ್ನು (Physical Beauty) ಬದಲಿಸಿಕೊಳ್ಳದ ಮಹಿಳೆ ಮಾನಸಿಕವಾಗಿ ಬಲ ಹೊಂದಿರುತ್ತಾಳೆ. ಸೌಂದರ್ಯಕ್ಕಿಂತ ತಮ್ಮ ಸಾಮರ್ಥ್ಯದ ಮೇಲೆ ಇವರಿಗೆ ನಂಬಿಕೆ ಇರುತ್ತದೆ. ತಮ್ಮ ಆಂತರಿಕ ಸೌಂದರ್ಯವನ್ನು (Inner Beauty) ಇಷ್ಟಪಡುವ ಮಹಿಳೆಯರು ಇದ್ರ ಮೂಲಕ ತಮ್ಮ ಮೇಲೆ ನಂಬಿಕೆ ಹೊಂದಿರುತ್ತಾರೆ.  

ಹಿಂದಿನ ವಿಷ್ಯಕ್ಕೆ ಜೋತು ಬೀಳದ ಮಹಿಳೆ: ಹಿಂದಿನ ಘಟನೆಗಳನ್ನು ಮೆಲುಕು ಹಾಕುತ್ತ ಅದರಲ್ಲಿ ಜೀವನ ಸಾಗಿಸುವ ಬದಲು ವರ್ತಮಾನದಲ್ಲಿ (Live the presence) ಬದುಕಿ, ಭವಿಷ್ಯದ (Future) ಬಗ್ಗೆ ಆಲೋಚನೆ ಮಾಡುವ ಮಹಿಳೆಯನ್ನು ಮಾನಸಿಕವಾಗಿ ಸದೃಢವಾಗಿರುವ ಮಹಿಳೆ ಎನ್ನಬಹುದು. ಇಂಥ ಮಹಿಳೆಯರು ತಮ್ಮ ಜೊತೆ ಇತರರಿಗೂ ಸ್ಪೂರ್ತಿಯಾಗಿರುತ್ತಾರೆ. 

ಅಸೂಯೆ (jealous) ಇಲ್ಲದ ಮಹಿಳೆ : ಬೇರೆಯವರ ಯಶಸ್ಸಿನ ಬಗ್ಗೆ ಅಸೂಯೆಪಡದ ಮಹಿಳೆಯರನ್ನು ನೀವು ಮಾನಸಿಕವಾಗಿ ಬಲ ಹೊಂದಿರುವ ಮಹಿಳೆ ಎನ್ನಬಹುದು. ಬೇರೆಯವರ ಯಶಸ್ಸನ್ನು ನೋಡಿ ಅವಳು ಆನಂದಿಸುತ್ತಾಳೆ. ಅವರನ್ನು ಹುರಿದುಂಬಿಸುತ್ತಾಳೆ. ಅವರನ್ನು ನೋಡಿ ಕಲಿಯುವ ಪ್ರಯತ್ನ ನಡೆಸುತ್ತಾಳೆ.   

ಆತ್ಮವಿಶ್ವಾಸವಿರುವ (Confidence) ಮಹಿಳೆ : ಆತ್ಮವಿಶ್ವಾಸವೊಂದಿದ್ದರೆ ಎಲ್ಲವನ್ನೂ ಜಯಿಸಬಹುದು. ಬೇರೆಯವರನ್ನು ಅವಲಂಬಿಸುವ ಅಗತ್ಯ ಇರೋದಿಲ್ಲ.  ಒಂಟಿಯಾಗಿ ಜೀವನ ನಡೆಸಲೂ ಈ ಮಹಿಳೆಯರು ಹೆದರುವುದಿಲ್ಲ. ಅವರಿಗೆ ಎಲ್ಲಿಗೆ ಬೇಕಾದ್ರೂ ಒಂಟಿಯಾಗಿ ಹೋಗಬಲ್ಲರು. ತಮ್ಮದೆ ನಿಯಮದ ಮೇಲೆ ಅವರು ಜೀವನ ನಡೆಸುತ್ತಾರೆ. 

ಗೊಂದಲವಿಲ್ಲದ ಮಹಿಳೆ : ಗೊಂದಲವಿಲ್ಲದೆ ಸರಳ ಜೀವನ ನಡೆಸುವ ಮಹಿಳೆಯನ್ನು ಮಾನಸಿಕ ಬಲವುಳ್ಳ ಮಹಿಳೆ ಎನ್ನಬಹುದು. ಆಕೆ ಯಾವಾಗ್ಲೂ ವಾಸ್ತವದಲ್ಲಿ ನಂಬಿಕೆ ಇಡುತ್ತಾಳೆ. 

'ಬಡವನಾದರೇನು ಪ್ರಿಯೇ?...' ಈಗಿನ ಕಾಲದ ಹೆಣ್ಣು ಮಕ್ಕಳು ಕೇಳ್ತಾರಾ?

ಸ್ವಂತಿಕೆ, ಧೈರ್ಯ (Courage) : ಯಾರೋ ಹೇಳಿದ ಮಾತಿಗೆ ಕಿವಿಗೊಡದೆ ತನ್ನ ಸ್ವಂತ ನಿರ್ಧಾರದ ಮೇಲೆ ಭರವಸೆಯಿಡುವ ಮಹಿಳೆ ಮಾನಸಿಕವಾಗಿ ಸದೃಢಳಾಗಿರುತ್ತಾಳೆ. ಆಕೆ ಯಾವುದೇ ಭ್ರಮೆಗೆ (Illusion) ಒಳಗಾಗುವುದಿಲ್ಲ. ದಾಂಪತ್ಯ ಮುರಿದು ಬಿದ್ದಾಗ ಅಥವಾ ಕುಟುಂಬಸ್ಥರು ಸಾವನ್ನಪ್ಪಿದಾಗ ಧೈರ್ಯ ಕಳೆದುಕೊಳ್ಳದೆ, ಅದನ್ನು ನಿಭಾಯಿಸುವ ಮಹಿಳೆ ಮಾನಸಿಕವಾಗಿ ಸದೃಢಳಾಗಿರುತ್ತಾಳೆ. 

 

Characteristics of women who are mentally strong tips to find out


 

Latest Videos
Follow Us:
Download App:
  • android
  • ios