'ಬಡವನಾದರೇನು ಪ್ರಿಯೇ?...' ಈಗಿನ ಕಾಲದ ಹೆಣ್ಣು ಮಕ್ಕಳು ಕೇಳ್ತಾರಾ?

ಎರಡು ಕಣ್ಣಿನಲ್ಲಿ ಯಾವುದು ಮುಖ್ಯ ಎಂದು ಕೇಳಿದಾಗ ಉತ್ತರ ಹೇಳೋದು ಕಷ್ಟ. ಹಾಗೆಯೇ ಪ್ರೀತಿ ಹಾಗೂ ಹಣದಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಕಷ್ಟ. ಪ್ರೀತಿ ಜೊತೆ ಜೀವನ ನಡೆಸಲು ಸ್ವಲ್ಪ ಹಣ ಬೇಕೇಬೇಕು.  
 

Money And Relationships Settle In This Way

ಬಡತನ ಬಾಗಿಲಿಗೆ ಬಂದಾಗ ಪ್ರೀತಿ ಕಿಟಕಿಯಿಂದ ಹಾರಿ ಹೋಯ್ತು ಎನ್ನುವ ಮಾತಿದೆ.  ಗೌರವ, ಪ್ರಾಮಾಣಿಕತೆ ಪ್ರೀತಿ ಮೇಲೆ ನಿಂತಿರುತ್ತದೆ. ಆದ್ರೆ ಇದ್ರ ಮಧ್ಯೆ ಹಣ ಬಂದಾಗ ಪ್ರೀತಿ ಮಾಯವಾಗುತ್ತದೆ. ನಿಮ್ಮ ಬಳಿ ಬಂದು ಪ್ರೀತಿ ಮುಖ್ಯವೇ, ಹಣ ಮುಖ್ಯವೇ ಎಂದು ಕೇಳಿದಾಗ ಉತ್ತರ ನೀಡುವುದು ಕಷ್ಟ. ಪ್ರತಿಯೊಬ್ಬರ ಉತ್ತರವೂ ಭಿನ್ನವಾಗಿರುತ್ತದೆ. ಅನೇಕರಿಗೆ ಪ್ರೀತಿಗಿಂತ ಹಣ ಮುಖ್ಯವಾಗಿರುತ್ತದೆ. ಮತ್ತೆ ಕೆಲವರಿಗೆ ಹಣಕ್ಕಿಂತ ಪ್ರೀತಿ ಮುಖ್ಯವಾಗಿರುತ್ತದೆ. 

ಕೆಲವರು ಪ್ರೀತಿ (Love) ಗಾಗಿ ಹಣ ಮತ್ತು ಸಂಪತ್ತನ್ನು ತೊರೆದರೆ, ಅನೇಕರು ಹಣ (Money) ಕ್ಕಾಗಿ ಪ್ರೀತಿಯನ್ನು ಬಿಡುತ್ತಾರೆ. ಪ್ರೀತಿ ಮುಖ್ಯ ಎನ್ನುವವರು ಕೂಡ  ಸಾಮಾನ್ಯ ಜೀವನವನ್ನು ನಡೆಸಲು ಸಾಕಷ್ಟು ಹಣ ಬೇಕು ಎನ್ನುತ್ತಾರೆ.  ಪ್ರೀತಿಯಲ್ಲಿರುವ ಶಾಂತಿ (Peace), ಹಣದಲ್ಲಿ ಇಲ್ಲ ಎನ್ನುವವರಿದ್ದಾರೆ. ಹಣದಿಂದ ಎಲ್ಲವನ್ನೂ ಖರೀದಿಸಬಹುದು. ಆದ್ರೆ ಪ್ರೀತಿಯನ್ನು ಹಣದಿಂದ ಖರೀದಿಸಲು ಸಾಧ್ಯವಿಲ್ಲ ಎನ್ನುವವರಿದ್ದಾರೆ. ಪ್ರೀತಿ ಹಾಗೂ ಹಣದ ಬಗ್ಗೆ ಜನರು ಏನು ಹೇಳ್ತಾರೆ ಎನ್ನುವುದನ್ನು ಕೇಳೋಣ.

ಹಣದ ಕಾರಣದಿಂದಾಗಿ ಹಲವು ವರ್ಷಗಳ ಸಂಬಂಧಗಳು ಮುರಿದು ಹೋಗಿದೆ. ಆದ್ರೆ ಇತ್ತೀಚಿಗೆ ನಡೆದ ಹೊಸ ಅಧ್ಯಯನ (Study) ದ ಪ್ರಕಾರ, ಅನೇಕ ಜನರ ಆಲೋಚನೆ ಈಗ ಬದಲಾಗಿದೆ. ಕೊರೊನಾ (Corona) ಜನರಿಗೆ ಅನೇಕ ಅಮೂಲ್ಯ ವಿಷ್ಯಗಳನ್ನು ಕಲಿಸಿದೆ. ಕಷ್ಟದ ಸಮಯದಲ್ಲಿ ಜನರಿಗೆ ಪ್ರೀತಿಯೇ ಕೆಲಸಕ್ಕೆ ಬರುತ್ತದೆ ಎಂಬುದು ಜನರಿಗೆ ಗೊತ್ತಾಗಿದೆ. ಹಣ ಎಷ್ಟೇ ಇದ್ರೂ ಪ್ರಾಣ ಉಳಿಸಲು ಸಾಧ್ಯವಿಲ್ಲ ಎಂಬುದನ್ನು ಜನರು ಅರಿತಿದ್ದಾರೆ. ನಾವು ಸಾವನ್ನಪ್ಪಿದಾಗ ಜನರು ನಮ್ಮನ್ನು ನೆನಪಿಸಿಕೊಳ್ಳುವುದು ನಮ್ಮ ನಡವಳಿಕೆಯಿಂದ ಹೊರತು ನಮ್ಮ ಹಣದಿಂದಲ್ಲ ಎಂಬುದು ಜನರಿಗೆ ಗೊತ್ತಾಗಿದೆ.

ವಿದೇಶದಲ್ಲಿ ಸಾಮಾನ್ಯ Friends With Benefits: ಸ್ನೇಹದ ಜತೆ ಸೆಕ್ಸ್‌ ಫ್ರೀ..!

ಮಿಚಿಗನ್ ಮತ್ತು ಟೆಕ್ಸಾಸ್ (Texas) ವಿಶ್ವವಿದ್ಯಾಲಯದ ಸಂಶೋಧಕರು ಜಂಟಿಯಾಗಿ ಪ್ರೀತಿ ಮತ್ತು ಹಣಕ್ಕೆ ಸಂಬಂಧಿಸಿದ ವಿಷ್ಯದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ, ಗಳಿಕೆಯ ಮೇಲೆ ಕೇಂದ್ರೀಕರಿಸುವ ಮತ್ತು ಸಂಬಂಧಕ್ಕೆ ಹೆಚ್ಚು ಗಮನ ನೀಡದ ಜನರು ಸಂಗಾತಿ ಜೊತೆ ಬಾಂಧವ್ಯ  ಹೊಂದಿರುವುದಿಲ್ಲ. ಅವರು ಸಂಗಾತಿಯಿಂದ ಬೇಗ ದೂರವಾಗ್ತಾರೆಂದು ಅಧ್ಯಯನದಲ್ಲಿ ಬಹಿರಂಗವಾಗಿದೆ. 

ಸಂಶೋಧಕರು ಸುಮಾರು 434 ಜನರನ್ನು ಅಧ್ಯಯನಕ್ಕೊಳಪಡಿಸಿದ್ದರು. ದಂಪತಿ (Couple)ಮಧ್ಯೆ ಹೊಂದಿಕೆಯಾಗದ ವಿಷಯಗಳ ಬಗ್ಗೆ ಮಾಹಿತಿ ಕಲೆ ಹಾಕಿದರು. ಯಾರು ಹಣಕ್ಕೆ ಹೆಚ್ಚು ಮಹತ್ವ (Importance) ನೀಡ್ತಾರೋ ಅವರು ಪ್ರೀತಿಗೆ ಮಹತ್ವ ನೀಡುವುದಿಲ್ಲ ಎಂಬ ಸಂಗತಿ ಅಧ್ಯಯನದಿಂದ ಹೊರ ಬಂತು. ಇದ್ರಿಂದ ಇಬ್ಬರ ಮಧ್ಯೆ ಅಂತರ ಹೆಚ್ಚಾಗುತ್ತದೆ. ಕೆಲವರು ಇಡೀ ದಿನ ಹಣದ ಬಗ್ಗೆ ಮಾತನಾಡ್ತಾರೆ. ಸಂಗಾತಿ ಜೊತೆ ಮಾತನಾಡುವಾಗ ಕೂಡ ಹಣ, ಲೆಕ್ಕಪತ್ರ, ಉಳಿತಾಯದ ಬಗ್ಗೆ ಮಾತ್ರ ಮಾತನಾಡುತ್ತಾರೆ. ಇದು ಸಂಗಾತಿಗೆ ಕಿರಿಕಿರಿಯುಂಟು ಮಾಡುತ್ತದೆ.

ಯಸ್, ಹಣ ಜೀವನ ನಡೆಸಲು ಮುಖ್ಯ. ಆದ್ರೆ ಆ ಹಣವನ್ನು ಯಾರಿಗಾಗಿ ಸಂಪಾದಿಸುತ್ತಿದ್ದೇವೆ ಎಂಬುದನ್ನು ಯೋಚಿಸಬೇಕು.  ಹಣದ ಹಸಿವು ದೂರವಾಗಲು ಸಾಧ್ಯವಿಲ್ಲ. ಆದ್ರೆ ನಿಮ್ಮ ಹಣದ ಮೇಲಿನ ಅತಿ ಮೋಹ ಸಂಗಾತಿಯಿಂದ ನಿಮ್ಮನ್ನು ದೂರಮಾಡುತ್ತದೆ ಎಂದು ಅಧ್ಯಯನದಿಂದ ಬಹಿರಂಗವಾಗಿದೆ. ನಿಮಗೆ ಹಣ ಬೇಕು ಆದರೆ ನಿಮ್ಮ ಸಂಗಾತಿಗೆ ನಿಮ್ಮ ಸಮಯ ಬೇಕು ಎಂದಾಗ ಭಿನ್ನಾಭಿಪ್ರಾಯ ಸಾಮಾನ್ಯ. ಪ್ರೀತಿಗಿಂತ ಹಣಕ್ಕೆ ಪ್ರಾಮುಖ್ಯತೆ ನೀಡಿದಾಗ  ಸಂಬಂಧ ಹಾಳಾಗುತ್ತದೆ.  ಹಣದ ಹುಚ್ಚಿಗೆ ಪ್ರೀತಿ ಬಿಡುವ ಜನರು ಸಾಕಷ್ಟು ಮಂದಿಯಿದ್ದಾರೆ.

ಮದುವೆ ನಂತ್ರ ಪ್ರೀತಿ ಕಡಿಮೆಯಾಗ್ಬಾರದು ಅಂದ್ರೆ LOVE ಬಗ್ಗೆ ತಿಳಿದ್ಕೊಳ್ಳಿ

ಅಧ್ಯಯನದಲ್ಲಿ ಪ್ರೀತಿಗೆ ಹೆಚ್ಚು ಒತ್ತು ನೀಡಲಾಗಿದೆ. ಹಣ ಮಾಡುವುದ್ರಲ್ಲಿಯೇ ಜೀವನ ಮುಗಿಸುವ ಜನರು ಜೀವನವನ್ನು ಎಂಜಾಯ್ ಮಾಡೋದಿಲ್ಲ. ಒಂದು ದಿನ ಇಹಲೋಕ ತ್ಯಜಿಸ್ತಾರೆ. 
 

Latest Videos
Follow Us:
Download App:
  • android
  • ios