ಮಹಿಳೆಯರಿಗೆ ನೀಡುವ ಸ್ಯಾಲರಿ ಸಹಿತವಾದ ಮುಟ್ಟಿನ ರಜೆ ಕಡ್ಡಾಯಗೊಳಿಸುವ ವಿಚಾರಕ್ಕೆ ಕೇಂದ್ರ ಮಹಿಳೆ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಸೃತಿ ಇರಾನಿ ವಿರೋಧ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ್ದಾರೆ.

ನವದೆಹಲಿ: ಮುಟ್ಟಿನ ಸಮಸ್ಯೆ ಒಬ್ಬೊಬ್ಬರಿಗೆ ಒಂದೊಂದು ತರ. ಒಬ್ಬೊಬ್ಬರು ಆ ಸಮಯದಲ್ಲಿ ನೆಲದಲ್ಲಿ ಬಿದ್ದು ಹೊರಳಾಡುವಷ್ಟು ನೋವು ಪಟ್ಟರೆ ಮತ್ತೆ ಕೆಲವರು ಏನೂ ಆಗದವರಂತೆ ಇರುತ್ತಾರೆ. ಇನ್ನೂ ಕೆಲವರಿಗೆ ಅತ್ತ ಭಯಾನಕ ಯಾತನೆಯೂ ಅಲ್ಲ, ಇತ್ತ ಆರಾಮವೆನಿಸುವ ಖುಷಿಯೂ ಇಲ್ಲ ಎಂಬಂತಹ ಸ್ಥಿತಿ ಒಬ್ಬೊಬ್ಬರ ಯಾತನೆ ಒಬ್ಬೊಬ್ಬರ ಸಂಕಟ ಒಂದೊಂದು ತರ. ಹೀಗಾಗಿಯೇ ಹಲವು ಸಂಸ್ಥೆಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ ಸ್ಯಾಲರಿ ಸಮೇತ ಮುಟ್ಟಿನ ರಜೆ ನೀಡುತ್ತಿವೆ. ತಿಂಗಳಲ್ಲೊಂದು ದಿನ ಮುಟ್ಟಿನ ರಜೆ ನೀಡುವಂತಹ ಹಲವು ಬಹುರಾಷ್ಟ್ರೀಯ ಸಂಸ್ಥೆಗಳಿವೆ. ಆದರೆ ಸ್ವತಃ ಮಹಿಳೆಯಾಗಿರುವ ಕೇಂದ್ರ ಮಹಿಳೆ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಈ ವಿಚಾರವೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 

ಸಂಸತ್‌ನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಮಹಿಳೆಯರ ಈ ಪಿರೇಡ್ಸ್ ಲೀವ್ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಸಚಿವೆ ಸ್ಮೃತಿ ಇರಾನಿ ಮಾತನಾಡಿದ್ದು, ಋತುಮತಿಯಾದ ಒಬ್ಬ ಮಹಿಳೆಯಾಗಿ ಪಿರೇಡ್ಸ್ ಅಥವಾ ಮುಟ್ಟಿನ ಸಮಸ್ಯೆ ಅಂಗವೈಕಲ್ಯತೆ ಅಲ್ಲ, ಅದೊಂದು ಮಹಿಳೆಯರ ಜೀವನ ಪಯಣದ ಭಾಗವಷ್ಟೇ ಎಂದು ಹೇಳುವ ಮೂಲಕ ಅವರು ಮಹಿಳೆಯರ ಪಿರೇಡ್ಸ್ ವೇಳೆ ನೀಡುವ ಸ್ಯಾಲರಿ ಸಹಿತ ಕಡ್ಡಾಯ ರಜೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ವತಃ ಒಬ್ಬರು ಮಹಿಳೆಯಾಗಿ, ಮಕ್ಕಳು ಹಾಗೂ ಮಹಿಳಾ ಕಲ್ಯಾಣ ಸಚಿವೆಯಾಗಿ ಸ್ಮೃತಿ ಇರಾನಿ ನೀಡಿದ ಈ ಹೇಳಿಕೆ ಅನೇಕರ ಅಚ್ಚರಿಯ ಜೊತೆ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸ್ಮೃತಿ ಇರಾನಿ '5 ಎಕ್ಸ್‌ಎಲ್‌ ಕಮರ್ಷಿಯಲ್‌ ಸಿಲಿಂಡರ್‌', ಆರ್‌ಜೆಡಿ ನಾಯಕಿ ಸಾರಿಕಾ ಪಾಸ್ವಾನ್‌!

ರಾಜ್ಯಸಭೆಯಲ್ಲಿ ಸಂಸದ ಮನೋಜ್ ಕುಮಾರ್ ಜಾ ಅವರು ಬುಧವಾರ ಈ ಕುರಿತಾಗಿ ಪ್ರಶ್ನಿಸಿದಾಗ ಸಚಿವೆ ಸ್ಮೃತಿ ಇರಾನಿ ಇಂತಹ ಉತ್ತರ ನೀಡಿ ಮಹಿಳೆಯರಿಗೆ ಸ್ಯಾಲರಿ ಸಮೇತ ನೀಡುವ ಕಡ್ಡಾಯ ಮುಟ್ಟಿನ ರಜೆಗೆ ವಿರೋಧ ವ್ಯಕ್ತಪಡಿಸಿದರು. ಅಲ್ಲದೇ ಈ ಪಿರೇಡ್ಸ್‌ ರಜೆಯೇ ಮುಂದೆ ಕಚೇರಿಗಳಲ್ಲಿ ತಾರತಮ್ಯಕ್ಕೆ ಕಾರಣವಾಗಬಹುದು. ಖತುಸ್ರಾವದ ಸಮಸ್ಯೆಗಳನ್ನು ಹೊಂದಿದ್ದಾರೆ ಎಂಬ ಕಾರಣಕ್ಕೆ ಪುರುಷರಷ್ಟೇ ಸರಿಸಮಾನ ಅವಕಾಶಗಳನ್ನು ನಿರಾಕರಿಸುವ ಸಂದರ್ಭ ಎದುರಾಗಬಾರದು ಎಂದು ಅವರು ಹೇಳಿದ್ದಾರೆ.

ಸ್ಪೇನ್‌ ದೇಶವೂ ಇಡೀ ಪ್ರಪಂಚದಲ್ಲೇ ಮೊದಲ ಬಾರಿಗೆ ಮಹಿಳೆಯರಿಗೆ ಸ್ಯಾಲರಿ ಸಹಿತ ಮುಟ್ಟಿನ ರಜೆ ನೀಡುವ ವಿಚಾರವಾಗಿ ಶಾಸನ ಜಾರಿಗೊಳಿಸಿದ್ದು, ಯುರೋಪ್‌ನಲ್ಲೇ ಮುಟ್ಟಿನ ರಜೆ ನೀಡಿದ ಮೊದಲ ದೇಶವಾಗಿದೆ. ಆದರೆ ಭಾರತದಲ್ಲಿ ಮುಟ್ಟಿನ ರಜೆಯನ್ನು ಖಚಿತಗೊಳಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಮೃತಿ ಇರಾನಿ ಖಚಿತಪಡಿಸಿದ್ದಾರೆ.

ಮುದುಕಿಗೆ ರಾಹುಲ್‌ ಗಾಂಧಿ ಯಾಕೆ ಫ್ಲೈಯಿಂಗ್‌ ಕಿಸ್‌ ನೀಡ್ತಾರೆ? ದೇಶದಲ್ಲೇನು ಹೆಣ್ಮಕ್ಕಳಿಗೆ ಬರ ಇದ್ಯಾ?: ಕಾಂಗ್ರೆಸ್‌ ಶಾಸಕಿ!

ಸ್ಮೃತಿ ಇರಾನಿ ಅವರ ಈ ಹೇಳಿಕೆ ಈಗ ಇಂಟರ್‌ನೆಟ್‌ನಲ್ಲಿ ಚರ್ಚೆಯ ವಿಚಾರವಾಗಿದ್ದು, ಮುಂದಿನ ಚುನಾವಣೆಯ ವೇಳೆ ಮನೆಯಲ್ಲೇ ಕೂರುವಂತೆ ಅವರಿಗೆ ಕೆಲವರು ಸಲಹೆ ನೀಡಿದ್ದಾರೆ. ಆದರೆ ಕೆಲವರು ಅವರ ಹೇಳಿಕೆಯನ್ನು ಬೆಂಬಲಿಸಿದ್ದು, ಆಕೆ ಹೇಳಿದ್ದರಲ್ಲಿ ತಪ್ಪೇನಿಲ್ಲ, ನಾವು ಲಿಂಗ ತಾರತಮ್ಯ ಹೋಗಲಾಡಿಸುವ ಕಾಲಘಟ್ಟದಲ್ಲಿರುವಾಗ ಇಂತಹ ಕಡ್ಡಾಯ ರಜೆಯ ಕಾರಣಕ್ಕೆ ಅನೇಕ ಸಂಸ್ಥೆಗಳು ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳು ಹಿಂದೇಟು ಹಾಕುತ್ತಾರೆ. ಏಕೆಂದರೆ ಅಂತಹ ರಜೆಗಳು ಸಂಸ್ಥೆಗೆ ದುಬಾರಿಯಾಗಬಹುದು ಎಂಬ ಕಾರಣದಿಂದ ಹೀಗಾಗಿ ಆಕೆ ಹೇಳಿದ್ದರಲ್ಲಿ ತಪ್ಪೇನಿಲ್ಲ ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ.