Asianet Suvarna News Asianet Suvarna News

ದೇಶದ ಚಾಣಾಕ್ಷ ಮಹಿಳಾ ಡಿಟೆಕ್ಟಿವ್ ಕೊಲೆಗಾರನ ಮನೆಯಲ್ಲಿ 6ತಿಂಗಳು ಕೆಲಸದಾಳು, 80ಸಾವಿರ ಪ್ರಕರಣ ಬೇಧಿಸಿದ ನಾರಿಶಕ್ತಿ

80 ಸಾವಿರಕ್ಕೂ ಹೆಚ್ಚು ಪ್ರಕರಣ ಬೇಧಿಸಿರುವ ಭಾರತದ ಮೊದಲ ಮಹಿಳಾ ಡಿಟೆಕ್ಟೀವ್ ರಜನಿ ಪಂಡಿತ್  6 ತಿಂಗಳು ಕೊಲೆಗಾರರ ಮನೆಯಲ್ಲಿ ಇರಬೇಕಾಯ್ತು.

Meet Rajani Pandit India's first female detective Lady James Bond of India gow
Author
First Published May 20, 2024, 3:07 PM IST

ರಜನಿ ಪಂಡಿತ್, ಭಾರತದ ಪ್ರಥಮ ಮಹಿಳಾ ಖಾಸಗಿ ಪತ್ತೆದಾರಿ. ಮಹಾರಾಷ್ಟ್ರದ ಉದ್ಯಮಿಯಾಗಿರುವ ಈಕೆಯನ್ನು ಜೇಮ್ಸ್ ಬಾಂಡ್‌ ಎಂದು ಕರೆಯುತ್ತಾರೆ. ಥಾಣೆ ಜಿಲ್ಲೆಯ ಪಾಲ್ಘರ್‌ ನಲ್ಲಿ ಜನಿಸಿದ ಈಕೆಯ ತಂದೆ ಸಿಐಡಿ ಆಫೀಸರ್‌ ಆಗಿದ್ದರು. ಚಿಕ್ಕ ವಯಸ್ಸಿನಿಂದಲೂ ಆಕೆಗೆ ಪತ್ತೆದಾರಿಕೆ ಬಗ್ಗೆ ಎಲ್ಲಿಲ್ಲದ ಆಸಕ್ತಿ.

ಪದವಿ ಪಡೆದ ನಂತರ, ಪಂಡಿತ್ ಮೊದಲು ಆಫೀಸ್ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿದರು. ಅಲ್ಲಿ ಸಹೋದ್ಯೋಗಿಯೊಬ್ಬರು ತನ್ನ ಸೊಸೆ ಹಣ ಕದಿಯುತ್ತಿದ್ದಾಳೆಂದು ಪಂಡಿತ್ ಬಳಿ ಹೇಳಿಕೊಂಡರು. ಇದನ್ನ ಪತ್ತೆ ಹಚ್ಚಲು ಆರಂಭಿಸಿದ ಪಂಡಿತ್ ಕೊನೆಗೆ ಆಕೆಯ ದೊಡ್ಡ ಮಗನೇ ಕಳ್ಳ ಎಂದು ಪತ್ತೆ ಮಾಡಿದರು. ಇದು ಅವರ ಜೀವನದ ಮೊದಲ ಪತ್ತೆದಾರಿಕೆ ಕೆಲಸವಾಗಿತ್ತು.

ಡಿಕೆಶಿ ಮಗಳ ಫ್ಯಾಷನ್‌ ಗುಟ್ಟೇನು ಗೊತ್ತಾ? ತನ್ನದೇ ಸ್ವಂತ ಟಾಪ್‌ ಬ್ರಾಂಡ್‌ ಹೊಂದಿರುವ ಐಶ್ವರ್ಯಾ

1986 ರಲ್ಲಿ ರಜನಿ ಇನ್ವೆಸ್ಟಿಗೇಟಿವ್ ಬ್ಯೂರೋವೊಂದನ್ನು ಸ್ಥಾಪಿಸಿದರು. ಭವಿಷ್ಯದಲ್ಲಿ ಅವರ ಹೆಸರು  ಹೆಚ್ಚು ಗುರುತಿಸಿಕೊಳ್ಳಲು ಆರಂಭಿಸಿತು. 1988 ರಲ್ಲಿ, ಪ್ರಭಾವಿ ಕುಟುಂಬವೊಂದು ಕೊಲೆಯ ರಹಸ್ಯ ಭೇದಿಸಲು ಸಹಾಯ ಕೇಳಿತು. ಇದರಲ್ಲಿ ಸಂಬಂಧಿಕರ ಕೈವಾಡವಿದೆ ಎಂದು ಶಂಕಿಸಲಾಯ್ತು. ಪಂಡಿತ್ ಆರು ತಿಂಗಳ ಕಾಲ ಮನೆಯಲ್ಲಿ ಕೆಲಸದಾಕೆಯಾಗಿ ವೇಷ ಮರೆಸಿ ರಹಸ್ಯವಾಗಿ  ಇದ್ದರು. ಈ ಪ್ರಕರಣದಲ್ಲಿ 6 ಸಾಕ್ಷಿಯನ್ನು ಪತ್ತೆ ಮಾಡಿದರು. ಈ ಪ್ರಕರಣವನ್ನು ಬೇಧಿಸಿದ ಬಳಿಕ ರಜನಿ ಪಂಡಿತ್ ಅವರ ಹೆಸರು ಖ್ಯಾತಿ ಗಳಿಸಿತು. 

2003 ರ ಹೊತ್ತಿಗೆ, ಪಂಡಿತ್ ಎಂಟು ಉದ್ಯೋಗಿಗಳನ್ನು ತನ್ನ ಸಂಸ್ಥೆಯಲ್ಲಿ ನೇಮಿಸಿಕೊಂಡಿದ್ದರು. ಮತ್ತು ಅವರ ಸಂಸ್ಥೆಯ ನಿಯಮಿತ ಗ್ರಾಹಕರು ಐದು ಬಹುರಾಷ್ಟ್ರೀಯ ಕಂಪನಿಗಳನ್ನು ಒಳಗೊಂಡಿದ್ದರು. 2010 ರ ಹೊತ್ತಿಗೆ, ಅವರು 30 ಪತ್ತೆದಾರರ ಸಿಬ್ಬಂದಿಯನ್ನು ನೇಮಿಸಿಕೊಂಡರು ಮತ್ತು ತಿಂಗಳಿಗೆ ಸುಮಾರು 20 ಪ್ರಕರಣಗಳನ್ನು ನಿರ್ವಹಿಸುತ್ತಿದ್ದರು.

ಶ್ರೀಮಂತಿಕೆಯಲ್ಲಿ ಬ್ರಿಟನ್‌ ದೊರೆಯನ್ನು ಮೀರಿಸಿದ ಇನ್ಫಿ ನಾರಾಯಣ ಮೂರ್ತಿ ಮಗಳು, ಅಳಿಯ ರಿಷಿ ಸುನಕ್‌!

ಪಂಡಿತ್ ಅವರು ಪತ್ತೆದಾರರಿಗೆ ವೃತ್ತಿಪರ ತರಬೇತಿ ಕೋರ್ಸ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ರಜನಿ ಇನ್ವೆಸ್ಟಿಗೇಟಿವ್ ಬ್ಯೂರೋ  ಹೆಚ್ಚಿನ ಪ್ರಕರಣಗಳು ವೈವಾಹಿಕ ಸಮಸ್ಯೆಗಳು ಅಥವಾ ಶಂಕಿತ ವ್ಯವಹಾರಗಳಿಗೆ ಸಂಬಂಧಿಸಿವೆ. ಫೆಬ್ರವರಿ 2, 2018 ರಂದು, ಹಲವಾರು ಖಾಸಗಿ ಪತ್ತೆದಾರರು ಅಕ್ರಮವಾಗಿ ಕರೆ ಡೇಟಾ ದಾಖಲೆಗಳನ್ನು (ಸಿಡಿಆರ್) ಪಡೆದು ಮಾರಾಟ ಮಾಡಿದ ಹಗರಣಕ್ಕೆ ಸಂಬಂಧಿಸಿದಂತೆ ಥಾಣೆ ಪೊಲೀಸರು ರಜನಿ ಪಂಡಿತ್ ಅವರನ್ನು ಬಂಧಿಸಿದ್ದರು. 40 ದಿನಗಳ ಬಳಿಕ ಆಕೆ ಬಿಡುಗಡೆ ಹೊಂದಿದರು. ಪೊಲೀಸರ ಆರೋಪವನ್ನು ತಿರಸ್ಕರಿಸಿದ್ದಾರೆ.

ತಾನೇ ಹೊಲಿದ 20ಕೆಜಿ ತೂಕದ ಬಟ್ಟೆಯ ಜೊತೆ ಮೊದಲ ಬಾರಿಗೆ ಕ್ಯಾನೆಸ್ 2024 ನಲ್ಲಿ ಮಿಂಚಿದ ಭಾರತದ ನ್ಯಾನ್ಸಿ

2019ರ ಸಾವ್ರತ್ರಿಕ ಚುನಾವಣೆ ಸಮಯದಲ್ಲಿ ರಜನಿ ಪಂಡಿತ್ ಅವರ ಅವರ ಸಂಸ್ಥೆಯನ್ನು ರಾಜಕೀಯ ಪಕ್ಷಗಳು ಬಹು ಅಭ್ಯರ್ಥಿಗಳ ಮೇಲೆ ಹಣಕಾಸು ವ್ಯವಹಾರದ ಮೇಲೆ ಕಣ್ಣಿಡಲು ನೇಮಿಸಲಾಯ್ತು. ಪಂಡಿತ್ ಅವಿವಾಹಿತೆಯಾಗಿದ್ದು, ತನ್ನ ಸಹೋದರರೊಂದಿಗೆ  ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಸದ್ಯ ಈಕೆಗೆ 62 ವರ್ಷ ವಯಸ್ಸು. 

ಭಾರತದ ಪ್ರಥಮ ಮಹಿಳೆ ಪತ್ತೇದಾರಿ 57 ಪ್ರಶಸ್ತಿಗಳನ್ನು ಗಳಿಸಿದ್ದಾರೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ 80 ಸಾವಿರಕ್ಕೂ ಹೆಚ್ಚು ಕೇಸ್‌ ಗಳನ್ನು ಪತ್ತೆ ಮಾಡಿದ್ದು ಈ ಧೀಮಂತ ನಾರಿಯ ಶಕ್ತಿಯನ್ನು ತೋರಿಸುತ್ತದೆ.

Latest Videos
Follow Us:
Download App:
  • android
  • ios