ಡಿಕೆಶಿ ಮಗಳ ಫ್ಯಾಷನ್ ಗುಟ್ಟೇನು ಗೊತ್ತಾ? ತನ್ನದೇ ಸ್ವಂತ ಟಾಪ್ ಬ್ರಾಂಡ್ ಹೊಂದಿರುವ ಐಶ್ವರ್ಯಾ
ಸಾಮಾಜಿಕ ಜಾಲತಾಣದಲ್ಲಿ ವಿವಿಧ ವಿನ್ಯಾಸದ ಬಟ್ಟೆಗಳನ್ನು ಧರಿಸಿದ ಫೋಟೋಗಳನ್ನು ಡಿಕೆಶಿ ಮಗಳು ಐಶ್ವರ್ಯಾ ಡಿಕೆಎಸ್ ಹೆಗ್ಡೆ ಹಂಚಿಕೊಂಡಾಗ ಎಲ್ಲರ ಕಣ್ಣು ಬಟ್ಟೆ ಮೇಲೆ ಹೋಗಿರುವುದಂತೂ ಸುಳ್ಳಲ್ಲ. ಶಿಕ್ಷಣ ಕ್ಷೇತ್ರದಲ್ಲಿನ ಕೆಲಸದ ಜೊತೆಗೆ ಫ್ಯಾಷನ್ ಪ್ರಿಯರ ಕಣ್ಣು ಕುಕ್ಕುವಂತಹ ಬಟ್ಟೆಗಳನ್ನು ಐಶ್ವರ್ಯಾ ಧರಿಸುತ್ತಿದ್ದು ಇದರ ಬಗ್ಗೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ನಾನು ಸಬಲೀಕರಣಕ್ಕೆ ಹೆಚ್ಚಿನ ಒತ್ತು ಕೊಡುತ್ತೇನೆ. ಮಹಿಳೆ, ಮಕ್ಕಳು ಮತ್ತು ಯುವ ಜನಾಂಗದ ಸಬಲೀಕರಣಕ್ಕೆ ಒತ್ತು ಕೊಡುತ್ತೇನೆ ಎಂದಿರುವ ಐಶ್ವರ್ಯಾ ಅವರು ಚಿಲ್ಲೊಸಫಿ ಎಂಬ ತಮ್ಮದೇ ಆದ ಬಟ್ಟೆ ಬ್ರಾಂಡ್ ಅನ್ನು ಹೊಂದಿದ್ದಾರೆ. ಚಿಲ್ಲೊಸಫಿ (Chillosophy) ಐಶ್ವರ್ಯಾ ಬಿಟ್ಟು ಇಬ್ಬರು ಮಹಿಳಾ ಕೋ ಫೌಂಡರ್ ಅನ್ನು ಹೊಂದಿದೆ. ಐಶ್ವರ್ಯಾ ಸ್ಟಾಟರ್ಜಿಕ್ ಅಂಬಾಸಿಡರ್ ಆಗಿದ್ದಾರೆ.
2018 ರಲ್ಲಿ ಈ ಫ್ಯಾಷನ್ ಬ್ರಾಂಡ್ ಹುಟ್ಟಿಕೊಂಡಿದ್ದು, ಇದರ ಬಗ್ಗೆ ಐಶ್ವರ್ಯಾ ಸವಿವರವಾಗಿ ವಿವರಿಸಿದ್ದಾರೆ. ಇದು ಭಾರತದಾದ್ಯಂತ ಹರಡಿರುವ ಸಾಂಪ್ರದಾಯಿಕ ನೇಕಾರರು ಮತ್ತು ಬಣ್ಣಗಾರರ ಕೌಶಲ್ಯಗಳನ್ನು ಜೋಡಿಸುವಲ್ಲಿ ನಿಂತಿದೆ. ಇದರ ವಿನ್ಯಾಸಗಳು ಮತ್ತು ಕಲ್ಪನೆಗಳು ಹೆಣ್ತನ, ಸಮಾನತೆ ಮತ್ತು ಸ್ವಯಂ ವಾಸ್ತವೀಕರಣದ ಮೇಲೆ ನಿಂತಿದೆ.
ಬಟ್ಟೆ ಓರ್ವ ವ್ಯಕ್ತಿಯ ಸ್ವಯಂ ಅಭಿವ್ಯಕ್ತಿಯ ಒಂದು ರೂಪ ಎಂದು ನಾನು ನಂಬುತ್ತೇನೆ; ಚಿಲ್ಲೊಸಫಿಯೊಂದಿಗೆ, ನನ್ನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವುದರ ಜೊತೆಗೆ ನನಗೆ ಶಕ್ತಿ ತುಂಬುವಂತಹ ಉಡುಪುಗಳನ್ನು ನಾನು ಕಂಡುಕೊಂಡಿದ್ದೇನೆ.
ಚಿಲೋಸಫಿ ಬಹುಮುಖದ, ವಿವಿಧ ರೀತಿಯ ಉಡುಪುಗಳ ಮೂಲಕ ಸಬಲೀಕರಣವನ್ನು ಕೂಡ ಒಳಗೊಂಡಿರುತ್ತದೆ, ಮಹಿಳೆಯರನ್ನು ವಾರ್ಡ್ರೋಬ್ ಚಿಂತೆಗಳಿಂದ ಮುಕ್ತಗೊಳಿಸುತ್ತದೆ.
ಚಿಲೋಸಫಿಯೊಂದಿಗೆ, ನಾನು ಕೆಲಸದಲ್ಲಿ ಹೆಚ್ಚು ತೊಡಗಿಕೊಳ್ಳುತ್ತೇನೆ. ಆತ್ಮವಿಶ್ವಾಸ ತುಂಬುತ್ತದೆ, ವೃತ್ತಿಪರರಿಂದ ಹಿಡಿದು ಪಾರ್ಟಿ-ಸಿದ್ಧತೆಗೆ ಸಲೀಸಾಗಿ ಪರಿವರ್ತನೆ ಮಾಡುವಂತಹ ರೀತಿ ಚಿಲೋಸಫಿ ಇದೆ.
ಈ ಬ್ರ್ಯಾಂಡ್ ನ ರಾಯಭಾರಿಯಾಗಿ ನನ್ನನ್ನೂ ಒಳಗೊಂಡಂತೆ ಇಬ್ಬರು ಮಹಿಳೆಯರಿಂದ ಚಿಲೋಸಫಿ ಸ್ಥಾಪಿಸಲ್ಪಟ್ಟಿದೆ, ಚಿಲ್ಲೊಸಫಿ ಕೇವಲ ಉಡುಪುಗಳನ್ನು ಮಾತ್ರವಲ್ಲ ಉತ್ತಮ ಮನಸ್ಥಿತಿಯನ್ನು ನೀಡುತ್ತದೆ.
ನೀವು ಜೀವನದ ಪ್ರಯಾಣದಲ್ಲಿ ಇದನ್ನು ಅಳವಡಿಸಿಕೊಳ್ಳಲು ಬಯಸುತ್ತಿದ್ದರೆ, ಚಿಲ್ಲೊಸೊಫರ್ ಕ್ಲಬ್‌ಗೆ ಸೇರಿಕೊಳ್ಳಿ, ಅಲ್ಲಿ ನಾವು ನಮ್ಮ ಅನನ್ಯ ಶೈಲಿಯ ಬಟ್ಟೆಗಳನ್ನು ನೀಡುತ್ತೇವೆ. ನಿಮಗೆ ಬೇಕಾದ ಆಯ್ಕೆ ಸಿಗುತ್ತದೆ. ಅಲ್ಲಿ ಆತ್ಮವಿಶ್ವಾಸ, ಧೈರ್ಯ ಮತ್ತು ಸ್ವಯಂ-ಅಭಿವ್ಯಕ್ತಿಯನ್ನು ಆಚರಿಸುತ್ತೇವೆ, ಅಲ್ಲಿ ಫ್ಯಾಷನ್ ಸಬಲೀಕರಣದ ಬಗ್ಗೆ ತಿಳಿಯುತ್ತದೆ. ಒಂದೇ ಮನಸ್ಸಿನ ವ್ಯಕ್ತಿತ್ವವನ್ನು ನೀವು ಭೇಟಿ ಮಾಡಬಹುದು ಎಂದಿದ್ದಾರೆ.