Veena Nagda: ಸೆಲೆಬ್ರಿಟಿಗಳ ಕೈಗೆ ಮೆಹಂದಿ ಹಾಕೋ ವೀಣಾ ಚಾರ್ಜ್ ಮಾಡೋದೆಷ್ಟು?
ಮದುವೆಯಲ್ಲಿ ಬಾಲಿವುಡ್ ಸ್ಟಾರ್ಸ್ ಕೈನಲ್ಲಿ ಮೆಹಂದಿ ಮಿಂಚುತ್ತಿರುತ್ತೆ. ಇಷ್ಟು ಚೆಂದದ ಮೆಹಂದಿ ಹಾಕಿದ್ಯಾರು ಎಂಬ ಪ್ರಶ್ನೆ ನಿಮ್ಮನ್ನು ಕಾಡ್ಬಹುದು. ಕಲೆ ಮೂಲಕವೇ ಜೀವನ ಕಂಡುಕೊಂಡ ಮೆಹಂದಿ ಕ್ವೀನ್ ಮಹಿಳೆ ಬಗ್ಗೆ ಮಾಹಿತಿ ಇಲ್ಲಿದೆ.

ಸೆಲೆಬ್ರಿಟಿಗಳ ಜೊತೆ ಕೆಲಸ ಮಾಡೋಕೆ, ಸೆಲೆಬ್ರಿಟಿಗಳ ಪಾರ್ಟಿ, ಸಮಾರಂಭದಲ್ಲಿ ಪಾಲ್ಗೊಳ್ಳೋಕೆ ನೀವು ಸೆಲೆಬ್ರಿಟಿ ಆಗ್ಬೇಕು ಅಂದೇನಿಲ್ಲ. ಹೆಚ್ಚೆಚ್ಚು ಓದಿ, ದೊಡ್ಡ ಡಿಗ್ರಿ ಪಡೆದು, ದೊಡ್ಡ ಹುದ್ದೆಯಲ್ಲಿ ಲಕ್ಷಾಂತರ ರೂಪಾಯಿ ಸಂಬಳ ತರ್ತಾ ಇರ್ಬೇಕು ಎಂದೂ ಇಲ್ಲ. ನಿಮ್ಮ ಕೆಲಸವನ್ನು ನೀವು ಶ್ರದ್ಧೆಯಿಂದ ಮಾಡಿದ್ರೆ ಸೆಲೆಬ್ರಿಟಿಗಳ ಆಪ್ತರಾಗ್ತೀರಿ. ಅವರ ಜೊತೆ ಕೆಲಸ ಮಾಡಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತೀರಿ. ಇದಕ್ಕೆ ಮೆಹಂದಿ ಆರ್ಟಿಸ್ಟ್ ವೀಣಾ ನಾಗ್ದಾ ಉತ್ತಮ ನಿದರ್ಶನ.
ಬಾಲಿವುಡ್ (Bollywood) ನಲ್ಲಿ ಯಾರದ್ದೇ ಮದುವೆ ಇರಲಿ, ವಧುಗಳು ಕೈಗೆ ಮೆಹೆಂದಿ (Mehendi) ಹಾಕೋದು ವೀಣಾ ನಾಗ್ದಾ. ಸುಂದರ ಮೆಹಂದಿ ಮೂಲಕವೇ ವೀಣಾ ಪ್ರಸಿದ್ಧಿ ಪಡೆದಿದ್ದಾರೆ. ನೀತಾ ಅಂಬಾನಿ (Nita Ambani), ಇಶಾ ಅಂಬಾನಿ, ಶ್ಲೋಕಾ ಮೆಹ್ತಾ, ಸೋನಮ್ ಕಪೂರ್, ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಆಲಿಯಾ ಭಟ್ ಮತ್ತು ನತಾಶಾ ದಲಾಲ್ ಸೇರಿದಂತೆ ಅನೇಕ ಕಲಾವಿದರಿಗೆ ಮೆಹಂದಿ ಹಾಕಿದ್ದಾರೆ.
ಮಾತನಾಡಿದರೆ ಸಾಕು, ಮಹಿಳೆಯರು ಜಗಳಕ್ಕೆ ಬಂದ್ರೆ ಈ ರೀತಿ ಮೆಂಟಲಿ ಡಿಸ್ಟರ್ಬ್ ಆಗಿರ್ತಾರೆ!
ವೀಣಾರನ್ನು ಮೆಹೆಂದಿ ಕ್ವೀನ್ ಎಂದು ಕರೆಯಲಾಗುತ್ತದೆ. ಬಾಲಿವುಡ್ ಮಾತ್ರವಲ್ಲ ಯಾವುದೇ ಸೆಲೆಬ್ರಿಟಿ ಕುಟುಂಬದ ಮದುವೆ ಸಮಾರಂಭವಿದ್ರೂ ಅಲ್ಲಿ ವೀಣಾ ಇರ್ತಾರೆ. ಮದುವೆ, ಕರ್ವಾ ಚೌತ್ ಯಾವುದೇ ವಿಶೇಷ ಸಮಾರಂಭದಲ್ಲಿ ಮೆಹಂದಿ ಹಾಕೋದು ವೀಣಾ. ವೀಣಾ ವಿಶ್ವದಲ್ಲೇ ಅತ್ಯಂತ ವೇಗವಾಗಿ ಮೆಹೆಂದಿ ಅನ್ವಯಿಸುವ ಬಿರುದನ್ನು ಪಡೆದಿದ್ದಾರೆ. ವೀಣಾ ದೇಶ ಮಾತ್ರವಲ್ಲದೆ ವಿದೇಶದಲ್ಲೂ ಫೇಮಸ್ ಆಗಿದ್ದಾರೆ. ಆದ್ರೆ ಅವರು ಈ ಸ್ಥಾನಕ್ಕೆ ಬರೋದು ಸುಲಭವಿರಲಿಲ್ಲ.
ವೀಣಾ ಹಿನ್ನಲೆ : ವೀಣಾ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರು. ಎಸ್‌ಎಸ್‌ಸಿಯನ್ನು ಪೂರ್ಣಗೊಳಿಸಿದರು. ನಂತ್ರ ವಿದ್ಯಾಭ್ಯಾಸ ನಿಲ್ಲಿಸಿದ ಅವರು ಸೀರೆಗಳ ಮೇಲೆ ಕಸೂತಿ ಮಾಡಲು ಪ್ರಾರಂಭಿಸಿದರು. ಮೆಹಂದಿ ಹಚ್ಚುವುದನ್ನು ಅಭ್ಯಾಸ ಮಾಡಿದರು. ಕಲೆಯನ್ನು ಕರಗತ ಮಾಡಿಕೊಂಡ ನಂತರ ವೀಣಾ ಹೈ-ಪ್ರೊಫೈಲ್ ಪಾರ್ಟಿಗಳಲ್ಲಿ ಮೆಹೆಂದಿಯನ್ನು ಹಾಕಲು ಪ್ರಾರಂಭಿಸಿದರು.
ಮಿಸ್ ಇಂಡಿಯಾ ಕನಸು ತೊರೆದು ಯುಪಿಎಸ್‌ಸಿ ಪರೀಕ್ಷೆ ಬರೆದ ಮಾಡೆಲ್
ಹಿರಿಯ ನಟ ಸಂಜಯ್ ಖಾನ್ ಅವರ ಪುತ್ರಿ ಫರಾಹ್ ಖಾನ್ ಅಲಿ ಅವರ ಮದುವೆಯಲ್ಲಿ ಅವರು ಮೆಹೆಂದಿ ಹಾಕಿದ ನಂತ್ರ ಹೆಚ್ಚು ಪ್ರಸಿದ್ದಿ ಪಡೆದ್ರು. ಪೂನಂ ಧಿಲ್ಲೋನ್ ಅವರು ವೀಣಾ ಅವರ ಮೊದಲ ಸೆಲೆಬ್ರಿಟಿ ಗ್ರಾಹಕರಾಗಿದ್ದರು. ಹೃತಿಕ್ ರೋಷನ್ ಮದುವೆ, ಕರಿಷ್ಮಾ ಕಪೂರ್, ರಾಣಿ ಮುಖರ್ಜಿ, ಶಿಲ್ಪಾ ಶೆಟ್ಟಿ ಮದುವೆಯಲ್ಲೂ ವೀಣಾ ಮೆಹಂದಿ ಹಚ್ಚಿದ್ದಾರೆ. ವೀಣಾ ಎಲ್ಲ ರೀತಿಯ ಮೆಹಂದಿ ಹಾಕೋದ್ರಲ್ಲಿ ಪರಿಣಿತಿ ಹೊಂದಿದ್ದಾರೆ. ಅರೇಬಿಕ್, ಡೈಮಂಡ್ ಪರ್ಲ್, ಸ್ಟೋನ್ ಮೆಹಂದಿ, ಡೈಮಂಡ್ ಮೆಹಂದಿ ಹಾಕ್ತಾರೆ. ಮುಂಬೈನಲ್ಲಿ ಮೆಹಂದಿಯ ವೃತ್ತಿಪರ ಕೋರ್ಸ್ ನಡೆಸುವ ಸಂಸ್ಥೆಯನ್ನು ವೀಣಾ ಹೊಂದಿದ್ದಾರೆ. ಇಲ್ಲಿಯವರೆಗೆ ಅವರು 55,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೆಹಂದಿ ಕಲಿಸಿದ್ದಾರೆ.
ವೀಣಾ ಚಾರ್ಜ್ ಎಷ್ಟು? : ಸಂದರ್ಶನವೊಂದರಲ್ಲಿ ಮಾತನಾಡಿದ್ದ ವೀಣಾ ತನ್ನ ಸಾಮಾನ್ಯ ಶುಲ್ಕ ವಧುವಿಗೆ 3,000 - 7,000 ರೂಪಾಯಿಯಿಂದ ಶುರುವಾಗುತ್ತದೆ ಎಂದಿದ್ದರು. ಮೆಹೆಂದಿ ವಿನ್ಯಾಸದ ಮೇಲೆ ಶುಲ್ಕಗಳು ಹೆಚ್ಚಾಗುತ್ತವೆ. 15 ರಿಂದ 25 ಸಾವಿರ ರೂಪಾಯಿಗಳವರೆಗೆ ಶುಲ್ಕ ವಿಧಿಸ್ತಾರೆ ವೀಣಾ. ಸೆಲೆಬ್ರಿಟಿಗಳಿಗೆ ವೀಣಾ ಚಾರ್ಜ್ ಮಾಡೋದಿಲ್ಲವಂತೆ. ಅವರೇ ವೀಣಾಗೆ ಹಣ ನೀಡ್ತಾರಂತೆ. ನನ್ನ ನಿರೀಕ್ಷೆಗಿಂತ ಹೆಚ್ಚು ಹಣ ಕೊಡ್ತಾರೆ ಎಂದು ವೀಣಾ ಹೇಳಿದ್ದಾರೆ.
ಅನೇಕ ಸಿನಿಮಾಗಳಲ್ಲಿ ವೀಣಾ ಮೆಹಂದಿ : ವೀಣಾ ಮೆಹಂದಿಯನ್ನು ನೀವು ಅನೇಕ ಸಿನಿಮಾಗಳಲ್ಲಿ ನೋಡ್ಬಹುದು. ಕಭಿ ಖುಷಿ ಕಭಿ ಗಮ್, ಕಲ್ ಹೋ ನ ಹೋ, ಮೇರೆ ಯಾರ್ ಕಿ ಶಾದಿ ಹೈ, ಯೇ ಜವಾನಿ ಹೈ ದೀವಾನಿ ಮತ್ತು ಪಟಿಯಾಲಾ ಹೌಸ್ ನಂತಹ ಅನೇಕ ಬಾಲಿವುಡ್ ಚಿತ್ರಗಳಲ್ಲಿ ವೀಣಾ ಮೆಹಂದಿ ಇದೆ.