Asianet Suvarna News Asianet Suvarna News

ಮಾತನಾಡಿದರೆ ಸಾಕು, ಮಹಿಳೆಯರು ಜಗಳಕ್ಕೆ ಬಂದ್ರೆ ಈ ರೀತಿ ಮೆಂಟಲಿ ಡಿಸ್ಟರ್ಬ್ ಆಗಿರ್ತಾರೆ!

ಕೆಲವು ಮಹಿಳೆಯರಿಗೆ ತಮ್ಮದಾದ ಯಾವುದಾದರೂ ಕೆಲಸಗಳನ್ನು ಬೇರೆಯವರು ಮಾಡಿದರೆ ಸರಿಯಾಗುವುದಿಲ್ಲ. ತಾವು ಮಾಡಿದರೆ ಮಾತ್ರ ಸರಿ. ಅಪರೂಪಕ್ಕಾದರೂ ಅವರು ಈ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಭಾವನಾತ್ಮಕವಾಗಿ ತೀರ ನಲುಗಿರುವ, ಸಮಸ್ಯೆಗೆ ತುತ್ತಾಗಿರುವ ಮಹಿಳೆಯರೂ ಸಹ ಹೀಗೆ ವರ್ತಿಸಬಹುದು.
 

Women shows some signs when she damaged emotionally sum
Author
First Published Oct 31, 2023, 4:56 PM IST

ಭಾವನಾತ್ಮಕವಾಗಿ ತೀರ ತೊಂದರೆಗೆ ಒಳಗಾಗಿರುವಾಗ ಸಹಜವಾಗಿ ವರ್ತಿಸಲು ನಮಗೆ ಸಾಧ್ಯವಾಗುವುದಿಲ್ಲ. ಮಿದುಳಿನಲ್ಲಿ ಬಿಡುಗಡೆಯಾಗುವ ರಾಸಾಯನಿಕಗಳು ಇದಕ್ಕೆ ಪ್ರಮುಖ ಕಾರಣವಾಗಿರುತ್ತವೆ. ಅತಿಯಾದ ಒತ್ತಡ, ಹತಾಶೆ, ಆತಂಕಗಳು ಖಿನ್ನತೆಯನ್ನು ಉಂಟುಮಾಡುವ ಮೂಲಕ ಮನಸ್ಸನ್ನು ಸ್ಥಿಮಿತದಲ್ಲಿ ಇರದಂತೆ ಮಾಡಿಬಿಡುತ್ತವೆ. ಆ ಸಮಯದಲ್ಲಿ ಮತ್ತೊಬ್ಬರ ಮಾತುಗಳನ್ನು ಅವರು ಹೇಳಿದ ಭಾವನೆಯಲ್ಲೇ ಸ್ವೀಕರಿಸಲು ಸಹ  ಸಾಧ್ಯವಾಗದೆ ಇರಬಹುದು. ಅವರು ಹೇಳುವುದೇ ಒಂದು, ನಾವು ಅರ್ಥ ಮಾಡಿಕೊಳ್ಳುವುದೇ ಒಂದು ಎಂಬಂತೆ ಆಗುತ್ತದೆ. ಇಂತಹ ಮನಸ್ಥಿತಿಯಲ್ಲಿರುವ ಬಹಳಷ್ಟು ಜನರನ್ನು ನಾವು ಭೇಟಿಯಾಗುತ್ತಿರುತ್ತೇವೆ. ಇದು, ಭಾವನಾತ್ಮಕವಾಗಿ ಅವರು ಎಷ್ಟು ಹಾನಿಗೆ ಒಳಗಾಗಿದ್ದಾರೆ ಎನ್ನುವುದನ್ನು ತೋರ್ಪಡಿಸುತ್ತದೆ. ಯಾರಾದರೂ ಮಾನಸಿಕವಾಗಿ ಜರ್ಜರಿತವಾಗಿರುವುದನ್ನು ಕೆಲವು ಸಂಕೇತಗಳ ಮೂಲಕ ಅರಿತುಕೊಳ್ಳಬಹುದು. ಅದರಲ್ಲೂ ಮಹಿಳೆಯರು, ಹಲವು ವಿಧಾನಗಳಲ್ಲಿ ತಮ್ಮ ಅರಿವಿಲ್ಲದೇ ಅದನ್ನು ವ್ಯಕ್ತಪಡಿಸುತ್ತಾರೆ. ಸೂಕ್ಷ್ಮವಾಗಿದ್ದರೆ ಹಲವು ವರ್ತನೆಗಳ ಮೂಲಕ ಅವರ ಮಾನಸಿಕ ಸ್ಥಿತಿಯನ್ನು ಅರ್ಥೈಸಿಕೊಳ್ಳಬಹುದು. ಹಾಗೂ ಸಾಧ್ಯವಾದರೆ ನೆರವಿನ ಹಸ್ತ ಚಾಚಬಹುದು.

•    ಆಳವಾದ ಭಾವುಕತೆ (Deep Emotions)
ಜೀವನದಲ್ಲಿ ಕೆಲವು ಸನ್ನಿವೇಶಗಳಲ್ಲಿ ಎಲ್ಲರೂ ಭಾವುಕರಾಗುತ್ತೇವೆ. ಆಗ ವಿನಾಕರಣ ಗಂಟಲು ಗದ್ಗದಿತವಾಗುತ್ತದೆ, ಕಣ್ಣುಗಳು ತುಂಬಿಬರುತ್ತವೆ. ಆದರೆ, ಕೆಲವು ಮಹಿಳೆಯರು (Women) ಯಾರೊಂದಿಗಾದರೂ ಮಾತು ಆರಂಭಿಸುತ್ತಲೇ ಕಣ್ಣೀರು (Crying) ಸುರಿಸಲು ಶುರು ಮಾಡುತ್ತಾರೆ. ಇದು ಖಂಡಿತವಾಗಿ ಅವರ ಅಭ್ಯಾಸವಲ್ಲ, ಅವರು ಮಾನಸಿಕವಾಗಿ (Mental) ಹಾನಿಗೆ (Damage) ಒಳಗಾಗಿರುವ ಲಕ್ಷಣ. ಆಳವಾದ ಭಾವನೆಗಳಲ್ಲಿ ಮುಳುಗಿರುತ್ತಾರೆ. ನೀವು ಚೂರು ಏನಾದರೂ ಹೇಳಿದರೂ ಸಾಕು, ತೀವ್ರವಾದ ಪ್ರತಿಕ್ರಿಯೆ (Reactions) ನೀಡುತ್ತಾರೆ. ಭಾವನಾತ್ಮಕವಾಗಿ ನಲುಗಿರುವ ಮಹಿಳೆಯರು ಅತಿಯಾದ ಖುಷಿ, ಆಳವಾದ ದುಃಖ, ಅತಿ ಕೋಪ, ಅತಿ ಪ್ರೀತಿಗೆ ಒಳಗಾಗಬಲ್ಲರು. ಅತಿಯಾದರೆ ಎಲ್ಲವೂ ವಿಷವಾಗುತ್ತವೆ. ಮಾಯದ ಹಿಂದಿನ ಗಾಯದಿಂದಾಗಿ ಅವರು ಪ್ರಸ್ತುತ ಜೀವನವನ್ನು ಗೋಜಲು ಮಾಡಿಕೊಳ್ಳುತ್ತಾರೆ. 

ಜೀವನ ಚೆನ್ನಾಗಿರ್ಬೇಕಾ? ಇಂಥ ಜನರೊಂದಿಗೆ ಇರದಿದ್ದರೆ ಸರಿ!

•    ದುರ್ಬಲರಾಗುವ ಭಯ (Fear)
ಬಹಳಷ್ಟು ಮಹಿಳೆಯರನ್ನು ಕಾಡುವ ಸಮಸ್ಯೆ ಇದು. ಭಾವನಾತ್ಮಕವಾಗಿ ಸಮಸ್ಯೆಯಲ್ಲಿದ್ದರೂ ಅದು ಯಾರಿಗೂ ತಿಳಿಯದಂತೆ ಪ್ರಯತ್ನಿಸುತ್ತಾರೆ. ತಾವೆಲ್ಲ ದುರ್ಬಲರಾಗಿ ಬಿಡುತ್ತೇವೋ, ಅದು ಯಾರಿಗಾದರೂ ತಿಳಿದುಹೋದರೆ ಎನ್ನುವ ಅಭದ್ರತೆಯ (Insecure) ಭಾವನೆ ಹೆಚ್ಚಿಸಿಕೊಳ್ಳುತ್ತಾರೆ. “ಯಾರಿಗೂ ತಿಳಿಯಬಾರದು’ ಎನ್ನುವ ಗುಣವೇ ಸಾಕಷ್ಟು ಹೈರಾಣ ಮಾಡಿಬಿಡುತ್ತದೆ. ಮನಸ್ಸಿಗೆ ತೊಂದರೆಯಾದಾಗ ಸಮೀಪದವರ ನೆರವು ಪಡೆದುಕೊಳ್ಳುವುದು ಅಗತ್ಯ ಎನ್ನುವುದನ್ನು ಮರೆತುಬಿಡುತ್ತಾರೆ. ಈ ಹೋರಾಟದಲ್ಲೇ ಸಮಯ ವ್ಯರ್ಥ ಮಾಡುತ್ತಾರೆ. ಅರ್ಥಪೂರ್ಣ ಜೀವನ (Life) ಸಾಗಿಸಲು ಸಾಧ್ಯವಾಗುವುದಿಲ್ಲ.

•    ಒಂಟಿಯಾಗಿರುವ (Loneliness) ಪರಿಪಾಠ
ಮಾನಸಿಕವಾಗಿ ಕುಗ್ಗಿರುವ ಬಹಳಷ್ಟು ಮಹಿಳೆಯರು ಒಂಟಿಯಾಗಿರಲು ಬಯಸುತ್ತಾರೆ. ಇದು ಇನ್ನಷ್ಟು ಹಾನಿಯುಂಟು ಮಾಡುತ್ತದೆ. ಇದೊಂದು ರಕ್ಷಣಾ ಕವಚದಂತೆ ಭಾಸವಾಗಬಹುದು. ಕೆಲವೊಮ್ಮೆ ಏಕಾಂಗಿಯಾಗಿರುವುದು ಅಗತ್ಯವಾಗಿರುತ್ತದೆ. ಆದರೆ, ಈ ಧೋರಣೆ ಹೆಚ್ಚಾದರೆ ನಮ್ಮ ಪ್ರಗತಿಗೆ (Development) ತಡೆಯಾಗುತ್ತದೆ. 

•    ಸಂಬಂಧದಲ್ಲಿ ಸಮಸ್ಯೆ (Problems)
ಭಾವನಾತ್ಮಕವಾಗಿ ನಲುಗಿರುವ ಮಹಿಳೆಯರ ಮಾನಸಿಕ ಸ್ಥಿತಿಗತಿ ಸ್ಥಿರವಾಗಿರುವುದಿಲ್ಲ. ಭಾವನಾತ್ಮಕ ಪರಿಪಕ್ವತೆಯನ್ನು ಕಳೆದುಕೊಂಡಿರುತ್ತಾರೆ. ಹೀಗಾಗಿ, ಸಂಬಂಧಗಳಲ್ಲಿ (Relations) ಹೆಚ್ಚು ಸಮಸ್ಯೆ ಉಂಟಾಗುತ್ತದೆ. ಯಾರೊಂದಿಗೂ ಆರೋಗ್ಯಕರ (Healthy) ಸಂಬಂಧ ಹೊಂದಲು ಸಾಧ್ಯವಾಗದೇ ಇರಬಹುದು. ವಿನಾಕಾರಣ ತಪ್ಪು ಭಾವಿಸುವುದು, ಯಾರು ಏನು ಹೇಳಿದರೂ ಜಗಳಕ್ಕೆ ಮುಂದಾಗುವುದು ಅಥವಾ ತಮ್ಮನ್ನು ಕುಗ್ಗಿಸಿಕೊಳ್ಳುವುದು, ಏಕಾಏಕಿ ದ್ವೇಷ ಮಾಡಲು ಆರಂಭಿಸುವುದು, ಕಾರಣವನ್ನೂ ನೀಡದೆ ಮಾತು ಬಿಟ್ಟುಬಿಡುವುದೆಲ್ಲ ಇದರ ಲಕ್ಷಣವಾಗಿವೆ. 

ದೀರ್ಘಕಾಲ ಟಿವಿ-ಟ್ಯಾಬ್ಲೆಟ್ ನೋಡುವುದೂ ಆಟಿಸಂ ಲಕ್ಷಣವೇ?

•    ದೃಢೀಕರಣ, ಟೀಕೆ, ಓಲೈಕೆ
ನಮ್ಮ ಅಭಿಪ್ರಾಯಗಳನ್ನು ಮತ್ತೊಬ್ಬರು ಬೆಂಬಲಿಸಿದರೆ ಆತ್ಮವಿಶ್ವಾಸ ಮೂಡುತ್ತದೆ. ಆದರೆ, ಅದೇ ಚಟವಾದರೆ ಸ್ವ ಮೌಲ್ಯ ಕಳೆದುಕೊಳ್ಳುವಂತೆ ಆಗುತ್ತದೆ. ಹಾಗೆಯೇ, ಮತ್ತೊಬ್ಬರನ್ನು ಅತಿಯಾಗಿ ಟೀಕಿಸುವ ಗುಣ ಬೆಳೆಸಿಕೊಳ್ಳಬಹುದು. ಯಾರು ಏನು ಮಾಡಿದರೂ ಸರಿಯಾಗದೇ ತಮ್ಮದೇ ಒರಟುತನ (Rudeness) ತೋರಬಹುದು. ಜನರನ್ನು ಓಲೈಸಲು ಮುಂದಾಗಬಹುದು. 


 

Follow Us:
Download App:
  • android
  • ios