Asianet Suvarna News Asianet Suvarna News

Shift, Pack & Transport: ಬೆಲೆ ಬಾಳುವ ವಸ್ತುಗಳ ಮೇಲಿರಲಿ ಗಮನ!

ಮನೆಯಲ್ಲಿನ ಎಷ್ಟೋ ವಸ್ತು, ಉಪಕರಣಗಳ ಮೇಲೆ ಒಂದು ಅಟ್ಯಾಚ್‌ಮೆಂಟ್(attachment) ಬೆಳೆದಿರುತ್ತೆ. ಅದಕ್ಕೆ ಚೂರು ಹಾನಿಯಾದರೂ ಸಹಿಸಿಕೊಳ್ಳುವುದೇ ಅಸಾಧ್ಯ. ಹೀಗಿರುವಾಗ ಮನೆ ಖಾಲಿ ಮಾಡಿ ಬೇರೆ ಕಡೆ ಶಿಫ್ಟ್(shift) ಆಗುವಾಗ ಅವುಗಳ ಪ್ಯಾಕಿಂಗ್(packing) ಬಗ್ಗೆ ಐಡಿಯಾ ಇರುವುದು ಅವಶ್ಯಕ.

Measures to take before Shifting your home
Author
Bangalore, First Published May 26, 2022, 3:21 PM IST

ಕ್ಲೋಸ್ ಫ್ರೆಂಡ್ ಬರ್ಥಡೇಗೆ (Birthday) ಅಂತ ಕಾಫಿ ಮಗ್ ಕೊಟ್ಟಿದ್ದ, ಅದರಲ್ಲಿ ಇಬ್ಬರ ಫೋಟೋ ಸಹ ಇತ್ತು. ಎಷ್ಟೇ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ತೀನಿ ಅಂದ್ರೂ ಕೈ ತಪ್ಪಿ ಒಡೆದು ಹೋದರೆ ದಿನವಿಡೀ ಮೂಡ್ ಅಪ್ಸೆಟ್  ಆಗಿಬಿಡುತ್ತೆ. ಏಕೆಂದ್ರೆ ಅದನ್ನು ಮತ್ತೆ ಜೋಡಿಸೋಕೆ ಆಗುವುದಿಲ್ಲ. ಮನೆ ಖಾಲಿ ಮಾಡುವಾಗ, ಶೋಕೇಸ್(showcase) ಕ್ಲೀನ್ ಮಾಡುವಾಗ, ಗಡಿಬಿಡಿಯಲ್ಲಿ ಬೀರುವಿನಲ್ಲಿರುವ ಬಳೆ ತೆಗೆಯುವಾಗ ಹೀಗೆ ಯಾವುದೋ ಸಂದರ್ಭದಲ್ಲಿ ತುಂಬಾ ಇಷ್ಟವಾದ, ಮನಸ್ಸಿಗೆ ಹತ್ತಿರವಿರುವ ವಸ್ತುವಿಗೆ ಪೆಟ್ಟಾದರೆ ಸಹಿಸಲಾಗುವುದಿಲ್ಲ. ಈ ರೀತಿಯ ಘಟನೆಗಳು ಎಲ್ಲರ ಮನೆಯಲ್ಲಿ ನಡೆದಿರುತ್ತೆ. ಈ ರೀತಿ ನಡೆಯಬಾರದೆಂದರೆ ಎಚ್ಚರ ವಹಿಸುವುದು ಅಗತ್ಯ. ಇಂತಹ ಸನ್ನಿವೇಶ ಮನೆ ಶಿಫ್ಟ್ ಮಾಡುವಾಗ ನಡೆಯುತ್ತೆ. ವಸ್ತು, ಉಪಕರಣಗಳನ್ನು ಪ್ಯಾಕ್ (pack) ಮಾಡುವಾಗ ಗಡಿಬಿಡಿಯಲ್ಲೂ ಅಥವಾ ಟ್ರಾನ್ಸಪೋರ್ಟ್(Transport) ಮಾಡುವಾಗ, ಶಿಫ್ಟಿಂಗ್(shifting) ಮಾಡುವಾಗ ಹೆಚ್ಚುಕಮ್ಮಿಯಾಗುವುದು ಸಹಜ. ಇದು ಸಹಜ ಎಂದು ಸುಮ್ಮನಿರುವುದಲ್ಲ."ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ' ಹಾಗಾಗಿ   ನಮ್ಮ ವಸ್ತುಗಳ ಜವಾಬ್ದಾರಿ, ರಕ್ಷಣೆಯಲ್ಲಿ ನಾವು ಮಾಡಬಹುದಾದ ಕೆಲಸಗಳೇನು. ಅದರ ಬಗ್ಗೆ ಒಂದಷ್ಟು ಟಿಪ್ಸ್ ಇಲ್ಲಿದೆ. 

ಫ್ಲಿಪ್‌ಕಾರ್ಟ್‌ ಪ್ಯಾಕಿಂಗ್‌ಗೆ ಬಳಸಿದ ಪ್ಲಾಸ್ಟಿಕ್‌ ವಾಪಸ್ ಸಂಗ್ರಹ

ಲಿಸ್ಟ್ ಮಾಡುವುದು
ಮನೆ ಖಾಲಿ ಮಾಡುವಾಗ ಬೆಲೆ ಬಾಳುವ ಉಪಕರಣಗಳ ಬಗ್ಗೆ ಒಂದು ಲೀಸ್ಟ್ ಮಾಡಿಕೊಳ್ಳಿ. ಅದರ ಕಂಡೀಷನ್(condition) ಹೇಗಿದೆ ತಿಳಿದಿರಲಿ. ಡೈನಿಂಗ್ ಟೇಬಲ್ ಶಿಫ್ಟ್ ಮಾಡುವಾಗ ಅದರ ನಟ್ಟು ಬೋಲ್ಟ್(nut & bolt), ಟೇಬಲ್, ಅದರ ಕಾಲುಗಳು ಹೀಗೆ ಅದಕ್ಕೆ ಸಂಬAಧಿಸಿದ ಸಣ್ಣ ಪುಟ್ಟ ವಸ್ತುಗಳ ಬಗ್ಗೆಯೂ ಮಾಹಿತಿ ಬರೆದಿಟ್ಟುಕೊಳ್ಳಿ. ಅಂತೆಯೇ ಖುದ್ದು ಎದುರು ನಿಂತು ಪ್ಯಾಕಿಂಗ್ ಮಾಡಿಸುವುದು ಒಳ್ಳೆಯದು.

ಸರಿಯಾಗಿ ಪ್ಯಾಕ್ ಮಾಡುವುದು
ವಸ್ತುವಿಗೆ ಸಂಬAಧಿಸಿದ ಪ್ರತಿಯೊಂದನ್ನು ಬಬಲ್ ವ್ರಾö್ಯಪ್‌(bubble wrap)ನಲ್ಲಿ ಬಿಗಿಯಾಗಿ ಕವರ್ ಮಾಡುವುದು. ಬಿಗಿಯಾಗಿ ಕವರ್ ಮಾಡುವುದರಿಂದ ಒಡೆಯುವುದು, ಸೀಳುವುದು ತಡೆಯುತ್ತದೆ. ಬಬಲ್ ವ್ರಾö್ಯಪ್ ಮಾಡಿದ ಮೇಲೆ ಅದನ್ನು ಕಾರ್ಡ್ಬೋರ್ಡ್ ಬಾಕ್ಸ್ನಲ್ಲಿ(cardboard box) ಮತ್ತೆ ಪ್ಯಾಕ್ ಮಾಡುವುದು. 

Travel Tips : ದಿಢೀರ್ ಪ್ರಯಾಣ ಫಿಕ್ಸ್ ಆಗಿದ್ಯಾ? ಟೆನ್ಷನ್ ಬೇಡ, ಹೀಗೆ ಬ್ಯಾಗ್ ಪ್ಯಾಕ್ ಮಾಡಿ

ಒಳ್ಳೆಯ ಪ್ಯಾಕಿಂಗ್ ಮಟೀರಿಯಲ್(material) ಬಳಕೆ
ಹಣ ಉಳಿಸಬೇಕೆಂದು ಕಡಿಮೆ ಬೆಲೆಯ ಪ್ಯಾಕಿಂಗ್‌ ಮಟೀರಿಯಲ್ ಬಳಸಬೇಡಿ. ಮನೆಯಲ್ಲೇ ಇರುವ ಲೋ ಕ್ವಾಲಿಟಿ ಬಾಕ್ಸ್ ಬಳಸಿದರಾಯಿತು ಎಂಬ ಆಲೋಚನೆ ಬೇಡ. ಇದರಿಂದ ನಿಮ್ಮ ವಸ್ತುಗಳಿಗೆ ತೊಂದರೆಯಾದರೆ ಬೇಸರವಾಗುವಿರಿ. ಹಾಗಾಗಿ ಬಬಲ್ ವ್ರಾö್ಯಪ್(bubble wraper), ಸ್ಟಡಿ ಕಾರ್ಡ್ಬೋರ್ಡ್ ಬಾಕ್ಸ್ನಂತಹ(study cardboard box) ಉತ್ತಮ ಕ್ವಾಲಿಟಿ ಮಟೀರಿಯಲ್ ಬಳಸಿ.

ಗುರುತು ಮಾಡಿಕೊಳ್ಳಿ
ಸಾಮಾನುಗಳನ್ನು ಶಿಫ್ಟ್ ಮಡುವಾಗ ಪ್ಯಾಕಿಂಗ್‌ನಲ್ಲಿ ಹಲವು ಬಾಕ್ಸ್ಗಳಾಗುವುದು ಸಾಮಾನ್ಯ. ಬೆಲೆ ಬಾಳುವ ವಸ್ತುಗಳು, ಉಪಕರಣಗಳು ಎಲ್ಲೆಲ್ಲಿ ಏನೇನಿದೆ ಎಂಬುದು ನಂತರ ತಿಳಿಯುವುದಿಲ್ಲ. ಅದಕ್ಕೆಲ್ಲ ಟೈಂ ಹಿಡಿಯುತ್ತೆ. ಹಾಗಾಗಿ ನಿಮಗೆ ಅನುಕೂಲವಾಗುವಂತೆ ಪ್ಯಾಕ್ ಆದ ಎಲ್ಲಾ ಬಾಕ್ಸ್ಗಳ ಮೇಲೆ ಅದರಲ್ಲಿರುವ ವಸ್ತು ಏನೆಂದು ಒಂದು ಮಾರ್ಕ್ರ್‌ನಲ್ಲಿ ಬರೆಯುವುದು ಒಳ್ಳೆಯದು. ಸೂಕ್ಷö್ಮವಿರುವ ವಸ್ತುಗಳು ಸೇಫ್ ಜಾಗದಲ್ಲಿ ಇಡಲು ಅನುಕೂಲವಾಗುತ್ತೆ.

Travelling Tips: ಪ್ರವಾಸದ ವೇಳೆ ಪಂಚಾಮೃತದಂತೆ ಕೆಲಸ ಮಾಡುವ ಆಹಾರವಿದು..

ಪ್ಯಾಕಿಂಗ್ ಕಂಪನಿಗಳಿವೆ
ಮನೆ ಖಾಲಿ ಮಾಡುವಾಗ ಪ್ಯಾಕಿಂಗ್,  ಶಿಫ್ಟಿಂಗ್ ಎಂದು ಖುದ್ದು ತಲೆ ಕಡಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಅದಕ್ಕೆಂದೆ ಈಗ ಹಲವು ಕಂಪನಿಗಳು(company) ಹುಟ್ಟಿವೆ. ಅವರು ಮನೆಗೆ ಬಂದು ನಿಮ್ಮ ವಸ್ತುಗಳನ್ನು ಪಿನ್ ಟು ಪಿನ್ ಬಬಲ್ ವ್ರಾö್ಯಪ್(bubble wrap) ಮಾಡುವುದರಿಂದ ಹಿಡಿದು ಶಿಫ್ಟ್ ಮಾಡಿ ಜೋಡಿಸಿಕೊಟ್ಟು ಹೋಗ್ತಾರೆ. ಅಲ್ಲದೆ ಕೆಲ ಕಂಪನಿಗಳು ನಿಮ್ಮ ವಸ್ತುಗಳಿಗೆ ಇನ್ಷೂರೆನ್ಸ್(insurance) ಮಾಡಿಸಿಕೊಳ್ಳುತ್ತಾರೆ, ನಿಮ್ಮ ವಸ್ತುಗಳಿಗೆ ಅವರೇ ಜವಾಬ್ದಾರಿಯನ್ನೂ ತೆಗೆದುಕೊಳ್ಳುತ್ತಾರೆ.

ಮರೆಯದಿರಿ 
ಪ್ಯಾಕ್ ಮಾಡಿದ ವಸ್ತುಗಳು ತಲುಪುವ ಜಾಗಕ್ಕೆ, ಸರಿಯಾದ ಸಮಯದಲ್ಲಿ ರೀಚ್ ಆಗಿದೆಯೇ ಎಂದು ತಿಳಿದುಕೊಳ್ಳಿ. ಪ್ಯಾಕಿಂಗ್ ಸಂದರ್ಭದಲ್ಲಿ ಮಾಡಿಕೊಂಡ ಪಟ್ಟಿಂತೆ ಒಮ್ಮೆ ಕ್ರಾಸ್ ಚೆಕ್(cross check) ಮಾಡಿಕೊಳ್ಳುವುದು ಮರೆಯದಿರಿ.

Follow Us:
Download App:
  • android
  • ios