ಮುಂಬೈನ 29 ವರ್ಷದ ಯುವಕನೊಬ್ಬ ತನ್ನ ವಿವಾಹಿತ ಲೇಡಿ ಬಾಸ್‌ನಿಂದ ಕೆಲಸದ ಸ್ಥಳದಲ್ಲಿ ಲೈಂ*ಗಿಕ ದೌರ್ಜನ್ಯ ಎದುರಿಸುತ್ತಿರುವ ಬಗ್ಗೆ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾನೆ. ಫೈಲ್ ಪರಿಶೀಲನೆ ನೆಪದಲ್ಲಿ ಅನುಚಿತವಾಗಿ ಸ್ಪರ್ಶಿಸುವುದು ಮತ್ತು ಪ್ರಚೋದಿಸುವುದರ ಬಗ್ಗೆ ವಿವರಿಸಿದ್ದಾನೆ.
ಕೆಲಸದ ಸ್ಥಳಗಳಲ್ಲಿ ಲೈಂ*ಗಿಕ ದೌರ್ಜನ್ಯ ಎಂದಾಕ್ಷಣ ಎಲ್ಲರ ಕಣ್ಣೆದುರಿಗೆ ಬರುವುದು ಪುರುಷನೊಬ್ಬ ಮಹಿಳೆಯ ಮೇಲೆ ದೌರ್ಜನ್ಯ ಎಸಗುತ್ತಿದ್ದಾನೆ ಎಂದು. ಆದರೆ ಕೆಲವು ಪ್ರಕರಣಗಳು ಇದಕ್ಕೆ ವಿಭಿನ್ನವಾಗಿರುವುದು ಉಂಟು. ಮಹಿಳೆಯರು ಸುಂದರವಾಗಿರುವ ಯುವಕರ ಮೇಲೆ ಇದೇ ರೀತಿ ದೌರ್ಜನ್ಯ ನಡೆಸುವ ಘಟನೆಗಳೂ ವರದಿಯಾಗುತ್ತವೆ. ಇದೀಗ 29 ವರ್ಷದ ಯುವಕನೊಬ್ಬ ತನ್ನ ಲೇಡಿ ಬಾಸ್ ತನ್ನ ಮೇಲೆ ನಡೆಸುತ್ತಿರುವ ದೌರ್ಜನ್ಯಗಳ ಕುರಿತು ರೆಡ್ಡಿಟ್‌ನಲ್ಲಿ ಶೇರ್ ಮಾಡಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
29 ವರ್ಷದ ಯುವಕ
ನಾನು ಮುಂಬೈನ ಗೋರೆಗಾಂವ್‌ನಲ್ಲಿರುವ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ವಯಸ್ಸು 29 ವರ್ಷ ಎಂದು ಬರೆದುಕೊಂಡಿರುವ ಉದ್ಯೋಗಿ, ವಿವಾಹಿತೆಯಾಗಿ ಮಕ್ಕಳೂ ಇರುವ ನನ್ನ ಲೇಡಿ ಬಾಸ್, ಫೈಲ್ ಪರಿಶೀಲನೆಯ ಸಮಯದಲ್ಲಿ ಪದೇ ಪದೇ ನನ್ನನ್ನು ಮುಟ್ಟುತ್ತಾರೆ, ಪ್ರಚೋದನೆ ಮಾಡುತ್ತಾರೆ. ತೊಡೆಯ ಸಂದಿಗಳಲ್ಲಿ, ಕೈ ಕಾಲು... ಹೀಗೆ ಎಲ್ಲಾ ಕಡೆ ಮುಟ್ಟುತ್ತ ಹಿಂಸೆ ಕೊಡುತ್ತಿದ್ದಾರೆ. ಪುರುಷರ ಮೇಲೆ ನಡೆಯುತ್ತಿರುವ ಇಂಥ ದೌರ್ಜನ್ಯದ ಬಗ್ಗೆ ಮಾತನಾಡಿದರೆ ತಮಾಷೆ ಮಾಡುತ್ತಾರೆ, ಎಲ್ಲಿ ಯಾರಿಗೆ ಈ ಬಗ್ಗೆ ಹೇಳಬೇಕೋ ತಿಳಿಯುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾನೆ ಉದ್ಯೋಗಿ.
ಆರಂಭದಿಂದಲೇ ಹೀಗೆ
ನಾನು ಆರು ತಿಂಗಳ ಹಿಂದೆ ಕಂಪೆನಿಗೆ ಸೇರಿದ್ದೆ. ಆರಂಭದಿಂದಲೂ ಬಾಸ್ ನನ್ನನ್ನು ವಿಚಿತ್ರವಾಗಿಯೇ ನೋಡುತ್ತಿದ್ದರು. ಬಳಿಕ ಆಕೆಯ ನಡವಳಿಕೆ ಸೂಕ್ಷ್ಮವಾಗಿ ಆರಂಭವಾಯಿತು. ಆರಂಭದಲ್ಲಿ ನಾನೇ ತಪ್ಪು ಎಂದು ಅಂದುಕೊಂಡೆ. ನಾನೇ ತಪ್ಪಾಗಿ ತಿಳಿದುಕೊಂಡಿರಬಹುದು ಎಂದು ಭಾವಿಸಿದೆ. ಆದರೆ ಬಳಿಕ ಅವರ ವರ್ತನೆ ವಿಪರೀತವಾಯಿತು. ಫೈಲ್ಸ್ ಕೇಳುವ ನೆಪದಲ್ಲಿ ಛೇಂಬರ್ಗೆ ಕರೆಸಿಕೊಂಡು *ss, ತೊಡೆಗಳು, ತೋಳುಗಳನ್ನು ಮುಟ್ಟುತ್ತಾರೆ ಮತ್ತು ಪ್ರಚೋದಿಸುತ್ತಾರೆ, ಹತ್ತಿರ ಕುಳಿತುಕೊಂಡು ಕೆಟ್ಟ ಜೋಕ್ ಮಾಡುತ್ತಾರೆ ಎಂದು ಅವರು ಬರೆದಿದ್ದಾರೆ.
ಮಕ್ಕಳೂ ಇದ್ದಾರೆ
ಆಕೆಗೆ ಮದುವೆಯಾಗಿ ಮಕ್ಕಳೂ ಇದ್ದಾರೆ. ನಾನು ಈ ಬಗ್ಗೆ ಕೆಲವರಲ್ಲಿ ಹೇಳಿದೆ. ಆಗ ಕೆಲವರಿಗೆ ಇಂಥ ಅನುಭವ ಆಗಿರುವ ಬಗ್ಗೆ ಹೇಳಿದರು. ಆದರೆ ಇದರ ಬಗ್ಗೆ ದನಿ ಎತ್ತಿದರೆ ಕೆಲಸದಿಂದ ತೆಗೆದುಹಾಕುವ ಭಯದಿಂದ ಸುಮ್ಮನೇ ಇರುವುದಾಗಿ ಅವರು ಹೇಳುತ್ತಿದ್ದಾರೆ. ಹೀಗಾದರೆ ಪುರುಷರು ಎಲ್ಲಿ ನ್ಯಾಯ ಕೇಳಬೇಕು ಎಂದು ಉದ್ಯೋಗಿ ಪ್ರಶ್ನಿಸಿದ್ದಾರೆ. ಬೇರೆ ಸೆಕ್ಷನ್ಗೆ ಕೇಳಿಕೊಂಡವರಿಗೂ ಕೆಲಸದಿಂದ ತೆಗೆದುಹಾಕಿದ್ದಾರಂತೆ. ಎಲ್ಲಿ ದೂರು ನೀಡಬೇಕು ಎಂದು ತಿಳಿಯುತ್ತಿಲ್ಲ ಎಂದಿದ್ದಾರೆ. ವೈರಲ್ ಆದ ರೆಡ್ಡಿಟ್ ಪೋಸ್ಟ್ಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಕೆಲವು ಪುರುಷರು ತಮಗೂ ಆಗಿರುವ ಇಂಥ ದೌರ್ಜನ್ಯಗಳ ಬಗ್ಗೆ ವಿವರಿಸಿದ್ದಾರೆ. ಪುರುಷರಿಗೆ ಎಲ್ಲಿಯೂ ನ್ಯಾಯ ಸಿಗುವುದಿಲ್ಲ. ಅದರಲ್ಲಿಯೂ ಇಂಥ ವಿಷಯಗಳಲ್ಲಿ ಪುರುಷರನ್ನೇ ದೂಷಿಸಲಾಗುತ್ತದೆ ಎಂದು ಹಲವರು ಬರೆದುಕೊಂಡಿದ್ದಾರೆ.


