‘ನಾನು ಎರಡನೇ ಮದುವೆ ಕುರಿತು ಯೋಚನೆ ಮಾಡಿದಾಗೆಲ್ಲಾ ನನ್ನ ವಿಚ್ಚೇದನ ಇನ್ನೂ ಆಗಿಲ್ಲ ಎನ್ನುವ ಸತ್ಯ ನನಗೆ ಅರಿವಾಗುತ್ತೆ.. ನಮ್ಮ ಡಿವೋರ್ಸ್ ಪ್ರಕರಣ ಇನ್ನೂ ಬಾಕಿ ಇದೆ. ಆದರೆ ನಾನು ನಂಬಿಕೆ ಕಳೆದುಕೊಂಡಿಲ್ಲ, ಭವಿಷ್ಯದಲ್ಲಿ ವಿಚ್ಛೇದನ ಖಂಡಿತ ಆಗುತ್ತೆ..’ ಎಂದಿದ್ದಾರೆ ಖ್ಯಾತ ನಟಿ!
ಮದುವೆ-ಡಿವೋರ್ಸ್ ಕಥೆ
ಮದುವೆ ಎಂಬುದು ಅನಿವಾರ್ಯ ಅಲ್ಲದಿದ್ದರೂ ಭಾರತೀಯ ಸಮಾಜದಲ್ಲಿಅದನ್ನು ಅನಿವಾರ್ಯ ಎಂದೇ ಭಾವಿಸಿ 'ಮದುವೆ'ಯ ಬಂಧನದಲ್ಲಿ ಬಹುತೇಕರು ಜೀವಿಸುತ್ತಾರೆ. ಮದುವೆ ಎಂಬುದ ಸಂಗಾತಿಯ ಜೊತೆಗಿನ ನಂಬಿಕೆ, ಬದ್ದತೆ ಹಾಗೂ ಭರವಸೆಯ ಪ್ರತೀಕ ಎನ್ನಬಹುದೇನೋ... ಆದರೆ, ವಾಸ್ತವಿಕ ಜೀವನದಲ್ಲಿ ಹಲವರ ಬದುಕಿನಲ್ಲಿ ಈ ನಂಬಿಕೆ, ಬದ್ದತೆ ಮರೆಯಾಗಿ ಬದುಕು ದುರಂತಮಯವಾಗುತ್ತೆ.. ಸಂಬಂಧ ಅರ್ಧದಲ್ಲಿಯೇ ಮುರಿದು ಬೀಳುತ್ತೆ, ಮುಂದೇನು ಎಂಬಪ್ರಶ್ನೆ ಕಾಡುತ್ತೆ. ಅಂತಹ ಸಮಯದಲ್ಲಿ ಕೆಲವರು ಗೌರವಯುತವಾಗಿ ತಮ್ಮ ಸಂಬಂಧದಿಂದ ಹೊರಬಂದರೆ ಹಲವರು ತಮ್ಮ ವೈಯಕ್ತಿಕ ಬದುಕನ್ನು ಬೀದಿಗೆ ತಂದು ಸುದ್ದಿಯಾಗುತ್ತಾರೆ.
ಇನ್ನೂ ಕೆಲವು ಸಂಬಂಧಗಳು ಮುರಿದು ಬಿದ್ದಿದ್ದರೂ ಮುಂದಿನ ಹೆಜ್ಜೆ ಇಡಲು ಕೆಲವು ಸಮಸ್ಯೆಗಳು ಎದುರಾಗುತ್ತವೆ. ಅಂಥವರ ಸಾಲಿನಲ್ಲಿ ಬಾಲಿವುಡ್‌ನ ಖ್ಯಾತ ನಟಿ ಇದ್ದು, ಅವರೀಗ ಅದೇ ಸಮಸ್ಯೆಯಲ್ಲಿ ನರಳುತ್ತಿದ್ದಾರೆ. ಇರುವ ಗಂಡನ ಜೊತೆ ಸಂಬಂಧ ಮುರಿದುಬಿದ್ದು 12 ವರ್ಷಗಳು ಆಗಿವೆ. ಆದರೆ, ಇಷ್ಟವಿದ್ದರೂ ಮತ್ತೊಂದು ಸಂಬಂಧ ಮಾಡಿಕೊಳ್ಳಲು ಈ ಗಂಡನಿಂದ ಕಾನೂನು ಪ್ರಕ್ರಿಯೆ ಮೂಲಕ ಡಿವೋರ್ಸ್ ಆಗಿಲ್ಲ. ಪತಿ ಜೊತೆ ಈ ನಟಿ ದೂರವಿದ್ದು ಮಗಳ ಜೊತೆ ಬದುಕುತ್ತಿದ್ದಾರೆ. ಆದರೆ, ಬಯಸುತ್ತಿದ್ದರೂ ಮತ್ತೊಂದು ಮದುವೆ ಆಗಲಿಕ್ಕಾಗದೇ ಈ ನಟಿ ಕಷ್ಟಕ್ಕೆ ಸಿಲುಕಿದ್ದಾರೆ. ಅವರೇ ನಟಿ ಮಹಿಮಾ ಚೌಧರಿ. "ದೀವಾನೆ".., "ಪರ್‌ದೇಸ್".. "ಧಡ್ಕನ್".. "ದಿಲ್ ಕ್ಯಾ ಕರೇ".."ದಿಲ್ ಹೈ ತುಮಾರಾ".. ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಮಹಿಮಾ ಚೌಧರಿ (Mahima Chaudhry) ಕಥೆ ಇದು..
ಸ್ತನ ಕ್ಯಾನ್ಸರ್
ನಟಿ ಮಹಿಮಾ ಚಛಧರಿ ಅವರು ಮೂರು ವರ್ಷದ ಹಿಂದೆ ಸ್ತನ ಕ್ಯಾನ್ಸರ್‌ಗೆ ತುತ್ತಾಗಿ, ಅದರಿಂದ ಚೇತರಿಸಿಕೊಂಡು ಚಿತ್ರರಂಗಕ್ಕೆ ಮರಳಿದ್ದಾರೆ. ಮತ್ತೆ ಹೊಸ ಚಿತ್ರಗಳನ್ನು ಒಪ್ಪಿಕೊಂಡು ನಟಿಸಲು ಶುರು ಮಾಡಿದ್ದಾರೆ. ನಟಿ ಮಹಿಮಾ ಚೌಧರಿಗೆ ಈಗ 52 ವರ್ಷ. ಮಹಿಮಾಗೆ ಮಗಳಿದ್ದಾಳೆ, ತಾಯಿಯಂತೆ ಚಿತ್ರರಂಗದಲ್ಲಿ ಮಿಂಚುವ ಬಯಕೆ ಹೊತ್ತು ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾಳೆ. ಮಹಿಮಾ ಕೂಡ ಮಗಳ ಖುಷಿಯಲ್ಲಿಯೇ ತಮ್ಮ ಖುಷಿಯನ್ನು ಕಾಣುತ್ತಿದ್ದಾರೆ. 52 ವಯಸ್ಸಿನಲ್ಲಿ ತಮ್ಮ ಮಗಳು ಹಾಗೂ ತಾಯಿಯ ಜೊತೆ ಏಕಾಂಗಿಯಾಗಿ ಬದುಕುತ್ತಿದ್ದಾರೆ ಮಹಿಮಾ ಚೌಧರಿ.
ಮಹಿಮಾ ಚೌಧರಿಗೆ ಮತ್ತೊಂದು ಮದುವೆ ಆಗುವ ಆಸೆ ಇದೆಯಂತೆ.. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ನಿಜ ಸಂಗತಿ ಎಂದರೆ, ತಮ್ಮ ವೃತ್ತಿ ಬದುಕಿನಲ್ಲಿ ಖ್ಯಾತಿಯ ತುತ್ತ ತುದಿಯಲ್ಲಿದ್ದಾಗ, ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದಾಗ, 2006ರಲ್ಲಿ ಮಹಿಮಾ ಚೌಧರಿ ಮದುವೆಯಾದರು. ಕೋಲ್ಕತ್ತಾ ಮೂಲದ ಉದ್ಯಮಿ ಬಾಬಿ ಮುಖರ್ಜಿ ಜೊತೆ ಮಹಿಮಾರ ಮದುವೆ ಆಗಿತ್ತು. 2007ರಲ್ಲಿ ಹೆಣ್ಣು ಮಗು ಜನನವಾಯ್ತು. ಆದರೆ, ಮದುವೆ ಬಳಿಕ 7 ವರ್ಷಗಳಲ್ಲಿಯೇ ದಾಂಪತ್ಯದಲ್ಲಿ ಬಿರುಕು ಮೂಡಿತು. ಸಾಂಸಾರಿಕ ಜೀವನ ಹಳಿ ತಪ್ಪಿತು. ಇನ್ನೂ ಜೊತೆಯಲ್ಲಿ ಬದುಕಲು ಸಾಧ್ಯವೇ ಇಲ್ಲ ಅಂದಾಗ, ಮಹಿಮಾ ತಮ್ಮ ಮಗಳ ಜೊತೆ ಆ ಮನೆಯಿಂದ ಹೊರ ಬಂದರು.
ಆದರೆ.. ಹೀಗೆ ಮನೆಯಿಂದ ಹೊರ ಬಂದು 12 ವರ್ಷಗಳೇ ಕಳೆದರೂ ಕೂಡ ಮಹಿಮಾ ಚೌಧರಿ ಪತಿ ಬಾಬಿ ಮುಖರ್ಜಿ ವಿಚ್ಛೇದನ ನೀಡಿಲ್ಲ. ಹೀಗಾಗಿ ಎರಡನೇ ಮದುವೆ ಆಗುವ ಬಯಕೆ ಇದ್ದರೂ ಕೂಡ ಮಹಿಮಾಗೆ ಸದ್ಯ ಮದುವೆ ಆಗೋಕೆ ಆಗೋದಿಲ್ಲ. ಈ ವಿಚಾರದಕ್ಕೆ ಸಂಬಂಧಿಸಿ ಮಹಿಮಾ ಇತ್ತೀಚೆಗೆ ಮಾತನಾಡಿದ್ದು ಇದೀಗ ವೈರಲ್ ಆಗಿದೆ. ಹಾಗಿದ್ದರೆ ಮಹಿಮಾ ಹೇಳಿದ್ದೇನು ನೋಡಿ..
ಪ್ರೀತಿಯ ಮಳೆಯೇ ಸುರಿಯುತ್ತಾ ಇರುತ್ತೆ ಅಂದ ನಾನು ಬಲವಾಗಿ ನಂಬಿದ್ದೆ
"ನವಭಾರತ ಟೈಮ್ಸ್"ಗೆ ನೀಡಿರುವ ಸಂದರ್ಶನದಲ್ಲಿ ಮಹಿಮಾ ಚೌಧರಿ 'ನನ್ನ ತಂದೆ ಹಾಗೂ ತಾಯಿಯ ಸುಂದರವಾದ ಸಾಂಸಾರಿಕ ಜೀವನವನ್ನು ನಾನು ನೋಡಿದ್ದೇನೆ. ಅವರಿಬ್ಬರ ಮಧ್ಯೆ ಇದ್ದ ಪ್ರೀತಿಯನ್ನು ಕಂಡಿದ್ದೇನೆ. ಈ ಕಾರಣಕ್ಕೆ ನಾನು ಎಲ್ಲರ ವೈಯಕ್ತಿಕ ಬದುಕಿನಲ್ಲಿಯೂ ಪ್ರೀತಿಯ ಮಳೆಯೇ ಸುರಿಯುತ್ತಾ ಇರುತ್ತೆ ಅಂದ ನಾನು ಬಲವಾಗಿ ನಂಬಿದ್ದೆ.. ಯಾರದೋ ಡಿವೋರ್ಸ್ ಕುರಿತು ನನಗೆ ಗೊತ್ತಾದಾಗ, ನಾನು ಮರಗುತ್ತಿದ್ದೆ, ನರಳುತ್ತಿದ್ದೆ.. ಛೇ.. ಇಬ್ಬರಲ್ಲಿ ಯಾರಾದರೂ ಒಬ್ಬರು ತಮ್ಮ ಮದುವೆ ಉಳಿಸಿಕೊಳ್ಳುವ ಪ್ರಯತ್ನ ಮಾಡಬಾರದೇ ಎಂದು ಯೋಚಿಸುತ್ತಿದ್ದೆ..
ಛೇ ಎಂಥ ಜನರು..! ಅವರು ಪ್ರಯತ್ನವನ್ನೇ ಮಾಡಿರಲಿಕ್ಕಿಲ್ಲ, ಒಮ್ಮೆ ನಾನು ಅವರ ಜಾಗದಲ್ಲಿದ್ದರೆ ಆ ಸಂಬಂಧ ಉಳಿಸಿಕೊಳ್ಳಲು ಬೇಕಾದ ಎಲ್ಲ ಪ್ರಯತ್ನವನ್ನು ಮಾಡುತ್ತಿದ್ದೆ ಎಂದು ಅಂದುಕೊಳ್ಳುತ್ತಿದ್ದೆ.. ಅದರೆ, ನನ್ನ ದುರಾದೃಷ್ಟಕ್ಕೆ ನನ್ನ ಬದುಕಿನಲ್ಲಿಯೇ ಬಿರುಗಾಳಿ ಎದ್ದ ನಂತರ ವಾಸ್ತವದ ಅರಿವು ನನಗಾಯ್ತು..' ಎಂದು ಹೇಳೀ ನಿಟ್ಟುಸಿರು ಬಿಟ್ಟಿದ್ದಾರೆ ಮಹಿಮಾ ಚೌಧರಿ.
'ನಮ್ಮ ಸಂಬಂಧ ಮುರಿದು ಬಿದ್ದಾಗ ನಾನು ಮಾನಸಿಕವಾಗಿ ಕುಸಿದುಬಿದ್ದಿದ್ದೆ.. ಆತ್ಮಸೈರ್ಯ ಇರಲಿಲ್ಲ, ಸಂಪೂರ್ಣ ಕುಗ್ಗಿ ಹೋಗಿದ್ದೆ.. ಆ ಸಮಯದಲ್ಲಿ ನನ್ನ ತಾಯಿ ಮತ್ತು ನನ್ನ ಅಜ್ಜಿ ನನಗೆ ಧೈರ್ಯ ತುಂಬಿದರು.. ನಾವೆಲ್ಲ ಸೇರಿ ಈ ಮಗಳನ್ನು ಬೆಳೆಸೋಣ' ಎಂದು ಹೇಳಿದರು. ಇಲ್ಲದಿದ್ದರೆ ನನಗೆ ಜಗತ್ತೇ ಬೇಡ ಎನ್ನಿಸಿಬಿಡುತ್ತಿತ್ತೇನೋ' ಎಂದಿದ್ದಾರೆ ಮಹಿಮಾ.
ಇನ್ನು, ಎರಡನೇ ಮದುವೆ ಕುರಿತು ಕೂಡ ಮಾತನಾಡಿರುವ ಮಹಿಮಾ ಚೌಧರಿ 'ನಾನು ಎರಡನೇ ಮದುವೆ ಕುರಿತು ಯೋಚನೆ ಮಾಡಿದಾಗೆಲ್ಲಾ ನನ್ನ ವಿಚ್ಚೇದನ ಇನ್ನೂ ಆಗಿಲ್ಲ ಎನ್ನುವ ಸತ್ಯ ನನಗೆ ಅರಿವಾಗುತ್ತೆ.. ನಮ್ಮ ಡಿವೋರ್ಸ್ ಪ್ರಕರಣ ಇನ್ನೂ ಬಾಕಿ ಇದೆ. ಆದರೆ ನಾನು ನಂಬಿಕೆ ಕಳೆದುಕೊಂಡಿಲ್ಲ, ನಮ್ಮ ವಿಚ್ಛೇದನ ಖಂಡಿತ ಆಗುತ್ತೆ ಭವಿಷ್ಯದಲ್ಲಿ.. ಮದುವೆ ಎಂಬ ವ್ಯವಸ್ಥೆ ಮೇಲೆ ನನಗೆ ಇನ್ನೂ ನಂಬಿಕೆ ಇದೆ, ಮತ್ತೆ ಮದುವೆಯಾದರೆ ಅವರ ಜೊತೆ ನಾನು ಖುಷಿಯಾಗಿ ಜೀವನ ಮಾಡಬಹುದು ಎಂಬ ಕನಸು-ವಿಶ್ವಾಸ ನನಗಿದೆ..' ಎಂದು ಮಹಿಮಾ ಹೇಳಿದ್ದಾರೆ.
ಮಹಿಮಾ ಚೌಧರಿ ಬಾಲಿವುಡ್‌ನ ಹಿರಿಯ ನಟ ಸಂಜಯ್ ಮಿಶ್ರಾ ಅವರ ಜೊತೆ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಆ ಚಿತ್ರದ ಹೆಸರು "ದುರ್ಲಭ್ ಪ್ರಸಾದ್ ಕೀ ಶಾದಿ". ಈ ಚಿತ್ರದಲ್ಲಿ ಮಹಿಮಾ ಚೌಧರಿ ಮತ್ತು ಸಂಜಯ್ ಮಿಶ್ರಾ ಮದುವೆಯಾಗುವ ದೃಶ್ಯ ಇದೆ. ಈ ದೃಶ್ಯದ ಫೋಟೊ
ಮತ್ತು ಶೂಟಿಂಗ್ ಸಮಯದಲ್ಲಿ ತೆಗೆದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ವೈರಲ್ ಆದ ಈ ಫೋಟೊ ಮತ್ತು ವಿಡಿಯೋಗಳನ್ನು ನೋಡಿ ಕೆಲವರು ಮಹಿಮಾ ಚೌಧರಿ ಮತ್ತು ಸಂಜಯ್ ಮಿಶ್ರಾ ನಿಜವಾಗಿಯೂ ಮದುವೆಯಾಗಿದ್ದಾರೆ ಎಂದುಕೊಂಡಿದ್ದರು.
ಈ ಸಂಗತಿಯನ್ನು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪ ಮಾಡಿರುವ ಮಹಿಮಾ ಚೌಧರಿ, 'ತೀರ ಇತ್ತೀಚೆಗೆ ನನ್ನ ಮತ್ತು ಸಂಜಯ್ ಮಿಶ್ರಾ ಅವರ ಮದುವೆಯ ಫೋಟೊಗಳು ವೈರಲ್ ಆದ ನಂತರ ನನ್ನ ಎರಡನೇ ಮದುವೆಯ ಬಗ್ಗೆ ನನಗೆ ಆಶಾಭಾವನೆ ಮೂಡಿದೆ.. ನನಗಿಂತ ಹೆಚ್ಚಾಗಿ ನನ್ನ ಅಭಿಮಾನಿಗಳು, ಸಮಾಜದಲ್ಲಿನ ಜನರು ನಾನು ಮತ್ತೆ ಮದುವೆಯಾಗಿ ಸಂಸಾರ ಮಾಡಬೇಕು ಎಂದು ಬಯಸುತ್ತಿದ್ದಾರೆ ಎನ್ನುವುದನ್ನು ನೋಡಿ ಖುಷಿಯಾಯ್ತು.. ಆದಷ್ಟು ಬೇಗ ನನ್ನ ಡಿವೋರ್ಸ್ ಪ್ರಕರಣ ಸುಖಾಂತ್ಯವಾಗಲಿ, ನನಗೆ ಮತ್ತೆ ಮದುವೆಯ ಅದೃಷ್ಟ ಕೂಡಿ ಬರಲಿ' ಎಂದಿದ್ದಾರೆ ನಟಿ ಮಹಿಮಾ ಚೌಧರಿ.


