Sexy Figure : ಪುರುಷರ ಬಯಕೆ ಹೆಚ್ಚಿಸುತ್ತೆ ಮಹಿಳೆಯರ ಈ ಅಂಗ
ಮೆನ್ ಈಸ್ ಮೆನ್ ಎಂಬ ಮಾತನ್ನು ನೀವು ಕೇಳಿರ್ಬಹುದು. ಎಷ್ಟೇ ಪ್ರಾಮಾಣಿಕನಾಗಿದ್ರೂ ಸುಂದರ ಹುಡುಗಿ ಹಾದು ಹೋದ್ರೆ ಆಕೆ ಮೇಲೆ ಆತನ ದೃಷ್ಟಿ ಬಿದ್ದೇ ಬೀಳುತ್ತದೆ. ಅದ್ರಲ್ಲೂ ಕೆಲ ಅಂಗಗಳನ್ನು ಹೆಚ್ಚು ಆಸಕ್ತಿಯಿಂದ ನೋಡ್ತಾನೆ ಪುರುಷ.
ಸೌಂದರ್ಯ (Beauty) ಕ್ಕೆ ಇನ್ನೊಂದು ಹೆಸರು ಮಹಿಳೆ (Woman). ಆಕೆಯ ಸೌಂದರ್ಯ ಎಲ್ಲರನ್ನು ಸೆಳೆಯುತ್ತದೆ. ಬಹುತೇಕ ಮಹಿಳೆಯರು ಫಿಟ್ನೆಸ್ (Fitness) ಗೆ ಹೆಚ್ಚು ಮಹತ್ವ ನೀಡ್ತಾರೆ. ನಾಲ್ಕು ಜನರ ಮಧ್ಯೆ ಎದ್ದು ಕಾಣಿಸಬೇಕೆಂಬ ಪ್ರಯತ್ನ ನಡೆಸ್ತಾರೆ. ಸುಂದರ ಹುಡುಗಿ ಮೇಲೆ ಎಲ್ಲರ ದೃಷ್ಟಿ ನೆಟ್ಟೋದು ಸಾಮಾನ್ಯ. ಆದ್ರೆ ಪುರುಷ (Male) ರು ಮಹಿಳೆಯ ಕೆಲ ಭಾಗಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುತ್ತಾರೆ. ಮಹಿಳೆಯರ ಕೆಲ ಅಂಗಗಳು ಸದಾ ಪುರುಷರನ್ನು ಆಕರ್ಷಿಸುತ್ತವೆ. ಪುರುಷರಲ್ಲಿ ಲೈಂಗಿಕತೆ (Sex) ಯ ಭಾವನೆಯು ವೇಗವಾಗಿ ಹೆಚ್ಚಾಗಲು ಪ್ರಾರಂಭಿಸುವ ಕೆಲವು ಭಾಗಗಳಿವೆ. ಇಂದು ನಾವು ಮಹಿಳೆಯರ ಯಾವ ಭಾಗ ಹೆಚ್ಚು ಕಾಮುಕವಾಗಿರುತ್ತದೆ ಎಂಬುದನ್ನು ನಿಮಗೆ ಹೇಳ್ತೇವೆ.
ಪುರುಷರನ್ನು ಸೆಳೆಯುತ್ತೆ ಮಹಿಳೆಯರ ಈ ಅಂಗ:
ಕಾಲ್ಬೆರಳುಗಳು (Toes) : ನಿಮಗೆ ಅಚ್ಚರಿ ಎನ್ನಿಸಬಹುದು. ಆದ್ರೆ ಇದು ಸತ್ಯ. ಮಹಿಳೆಯರ ಪಾದದ ಅಡಿಭಾಗ, ಕಾಲ್ಬೆರಳುಗಳು ಪುರುಷರನ್ನು ತಮ್ಮ ಕಡೆಗೆ ಆಕರ್ಷಿಸುತ್ತದೆ. ಹೈ ಹೀಲ್ಸ್ ಧರಿಸಿರುವ ಮಹಿಳೆಯರ ಪಾದಗಳು ಪುರುಷರನ್ನು ಹೆಚ್ಚು ಆಕರ್ಷಿಸುತ್ತವೆ. ಉಗುರಿಗೆ ಹಚ್ಚುವ ಬಣ್ಣ ಬಣ್ಣದ ನೇಲ್ ಪಾಲಿಶ್ ಕೂಡ ಇದ್ರಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದ್ರೆ ತಪ್ಪಾಗುವುದಿಲ್ಲ.
ಹುಡುಗನ ಮೊದಲ ಸ್ಪರ್ಶವಾಗ್ತಿದ್ದಂತೆ ಹೀಗೆ ಯೋಚಿಸ್ತಾಳೆ ಹುಡುಗಿ!
ಬೆನ್ನು (Back) : ಪುರುಷರ ಕಣ್ಣು ಮಹಿಳೆಯರ ಬೆನ್ನಿನ ಮೇಲೆ ಹೋಗುತ್ತದೆ. ಮುಂಭಾಗದ ಕಡೆಗೆ ಸ್ವಲ್ಪ ಬಾಗಿದ ಬೆನ್ನು ಪುರುಷರನ್ನು ಆಕರ್ಷಿಸುತ್ತದೆ. ಅದ್ರಲ್ಲೂ ಹಚ್ಚೆ ಇರುವ ಸುಂದರ ಬೆನ್ನನ್ನು ಮತ್ತೆ ಮತ್ತೆ ನೋಡ್ತಾರೆ ಪುರುಷರು. ಡೀಪ್ ಬೆನ್ನಿನ ಡ್ರೆಸ್ ಧರಿಸಿರುವ ಹುಡುಗಿಯರು ಬಹುಬೇಗ ಪುರುಷರನ್ನು ಸೆಳೆಯುತ್ತಾರೆ.
ಫಿಗರ್ (Figure) : ಪ್ರತಿಯೊಬ್ಬ ಪುರುಷನು ಫಿಟ್ ಮತ್ತು ಫೈನ್ ಫಿಗರ್ ಹೊಂದಿರುವ ಮಹಿಳೆಯನ್ನು ಇಷ್ಟಪಡುತ್ತಾನೆ. ದೊಡ್ಡ ಹೊಟ್ಟೆಯನ್ನು ಹೊಂದಿರುವ ಮಹಿಳೆಯರಿಂದ ಪುರುಷರು ದೂರವಿರ್ತಾರೆ. ಆದರೆ ಫ್ಲಾಟ್ ಹೊಟ್ಟೆಯನ್ನು ಹೊಂದಿರುವ ಮಹಿಳೆಯರು ಪುರುಷರನ್ನು ಹೆಚ್ಚು ಆಕರ್ಷಿಸುತ್ತಾರೆ.
Travel Tips : ಸೋಲೋ ಟ್ರಿಪ್ ಹೆಣ್ಮಕ್ಕಳೇ ಹುಷಾರು, ಈ ಬಗ್ಗೆ ಗೊತ್ತು ಮಾಡ್ಕೊಳ್ಳಿ!
ಕೂದಲು (Hair) : ಮಹಿಳೆಯರ ಕೂದಲು ಅವರ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಕೂದಲು ಸ್ವತಃ ಅವರ ನೋಟಕ್ಕೆ ಬದಲಾವಣೆಯನ್ನು ನೀಡುತ್ತದೆ. ಪುರುಷರು, ವಿಭಿನ್ನ ವಿನ್ಯಾಸದ ಕೂದಲಿನ ಮಹಿಳೆಯರನ್ನು ಇಷ್ಟಪಡ್ತಾರೆ.
ಸೊಂಟ (Hips) : ಹೆಚ್ಚಿನ ಪುರುಷರ ಕಣ್ಣುಗಳು ಮಹಿಳೆಯರ ಸೊಂಟದ ಮೇಲೆ ಇರುತ್ತದೆ. ತೆಳ್ಳಗೆ, ಬೆಳ್ಳಗಿರುವ ಸೊಂಟ ಪುರುಷರನ್ನು ಆಕರ್ಷಿಸುತ್ತದೆ.
ಸ್ಮೈಲ್ (Smile) : ಹೆಣ್ಣಿನ ನಗುವೇ ಅವಳಿಗೆ ದೊಡ್ಡ ಆಭರಣ. ಸದಾ ಹಸನ್ಮುಕಿಯಾಗಿರುವ ಮಹಿಳೆ ಸುಲಭವಾಗಿ ಪುರುಷರನ್ನು ಸೆಳೆಯಬಲ್ಲಳು.
ತುಟಿ (Lip) ಗಳು : ಮಹಿಳೆಯರ ಗುಲಾಬಿ ತುಟಿಗಳು ಪ್ರತಿಯೊಬ್ಬ ಪುರುಷನನ್ನು ತಮ್ಮ ಕಡೆಗೆ ಆಕರ್ಷಿಸುತ್ತವೆ. ಮುಖ ನೋಡುವಾಗ ಪುರುಷರು ಮೊದಲು ನೋಡೋದು ಮಹಿಳೆಯ ತುಟಿಯನ್ನು ಎಂಬುದು ನೆನಪಿರಲಿ.
ಬ್ರೆಸ್ಟ್ (Breast) : ಮಹಿಳೆಯರ ಬ್ರೆಸ್ಟ್ ಪುರುಷರನ್ನು ಆಕರ್ಷಿಸುತ್ತದೆ. ಅನೇಕ ಪುರುಷರು ಮೊದಲು ಮಹಿಳೆಯ ಬ್ರೆಸ್ಟ್ ನೋಡ್ತಾರೆ. ಮಾದಕ ಡ್ರೆಸ್ ಧರಿಸಿದಾಗ ಮಹಿಳೆಯರ ಬ್ರೆಸ್ಟ್ ಮೇಲೆ ಗಮನ ಹೋಗುತ್ತದೆ.
ಬ್ಯಾಕ್ : ಹೆಣ್ಣಿನ ಬ್ಯಾಕ್ ಪುರುಷರ ಗಮನ ಸೆಳೆಯುತ್ತದೆ. ಅನೇಕ ಪುರುಷರು ಅದನ್ನು ಬಹಳ ವಿಚಿತ್ರ ರೀತಿಯಲ್ಲಿ ನೋಡುತ್ತಾರೆ. ಮಾದಕ ಬಟ್ಟೆ ಧರಿಸಿದಾಗ ಮಹಿಳೆಯರ ಪುಷ್ಠ ಹೆಚ್ಚು ಆಕರ್ಷಿಸುತ್ತದೆ. ಮಹಿಳೆಯೊಬ್ಬಳು ಮುಂದೆ ಹೋಗ್ತಿದ್ದರೆ ಬಹುತೇಕ ಪುರುಷರು ಮೊದಲು ನೋಡೋದು ಆಕೆಯ ಪುಷ್ಠವನ್ನು.
ಕಣ್ಣುಗಳು : ಯಾವುದೇ ಹೆಣ್ಣಿನ ಕಣ್ಣುಗಳು ಅವಳ ಗುಣವನ್ನು ಹೇಳುತ್ತವೆ. ಹೆಚ್ಚಿನ ಪುರುಷರು ಮಹಿಳೆಯರ ಕಣ್ಣನ್ನು ಹೊಗಳ್ತಾರೆ. ಹೊಳೆಯುವ ಹಾಗೂ ಆತ್ಮವಿಶ್ವಾಸವುಳ್ಳ ಮಹಿಳೆಯರ ಕಣ್ಣನ್ನು ಪುರುಷರು ಇಷ್ಟಪಡ್ತಾರೆ. ಕಾಡಿಗೆ ಹಚ್ಚಿದ ದುಂಡನೆಯ ಕಣ್ಣುಗಳು ಹುಡುಗ್ರನ್ನು ಕಾಡುತ್ತವೆ.