Travel Tips : ಸೋಲೋ ಟ್ರಿಪ್ ಹೆಣ್ಮಕ್ಕಳೇ ಹುಷಾರು, ಈ ಬಗ್ಗೆ ಗೊತ್ತು ಮಾಡ್ಕೊಳ್ಳಿ!
ಅನೇಕ ಬಾರಿ ಒಂಟಿ ಪ್ರವಾಸ ಅನಿವಾರ್ಯವಾಗುತ್ತದೆ. ಮತ್ತೆ ಕೆಲವೊಮ್ಮೆ ಒಂಟಿ ಪ್ರಯಾಣ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಈಗ ಮಹಿಳೆಯರು ಕೂಡ ಇದಕ್ಕೆ ಆದ್ಯತೆ ನೀಡ್ತಿದ್ದಾರೆ. ಒಬ್ಬಳೇ ಪ್ರವಾಸಕ್ಕೆ ಹೋಗ್ತೇನೆ ಎನ್ನುವವರು ಕೆಲ ಸಂಗತಿ ತಿಳಿದಿರಬೇಕು.
ಜನರು (People) ಪ್ರವಾಸ (Travel)ವನ್ನು ಹವ್ಯಾಸವಾಗಿ ಸ್ವೀಕರಿಸಿದ್ದಾರೆ. ಅನೇಕರು ಕೆಲಸಕ್ಕೆ ರಜೆ ಪಡೆದು ದೇಶ ಸುತ್ತಲು ಹೋಗ್ತಾರೆ. ಜಗತ್ತು ಸುತ್ತಿ, ನಾನಾ ಜನರು, ಪರಿಸರ, ಸಂಸ್ಕೃತಿಯನ್ನು ಅರಿಯಲು ಜನರು ಪ್ರಯತ್ನಿಸುತ್ತಿದ್ದಾರೆ. ಪುರುಷರು ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಸೋಲೋ ಟ್ರಿಪ್ (Solo Trip ) ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಮಹಿಳೆಯರು ಗುಂಪಾಗಿ ಅಥವಾ ಒಂಟಿಯಾಗಿ ಪ್ರವಾಸಕ್ಕೆ ಹೋಗಲು ಹೆಚ್ಚು ಇಷ್ಟಪಡ್ತಿದ್ದಾರೆ. ಎಲ್ಲ ಕಡೆ ಕುಟುಂಬದವರ ಜೊತೆ ಹೋಗ್ಬೇಕೆಂಬ ನಿರ್ಬಂಧ ಈಗಿಲ್ಲ. ದೈನಂದಿನ ದಿನಚರಿಯಿಂದ ರಿಲ್ಯಾಕ್ಸ್ ಆಗಲು ಮತ್ತು ತಮಗಾಗಿ ಸ್ವಲ್ಪ ಸಮಯ ಮೀಸಲಿಡಲು ಜನರು ಈ ಸೋಲೋ ಟ್ರಿಪ್ ಇಷ್ಟಪಡ್ತಾರೆ. ಇದು ಡಿಜಿಟಲ್ ಯುಗ. ಪ್ರವಾಸಿ ಸ್ಥಳಕ್ಕೆ ಹೋದ್ಮೇಲೆ ರೂಮ್, ಆಹಾರವನ್ನು ಹುಡುಕುವ ಅವಶ್ಯಕತೆಯಿಲ್ಲ. ಆರಾಮವಾಗಿ ಎಲ್ಲವನ್ನು ಬುಕ್ ಮಾಡಿಯೇ ಪ್ರವಾಸಕ್ಕೆ ಹೋಗ್ಬಹುದು. ಆದ್ರೆ ಪ್ರಯಾಣವನ್ನು ಹೆಚ್ಚು ಆಹ್ಲಾದಕರಗೊಳಿಸಬೇಕು ಮತ್ತು ಆನಂದಿಸಬೇಕು ಎನ್ನುವವರು ಒಂಟಿಯಾಗಿ ಪ್ರವಾಸಕ್ಕೆ ಹೋಗ್ತಿದ್ದರೆ ಕೆಲವೊಂದು ವಿಷ್ಯಗಳನ್ನು ಪಾಲಿಸಬೇಕಾಗುತ್ತದೆ. ಇಂದು ನಾವು ಮಹಿಳೆಯರು ಒಂಟಿಯಾಗಿ ಪ್ರವಾಸಕ್ಕೆ ಹೋಗ್ತಿದ್ದರೆ ಏನೆಲ್ಲ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂಬುದನ್ನು ಹೇಳ್ತೇವೆ.
ಏಕಾಂಗಿ ಪ್ರಯಾಣದ ವೇಳೆ ಸುರಕ್ಷತೆ ಸಲಹೆಗಳು :
ಸ್ಥಳದ ಆಯ್ಕೆ : ಸ್ಥಳವನ್ನು ಆಯ್ಕೆ ಮಾಡುವಾಗ ಜಾಗರೂಕರಾಗಿರಿ. ಪರಿಚಯಸ್ಥರು ಅಲ್ಲಿಗೆ ಹೋಗಿದ್ದರು ಎನ್ನುವ ಕಾರಣಕ್ಕೆ ಅಥವಾ ಫೋಟೋ ಸುಂದರವಾಗಿದೆ ಎಂಬ ಕಾರಣಕ್ಕೆ ಅಲ್ಲಿಗೆ ಪ್ರವಾಸಕ್ಕೆ ಹೋಗ್ಬೇಡಿ. ಬದಲಾಗಿ, ಪ್ರವಾಸದ ಮೊದಲು ಸಂಪೂರ್ಣ ಅಧ್ಯಯನ ಮಾಡಿ. ಒಂಟಿಯಾಗಿ ಪ್ರಯಾಣ ಬೆಳೆಸುವುದು ಅಲ್ಲಿ ಸುರಕ್ಷಿತವೇ ಎಂಬುದರಿಂದ ಹಿಡಿದು, ಯಾವ ಋತುವಿನಲ್ಲಿ ಅಲ್ಲಿಗೆ ಪ್ರಯಾಣ ಬೆಳೆಸಿದ್ರೆ ಸೂಕ್ತ ಎನ್ನುವವರೆಗೆ ಎಲ್ಲವನ್ನೂ ಪರಿಶೀಲಿಸಿ.
ಭಾರತದ ಈ ಸುಂದರ ದ್ವೀಪ ನೋಡಿದ್ರೆ, ಮತ್ತೆ ಮಾಲ್ಡೀವ್ಸ್ ಕಡೆ ತಿರುಗೀ ನೋಡಲ್ಲ ಬಿಡಿ
ಸ್ಮಾರ್ಟ್ ವಾಲೆಟ್ ಅಗತ್ಯ : ಅಗತ್ಯವಿರುವ ಎಲ್ಲ ಸಾಮಾನುಗಳನ್ನು ನೀವು ಪ್ಯಾಕ್ ಮಾಡಲು ಸಾಧ್ಯವಿಲ್ಲ. ಕೆಲವೊಮ್ಮೆ ಪ್ಯಾಕಿಂಗ್ ವೇಳೆ ಸಾಮಾನುಗಳು ಮರೆತು ಹೋಗುತ್ತವೆ. ಇಲ್ಲದೆ ಆ ಸ್ಥಳಕ್ಕೆ ಹೋದ್ಮೇಲೆ ಹೊಸ ವಸ್ತುವಿನ ಅಗತ್ಯ ಬೀಳುತ್ತದೆ. ಮತ್ತೆ ಎಲ್ಲ ವಸ್ತುಗಳನ್ನು ತೆಗೆದುಕೊಂಡು ಪ್ರಯಾಣ ಬೆಳೆಸುವುದು ಸುಲಭವಲ್ಲ. ಹಾಗೆಯೇ ಹೆಚ್ಚಿನ ನಗದನ್ನು ಪರ್ಸ್ ನಲ್ಲಿ ಇಟ್ಟುಕೊಂಡು ಹೋಗುವುದು ಸುರಕ್ಷಿತವಲ್ಲ. ಈ ಎಲ್ಲ ಕಾರಣಕ್ಕೆ ನೀವು ಸ್ಮಾರ್ಟ್ ವಾಲೆಟ್ ಬಳಸಿ. ಅಂದರೆ ಕಡಿಮೆ ನಗದು, ಹೆಚ್ಚು ಕಾರ್ಡ್ ಬಳಸಿ. ನೀವು ವಿದೇಶಕ್ಕೆ ಹೋಗುತ್ತಿದ್ದರೆ ಅಲ್ಲಿನ ಕರೆನ್ಸಿಯನ್ನು ಸ್ವಲ್ಪ ಇಟ್ಟುಕೊಳ್ಳಿ. ಹಾಗೆ ಫೋನ್‌ನಲ್ಲಿ ಸ್ಥಳೀಯ ಪಾವತಿ ವಿಧಾನವನ್ನು ಡೌನ್‌ಲೋಡ್ ಮಾಡಿ.
ಸ್ಥಳಕ್ಕೆ ಅನುಗುಣವಾಗಿ ವಸ್ತು : ಬೇರೆ ಬೇರೆ ಸ್ಥಳಕ್ಕೆ ಬೇರೆ ಬೇರೆ ವಸ್ತುಗಳು ಬೇಕಾಗುತ್ತವೆ. ಹವಾಮಾನಕ್ಕೆ ತಕ್ಕಂತೆ ನೀವು ಬಟ್ಟೆ ಪ್ಯಾಕ್ ಮಾಡ್ಬೇಕಾಗುತ್ತದೆ. ಎಲ್ಲ ಬಟ್ಟೆ ಪ್ಯಾಕಿಂಗ್ ಕಷ್ಟ. ಕೆಲವೊಮ್ಮೆ ಅದರ ಅಗತ್ಯತೆ ಮುಂದೆ ಬರುವುದಿಲ್ಲ. ಅಂಥ ಸಂದರ್ಭದಲ್ಲಿ ನೀವು ಬಟ್ಟೆ, ವಸ್ತುಗಳನ್ನು ತೆಗೆದುಕೊಂಡು ಹೋಗುವ ಬದಲು ನೀವು ಸ್ಥಳೀಯ ಬಾಡಿಗೆ ಅಂಗಡಿಯ ಬಗ್ಗೆ ಪರಿಶೀಲನೆ ನಡೆಸಿ. ಪ್ರವಾಸಿ ಸ್ಥಳಗಳಲ್ಲಿ ಬಾಡಿಗೆ ಬಟ್ಟೆ, ವಸ್ತಗಳು ಸಿಗುತ್ತವೆ. ಅದನ್ನು ನೀವು ಬುಕ್ ಮಾಡಬಹುದು. ಅಂದ್ರೆ ಹಿಮ ಪ್ರದೇಶಕ್ಕೆ ಹೋಗುವ ವೇಳೇ ಬೂಟ್, ಬೆಚ್ಚಗಿನ ಉಡುಗೆ ಬೇಕಾಗುತ್ತದೆ. ಅದನ್ನು ಖರೀದಿಸಲು ಸಾಧ್ಯವಿಲ್ಲ ಎನ್ನುವವರು ಬಾಡಿಗೆ ಪಡೆಯಬಹುದು. ನೈರ್ಮಲ್ಯದ ಬಗ್ಗೆ ಕಾಳಜಿವಹಿಸುತ್ತಿದ್ದರೆ ಬಳಕೆ ಮೊದಲೇ ವಸ್ತುಗಳನ್ನು ಸ್ವಚ್ಛಗೊಳಿಸಿ. ಕಡಲತೀರದ ಸಾಮಾನುಗಳನ್ನು ಸುಲಭವಾಗಿ ತೊಳೆದು ಒಣಗಿಸಬಹುದು.
ಇಂಡೋನೇಷ್ಯಾ ಟ್ರಿಪ್ ಹೋಗ್ತಿದ್ದೀರಾ... ಹಾಗಿದ್ರೆ ಇದ್ನ ಮಿಸ್ ಮಾಡ್ಬೇಡಿ
ಸರಿಯಾದ ಮೊಬೈಲ್ : ಪ್ರಿಪೇಯ್ಡ್ ಬ್ಯಾಲೆನ್ಸ್ (Prepaid Balance) ಮತ್ತು ಡೇಟಾದೊಂದಿಗೆ ನಿಮ್ಮ ಮೊಬೈಲ್ ಸಿಮ್ ಸಿದ್ಧವಾಗಿಡಿ. ಎಲ್ಲೆಡೆ ವೈ-ಫೈ ಬಳಸದಿರಲು ಪ್ರಯತ್ನಿಸಿ. ವೈ-ಫೈ ಇಲ್ಲದಿದ್ದರೂ ನಿಮ್ಮ ಮೊಬೈಲ್ ಡೇಟಾ ಉಪಯುಕ್ತವಾಗಬಹುದು. ಇದಕ್ಕಾಗಿ ಅತ್ಯುತ್ತಮ ಕನೆಕ್ಟಿವಿಟಿ ಸಿಮ್ ಆಯ್ಕೆಮಾಡಿ ಮತ್ತು ಪ್ಲಾನ್ ಮಾಡಿ.
ಸಾಮಾಜಿಕ ಜಾಲತಾಣಗಳಲ್ಲಿ (Social Media) ಪ್ರಯಾಣದ ಮಾಹಿತಿ ಬೇಡ : ನಿಮ್ಮ ಸಾಮಾಜಿಕ ಜಾಲತಾಣ ಖಾತೆಗಳಿಗೆ ಸಂಬಂಧಿಸಿದಂತೆ ಎರಡು ವಿಷಯಗಳ ಬಗ್ಗೆ ಜಾಗರೂಕರಾಗಿರಿ. ಮೊದಲನೆಯದು ಇಲ್ಲಿ ನೀವು ಹೊರಡುವ ಮತ್ತು ಹಿಂದಿರುಗುವ ದಿನಾಂಕ ಮತ್ತು ಸಮಯವನ್ನು ಮುಂಚಿತವಾಗಿ ನಮೂದಿಸಬಾರದು. ಪ್ರಯಾಣ, ಹೋಟೆಲ್ ಇತ್ಯಾದಿ ಮಾಹಿತಿ ನೀಡಬಾರದು. ಎರಡನೆಯದಾಗಿ, ಪ್ರಯಾಣ ಬೆಳೆಸುವ ಸ್ಥಳದಲ್ಲಿ ವಾಸವಾಗಿರುವ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯಸ್ಥರಾಗಿದ್ದರೆ ಅವರಿಂದ ಖಂಡಿತವಾಗಿಯೂ ಆ ಸ್ಥಳದ ಬಗ್ಗೆ ಮಾಹಿತಿಯನ್ನು ಆಫ್ ಲೈನ್ ನಲ್ಲಿಯೇ ಪಡೆಯಿರಿ.
ಅಪರಿಚಿತರನ್ನು ನಂಬಬೇಡಿ : ಯಾರನ್ನೂ ಕುರುಡಾಗಿ ನಂಬಬೇಡಿ. ವಿಶೇಷವಾಗಿ, ಯಾರದೋ ಒಬ್ಬರ ಮನೆಯಲ್ಲಿ ಉಳಿಯುವುದು, ಆಹಾರ (Food) ತಿನ್ನುವುದು ಅಥವಾ ಲಿಫ್ಟ್ ತೆಗೆದುಕೊಳ್ಳುವಂತಹ ಸಂದರ್ಭಗಳಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಇದು ಅನಿವಾರ್ಯ ಎಂದಾಗ ಪೆಪ್ಪರ್ ಸ್ಪ್ರೇ (Pepper Spray), ಸಣ್ಣ ಚಾಕು ಮುಂತಾದ ಸುರಕ್ಷತಾ ಸಾಧನಗಳನ್ನು ಜೊತೆಯಲ್ಲಿ ಇಟ್ಟುಕೊಂಡಿರಬೇಕು.