ದೇಶದ ಕಂಪನಿಗಳಿಗೆ ಮಾದರಿಯಾಗುವಂಥ ಹೆರಿಗೆ ರಜೆ ನೀತಿಯನ್ನು ಜಾರಿ ಮಾಡಿದ ಮಹೀಂದ್ರಾ & ಮಹೀಂದ್ರಾ!
ಮಹೀಂದ್ರಾ & ಮಹೀಂದ್ರಾ (M&M) ನ ಹೊಸ ನೀತಿಯ ಪ್ರಕಾರ, ಮಹಿಳಾ ಉದ್ಯೋಗಿಗಳು/ಹೊಸ ತಾಯಂದಿರಿಗೆ ಆರು ತಿಂಗಳ ಫ್ಲೆಕ್ಸಿಬಲ್ ವರ್ಕ್ ಹಾಗೂ 24 ತಿಂಗಳ ಹೈಬ್ರಿಡ್ ವರ್ಕ್ ಅವಕಾಶಗಳನ್ನು ನೀಡುತ್ತದೆ.
ನವದೆಹಲಿ (ಅ.9): ಭಾರತೀಯ ಮೂಲದ ಬಹುರಾಷ್ಟ್ರೀಯ ಆಟೋಮೋಟಿವ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೊರೇಶನ್, ಮಹೀಂದ್ರಾ & ಮಹೀಂದ್ರ (M&M) ತನ್ನ ಉದ್ಯೋಗಿಗಳಿಗೆ ಇಡೀ ದೇಶಕ್ಕೆ ಮಾದರಿಯಾಗುವಂಥ ಹೊಸ ಮಾದರಿಯ ಹೆರಿಗೆ ರಜೆ ನೀತಿಯನ್ನು ಜಾರಿ ಮಾಡಿದೆ. ಮಹೀಂದ್ರಾ & ಮಹೀಂದ್ರಾ (M&M) ಹೊಸದಾಗಿ ನವೀಕರಿಸಿರುವ ಹೆರಿಗೆ ರಜೆ ನೀತಿಯ ಪ್ರಕಾರ, ಮಹಿಳಾ ಉದ್ಯೋಗಿಗಳಿಗೆ/ಹೊಸ ತಾಯಂದಿರಿಗೆ ಆರು ತಿಂಗಳ ಫ್ಲೆಕ್ಸಿಬಲ್ ವರ್ಕ್ ಮತ್ತು 24 ತಿಂಗಳ ಹೈಬ್ರಿಡ್ ವರ್ಕ್‌ನ ಆಯ್ಕೆಗಳನ್ನು ನೀಡಲಾಗುತ್ತದೆ. 26 ವಾರಗಳ ಕಡ್ಡಾಯ ಮಾತೃತ್ವ ರಜೆಯ ಅಂತ್ಯದ ನಂತರ ಲೈನ್ ಮ್ಯಾನೇಜರ್ ಅವರ ಒಪ್ಪಿಗೆಯ ಬಳಿಕ ಈ ಪ್ರಯೋಜನವನ್ನು ಒದಗಿಸಲಾಗುತ್ತದೆ. ಕಂಪನಿಯು ಹೊಸ ಹೆರಿಗೆ ರಜೆ ನೀತಿಯ ವಿವರಗಳು ಇಲ್ಲಿವೆ.
ಒಂದು ವರ್ಷದ ಪ್ರಸವಪೂರ್ವ ಬೆಂಬಲ. ಇದು ಇನ್ ವಿಟ್ರೊ ಫರ್ಟಿಲೈಸೇಶನ್ (IVF) ಚಿಕಿತ್ಸೆಯನ್ನು ಒಳಗೊಂಡಿರುತ್ತದೆ (ವೆಚ್ಚದ 75 ಪ್ರತಿಶತ ಮರುಪಾವತಿಯನ್ನು ಮಾಡಲಾಗುತ್ತದೆ). ಹಾಗೇನಾದರೂ ದೈನಂದಿನ ಪ್ರಯಾಣ ಮಾಡಿ ಕೆಲಸಕ್ಕೆ ಬರುತ್ತಿದ್ದಲ್ಲಿ ಇದರ ಮರುಪಾವತಿ. ಗರ್ಭಧಾರಣೆಯ ಕೊನೆಯ ತ್ರೈಮಾಸಿಕದಲ್ಲಿ ಔಟ್‌ಸ್ಟೇಷನ್ ಪ್ರಯಾಣ ಮಾಡಿದಲ್ಲಿ, ಪ್ರೀಮಿಯಂ ಎಕಾಮಿ ಅಥವಾ ಬ್ಯುಸಿನೆಸ್ ಕ್ಲಾಸ್ ಪ್ರಯಾಣದ ಪ್ರಯೋಜನಗಳನ್ನು ಕಂಪನಿ ನೀಡುತ್ತದೆ.
1945 ರಲ್ಲಿ ಸ್ಥಾಪನೆಯಾದ ಮಹೀಂದ್ರಾ ಗ್ರೂಪ್ 100 ಕ್ಕೂ ಹೆಚ್ಚು ದೇಶಗಳಲ್ಲಿ 260,000 ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳ ಅತಿದೊಡ್ಡ ಮತ್ತು ಅತ್ಯಂತ ಮೆಚ್ಚುಗೆ ಪಡೆದ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಒಂದಾಗಿದೆ. ಅದಲ್ಲದೆ, ಕಂಪನಿಯಲ್ಲಿ ಐದು ವರ್ಷದ ಪ್ರಯಾಣ ಪೂರ್ಣಗೊಂಡಲ್ಲಿ, ಒಂದು ವರ್ಷದ ಪೂರ್ವ ಮಾತೃತ್ವ, ಒಂದು ವರ್ಷದ ಗರ್ಭಧಾರಣೆ ಮೂರು ವರ್ಷಗಳ ನಂತರದ ಮಗು ಪ್ಲೇಸ್ಕೂಲ್‌ಗೆ ಹಾಜರಾಗಲು ಸಿದ್ಧವಾಗಿಲ್ಲದೇ ಇದ್ದಾಗ ಬೆನಿಫಿಟ್‌ಗಳನ್ನು ಒಳಗೊಂಡಿರುತ್ತದೆ.
ಕಂಪನಿಯು ಲಿಂಗ ವೈವಿಧ್ಯತೆಯನ್ನು ತರುವಲ್ಲಿ ಕೆಲಸ ಮಾಡುತ್ತಿದೆ ಅದರೊಂದಿಗೆ ಲಿಂಗ ವೈವಿಧ್ಯತೆಯನ್ನು ಉಳಿಸಿಕೊಳ್ಳುವ ಬಗ್ಗೆಯೂ ಕೆಲಸ ಮಾಡುತ್ತಿದೆ. ಇದಲ್ಲದೆ ಹೆಚ್ಚಿನ ಮಹಿಳಾ ಉದ್ಯೋಗಿಗಳು ಹೆರಿಗೆಯ ಸಮಯದಲ್ಲಿ ವೃತ್ತಿಗೆ ವಿರಾಮ ನೀಡುತ್ತಾರೆ ಅಥವಾ ಹೆರಿಗೆಯ ನಂತರ ವೃತ್ತಿಜೀವನವನ್ನು ತೊರೆಯುತ್ತಾರೆ. ಇಂಥ ಪ್ರಕರಣಗಳನ್ನು ಆದಷ್ಟು ಕಡಿಮೆ ಮಾಡುವ ಸಲುವಾಗಿ ಹಲವಾರು ಕಂಪನಿಗಳನ್ನು ಮಹಿಳಾ ಉದ್ಯೋಗಿಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಹೊಸ ರೀತಿಯಲ್ಲಿ ತನ್ನ ನೀತಿಗಳನ್ನು ವಿನ್ಯಾಸ ಮಾಡುತ್ತಿದೆ.
ಇತ್ತೀಚೆಗೆ, ಸಿಟಿ ಬ್ಯಾಂಕ್ ತನ್ನ ಮಹಿಳಾ ಉದ್ಯೋಗಿಗಳಿಗೆ ಭಾರತದಲ್ಲಿ ಹೆರಿಗೆ ರಜೆಯ ನಂತರದ 12 ತಿಂಗಳ ವರ್ಕ್ ಫ್ರಮ್ ಹೋಮ್ ಆಯ್ಕೆಯನ್ನು ಪರಿಚಯಿಸಿತು. ಇದರ ಅನ್ವಯ 26 ವಾರಗಳ ಹೆರಿಗೆ ರಜೆಯ ಕೊನೆಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ಆಯ್ಕೆಯು ಲಭ್ಯವಿರುತ್ತದೆ. ಈ ಹಿಂದೆ, ಪೇಟಿಎಂ ತನ್ನ ಉದ್ಯೋಗಿಗಳಿಗೆ ಅವರ ಆರೋಗ್ಯ, ಕ್ಷೇಮ ಮತ್ತು ಕೆಲಸ-ಜೀವನದ ಸಮತೋಲನವನ್ನು ಆದ್ಯತೆ ನೀಡುವ ಅತ್ಯುತ್ತಮ-ವರ್ಗದ ಪ್ರಯೋಜನಗಳೊಂದಿಗೆ ಅನುಕೂಲವಾಗುವಂತೆ ಕಂಪನಿಯು ರಜೆ ನೀತಿಗಳನ್ನು ಪರಿಷ್ಕರಿಸಿದೆ ಮತ್ತು ಈ ಹಣಕಾಸು ವರ್ಷಕ್ಕೆ ವಿಯೋಗ ಮತ್ತು ಗರ್ಭಪಾತದ ರಜೆಯನ್ನು ಪರಿಚಯ ಮಾಡಿತ್ತು.
ಈ ರಾಜ್ಯದ ಮಹಿಳೆಯರಿಗೆ ಸಿಗಲಿದೆ ಒಂದು ವರ್ಷದ ಮೆಟರ್ನಿಟಿ ಲೀವ್
ತಮ್ಮ ವೈಯಕ್ತಿಕ ಆದ್ಯತೆಗಳನ್ನು ಪೂರೈಸಲು ತಮ್ಮ ಉದ್ಯೋಗಿಗಳು ದೀರ್ಘ ರಜೆಯ ಪ್ಲ್ಯಾನ್‌ಗಳನ್ನು ಮಾಡಲು ಪೇಟಿಎಂನಲ್ಲಿ ಎಚ್ಆರ್‌ಗಳು ಮತ್ತು ವ್ಯವಸ್ಥಾಪಕರು ಪ್ರೋತ್ಸಾಹ ನೀಡುತ್ತಿದ್ದಾರೆ. ಕಠಿಣ ಸಮಯವನ್ನು ಎದುರಿಸುತ್ತಿರುವ ಉದ್ಯೋಗಿಗಳನ್ನು ಬೆಂಬಲಿಸಲು, ಕಂಪನಿಯು ಪೇಟಿಮರ್‌ಗಳಿಗೆ ಗರ್ಭಪಾತ ರಜೆಯನ್ನು ಸಹ ಪರಿಚಯಿಸಿದೆ. ಗರ್ಭಪಾತ ಅಥವಾ ಗರ್ಭಾವಸ್ಥೆಯ ಮೆಡಿಕಲ್ ಟರ್ಮಿನೇಷನ್ ಸಂದರ್ಭದಲ್ಲಿ, ಅವರು 1961 ರ ಮಾತೃತ್ವ ಪ್ರಯೋಜನ ಕಾಯಿದೆಯ ಅಡಿಯಲ್ಲಿ 6 ವಾರಗಳವರೆಗೆ ಪಾವತಿಸಿದ ರಜೆಯನ್ನು ಪಡೆಯಬಹುದು.
Maternity Leave: ರಜಾ ಅವಧಿಯನ್ನು 6 ರಿಂದ 9 ತಿಂಗಳಿಗೆ ವಿಸ್ತರಿಸುವಂತೆ ನೀತಿ ಆಯೋಗದ ಸದಸ್ಯರ ಸಲಹೆ!