ಮಹಾಕುಂಭ ಸೆನ್ಸೇಶನ್ ಮೊನಾಲಿಸಾ ಈಗ ಮಾಡೆಲ್, ಬದಲಾಗಿ ಹೋಯ್ತು ಬದುಕು!
ಮಹಾಕುಂಭದಲ್ಲಿ ಮಣಿ ಮಾಲೆ ಮಾರಾಟ ಮಾಡುತ್ತಿದ್ದ ಮೊನಾಲಿಸಾ ರಾತ್ರೋರಾತ್ರಿ ಭಾರತದ ಕ್ರಶ್ ಆಗಿ ಬದಲಾಗಿದ್ದಳು. ಇದೀಗ ಮೊನಾಲಿಸಾ ಮಾಡೆಲ್ ಆಗಿ ಬದಲಾಗಿದ್ದಾಳೆ.

ಪ್ರಯಾಗರಾಜ್(ಜ.20) ಮಹಾಕುಂಭ ಮೇಳದಲ್ಲಿ ಸರ, ಮಣಿ, ರುದ್ರಾಕ್ಷಿ ಮಾಲೆ ಮಾರಾಟ ಮಾಡುತ್ತಿದ್ದ ಕೃಷ್ಣ ಸುಂದರಿ ಮೊನಾಸಿಲಾ ಭೋಸ್ಲೆ ರಾತ್ರೋರಾತ್ರಿ ಭಾರಿ ಸೆನ್ಸೇಶನ್ ಕ್ರಿಯೆಟ್ ಮಾಡಿದ್ದಳು. ವ್ಲೋಗರ್ ವಿಡಿಯೋದಲ್ಲಿ ಕಾಣಿಸಿಕೊಂಡ ಈ ಮೊನಾಲಿಸಾ ಕಣ್ಣು, ಸೌಂದರ್ಯಕ್ಕೆ ಹಲವರು ಕ್ಲೀನ್ ಬೋಲ್ಡ್ ಆಗಿದ್ದರು. ಹೀಗಾಗಿ ದಿನ ಬೆಳಗಾಗುವಷ್ಟರಲ್ಲೇ ಮೊನಾಲಿಸಾ ನ್ಯಾಷನಲ್ ಕ್ರಶ್ ಆಗಿ ಹೊರಹೊಮ್ಮಿದ್ದಳು. ಈಕೆಯನ್ನು ಹುಡುಕಿಕೊಂಡು ಸಾವಿರಾರು ಜನ ಆಗಮಿಸಿದ್ದರು. ಸುರಕ್ಷತೆ ಸಮಸ್ಯೆ ಎದುರಿಸಿದ ಮೊನಾಲಿಸಾ ಅನಿವಾರ್ಯವಾಗಿ ತವರಿಗೆ ವಾಪಸ್ ಆಗಬೇಕಾದ ಪರಿಸ್ಥಿತಿಯೂ ಬಂದಿತ್ತು. ಆದರೆ ತವರಿಗೆ ಮರಳಿ ಮೊನಾಲಿಸಾ ಭೋಸ್ಲೆ ಇದೀಗ ಹೊಸ ಅಧ್ಯಾಯ ಆರಂಭಿಸಿದ್ದಾಳೆ. ಇದೀಗ ಮಣಿ ಮಾಲೆ ಮಾರಾಟಗಾರ್ತಿ ಮೊನಾಲಿಸಾ ಅಲ್ಲ, ಇಡೀದ ಮಾಡೆಲ್ ಕಮ್ ಕಂಟೆಂಟ್ ಕ್ರಿಯೇಟರ್ ಮೊನಾಲಿಸಾ.
ಸೌಂದರ್ಯದಲ್ಲಿ ಮೊನಾಲಿಸಾ ಭೋಸ್ಲೆ ಎಲ್ಲಾ ಮಾಡೆಲ್‌ಗಿಂತ ಮುಂದಿದ್ದಾಳೆ. ಜಗತ್ತನ್ನೇ ತನ್ನತ್ತ ಸೆಳೆಯುವ ಕಣ್ಣುಗಳು ಕೋಟ್ಯಾಂತರ ಭಾರತೀಯರ ಮನಸ್ಸು ಕದ್ದಿತ್ತು. ಮಹಾಕುಂಭದಲ್ಲಿ ಭದ್ರತೆ ಸಮಸ್ಯೆ, ವ್ಯಾಪಾರ ಸಮಸ್ಯೆ ಎದುರಿಸಿದ ಮೊನಾಸಿಲಾ ಇಂದೋರ್‌ಗೆ ಮರಳಿದ್ದಳು. ಆದರೆ ಸೋಶಿಯಲ್ ಮೀಡಿಯಾ ಸೆಲೆಬ್ರೆಟಿ ಆಗಿರುವ ಮೊನಾಲಿಸಾ ಇದೀಗ ಸಂಪೂರ್ಣ ಬದಲಾಗಿದ್ದಾಳೆ. ಮಾಡೆಲ್ ರೂಪದಲ್ಲಿ ಕಾಣಿಸಿಕೊಂಡಿದ್ದಾಳೆ. ಶಿಪ್ರಾ ಮೇಕ್ಓವರ್ ಬ್ಯೂಟಿ ಸಲೂನ್‌ನಲ್ಲಿ ಹೇರ್ ಸ್ಟ್ರೈಟನಿಂಗ್, ಮೇಕ್ ಅಪ್ ಮಾಡಿಸಿಕೊಂಡಿದ್ದಾಳೆ.
ಮಹಾಕುಂಭ ಮೇಳದಲ್ಲಿ ವೈರಲ್ ಆದ ಸುಂದರಿ ಮೊನಾಲಿಸಾ ಸದ್ಯದ ಪಾಡು ಯಾರಿಗೂ ಬೇಡ!
ಮೊನಲಿಸಾ ಸೌಂದರ್ಯ ಇದೀಗ ದುಪ್ಪಟ್ಟಾಗಿದೆ. ಮಾಡೆಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ಇದೀಗ ಮೊನಾಲಿಸಾ ಭೋಸ್ಲೆ ಹೊಸ ವಿಡಿಯೋ ವೈರಲ್ ಆಗಿದೆ. ಸೌಂದರ್ಯದ ಖನಿಯಂತಿರುವ ಮೊನಾಲಿಸಾ ಮೇಕ್ ಅಪ್ ಮಾಡಿಸಿಕೊಳ್ಳುತ್ತಿರುವ ವಿಡಿಯೋಗಳು ಸಂಚಲನ ಸೃಷ್ಟಿಸಿದೆ. ಇದರ ಜೊತೆಗೆ ನವಿಲು ಗರಿ ಹಿಡಿದು ಫೋಸ್ ಕೊಟ್ಟಿರುವ ವಿಡಿಯೋಗಳು ಹರಿದಾಡುತ್ತಿದೆ.
ಮಾಡೆಲ್ ಆಗಿ ಬದಲಾಗಿರುವ ಮೊನಾಲಿಸಾಗೆ ಹೊರಗಡೆ ಎಂದಿನಂತೆ ತಿರುಗಾಟಿ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ. ಜನರು ಸುತ್ತುವರಿಯುತ್ತಿದ್ದಾರೆ.ಸೆಲ್ಫಿ, ವಿಡಿಯೋ ಕ್ಲಿಕ್ಕಿಸುತ್ತಿದ್ದಾರೆ. ನಡೆದಾಡಲು ಬಿಡುತ್ತಿಲ್ಲ. ಹೀಗಾಗಿ ಇದೀಗ ಮಾಡೆಲ್ ಆಗಿ ಬದಲಾಗಿರುವ ಮೊನಾಲಿಸಾ ಸೋಶಿಯಲ್ ಮೀಡಿಯಾಗೆ ಪದಾರ್ಪಣೆ ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಮೊನಾಲಿಸಾ ಭೋಸ್ಲೆ ಅನ್ನೋ ಸೋಶಿಯಲ್ ಮೀಡಿಯಾ ಖಾತೆಗಳು ಆರಂಭಗೊಡಿದೆ. ಈ ಖಾತೆಗಳಲ್ಲಿ ಸುಂದರಿ ಮೊನಾಲಿಸಾ ವಿಡಿಯೋಗಳು ಪೋಸ್ಟ್ ಆಗಿದೆ. ಮೇಕ್2ಅಪ್ ವಿಡಿಯೋ, ಸುಂದರಿಯ ಹೊಸ ಅವತಾರದ ವಿಡಿಯೋಗಳು ಪೋಸ್ಟ್ ಆಗಿದೆ.
ಮೊನಾಲಿಸಾ ಹೊಸ ಅವತಾರವನ್ನು ಜನರು ಕೊಂಡಾಡಿದ್ದಾರೆ. ಹಲವರು ಮೊನಾಲಿಸಾ ಶೀಘ್ರದಲ್ಲೇ ಸಿನಿಮಾ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಈಕೆಯ ಕಣ್ಣು ಹಾಗೂ ಸೌಂದರ್ಯವೇ ಈಕೆಗೆ ಹಲವು ಅವಕಾಶಗಳನ್ನು ನೀಡಲಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗ ಮಹಾಕುಂಭದಲ್ಲಿ ಮೊನಾಲಿಸಾ ಹಾಗೂ ಆಕೆಯ ಕುಟುಂಬ ಬಾರಿ ಸಮಸ್ಯೆ ಎದುರಿಸಿತ್ತು. ಜನರು ಮೊನಾಲಿಸಾಳನ್ನು ವ್ಯಾಪಾರ ಮಾಡಲು ಅನುವು ಮಾಡುತ್ತಿರಲಿಲ್ಲ. ಜನರ ಕಿರಿಕಿರಿ, ಸೆಲ್ಫಿ, ಸಂದರ್ಶನಗಳಿಂದ ಮೊನಾಲಿಸಾ ಹೈರಾಣಾಗಿದ್ದಳು. ಇತ್ತ ಈಕೆಯ ಪೋಷಕರು ತಕ್ಷಣವೇ ಮೊನಾಲಿಸಾಳನ್ನು ಇಂದೋರ್‌ಗೆ ಕಳುಹಿಸಿದ್ದರು. ಮೂಲತಃ ಮಧ್ಯಪ್ರದೇಶದ ಇಂಧೋರ್‌ನ ಮೊನಾಲಿಸಾ ಇದೀಗ ಮಾಡೆಲ್ ಕಮ್ ಕಂಟೆಂಟ್ ಕ್ರಿಯೇಟರ್ ಆಗಿ ಹೊರಹೊಮ್ಮಿದ್ದಾಳೆ.
ಮೊನಾಲಿಸಾ ಹೊಸ ಪ್ರಯತ್ನಕ್ಕೆ ಅಭಿಮಾನಿಗಳು ಶುಭಕೋರಿದ್ದಾರೆ. ಕೆಲವೇ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಫಾಲೋವರ್ಸ್ನಲ್ಲಿ ಮೋನಾಲಿಸಾ ದಾಖಲೆ ಬರೆಯಲಿದ್ದಾರೆ ಎಂದು ಹಲವರು ಭವಿಷ್ಯ ನುಡಿದಿದ್ದಾರೆ. ಸದ್ಯ ಮೊನಾಲಿಸಾ ದೇಶದಲ್ಲೇ ಸದ್ದು ಮಾಡುತ್ತಿದ್ದಾಳೆ. ಮಹಾಕುಂಭ ಮೇಳದ ಮೂಲಕ ದೇಶಕ್ಕೆ ಪರಿಚಯವಾದ ಮೊನಾಲಿಸಾ ಭೋಸ್ಲೆ ಇದೀಗ ಹೊಸ ಸಂಚಲನ ಸೃಷ್ಟಿಸಿದ್ದಾರೆ.
ಕುಂಭಮೇಳದ ವೈರಲ್ ಸುಂದರಿ ಮೊನಾಲಿಸಾಗೆ ಉಂಟು ಮೈಸೂರಿನ ನಂಟು!