ಕುಂಭಮೇಳದ ವೈರಲ್ ಸುಂದರಿ ಮೊನಾಲಿಸಾಗೆ ಉಂಟು ಮೈಸೂರಿನ ನಂಟು!
ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದಲ್ಲಿ ಮಣಿಗಳ ಸರಗಳನ್ನು ಮಾರಾಟ ಮಾಡುವ ಮೊನಾಲಿಸಾ ಎಂಬ ಯುವತಿ ವೈರಲ್ ಆಗಿದ್ದಾಳೆ. ಈಕೆಯ ನಂಟು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೂ ಉಂಟು ಎಂಬುದು ತಿಳಿದಿಬಂದಿದೆ.

ಭಾರತದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಹಲವಾರು ಬಾಬಾಗಳು ವೈರಲ್ ಆಗುತ್ತಿದ್ದಾರೆ. ಆದರೆ, ಅದರಲ್ಲಿ ಮಣಿಗಳ ಸರಗಳನ್ನು ಮಾರಾಟ ಮಾಡುವ ನುಡಕಟ್ಟು ಸಮುದಾಯದ ಸುಂದರ ಯುವತಿ ಮೊನಾಲಿಸಾ ಕೂಡ ವೈರಲ್ ಆಗಿದ್ದಾಳೆ. ಆದರೆ, ಈ ಮೊನಾಲಿಸಾಗೂ ಕರ್ನಾಟಕದ ಮೈಸೂರಿಗೂ ನಂಟು ಇದೆ ಎಂದು ತಿಳಿದುಬಂದಿದೆ.
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ 2025ರ ಮಹಾಕುಂಭ ಮೇಳವು ಜಾಗತಿಕ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಅಲ್ಲಿಗೆ ಹೋದವರೆಲ್ಲರೂ ಸಾಮಾಜಿಕ ಜಾಲತಾಣದಲ್ಲಿ ತಮಗೆ ವಿಶೇಷವಾಗಿ ಕಂಡಿದ್ದೆಲ್ಲವನ್ನೂ ವೈರಲ್ ಮಾಡುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಜೊತೆಗೆ, ದೇಶ ವಿದೇಶಗಳ ಗಡಿಗಳನ್ನು ಮೀರಿ ಜಾಗತಿಕವಾಗಿ ಹಲವು ದೇಶಗಳ ಜನರು ಭಾರತೀಯ ಸನಾತನ ಧರ್ಮವನ್ನು ಅನುಸರಿಸುತ್ತಾ ಅಘೋರಿಗಳಾಗಿ, ನಾಗಾ ಸಾಧುಗಳಾಗಿ ಕಠಿಣ ಜೀವನವನ್ನು ಸಾಗಿಸುತ್ತಿದ್ದಾರೆ. ಅವರ ವಿಭಿನ್ನ ಆಚರಣೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅದರಲ್ಲಿ ಒಬ್ಬ ಮಹಿಳಾ ಸಾಧ್ವಿ ನಿರೂಪಕಿ ಹರ್ಷಾ ರಿಚಾರಿಯಾ, ಐಐಟಿ ಬಾಬಾ ಅಭಯ್ ಸಿಂಗ್ ಸೇರಿದಂತೆ ಹಲವರು ಪ್ರಸಿದ್ಧಿ ಆಗಿದ್ದಾರೆ. ಅದರೊಂದಿಗೆ ಮಣಿಗಳ ಸರಗಳನ್ನು ಮಾರಾಟ ಮಾಡುವ ಮೊನಾಲಿಸಾ ಎಂಬ ಯುವತಿ ಕೂಡ ತನ್ನ ಸೌಂದರ್ಯದಿಂದ ಭಾರೀ ವೈರಲ್ ಆಗಿದ್ದಾಳೆ. ಇದೀಗ ಈ ವೈರಲ್ ಸುಂದರಿಗೆ ಮೈಸೂರಿನ ನಂಟು ಇರುವುದು ಪತ್ತೆಯಾಗಿದೆ.
ಕುಂಭಮೇಳದಲ್ಲಿ ಭಾರತೀಯ ಸನಾತನ ಧರ್ಮಕ್ಕೆ ಸಂಬಂಧಿಸಿದಂತೆ ಹಲವು ಪೂಜಾ ಸಾಮಾಗ್ರಿಗಳು, ಉಡುಪುಗಳು, ಮಣಿ ಸರಗಳು, ಧಾರ್ಮಿಕ ವಸ್ತ್ರಗಳು, ಪುಸ್ತಕಗಳನ್ನು ಮಾರಾಟ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಹೀಗೆ ಇಂದೋರ್ ಅಲೆಮಾರಿ ಸಮುದಾಯದ ನಿವಾಸಿಗಳೂ ಕೂಡ ಮಣಿಸರಗಳನ್ನು ಮಾರಾಟ ಮಾಡುವುದಕ್ಕೆ ಪ್ರಯಾಗ್‌ರಾಜ್‌ಗೆ ಬಂದಿದ್ದಾರೆ. ಅದರಲ್ಲಿ ಮೊನಾಲಿಸಾ ಎಂಬ ಯುವತಿ ಕೂಡ ಬಂದಿದ್ದು, ಆಕೆ ಸರಗಳನ್ನು ಮಾರಾಟ ಮಾಡುವಾಗ ಸಾಮಾಜಿಕ ಜಾಲತಾಣದ ನೆಟ್ಟಿಗರೊಬ್ಬರು ಮಾತನಾಡಿಸುತ್ತಾ ಆಕೆಯ ಸೌಂದರ್ಯವನ್ನು ವರ್ಣಿಸಿದ್ದಾರೆ. ಇದೀಗ, ಸಾಮಾಜಿಕ ಜಾಲತಾಣದಲ್ಲಿ ನೀಲಿಗಣ್ಣಿನ ಸುಂದರಿ ಮೊನಾಲಿಸ ವಿಡಿಯೋಗಳೇ ಭಾರೀ ವೈರಲ್ ಆಗುತ್ತಿವೆ. ಇದೇ ಮೊನಾಲಿಸಾ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೂ ಬಂದಿದ್ದಳು ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ: ಯಾರವ್ವ ಇವಳು ಚೆಲುವೆ, ಎಲ್ಲರ ಕಣ್ಣು ಇವಳ ಮೇಲೆ: ಮಹಾಕುಂಭದಲ್ಲಿ ಕಂಡ ಯುವತಿ ಅಂದಕ್ಕೆ ಸೋತ ಜನರು
ಕರ್ನಾಟಕದಲ್ಲಿ ನಡೆಯುವ ವಿಶ್ವಪ್ರಸಿದ್ಧ ಆಚರಣೆಗಳಲ್ಲಿ ನಾಡ ಹಬ್ಬವಾಗಿ ಆಚರಣೆ ಮಾಡುವ ಮೈಸೂರಿನ ದಸರಾ ಮಹೋತ್ಸವ ಕೂಡ ಒಂದಾಗಿದೆ. ಈ ಮೈಸೂರು ದಸರಾ ನಡೆಯುವ ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡಿದ್ದು, ವಿಶ್ವದ ಮೂಲೆ ಮೂಲೆಗಳಿಂದ ಜನರು ಬಂದು ಈ ದರಸಾ ಮಹೋತ್ಸವ ಕಣ್ತುಂಬಿಕೊಳ್ಳುತ್ತಾರೆ. ಇನ್ನು ಅಲೆಮಾರಿಗಳಾಗಿ ವ್ಯಾಪಾರ ಉದ್ದೇಶಕ್ಕೆ ದೇಶದ ವಿವಿಧ ಭಾಗಗಳಿಗೆ ತೆರಳುವ ಮೊನಾಲಿಸಾ ಕುಟುಂಬದವರು ಇತ್ತೀಚೆಗೆ ನಡೆದಿದ್ದ ಮೈಸೂರು ದಸರಾ ಮಹೋತ್ಸವಕ್ಕೂ ಬಂದಿದದರು ಎಂಬುದನ್ನು ಸ್ವತಃ ಅವರ ದೊಡ್ಡಪ್ಪನ ಮಗಳು ಹೇಳಿಕೊಂಡಿದ್ದಾರೆ. ನಾವು ದೇಶದಲ್ಲಿ ನಡೆಯುವ ಹಿಂದೂ ಧಾರ್ಮಿಕ ಬೃಹತ್ ಮಹೋತ್ಸವಗಳಿಗೆ ತಪ್ಪದೇ ಹೋಗುತ್ತೇವೆ. ಅಲ್ಲಿ ನಮಗೆ ಭಾರೀ ವ್ಯಾಪಾರ ವಹಿವಾಟು ಮಾಡಲು ಸಾಧ್ಯವಾಗುತ್ತದೆ ಎಂದು ಯುವತಿ ಹೇಳಿಕೊಂಡಿದ್ದಾರೆ.
2025ನೇ ಸಾಲಿನ ಕುಂಭಮೇಳಕ್ಕೆ ಬರೋಬ್ಬರಿ 11 ಕೋಟಿಗೂ ಅಧಿಕ ಜನರು ಬಂದು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಕುಂಭಮೇಳವು ಚುರುಕು ಪಡೆದುಕೊಂಡಿದ್ದು, ದೇಶ, ವಿದೇಶಗಳಿಂದ ಹಲವು ಭಕ್ತರು ಬಂದು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು, ತಮ್ಮ ಜೀವನ ಪಾವನ ಮಾಡಿಕೊಳ್ಳುತ್ತಿರುವುದಾಗಿ ಹೇಳುತ್ತಿದ್ದಾನೆ. ಇನ್ನು ಸೋಶಿಯಲ್ ಮೀಡಿಯಾ ಇನ್ಲ್ಯೂಯೆನ್ಸರ್‌ಗಳು ಕೂಡ ಅಲ್ಲಿಗೆ ಭೇಟಿ ಮಾಡುತ್ತಿದ್ದು, ತಮಗೆ ಸೆರೆ ಸಿಗುವ ಎಲ್ಲ ಮಾಹಿತಿಗಳನ್ನು ಲೈವ್ ಹಾಗೂ ಕೆಲವು ಕ್ಷಣಗಳ ತರುವಾಗ ಸಾಮಾಜಿಕ ಜಾಲತಾಣಕ್ಕೆ ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಮಹಾಕುಂಭಮೇಳದಲ್ಲಿ ಸಖತ್ ವೈರಲ್ ಆಗಿರುವ ಈ ಕೃಷ್ಣ ಸುಂದರಿ ಯಾರು?