Asianet Suvarna News Asianet Suvarna News

ಮೇಡ್ ಇನ್ ಹೆವನ್ ಸರಣಿಯಲ್ಲಿ ಕಾಣಿಸಿಕೊಂಡ ಮೊದಲ ಟ್ರಾನ್ಸ್ಜೆಂಡರ್ ನಟಿ

ಟ್ರಾನ್ಸ್ಜೆಂಡರ್ ಪ್ರತಿ ದಿನ ತಮ್ಮ ಹಕ್ಕಿಗಾಗಿ ಹೋರಾಡುತ್ತಾರೆ. ಕುಟುಂಬಸ್ಥರ ಬೆಂಬಲ, ಆತ್ಮಸ್ಥೆರ್ಯವಿದ್ರೆ ಅವರು ಕೂಡ ಏನನ್ನೂ ಬೇಕಾದ್ರೂ ಸಾಧಿಸಬಹುದು. ಅದಕ್ಕೆ ವೈದ್ಯೆ, ನಟಿ, ಸಮಾಜಸೇವಕಿ ತ್ರಿನೇತ್ರಾ ಉದಾಹರಣೆ.
 

Made In Heaven Trinetra Haldar India First Transgender Doctor And Actress Know About Her Journey roo
Author
First Published Aug 2, 2023, 4:44 PM IST

ಮೇಡ್ ಇನ್ ಹೆವನ್ 2 ವೆಬ್ ಸರಣಿ ಟ್ರೈಲರ್ ಬಿಡುಗಡೆಯಾಗಿದೆ. ಎರಡನೇ ಸೀಸನ್ ನಲ್ಲಿ ಅನೇಕ ಹೊಸ ನಟರು ಕಾಣಿಸಿಕೊಳ್ಳಲಿದ್ದಾರೆ. ಮೇಡ್ ಇನ್ ಹೆವೆನ್ ವೆಬ್ ಸರಣಿಯಲ್ಲಿ ತ್ರಿನೇತ್ರಾ ಹಲ್ದಾರ್ ಚರ್ಚೆಯ ವಿಷಯವಾಗಿದ್ದಾರೆ. ವಾಸ್ತವವಾಗಿ, ತ್ರಿನೇತ್ರಾ ನಟನೆಗೆ ಕಾಲಿಟ್ಟ ಮೊದಲ ಟ್ರಾನ್ಸ್ಜೆಂಡರ್ ನಟಿ. ಇದು ತ್ರಿನೇತ್ರಾರ ಎರಡನೇ ವೆಬ್ ಸರಣಿ. ನಾವಿಂದು ನಟಿ ತ್ರಿನೇತ್ರ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ. 

ಭಾರತ (India) ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಈಗ್ಲೂ ಟ್ರಾನ್ಸ್ಜೆಂಡರ್ (Transgender) ಸಮುದಾಯವನ್ನು ಕೆಳ ದೃಷ್ಟಿಯಲ್ಲೇ ನೋಡಲಾಗ್ತಿದೆ. ಅವರನ್ನು ಜನರು ಸುಲಭವಾಗಿ ಸ್ವೀಕಾರ ಮಾಡ್ತಿಲ್ಲ. ವಿದ್ಯೆ ಕಲಿತು, ಉದ್ಯೋಗ ಹಿಡಿಯೋದು ಅವರಿಗೆ ಬಹಳ ಕಷ್ಟ. ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದ್ರೆ ಈಗ ಕೆಲ ಟ್ರಾನ್ಸ್ಜೆಂಡರ್ ಹೋರಾಟ ಮಾಡಿ ಗೆಲುವು ಸಾಧಿಸಿದ್ದಾರೆ. ಅದ್ರಲ್ಲಿ ತ್ರಿನೇತ್ರಾ ಕೂಡ ಸೇರುತ್ತಾರೆ. 

ಟ್ರಾನ್ಸ್ಜೆಂಡರ್ ನಟಿ ತ್ರಿನೇತ್ರಾ (Trinetra) ಯಾರು ಗೊತ್ತಾ? : ತ್ರಿನೇತ್ರಾ ಹಲ್ದಾರ್  ವೃತ್ತಿಯಲ್ಲಿ ವೈದ್ಯೆ. ವಿಶೇಷವೆಂದ್ರೆ ಮೊದಲ ಟ್ರಾನ್ಸ್ಜೆಂಡರ್ ವೈದ್ಯೆ ಕೂಡ ಹೌದು. ಎಲ್ಲ ಕಷ್ಟಗಳನ್ನು ಮೆಟ್ಟಿ ನಿಂತು ಕರ್ನಾಟಕದ ಮೊದಲ ತೃತೀಯಲಿಂಗಿ ವೈದ್ಯೆಯಾಗಿ ಲಕ್ಷಾಂತರ ಜನರಿಗೆ ಮಾದರಿಯಾಗಿದ್ದಾರೆ ತ್ರಿನೇತ್ರಾ. 

ದಿನಗೂಲಿ ಮಾಡುತ್ತಿದ್ದಾಕೆ ಈಗ ಡಾಕ್ಟರ್ ಭಾರತಿ

ತ್ರಿನೇತ್ರಾ ಬೆಂಗಳೂರು ಮೂಲದವರು. ತ್ರಿನೇತ್ರಾ ಮೊದಲ ಹೆಸರು  ಅಂಗದ್ ಗುಮ್ಮರಾಜು. ಆರಂಭದ ದಿನಗಳಲ್ಲಿ ತ್ರಿನೇತ್ರಾ ಅನೇಕ ತೊಂದರೆಗಳನ್ನು ಎದುರಿಸಿದ್ದರು. ಪುರುಷನ ದೇಹ ಹೊಂದಿದ್ದರೂ ತ್ರಿನೇತ್ರಾ ಒಳಗಿದ್ದುದ್ದು ಮಹಿಳೆ ಮನಸ್ಸು. ಹಾಗಾಗಿಯೇ ತ್ರಿನೇತ್ರಾ,  ಅಮ್ಮನ ಸೀರೆ ಉಟ್ಟುಕೊಂಡು ಮೇಕಪ್ ಮಾಡಿಕೊಂಡು ಮನೆ ಸುತ್ತಾಡುತ್ತಿದ್ದರು. ಆದರೆ ಮನೆಯವರ್ಯಾರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದು ಬಾಲಿಶ ಮೂರ್ಖತನವೆಂದು ಅದನ್ನು ನಿರ್ಲಕ್ಷ್ಯ ಮಾಡಿದ್ದರು. ಆದ್ರೆ ತ್ರಿನೇತ್ರ ವರ್ತನೆಯಲ್ಲಿ ಮುಂದಿನ ದಿನಗಳಲ್ಲೂ ಯಾವುದೇ ಬದಲಾವಣೆ ಕಾಣಿಸಲಿಲ್ಲ. ಆಗ ತ್ರಿನೇತ್ರ ಸೇರಿದಂತೆ ಕುಟುಂಬದವರೆಲ್ಲ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯ್ತು.

ಕಷ್ಟದ ದಿನಗಳಲ್ಲಿ ಸಿಕ್ಕಿತ್ತು ಪೋಷಕರ ಬೆಂಬಲ : ಟ್ರಾನ್ಸ್ಜೆಂಡರ್ಸ್‌ಗೆ ಮನೆಯಿಂದಲೇ ಮೊದಲ ವಿರೋಧ ಕಾಣಸಿಗುತ್ತದೆ. ಆದ್ರೆ ತ್ರಿನೇತ್ರಾ ಅವರಿಗೆ ಪಾಲಕರಿಂದ ಬೆಂಬಲ ಸಿಕ್ಕಿತ್ತು. ಶಾಲೆಯ ಅಧ್ಯಯನದಲ್ಲಿ ಅದ್ಭುತ ಪ್ರದರ್ಶನ ನೀಡ್ತಿದ್ದ ತ್ರಿನೇತ್ರಾ ಶಾಲೆಯ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಭಾಗವಹಿಸುತ್ತಿದ್ದರು. ಶಾಲೆಯ ಆರಂಭಿಕ ದಿನಗಳಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದ ತ್ರಿನೇತ್ರಾರಿಗೆ ತಾವು ಯಾರು ಎಂಬುದನ್ನು ಸರಿಯಾಗಿ ಪತ್ತೆ ಹಚ್ಚಲು ಕೆಲ ದಿನ ಬೇಕಾಯ್ತು. ಆದ್ರೆ ತ್ರಿನೇತ್ರಾರನ್ನು ಜನರು ಸ್ವೀಕರಿಸಲಿಲ್ಲ. ಆದರೆ ಅವರ ಹೆತ್ತವರ ಬೆಂಬಲದಿಂದ, ಅವರು ಕೆಲವು ವಿಷಯಗಳಲ್ಲಿ ಜಯಸಾಧಿಸೋದು ಸುಲಭವಾಯ್ತು. ತಮ್ಮ 12 ನೇ ತರಗತಿಯಲ್ಲಿ ಉತ್ತಮ ಫಲಿತಾಂಶ ಪಡೆದ ತ್ರಿನೇತ್ರಾ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ಕಾಲೇಜು ಅಧ್ಯಯನವನ್ನು ಮುಗಿಸಿದ್ರು. ಕರ್ನಾಟಕದ ಮೊದಲ ಟ್ರಾನ್ಜೆಂಡರ್ ವೈದ್ಯೆಯಾದ ತ್ರಿನೇತ್ರಾ ಕೆಲ ದಿನಗಳ ಹಿಂದೆ ಮೊದಲ ಶಸ್ತ್ರಚಿಕಿತ್ಸೆಯನ್ನು ಕೂಡ ಮಾಡಿದ್ದಾರೆ. 

ಗಂಡನ ಯಶಸ್ಸಿಗೆ ಹೆಣ್ಣು ಮಕ್ಕಳು ಹೀಗ್ ಮಾಡಬೇಕು!

ತ್ರಿನೇತ್ರಾ ಕೂಡ ಸಮಾಜ ಸೇವಕಿ (Social Worker): ತ್ರಿನೇತ್ರಾ ಅವರು ವೈದ್ಯಕೀಯ ವೃತ್ತಿ (Medical Profession) ಮತ್ತು ನಟನೆಯ ಹೊರತಾಗಿ ಸಮಾಜ ಸೇವಕರೂ ಹೌದು. ವಾಸ್ತವವಾಗಿ, ಅವರು ಭಾರತದಲ್ಲಿ LGBTQIA ನಡೆಸುತ್ತಿರುವ ಗುಂಪಿನೊಂದಿಗೆ ಸೇರಿ ಸಮಾಜ ಸೇವೆ ಮಾಡುತ್ತಾರೆ. ಅವರು ಆಗಾಗ್ಗೆ ಆರೋಗ್ಯ ಸಮಸ್ಯೆಗಳು, ಅಸಮಾನತೆಗಳು, ದೈಹಿಕ ವಿರೂಪಗಳು ಇತ್ಯಾದಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ. 

ಮೇಡ್ ಇನ್ ಹೆವೆನ್ ಮೊದಲು ಈ ಸರಣಿಯಲ್ಲಿ ಕಾಣಿಸಿಕೊಂಡಿದ್ದರು : ತ್ರಿನೇತ್ರಾ ನಟನೆ ಬಗ್ಗೆ ಹೇಳೋದಾದ್ರೆ ಅವರು ಮೇಡ್ ಇನ್ ಹೆವನ್ 2 ಕ್ಕಿಂತ ಮೊದಲು ನೆಟ್‌ಫ್ಲಿಕ್ಸ್ ಸರಣಿ ಡಿಬೇಟೆಪ್ಲಾನಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 
 

Follow Us:
Download App:
  • android
  • ios