Womens safety : ಭಾರತದಲ್ಲಿ ಯಾವ ನಗರ ಮಹಿಳೆಯರಿಗೆ ಸೇಫ್ ಯಾವ ನಗರ ಅಸುರಕ್ಷಿತ ಎನ್ನುವ ವರದಿ ಬಿಡುಗಡೆಯಾಗಿದೆ. ಇದ್ರಲ್ಲಿ ಮಹಿಳೆಯರು ಅಚ್ಚರಿ ವಿಷ್ಯಗಳನ್ನು ಹೊರ ಹಾಕಿದ್ದಾರೆ. 

ಭಾರತದಲ್ಲಿ ಮಹಿಳೆಯರ ಸುರಕ್ಷತೆ (Women safety) ಬಗ್ಗೆ ಸದಾ ಚರ್ಚೆ ನಡೆಯುತ್ತಿರುತ್ತದೆ. ಭಾರತದಲ್ಲಿ ಯಾವ ನಗರ ಮಹಿಳೆಯರಿಗೆ ಸುರಕ್ಷಿತ ಹಾಗೂ ಯಾವ ನಗರ ಮಹಿಳೆಯರಿಗೆ ಅಸುರಕ್ಷಿತ ಎನ್ನುವ ವರದಿ ಬಿಡುಗಡೆಯಾಗಿದೆ. ರಾಷ್ಟ್ರೀಯ ವಾರ್ಷಿಕ ಮಹಿಳಾ ಸುರಕ್ಷತಾ ವರದಿ ಮತ್ತು ಸೂಚ್ಯಂಕ (NARI) 2025 ವರದಿಯನ್ನು ಬಿಡುಗಡೆ ಮಾಡಲಾಗಿದೆ. 31 ನಗರಗಳ 12,770 ಮಹಿಳೆಯರ ಅಭಿಪ್ರಾಯದ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಪಟ್ಟಿಯಲ್ಲಿ ನಿಮ್ಮ ಸಿಟಿ ಇದ್ಯಾ? ಒಮ್ಮೆ ಚೆಕ್ ಮಾಡ್ಕೊಳ್ಳಿ.

ಅತ್ಯಂತ ಸುರಕ್ಷಿತ ನಗರ (safest city) ಇದು : ರಾಷ್ಟ್ರೀಯ ವಾರ್ಷಿಕ ಮಹಿಳಾ ಸುರಕ್ಷತಾ ವರದಿ ಮತ್ತು ಸೂಚ್ಯಂಕ (NARI) 2025 ವರದಿಯ ಪ್ರಕಾರ, ಕೊಹಿಮಾ, ವಿಶಾಖಪಟ್ಟಣಂ, ಭುವನೇಶ್ವರ, ಐಜ್ವಾಲ್, ಗ್ಯಾಂಗ್ಟಾಕ್, ಇಟಾನಗರ ಮತ್ತು ಮುಂಬೈ, ಮಹಿಳೆಯರಿಗೆ ಸುರಕ್ಷಿತ ನಗರವಾಗಿದೆ. ಇದಕ್ಕೆ ಪ್ರಮುಖ ಕಾರಣ, ಅಲ್ಲಿರುವ ಬಲವಾದ ಲಿಂಗ ಸಮಾನತೆ, ಸಾರ್ವಜನಿಕರ ಪಾಲ್ಗೊಳ್ಳುವಿಕೆ, ಪೊಲೀಸ್ ವ್ಯವಸ್ಥೆ ಮತ್ತು ಮಹಿಳಾ ಸ್ನೇಹಿ ಮೂಲಸೌಕರ್ಯ ಎನ್ನಲಾಗಿದೆ.

https://kannada.asianetnews.com/india-news/55-year-old-woman-gives-birth-to-17th-child-rajasthan-san/articleshow-udroios

ಅತ್ಯಂತ ಅಸುರಕ್ಷಿತ ನಗರಗಳು (unsafe city) : ರಾಷ್ಟ್ರೀಯ ವಾರ್ಷಿಕ ಮಹಿಳಾ ಸುರಕ್ಷತಾ ವರದಿ ಮತ್ತು ಸೂಚ್ಯಂಕದ ವರದಿ ಪ್ರಕಾರ, ರಾಂಚಿ, ಶ್ರೀನಗರ, ಕೋಲ್ಕತ್ತಾ, ದೆಹಲಿ, ಫರಿದಾಬಾದ್, ಪಾಟ್ನಾ ಮತ್ತು ಜೈಪುರಗಳನ್ನು ಮಹಿಳಾ ಸುರಕ್ಷತೆಯ ವಿಷಯದಲ್ಲಿ ಕೊನೆಯ ಸ್ಥಾನದಲ್ಲಿ ಇರಿಸಿದೆ. ಇದಕ್ಕೆ ಕಾರಣ ದುರ್ಬಲ ಸಾಂಸ್ಥಿಕ ಪ್ರತಿಕ್ರಿಯೆ, ಪಿತೃಪ್ರಧಾನ ಮಾನದಂಡ ಮತ್ತು ನಗರ ಮೂಲಸೌಕರ್ಯಗಳ ಕೊರತೆ.

ಎಲ್ಲಿ ಮಹಿಳೆಯರು ಅತ್ಯಂತ ಅಸುರಕ್ಷಿತರು? : ಈ ಸಮೀಕ್ಷೆಯಲ್ಲಿ 10 ಮಹಿಳೆಯರಲ್ಲಿ 6 ಮಹಿಳೆಯರು ತಮ್ಮ ನಗರದಲ್ಲಿ ಸುರಕ್ಷಿತ ಭಾವನೆ ಹೊಂದಿದ್ದೇವೆ ಎಂದಿದ್ದಾರೆ. ಆದ್ರೆ ಶೇಕಡಾ 40 ರಷ್ಟು ಮಹಿಳೆಯರು ತಮ್ಮ ನಗರದಲ್ಲೂ ಅಷ್ಟು ಸುರಕ್ಷಿತವಲ್ಲ ಅಥವಾ ಅಸುರಕ್ಷಿತ ಎಂದಿದ್ದಾರೆ. ರಾತ್ರಿಯಲ್ಲಿ ಸುರಕ್ಷಿತ ಭಾವನೆ ತೀವ್ರವಾಗಿ ಕುಸಿದಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ವಿಶೇಷವಾಗಿ ಸಾರ್ವಜನಿಕ ಸಾರಿಗೆ ಮತ್ತು ಮನರಂಜನಾ ಸ್ಥಳಗಳಲ್ಲಿ ಮಹಿಳೆಯರು ಹೆಚ್ಚು ಅಸುರಕ್ಷಿತೆ ಅನುಭವಿಸೋದಾಗಿ ಹೇಳಿದ್ದಾರೆ.

https://kannada.asianetnews.com/business/women-and-clean-india-free-sauchalay-yojana-2025-roo/articleshow-4h67r9f

2024 ರಲ್ಲಿ ಶೇಕಡಾ 7ರಷ್ಟು ಮಹಿಳೆಯರು ತಾವು ಕಿರುಕುಳ ಎದುರಿಸಿದ್ದೇವೆ ಎಂದಿದ್ದಾರೆ. 18-24 ವರ್ಷ ವಯಸ್ಸಿನ ಮಹಿಳೆಯರು ಸುರಕ್ಷತೆಯ ವಿಷಯದಲ್ಲಿ ಹೆಚ್ಚು ಅಪಾಯದಲ್ಲಿದ್ದಾರೆ. ಬೇರೆ ವಯಸ್ಸಿನ ಮಹಿಳೆಯರಿಗೆ ಹೋಲಿಕೆ ಮಾಡಿದ್ರೆ ಈ ವಯಸ್ಸಿನ ಮಹಿಳೆಯರು ಶೇಕಡಾ 14ಕ್ಕಿಂತ ಹೆಚ್ಚು ಅಪಾಯದಲ್ಲಿದ್ದಾರೆ. 2022ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಶೇಕಡಾ 100ರಷ್ಟು ಹೆಚ್ಚಾಗಿದೆ ಎಂದು . ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿ ಮಾಡಿತ್ತು. ಮಹಿಳೆಯರ ವಿರುದ್ಧದ ಕಿರುಕುಳದಲ್ಲಿ ಬೀದಿಗಳಲ್ಲಿ ದಿಟ್ಟಿಸುವುದು, ಕೀಟಲೆ ಮಾಡುವುದು, ಅಶ್ಲೀಲ ಕಾಮೆಂಟ್ಗಳು ಮತ್ತು ಸ್ಪರ್ಶಿಸುವುದು ಸೇರಿವೆ. ಇದಕ್ಕೆ ಅಸಮರ್ಪಕ ಮೂಲಸೌಕರ್ಯ, ಕಳಪೆ ಬೆಳಕು ಮತ್ತು ಅಸಮರ್ಥ ಸಾರ್ವಜನಿಕ ಸಾರಿಗೆ ಕಾರಣ ಎಂದಿದ್ದಾರೆ. ಶೇಕಡಾ 86 ರಷ್ಟು ಮಹಿಳೆಯರು ಹಗಲಿನಲ್ಲಿ ಕಾಲೇಜು/ಶಾಲೆ ಸುರಕ್ಷಿತ ಎಂದಿದ್ದಾರೆ, ಶೇಕಡಾ 91 ರಷ್ಟು ಮಹಿಳೆಯರು ಕೆಲಸದ ಸ್ಥಳವನ್ನು ಸುರಕ್ಷಿತ ಅಂತ ಭಾವಿಸ್ತಾರೆ. ಶೇಕಡಾ 69 ರಷ್ಟು ಮಹಿಳೆಯರು ಪ್ರಸ್ತುತ ಜಾರಿಯಲ್ಲಿರುವ ಭದ್ರತಾ ಪ್ರಯತ್ನಗಳು ಸ್ವಲ್ಪಮಟ್ಟಿಗೆ ಪರಿಣಾಮ ಬೀರ್ತಿವೆ ಅಂದ್ರೆ ಶೇಕಡಾ 30 ರಷ್ಟು ಮಹಿಳೆಯರು ನ್ಯೂನ್ಯತೆಗಳನ್ನು ಹೇಳಿದ್ದಾರೆ. ವರದಿ ಪ್ರಕಾರ ಮೂರರಲ್ಲಿ ಒಬ್ಬ ಮಹಿಳೆ ಮಾತ್ರ ತನಗಾದ ದೌರ್ಬಲ್ಯವನ್ನು ವರದಿ ಮಾಡ್ತಿದ್ದಾಳೆ. ಮೂರರಲ್ಲಿ ಇಬ್ಬರು ಮಹಿಳೆಯರು ಇದ್ರ ಬಗ್ಗೆ ಧ್ವನಿ ಎತ್ತುತ್ತಿಲ್ಲ.