ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟಿರುವ ರಚನಾ ರೈ (Rachana Rai) ಅವರು 'ದಿ ಡೆವಿಲ್' ಚಿತ್ರದ (The Devil) ನಾಯಕಿ. ಮೂಲತಃ ರಚನಾ ರೈ ಅವರು ಪುತ್ತೂರಿನವರು. ಅವರು ಪತ್ರಿಕೋದ್ಯದಲ್ಲಿ ಪದವಿ ಪಡೆದಿದ್ದಾರೆ.
sandalwood Dec 11 2025
Author: Shriram Bhat Image Credits:Instagram
Kannada
ಮಾಡೆಲಿಂಗ್ ಹಾಗೂ ಭರತನಾಟ್ಯ ಕಲಾವಿದೆ
ನಟನೆ ಮಾತ್ರವಲ್ಲ, ಅವರು ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದಾರೆ. ನಟಿ ಮಾತ್ರವಲ್ಲ, ಮಾಡೆಲಿಂಗ್ ಹಾಗೂ ಭರತನಾಟ್ಯ ಕಲಾವಿದೆಯೂ ಹೌದು!
Image credits: Instagram
Kannada
ಪುಸ್ತಕದ ಹೆಸರು 'ಓಹ್ ಮೈ ಡಾಗ್'
ರಚನಾ ರೈ ಬರೆದಿರುವ ಪುಸ್ತಕದ ಹೆಸರು 'ಓಹ್ ಮೈ ಡಾಗ್'.. ರಚನಾ ರೈ ಅವರು ಈ ಬಗ್ಗೆ ಹೇಳಿಕೊಂಡಿದ್ದು ಹೀಗೆ.. 'ನಾನು ಹೊಸ ದಿಗಂತಕ್ಕೆ ಆರ್ಟಿಕಲ್ ಬರೆಯುತ್ತಿದ್ದೆ. 50ಕ್ಕೂ ಹೆಚ್ಚು ಆರ್ಟಿಕಲ್ ಬರೆದಿದ್ದೇನೆ.
Image credits: Instagram
Kannada
ಶ್ವಾನಗಳು ಅಂದ್ರೆ ಅಚ್ಚುಮೆಚ್ಚು
ನನಗೆ ಶ್ವಾನಗಳು ಅಂದ್ರೆ ಅಚ್ಚುಮೆಚ್ಚು. ಶ್ವಾನಗಳ ಬಗ್ಗೆ ಇಷ್ಟೆಲ್ಲ ಗೊತ್ತಿದ್ರೆ ಪುಸ್ತಕ ಬರೆಯಿರಿ ಎಂದು ನನ್ನ ಲೆಕ್ಚರ್ ಹೇಳಿದ್ದಕ್ಕೆ ಬರೆದೆ' ಎಂದು ರಚನಾ ರೈ ಹೇಳಿದ್ದಾರೆ.
Image credits: Instagram
Kannada
ದರ್ಶನ್ ಸರ್ ಹೇಳಿದ್ದಕ್ಕೆ ಈ ಚಾನ್ಸ್ ಸಿಕ್ಕಿತು
'ದಿ ಡೆವಿಲ್' ಚಿತ್ರಕ್ಕೆ ರಚನಾ ರೈ ನಾಯಕಿ ಆಗಿದ್ದು ಹೇಗೆ? ‘’ಹೊರಗಿನವರು ಬೇಡ, ನಮ್ಮವರನ್ನೇ ಆಯ್ಕೆ ಮಾಡಿಕೊಳ್ಳೋಣ ಎಂದು ದರ್ಶನ್ ಸರ್ ಹೇಳಿದ್ದಕ್ಕೆ ನನಗೆ ಈ ಚಾನ್ಸ್ ಸಿಕ್ಕಿತು' ಎಂದಿದ್ದಾರೆ ರಚನಾ ರೈ.
Image credits: Instagram
Kannada
ನನ್ನ ಪ್ರಯಾಣ ಶುರು ಆಯ್ತು
ಅದನ್ನೂ ವಿವರವಾಗಿ ಹೇಳಿದ್ದಾರೆ ರಚನಾ ರೈ.. 'ನಾನು ಆಡಿಷನ್ ಕೊಟ್ಟೆ.. ನಿರ್ದೇಶಕ ಪ್ರಕಾಶ್ ವೀರ್ ಅವರಿಗೆ ಇಷ್ಟ ಆಯ್ತು. ಅಲ್ಲಿಂದ ನನ್ನ ಪ್ರಯಾಣ ಶುರು ಆಯ್ತು..' ಎಂದಿದ್ದಾರೆ ರಚನಾ.
Image credits: Instagram
Kannada
ದರ್ಶನ್ ಸರ್ ಕೂಡ ಪ್ರಾಣಿ ಪ್ರಿಯರು
ಜೊತೆಗೆ, ದರ್ಶನ್ ಸರ್ ಕೂಡ ಪ್ರಾಣಿ ಪ್ರಿಯರು. ನಾನು 'ದಿ ಡೆವಿಲ್' ಸಿನಿಮಾ ಶೂಟಿಂಗ್ ಸಮಯದಲ್ಲಿ ಪ್ರಾಣಿ, ಕಾರುಗಳ ಬಗ್ಗೆ ದರ್ಶನ್ ಸರ್ ಜೊತೆ ಮಾತನಾಡುತ್ತಿದ್ದೆ' ಎಂದಿದ್ದಾರೆ ರಚನಾ.
Image credits: Instagram
Kannada
ದಿ ಡೆವಿಲ್ ಗೆಲ್ಲುತ್ತಾ?
ಇದೀಗ, ದರ್ಶನ್ ಜೋಡಿಯಾಗಿ ರಚನಾ ರೈ ನಟಿಸಿರುವ 'ದಿ ಡೆವಿಲ್' ಸಿನಿಮಾ ಗೆದ್ದರೆ ಅವರಿಗೆ ದೊಡ್ಡ ಯಶಸ್ಸು ಸಿಗಲಿದೆ. ಹಲವು ಸಿನಿಮಾ ಅವಕಾಶಗಳು ಖಂಡಿತವಾಗಿಯೂ ಅವರನ್ನು ಹುಡುಕಿಕೊಂಡು ಬರಲಿವೆ.